ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿಯ ನೆನಪಿನಲ್ಲಿ

-ವೀರೇಂದ್ರ ರಾವಿಹಾಳ್

ಕೈಯಲಿ ಕೋಲಿಡಿದು
ಬರಿಗಾಲ
ಹೆಜ್ಜೆಯನೂರುತ
ಮಣ್ಣಿನ ದಾರಿಯಲೇ
ನಡೆದವನು ನೀನು…

ಅರಮನೆಯ ಬಾಗಿಲ
ಮುಂದೆ ನಿಂತವನಲ್ಲ,
ಬಡವರ ಗುಡಿಸಲಿನ
ಬಾಗಿಲನು ತಟ್ಟಿದವನು.

ಗುಂಡಿಗೆ ಗುಂಡಿನಿಂದಲೇ
ಉತ್ತರಿಸಲಿಲ್ಲ,
ಕಲ್ಲಿಗೆ ಕಲ್ಲೆಸೆಯಲಿಲ್ಲ.
ಸತ್ಯವನೆ ಹಿಡಿದು
ಸಾಮ್ರಾಜ್ಯದ ಎದುರು ನಿಂತೆ.

ಕೈಯಲ್ಲಿ ಖಡ್ಗವಿರಲಿಲ್ಲ ,
ನಿನ್ನ ಮೌನದಲ್ಲಿತ್ತು
ಲಕ್ಷ ಕತ್ತಿಗಳ ಶಕ್ತಿ.

ಚರಕ ತಿರುಗಿಸಿದ ಕೈಗಳು
ದೇಶದ ಕನಸುಗಳನು
ನೂಲಾಗಿ ನೇಯ್ದವು;

ಉಪ್ಪಿನ ಕಣವೊಂದು
ಸಾಗರದ ಅಲೆಯಾಗಿ
ಸ್ವಾತಂತ್ರ್ಯದ ದಡವ ತಲುಪಿಸಿತು.

ಇಂದು
ವೃತ್ತ ವೃತ್ತಗಳಲ್ಲೂ
ನಿನ್ನ ಹೆಸರಿನಲಿ ಪ್ರತಿಮೆಗಳಿವೆ,
ರಸ್ತೆಗಳು,
ಸ್ಮಾರಕಗಳೂ ಇವೆ…

ಆದರೆ ಗಾಂಧಿ
ನೀನು ನಡೆದ ದಾರಿಯಿದೆಯೇ?

‍ಲೇಖಕರು Admin

2 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading