ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನೆನಪಿನಂಗಳದಲ್ಲಿ ನಾನಾ ಪಾಟೇಕರ್..
-ಕೇಸರಿ ಹರವೂ ಇಂದು ಬೆಳಿಗ್ಗೆ ರೈಲಿಳಿದು ಮನೆಗೆ ತಲುಪುತ್ತಿದ್ದಂತೆಯೇ ಪಚ್ಚೆಯ (Prof M D Nanjundaswamy) ಫೋನ್ ಬಂತು. "ನಾನಾ ಪಾಟೇಕರ್ ಇನ್ನಿಲ್ಲ ಎನ್ನುವ ಸುದ್ದಿ ತಿಳೀತಾ?" ಎಂದರು, "ನೀವು ಅವರನ್ನು ಸಂಪರ್ಕಿಸಿದ ವಿಷಯ ಹಂಚಿಕೊಳ್ತೀರಾ?" ಎಂದರು. ಆಗಷ್ಟೇ ಬಂದಿದ್ದ ನಾನು ಸುದ್ದಿ ತಡಕಾಡಿ ಖಾತರಿ ಪಡಿಸಿಕೊಂಡೆ. ಛೇ,...
ಹೊರಗೆ ಸುಡುವ ರವಿಯ ತಾಪ
-ಸುಧಾ ಹಡಿನಬಾಳ ಕಿಚ್ಚು ಹೊರಗೆ ಸುಡುವ ರವಿಯ ತಾಪಇದಕ್ಕೂ ಮಿಗಿಲಾಗಿ ರಕ್ತ ಬೀಜಾಸುರರುದ್ವೇಷ ಬಿತ್ತಿ ಬೆಳೆದು ಸಿಡಿಸುವಬಾಂಬ್, ಸಿಡಿತಲೆಗಳ ಕಿಚ್ಚು ಇದು ಅಂತಿಂಥ ಕಿಚ್ಚಲ್ಲಮನುಜ ಮಾತ್ರರಒಡಲೊಳಗೇ ಸುಡುವಒಡಲಾಳದ ಕಿಚ್ಚು ಸುಖಾಸುಮ್ಮನೆ ದ್ವೇಷದ್ವೇಷಕ್ಕೆ ಕಾರಣ ಬೇಕಿಲ್ಲಅವಳು ಚೆನ್ನಾಗಿ ನಕ್ಕರೂಇವಳೆದೆಯಲಿ ದಹಿಸುವ ಕಿಚ್ಚು ಅವರು...
ಸ್ವರ್ಗ ಹೂವಿನ ಜೊತೆ ನಾರಿಗೆ
-ಉದಯಕುಮಾರ ಹಬ್ಬು ಜಗದ ಒದ್ದೆಬಟ್ಟೆಯಾದ ಬವಣೆಗಳನ್ನು ಹಿಂಡಿಹಗ್ಗಕ್ಕೆ ಹರವಿ ಒಣಗಿಸುವಂತಿದ್ದರೆ..ಕಣ್ಣೀರೆಂಬ ಕಾಯನ್ನು ಈಳಿಗೆ ಮಣೆಯಲಿ ತುರಿದುಮೆಣಸು, ಕೊತ್ತಂಬರಿ, ಜಿರಿಗೆ ಅರಿಷಿಣ ಹಾಕಿಮಿಕ್ಸಿಯಲಿ ರುಬ್ಬಿ ರುಚಿಕಟ್ಟಾದ ಸಾಂಬಾರುಮಾಡುವಂತಾದರೆ...ಜಗದ ಹಸಿವನ್ನು ಇಬ್ಬನಿಗಳ ಹಾಗೆಸೂರ್ಯ ಬಿಸಿಲಿನಲ್ಲಿ ಒಣಗಿಸಿ ಹಲಸಿನಹಪ್ಪಳದ...
ಕಥೆಯಲ್ಲ, ಇದು ನಮ್ಮದೇ ಬಾಲ್ಯದ ಕನ್ನಡಿ!
ನವೀನ್ ತೇಜಸ್ವಿ ಅವರ ಕಥಾ ಸಂಕಲನ 'ಬಂಗಾರಕಡ್ಡಿ ಡೇರೆ ಹೂವು' ಅಮೂಲ್ಯ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ವಿಕಾಸ್ ನೇಗಿಲೋಣಿ ಅವರ ಬರಹ ಇಲ್ಲಿದೆ. -ವಿಕಾಸ್ ನೇಗಿಲೋಣಿ ನಾವು ಚಪ್ಪರಿಸಿ ತಿನ್ನುವ ಅದೆಷ್ಟೋ ಉಪ್ಪಿನಕಾಯಿ ಅದೆಷ್ಟೋ ಹಿಂದೆಯೇ ತಯಾರಾಗುತ್ತಿರುತ್ತದೆ, ಉಪ್ಪಿನ ನೀರಲ್ಲಿ ನೆನೆಹಾಕಿ ತಿಂಗಳುಗಟ್ಟಲೆ...
ಅಕ್ಷರಗಳ ಒಡನಾಟ ಮತ್ತು ಬದುಕಿನ ಒಲವು
ಗಾಯತ್ರಿ ರಾಜ್ ಅವರ ಕೃತಿ 'ಒಲವಿನ ಭಿನ್ನರಾಶಿ' ಪುಸ್ತಕಾಗಾರ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಲೇಖಕರ ಮಾತು ಇಲ್ಲಿದೆ. -ಗಾಯತ್ರಿ ರಾಜ್ ಯಾವುದೇ ಕಥೆ-ಕಾದಂಬರಿಯಾಗಲಿ ಅದು ಆ ಲೇಖಕನ ಬದುಕಿನ ಒಟ್ಟು ಅನುಭವಗಳ ಸಂಗಮ. ಎಲ್ಲೋ ನೋಡಿದ್ದು, ಯಾರಿಂದಲೋ ಕೇಳಿದ್ದು, ಯಾವುದೋ ಅನುಭವ, ಇನ್ಯಾವುದೋ ಆಪ್ತ ಭಾವ ಹೀಗೆ ಒಬ್ಬ ಲೇಖಕ ತನ್ನ...
೨೬ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮ್ಮ ಪ್ರಶಸ್ತಿ’ ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ ೨೬ ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ೨೬ ನೇ ವರ್ಷದ ಅಮ್ಮ...
ಈ ಸಾರಿ ಮಳೆಗಾಲದಲ್ಲೂ
-ಕೆ.ಎನ್. ಲಾವಣ್ಯ ಪ್ರಭಾ ಈ ಸಾರಿ ಮಳೆಗಾಲದಲ್ಲೂಮಳೆಗೆ ಬರ ಎಂದುತೊಳಲಾಡುವವರಆತಂಕ ಕೊಂಚ ತಣಿಸಿದಂತೆಕಳೆದ ಸಂಜೆಅದೆಂಥಾ ಮಳೆ!ಭೂಮಿ ಆಕಾಶದ ಪ್ರೀತಿಬತ್ತಿ ಹೋಯಿತೇನೋಎನ್ನುವ ಅಳುಕು ತಾತ್ಕಾಲಿಕಎನ್ನುವಂತೆ. ಮನಸ್ಸುಗಳ ನಡುವೆಎದ್ದ ಸೇತುವೆಯಡಿ ಹರಿವನೀರಿನ ಹರಿವು ತಳ ಮುಟ್ಟಿಮತ್ತೆ ಮತ್ತೆ ಕೆನೆಗಟ್ಟಿದಕಾರ್ಮೋಡ...
ಜನರ ಪ್ರತಿಭೆ
ಮೂಲ : ಚಾರ್ಲ್ಸ್ ಬುಕೊವ್ಸ್ಕಿಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಒಬ್ಬ ಸಾಧಾರಣ ಮನುಷ್ಯನಲ್ಲಿರುವದ್ರೋಹ, ದ್ವೇಷ, ಹಿಂಸೆ, ತಿಕ್ಕಲುತನಒಂದು ಸೈನ್ಯಕ್ಕೆ ಹಂಚಿ ಮಿಕ್ಕುವಷ್ಟಿರುತ್ತದೆ. ಕೊಲೆಯ ವಿರುದ್ಧ ಉಪದೇಶಿಸುವವರೇಕೊಲ್ಲುವಲ್ಲಿ ಅತ್ಯಂತ ಪರಿಣತರುಪ್ರೀತಿಯ ಬಗ್ಗೆ ಪಾಠಮಾಡುವವರೇದ್ವೇಷಿಸುವುದರಲ್ಲಿ ಅತ್ಯಂತ ನಿಪುಣರು.ಶಾಂತಿ...
ಪುಸ್ತಕ ಅಂಕಣ – ಕಾಡಿನ ಬೇಟೆಯಿಂದ ರಾಜಕೀಯದ ಎತ್ತರಕ್ಕೆ..
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಡಿಯರ್ ಕೋಶಿಸ್…
-ಡಾ. ನಾರಾಯಣ್ ಕ್ಯಾಸಂಬಳ್ಳಿ ಕೋಶಿಸ್ ಕೆಫೆಊರ ಕೇರಿಯ ಅಂಚಲಿ ವಾಸಿಸುವ ನನಗೆ,ಬೊಗಸೆ ನೀರಿಗೂ ಜಾತಿಯ ಬೇಲಿ ಇದೆ.ಊರ ಗುಡಿಯ ಕಲ್ಲು, ಅರಳಿ ಕಟ್ಟೆಯ ನೆರಳು ಕೂಡನನ್ನ ತಾಗಲು ಹೆದರುತ್ತದೆ ! ಹೀಗಿರುವಾಗ...ಈ ಸ್ವಚ್ಛಂದ ಸೇಂಟ್ ಮಾರ್ಕ್ಸ್ ರಸ್ತೆಯಕೋಶಿಸ್ ಕೆಫೆ ಸ್ವಾಗತಿಸುವ ಪರಿಸದಾ ನನ್ನಲ್ಲಿ ಅಚ್ಚರಿಯನು ಮೂಡಿಸುತ್ತದೆ.ಇಲ್ಲಿಯ...
‘ಕಹಾನಿ’ ವರ್ಣಮಯ ಕಥೆಗಳ ಚಿತ್ರಣ!
-ಸಂಕೇತ್ ಗುರುದತ್ ಸೃಜನಶೀಲ ಮೂವರು ಕಲಾವಿದೆಯರಾದ ಅಂಜಲಿ ಹರ್ಲಾಲ್ಕಾ, ಭಾರತಿ ದರ್ಶನ್ ಮತ್ತು ಫರ್ಹಾನಾ ಖಾನ್ ಅವರ ಕಲಾಕೃತಿಗಳು "ಕಹಾನಿ-ಸ್ಟೋರೀಸ್ ಇನ್ ಕಲರ್ಸ್" ಎಂಬ ಶೀರ್ಷಿಕೆಯಲ್ಲಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದಾರೆ. ಇದೇ ಅಕ್ಟೋಬರ್ 3 ರಂದು ನಾಡಿನ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು...
ಕೋಡಂಗಿಗಳಿಗೊಂದು ಕಿವಿಮಾತು!!
-ಪ್ರಕಾಶ್ ಕೊಡಗನೂರ್ ೧ ಮೇನಕೆಯ ಪ್ರತಿಷ್ಠಾಪನೆ ನನ್ನ ಮೇನಕೆಯುಮಹಾಘಟಬಂಧನದಸುರಕ್ಷಿತ ಕವಚದಲಿಸುಖದ ಸುಪ್ಪತ್ತಿಗೆಯಲ್ಲಿದ್ದಾಳೆ ನಾನು ವಿರಹದುರಿಯಮಹಾಜ್ವಾಲೆಗೆ ಸಿಲುಕಿಒಂದೇ ಸಮನೆಪಟಪಟನೆ ಸಿಡಿಯುತ್ತಿದ್ದೇನೆ ದಶಕವೊಂದು ಉರುಳಿತುಅವಳು ದೂರ ಸರಿದುಅವಳನ್ನು ಮತ್ತೆ ಸೇರಿಕೊಳ್ಳಬೇಕೆಂದುನಡೆಸಿದ ಪ್ರಯತ್ನಗಳೆಲ್ಲ ವಿಫಲ ಇರಲಿ ಅವಳು...
ಸಂಕ್ರಾಂತಿ ಅಲ್ಲವೇ..
ಕಾವ್ಯ ಸಂಕ್ರಾಂತಿ -ಅಶ್ವಿನಿ ಎಸ್.ಟಿ ಎಳೆ ಬಿಸಿಲು,ಎಳೆಯದಾಗಿಅರಳಿದ ಹೂ ಮನದಹುಡುಗಿಯ ಮೊಗಕೆ ತಾಕಿದಹೊತ್ತು ಸರಸರನೆ ಹೆಜ್ಜೆ ಹಾಕುತ್ತಾಹೂ ಪತ್ರೆಗಳ ಖರೀದಿಸಿಆಗಷ್ಟೇ ಮಿಂದು ಬಂದಿದರಿಂದಹನಿ ಹನಿ ತೊಟ್ಟಿಕ್ಕುತ್ತಿರುವನೀಳ ಕೇಶರಾಶಿಯ ಹಿಂದಕ್ಕೊಮ್ಮೆಸರಿಸಿ ಕಣ್ಣು ಹಾಯುವವರೆಗೂನೋಡಿದರೂ ಇಲ್ಲವಲ್ಲಾಮನಸಿಗೊಪ್ಪಿದ ಚೆಲುವನಿಧಾನಿಸಿ...
ಜೀ ಹುಜೂರ್ ಜನಗಳಿವರು!
-ನಾಗೇಶ್ ಜೆ. ನಾಯಕ ಬುರುಡೆ ದಾಸಯ್ಯರ ಪ್ರವರ ಆ ಗುಂಪಿನಲ್ಲಿಅವರತ್ತ ವಾಲುತ್ತಾಈ ಗುಂಪಿನಲ್ಲಿಇವರತ್ತ ವಾಲುತ್ತಾಸ್ವಂತಿಕೆಯೇ ಇಲ್ಲದೆಬುರುಡೆ ಬಿಡುವ ಜಾಯಮಾನದಜೀ ಹುಜೂರ್ ಜನಗಳಿವರು! ನಮ್ಮೆದುರು ವಿನೀತರಾಗಿಅವರ ದೌರ್ಬಲ್ಯಗಳ ಬಗ್ಗೆಖಂಡಿಸುತ್ತಾ ಆಡಿಕೊಂಡವರುಅವರೇ ಇದಿರು ಬಂದಾಗಬಣ್ಣದ ಮಾತುಗಳಿಂದಎತ್ತರಕ್ಕೇರಿಸುತ್ತಾ...
ಬೆಟ್ಟ, ಮೌನ ಮತ್ತು ನಾನು
-ಎನ್.ಶೈಲಜಾ ಹಾಸನ ಕೆಲವು ಭೇಟಿಗಳು ಮಾತಿನಿಂದ ಆರಂಭವಾಗುವುದಿಲ್ಲ. ಅವು ಮೌನದಿಂದಲೇ ಆರಂಭವಾಗಿ, ಮೌನದಲ್ಲಿಯೇ ಮುಗಿಯುತ್ತವೆ. ಆದರೆ ಆ ಮೌನವೇ ಬದುಕಿನ ಅತ್ಯಂತ ದೊಡ್ಡ ಸಂವಾದವಾಗುತ್ತದೆ .ಬೆಟ್ಟಗಳ ಬುಡದಲ್ಲಿ ಹಸಿರು ಮಡಿಲಲ್ಲಿ ಅಘಾದ ನೀಲಿ ಆಗಸದ ಹಿನ್ನೆಲೆಯಲ್ಲಿ ಮಂದಸ್ಮಿತನಾಗಿ ಅರೆಮುಚ್ಚಿದ ಕಣ್ಣುಗಳ ಒಡೆಯ ಆದಿಯೋಗಿಯ...
ದೇವರಿಗೆ ಬೇಜಾರು…
-ಎಚ್. ಗೋಪಾಲಕೃಷ್ಣ ಮನೆ ಹತ್ತಿರವೇ ದೇವಸ್ಥಾನ ಅದೂ ತಿರುಪತಿ ದೇವರದ್ದು. ಬೆಳಿಗ್ಗೆ ಸಂಜೆ ರಾತ್ರಿ ಪೂಜೆ. ಪೂಜೆಯ ಮಂತ್ರಗಳು ಸದಾ ಕಿವಿ ಮೇಲೆ. ಜತೆಗೆ ವರ್ಷದಲ್ಲಿ ಕೆಲವು ತಿಂಗಳು ಮಧ್ಯಾಹ್ನದ ಹೊತ್ತು ಸೀನಿಯರ್ ಸಿಟಿಜನ್ಸ್ ಸೇರಿ ನಡೆಸುವ ಪುರಾಣ ಪುಣ್ಯ ಕತೆಗಳ ಪ್ರವಚನ. ಎಲ್ಲವೂ ತಮಿಳಿನಲ್ಲಿ. ತಮಿಳು ದೇವರು, ತಮಿಳು ಗುರುಗಳು,...
ಬಾಗು ಬೆನ್ನಿನ ನಿನ್ನಂಥವರು
-ದೀಕ್ಷಿತ್ ನಾಯರ್ ಬಾಗು ಬೆನ್ನಿನ ನಿನ್ನಂಥವರು ಮತ್ತೆ ಹುಟ್ಟಬಾರದು ಗಾಂಧಿನೀನು ಬಿತ್ತಿದ್ದು ಕರುಣೆಯ ಬೀಜಈ ಹಾಳೂರಿನಲ್ಲಿ ಈಗ ಬರೀ ಪಾಪಸ್ಕಳ್ಳಿ ಗಿಡ ಗೆಂಟೆಗಳು;ಏನಿತ್ತು ನಿನ್ನ ಬಳಿ?ಎಣಿಸಬಹುದಾದಷ್ಟು ಚಕ್ಕಳದ ಮೂಳೆಗಳುಮಾರುದ್ದದ ಊರುಗೋಲುಫಕೀರನೊಬ್ಬನ ಖಾದಿಬಟ್ಟೆಬಿರುಕು ಕನ್ನಡಕಈಶ್ವರ, ಅಲ್ಲಾ ನಾಮಜಪ;ಇಷ್ಟೆಲ್ಲದರ ನಡುವೆಯೂ...
ಸಮಾಜದ ಕನ್ನಡಿ ಮತ್ತು ಕಹಿಸತ್ಯಗಳು
ಎ.ಎಸ್.ಎನ್.ಹೆಬ್ಬಾರ್ ಅವರ 'ಮಾಧ್ಯಮದ ಸುತ್ತಮುತ್ತ' ವಿಕಾಸ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತ ಡಾ.ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ. -ಡಾ.ಪಾರ್ವತಿ ಜಿ.ಐತಾಳ್ ಎ.ಎಸ್.ಎನ್.ಹೆಬ್ಬಾರ್ ಅವರು ಬರೆದ 'ಮಾಧ್ಯಮದ ಸುತ್ತಮುತ್ತ' ಶೀರ್ಷಿಕೆಯೇ ಸೂಚಿಸುವಂತೆ ಮಾಧ್ಯಮದ ಕುರಿತಾದ ೫೨ ಲೇಖನಗಳ...
‘ಇದೊಳ್ಳೆ ಪುರಾಣ’ ಜ್ಞಾನದ ರಸದೌತಣ
ಅಶ್ವಿನಿ ಕುಲಕರ್ಣಿ ಅವರ ಕೃತಿ 'ಇದೊಳ್ಳೆ ಪುರಾಣ' 'ಸಾವಣ್ಣ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ಸಾವಿತ್ರಿ ಶ್ಯಾನುಭಾಗ ಅವರ ಬರಹ ಇಲ್ಲಿದೆ. -ಸಾವಿತ್ರಿ ಶ್ಯಾನುಭಾಗ ಭಾರತೀಯ ಪುರಾಣವೆಂದರೆ ಮಹಾಭಾರತ,ರಾಮಾಯಣವೆಂದು ಕೆಲವರ ಅಂಬೋಣ.ಅದು ಸರಿಯೇ?ಆದರೆ ನಮಗೆ ತಿಳಿಯದೇ ಇರುವ,ಓದದೇ ಇರುವ ಪೌರಾಣಿಕ ಪಾತ್ರಗಳು ಎಷ್ಟೋ...
ಹಾರಿ ಹೋದವರು
-ಪಾಲಹಳ್ಳಿ ವಿಶ್ವನಾಥ್ ನಾನು ಆಗತಾನೇ ಈ ಕ್ಲಬ್ ಸೇರಿದ್ದೆ. ಇದು ನಗರದ ಗಣ್ಯವ್ಯಕ್ತಿಗಳ ಕ್ಲಬ್. ನನಗೇನೂ ಅಂತ ಅರ್ಹತೆ ಇರಲಿಲ್ಲ. ನಮ್ಮ ತಾತ ಹಿಂದೆ ಏನೋ ಒಳ್ಳೆ ಕೆಲಸ ಮಾಡಿದ್ದು ಈ ಕ್ಲಬ್ಬು ಸೇರಿದ್ದರು. ವಂಶಪಾರಂಪರ್ಯವಾಗಿ ಅದರ ಸದಸ್ಯತ್ವ ನನಗೆ ಬಂದಿತ್ತು. ನನಗೆ ಗೊತ್ತಿದ್ದವರು ಅಲ್ಲಿಯ ಕಾರ್ಯದರ್ಶಿ (ಸೆಕ್ರೆಟರಿ) ಮಾತ್ರ....
ರಕ್ತೇಶ್ವರಿ ಮತ್ತು ಬೈಕ್
-ಅಕ್ಷಯ ಕಾಂತಬೈಲು ಮುಟ್ಟಿದುದು ಮಾತ್ರಬಿಡಿಸಿಕೊಳ್ಳಬಲ್ಲುದುಹೊರಡಿದುದುಹೋಗುವುದೇ ಹೋಗುವುದುಹೋಗುತ್ತಲಿರಬೇಕಷ್ಟೆ ಈ ಪರಿಸ್ಥಿತಿಯಲ್ಲಿ ಬ್ರೇಕ್ ಇಕ್ಕಬಾರದುರಕ್ತವನ್ನೇ ಮಣಿ ಸರಕಾಗಿಸಿದ ರಕ್ತೇಶ್ವರಿಗೆಮನುಜ ಪರಿಪೂರ್ಣ ವೇಗದಲ್ಲಿಹೊರಬರುವ ನಿಯಂತ್ರಣ ಇರಬೇಕು ಬೈಕ್ ಮಹಿಷನ ಥರ ಜಿಗಿಸುತ್ತಿದ್ದರೆಅವಳ ಮಧು ತುಂಬಿ...





















