ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಭೂಮಿಗಳು ಕಾಣೆ

-ಕೊಟ್ರೇಶ್ ಅರಸೀಕೆರೆ

ನೆಲ ಚರಿತ್ರೆ

ಇಲ್ಲಿ ಭೂಮಿಗಳು ಕಾಣೆ
ಆಗುತ್ತವೆ
ಕಟ್ಟಡಗಳು ಉದ್ಭವಿಸುತ್ತವೆ

ಗುಡ್ಡಗಳು ಕುಸಿಯುತ್ತವೆ
ರಸ್ತೆಗಳು
ನಿರ್ಮಾಣವಾಗುತ್ತವೆ

ನದಿಗಳು ನಾಪತ್ತೆಯಾಗುತ್ತವೆ
ಕೆರೆಗಳು
ಒಣಗಿ ಹೋಗುತ್ತವೆ

ಎಲ್ಲ ಪ್ರಶ್ನೆ ಉತ್ತರಗಳು
ಸೋರಿ ಹೋಗುತ್ತವೆ
ಪ್ರತಿಭಟನೆಗಳು ಕೂಡ

ಚರಿತ್ರೆ ಮತ್ತೆ ಮತ್ತೆ ಮರು
ಕಳಿಸುತ್ತದೆ
ನೆಲದ ಶತೃಗಳು ಕೂಡ

ದೇಶ ಭಕ್ತರು ಮಾತ್ರ
ದಿನದಿಂದ ದಿನಕ್ಕೆ
ಸೃಷ್ಟಿಯಾಗುತ್ತಿದ್ದಾರೆ

‍ಲೇಖಕರು Admin

5 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading