ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ಮೌನಜಂಗಮನು…

–ಡಾ ದಿನೇಶ್ ನಾಯಕ್

ನೂರು ಗೌಜಿ-ಗದ್ದಲಗಳ
ಸಾವಿರ ವಾದ-ವಾಗ್ವಾದಗಳ
ನಡುವೆಯೂ
ನಿನ್ನ ಮೆದುನಡಿಗೆಯ ನೆರಳು
ಹೊರಟಿದೆ ಮೂಕಮೆರವಣಿಗೆ
ಶಬ್ದನಾದದ ಹೆಸರ ತೊರೆದು

ನುಡಿದ ನಿನ್ನುಡಿಗೆ
ನಿಡಿದ ನಿನ್ನುಸಿರಿಗೆ
ಅಪಾರ್ಥದ ವಿಪರೀತ ಅರ್ಥಗಳು
ಬಸುರ ತುಂಬ ವಿಷವ ಹೊತ್ತು
ಹೂಂಕರಿಸುವ ನೆಲದ ರಣಹದ್ದುಗಳು

ನಿನ್ನ ಧರ್ಮದ ಬಲವು ಅಧ್ಯಾತ್ಮದ
ಒಲವು
ಕಳಚಿಬಿದ್ದ ಗಳಿಗೆ
ಬಯಲ ತುಂಬಾ
ಕಂಪಿಸುವ ಶೋಕತಪ್ತ
ಮಳೆದುಂಬಿಗಳು

ನೀ ಕಲಿಸಿದ ಜೀವನದ ಶುಚಿಯು
ಬದುಕಿನ ರುಚಿಯು
ಗುಡಿಸಿ ಹಾಕಿದೆ
ಬೀದಿ-ಕೇರಿಯ ಕೊಚ್ಚೆ ಕೊಳೆಯನು

ನೀ ನಿವೃತ್ತನಾದರೂ
ಶತಮಾನದ ಅನುಮಾನಕ್ಕೆ
ತುತ್ತಾದರೂ
ನಿಜಪ್ರೇಮದ ಹಾದಿಯಲಿ
ನಡೆಯುತ್ತಲೇ ಇರುವೆ
ಕೋಲು ಹಿಡಿದು

ಬಾಗಿದ ಬೆನ್ನು
ಇನ್ನೆಂದೂ ಮುಖ ತೋರಿಸಲಾರೆ
ಎಷ್ಟೇ ಅಂದರೂ
ಬೆನ್ನು ಬಿಡರು ದುಂದುಮಾರರು

ಏನಾದರೂ
ನೀನೇ ಮೌನಜಂಗಮ
ನೊಂದವರಿಗೂ
ನಿನ್ನ ಕೊಂದವರಿಗೂ

ಕೃಪೆ: ‘ಹೊಸತು’ ಮಾಸಪತ್ರಿಕೆ

‍ಲೇಖಕರು Admin

2 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading