ಮೂಲ: ಲಿಂಡಾ ಪಾಸ್ಟನ್ (ಟರ್ಮಿನಲ್)
ಕನ್ನಡಕ್ಕೆ – ಗೀತಾ ದೊಡ್ಮನೆ
ನಿಲುದಾಣ
ಅದೊಂದು ರಹಸ್ಯ
ಮೇಲೆ ಮೇಲೆ ತನ್ನದೇ
ಸುಳಿಯೊಡನೆ ಹೊಗೆ
ಮಾಯವಾಗುವ
ಬೆಂಕಿಗೂಡಿನ ಹಾಗೆ.
ಮತ್ತೆ ಎಲೆಗಳು ಉದುರುತ್ತವೆ.
ಪುಟ್ಟ ಹಾಯಿಗಳದೊಂದು ದೊಡ್ಡ ದಂಡು
ಯಾರೂ ತಿಳಿಯರು ಅವುಗಳ-
ನಿಲುದಾಣ ಎಲ್ಲಿ- ಎಂದು.
ರೈಲು ಕಿಟಕಿಗಳಿಂದ ಮಕ್ಕಳು
ಕೈ ಬೀಸುತ್ತಾರೆ
ಬೆನ್ನಹಿಂದೆಯೇ ಅವರ
ವರುಷಗಳು ಬೆಳೆಯುತ್ತವೆ.
ಆದರೆಲ್ಲೋ.
ಸಾವಿರ ಯುಗಗಳ ಮುನ್ನ
ನಮ್ಮೆಡೆಗೆ ಅಣಿಗೊಂಡು
ಅರಳಲಿದೆ ಮೇಘವೊಂದು
ನಕ್ಷತ್ರದಿಂದೊಂದು ಹೊಳಪಿನಂತೆ
ಮತ್ತೆ ಮಂಜು ಪಕಳೆಗಳಾಗಿ
ಬಿರಿಯುವಂತೆ
ಕಡೆಗಾದರೂ ಬಂದೇ ಬರುವುದು.






0 Comments