ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವು ತುದಿಯಲಿ ಕೂತಿದೆ

– ಶಿವರಾಜ ಅರಳಿ

ಪ್ರಾಥ೯ನೆ

ಸಾವು ತುದಿಯಲಿ ಕೂತಿದೆ
ಹೋಗುತ್ತಿದ್ದೇನೆ
ಮೋಡಗಳ ಇರಿದು
ನಕ್ಷತ್ರಗಳ ದಾಟಿ.

ಎದೆ ಕಪ್ಪುಗಟ್ಟಿದೆ
ಇಷ್ಟು ದೂರ
ಹೊತ್ತು ನಡೆದ ಬದುಕು
ಮೌನದಲಿ ಬಿಕ್ಕುತ್ತಿದೆ
ಉಸಿರು ಕೈಯಲಿಲ್ಲ
ಪಾಪ.! ಅಲಗಿನ ನೆರಳಲಿ
ಜೋತು ಬಿದ್ದಿದೆ

ದುಃಖಿಸದಿರು
ನಿನ್ನ ಹಾದಿ ದೂರಿದೆ
ನೇವರಿಸಿ ಸಂತೈಸುತ್ತೇನೆ
ಮತ್ತೆ-ಮತ್ತೆ.

ಕಣ್ಣಿನೇರಕೆ ಕತ್ತಲು ಚಾಚಿ
ಹಮ್ಮಿನಲಿ ಎರಗುತ್ತದೆ
ಯೋಚಿಸು.

ತೋಳ ತೆಕ್ಕೆಯಲಿ
ಕಾದ ಎದೆಯಲಿ
ತಲೆಯೊರಗಬೇಡ;ಸಾಕು
ಯಾರೂ ನಮ್ಮವರಲ್ಲ

ಒಂದುವೇಳೆ ನನ್ನೊಟ್ಟಿಗೆ
ಮಾತನಾಡಬೇಕೆನಿಸಿದರೆ
ಕುಗ್ಗದಿರು;ಸಂವಹನಿಸುತ್ತೇನೆ
ಆತ್ಮದೊಟ್ಟಿಗೆ

ನನಗೂ-ನಿನಗೂ ನಂಟಿದೆ
ಪ್ರಾಥಿ೯ಸುತ್ತೇನೆ
ಸಾವಿನ ಕೋಣೆಯಲಿ ಕೂತು
ನಿನಗಾಗಿ
ನಿನ್ನ ಸೋತ ನೆರಳಿಗಾಗಿ.

ಕ್ಷಮಿಸು ಕಂದ
ಅಧ೯ ದಾರಿಯಲ್ಲಿ
ಬೆರಳ ಕಳಚಿ ಸಾಗಿದ್ದಕ್ಕೆ…!!

‍ಲೇಖಕರು Admin

2 August, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading