ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಮಾತಿನಲ್ಲಿ ಹುಟ್ಟುತ್ತದೆ

-ವೀರೇಂದ್ರ ರಾವಿಹಾಳ್

    ನಿಷ್ಠೆ

    ಯಾರೋ ಹೇಳಿದರು
    ಪ್ರೀತಿ ಮಾತಿನಲ್ಲಿ ಹುಟ್ಟುತ್ತದೆ

    ನಾನು ನಕ್ಕೆ.

    ನನ್ನ ಮನೆಯ ಬಾಗಿಲ ಬಳಿ
    ಒಂದು ಜೀವ ಪ್ರತಿದಿನ
    ಮಾತಿಲ್ಲದೆ
    ಪ್ರೀತಿಯ ಅರ್ಥವನ್ನು ಬರೆಯುತ್ತಿತ್ತು.

    ಅದರ ಕಣ್ಣುಗಳಲಿ
    ಆಕಾಶ ತೊಳೆದ ಬೆಳಕು;
    ಬಾಲದಲಿ
    ವಸಂತದ ಗಾಳಿ.

    ದಣಿದು ಬಂದ ಸಂಜೆಗಳಲಿ
    ಅದು ನನ್ನ ನೆರಳನೇ ತಬ್ಬುತ್ತಿತ್ತು;
    ನಾನು ನಗುವ ಮುಂಚೆಯೇ
    ಅದರ ಕಣ್ಣುಗಳು ಅರಳುತ್ತಿದ್ದವು.

    ಒಂದು ಮುಷ್ಟಿ ಅನ್ನ
    ಒಂದು ಸ್ಪರ್ಶ—
    ಅಷ್ಟೇ ಸಾಕು.

    ಉಳಿದಂತೆಲ್ಲ
    ಆಜೀವ ನಿಷ್ಠೆಯಿಂದ
    ನನ್ನ ಹೆಜ್ಜೆಗಳ ಜೊತೆ ಹೆಜ್ಜೆ ಹಾಕಿ ನಡೆದಿತ್ತು

    ಮನುಷ್ಯರ ನಡುವೆ
    ವಂಚನೆ ಕಲಿತ ಈ ಲೋಕದಲ್ಲಿ
    ಇನ್ನೂ ಸತ್ಯ ಉಳಿದಿದ್ದರೆ,

    ಅದು-
    ಗುಡಿ ಗೋಪುರದಲಿ
    ಮಸೀದಿಯ ಮಿನಾರಿನಲಿ
    ಇಗರ್ಜಿಯ ಶಿಲುಬೆಯಲಿ
    ಗ್ರಂಥಗಳ ಪುಟಗಳಲಿ ಇಲ್ಲ.

    ಸಂಜೆ
    ನನ್ನ ಬರುವಿಕೆಯನ್ನೇ ಕಾಯುತ್ತಾ
    ಬಾಗಿಲ ಬಳಿಯೇ ಮಲಗಿರುವ
    ಆ ಮೌನದ ನಾಯಿಯ
    ಉಸಿರಿನೊಳಗಿದೆ.

    ‍ಲೇಖಕರು Admin

    3 August, 2026

    0 Comments

    Submit a Comment

    Your email address will not be published. Required fields are marked *

    Pin It on Pinterest

    Share This

    Discover more from ಅವಧಿ । AVADHI

    Subscribe now to keep reading and get access to the full archive.

    Continue reading