ಎಚ್.ಎಸ್.ವೆಂಕಟೇಶ ಮೂರ್ತಿ ಲೇಖನಗಳು

ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

-ಎಚ್.ಎಸ್.ವೆಂಕಟೇಶಮೂರ್ತಿ ನಾವು ಹುಡುಗರಿದ್ದಾಗ ಸಂಜೆ ಶಾಲೆ ಮುಗಿದು ಹೋ ಅಂತ ರಸ್ತೆಗೆ ನುಗ್ಗುವಾಗ ಒಂದು ಹಾಡನ್ನು ಕೋರಸ್ಸಾಗಿ ಹಾಡುತಾ ಇದ್ದೆವು. ಹೊರಟ ಕಂಪಿಲರಾಯ  ಸಡಗರದಿಂ ಕೆರೆ ಕಡೆಗೆಸಡಗರದಿಂಕೆರೆ ಕಡೆಗೆಸಡಗರದಿಂಕೆರೆ ಕಡೆಗೆ! ಈ ಕಂಪಿಲರಾಯ ಯಾರು? ಅವನು ಸಡಗರದಿಂದ ಕೆರೆ ಕಡೆ ಯಾಕೆ ಹೊರಟ? ದೇವರಾಣೆಗೂ ನಮಗೆ ಗೊತ್ತಿದ್ದಿಲ್ಲ. ಸಡಗರದಿಂ ಎಂದು ಒಬ್ಬ ಕೂಗುವುದು. ಉಳಿದವರೆಲ್ಲಾ ರಾಗ ರಾಗವಾಗಿ ಕೆರೆ ಕಡೆಗೆ ಎಂದು ಅರಚುವುದು! ಹೀಗೆ ಒಂದು ದಿನ ನಾವೆಲ್ಲಾ ಹಾಡುತ್ತಾ ಬರುತ್ತಿರುವಾಗ ಪೋಸ್ಟ್ ಮ್ಯಾನ್ ಮರಿಲಿಂಗಣ್ಣ ಎದುರಿಗೆ […]

ಮತ್ತಷ್ಟು ಓದಿ
ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

-ಎಚ್.ಎಸ್.ವೆಂಕಟೇಶಮೂರ್ತಿ ಬೆಳಗಾಬೆಳಿಗ್ಗೆ ಬಿವಿ ಕಾರಂತರಿಂದ ಫೋನ್: “ಎಚ್ಚೆಸ್ವಿ ನಿಮ್ಮೊಂದಿಗೆ ತುರ್ತಾಗಿ ಮಾತಾಡುವುದಿದೆ. ದಯವಿಟ್ಟು ಬಿಡುವುಮಾಡಿಕೊಂಡು ಬರುತ್ತೀರಾ?”. ನಾನು ಬೇಗ ತಿಂಡಿಶಾಸ್ತ್ರ ಮುಗಿಸಿ ಕಾರಂತರ ಮನೆಗೆ ಹೋಗೋಣ ಎಂದುಕೊಂಡೆ. ಅಷ್ಟರಲ್ಲಿ ಕಾರಂತರಿಂದ ಮತ್ತೆ ಫೋನ್: “ಬ್ರೇಕ್ಫಾಸ್ಟಿಗೆ ನಮ್ಮಲ್ಲಿಗೇ ಬನ್ನಿ”. ಸರಿ ಅಂದುಕೊಂಡು ನಾನು ಕಾರಂತರ ಮನೆ ತಲಪಿದಾಗ ಗೇಟಿನ ಬಳಿಯೇ ಕಾರಂತ ನಿಂತಿದ್ದರು. ಅವರ ನಿಂಜ ಪಕ್ಕದಲ್ಲಿ ಗಸಗಸ ತೇಗುತ್ತಾ. ನನ್ನನ್ನ ನೋಡಿದ್ದೇ ಅವ ಬಗುಳಾಟ ಶುರುಹಚ್ಚಿದಾಗ “ಏಯ್…ಫ್ರೆಂಡ್ ಕಣೋ” ಅಂತ ಕಾರಂತ ಅವನನ್ನು ಸಮಾಧಾನಪಡಿಸಿದರು. ನಾವು ಒಳಗೆ […]

ಮತ್ತಷ್ಟು ಓದಿ
ಎಚ್ಚೆಸ್ವಿ ಬರೆಯುತ್ತಾರೆ: ಕಂಬಾರರ ಲೋಕಸೃಷ್ಟಿ

ಎಚ್ಚೆಸ್ವಿ ಬರೆಯುತ್ತಾರೆ: ಕಂಬಾರರ ಲೋಕಸೃಷ್ಟಿ

-ಎಚ್.ಎಸ್.ವೆಂಕಟೇಶಮೂರ್ತಿ ವಾಸ್ತವ ಜಗತ್ತನ್ನು ನಮ್ಮ ಜಾನಪದ ಮತ್ತು ಮಾರ್ಗ ಕಾವ್ಯ ಲೋಕದ ಕಲ್ಪನಾವೈದೃಶ್ಯಕ್ಕೆ ಪ್ರತಿನಿಧಾನಮಾಡಿ ನಿಲ್ಲಿಸುವ ಯತ್ನ ಆಧುನಿಕ ಸಂದರ್ಭದಲ್ಲಿ ಮತ್ತೆ ಮತ್ತೆ ನಡೆಯುತ್ತಲೇ ಬಂದಿದೆ. ಆಧುನಿಕ ಕಥನ ಜಗತ್ತಲ್ಲಂತೂ ಆ ಪ್ರಯತ್ನ ನಿರಂತರವಾಗಿ ನಡೆದಿದೆ. ನಮ್ಮ ಕಾದಂಬರೀಯುಗದ ಆರಂಭಿಕ ಕಾಲದಲ್ಲಿ ಸೃಷ್ಟಿಯಾಗಿದ್ದ ಮಿಥಿಕ ಜಗತ್ತು ನಿಧಾನವಾಗಿ ಮಸಳಿಸಿಹೋಗಿ ಬಹು ದೊಡ್ಡ ಕಥಕವೃತ್ತಿಯೊಂದನ್ನು ನಾವು ಕಳೆದುಕೊಂಡು ಪತಿತರಾಗಿದ್ದೇವೆ. ರಾಮಾಯಣ, ಮಹಾಭಾರತ, ಜೈನಪುರಾಣಗಳು, ಬೌದ್ಧಜಾತಕ ಕಥೆಗಳು, ದ್ರವಿಡಮೂಲದ ಜಾನಪದ ಕಥಾವೃತ್ತಿಗಳು, ಇವೆಲ್ಲಕ್ಕೂ ಹೊಯ್ಕಯ್ ಆದ ಅತ್ಯದ್ಭುತ ಜಾನಪದ ಕಥಾಲೋಕ-ಈ […]

ಮತ್ತಷ್ಟು ಓದಿ
ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿ ಹೊಸಪುಸ್ತಕ…

ಎಚ್ ಎಸ್ ವಿಯವರ ಆನಾತ್ಮಕಥನ ಪುಸ್ತಕದ ಎರಡನೇ ಭಾಗ ‘ಅಕ್ಕಚ್ಚುವಿನ ಅರಣ್ಯಪರ್ವ’ ಹೊರಬರುತ್ತಾ ಇದೆ. ಪುಸ್ತಕಕ್ಕೆ ಅಪಾರ ಅವರು ಮಾಡಿರುವ ಮುಖಪುಟ ವಿನ್ಯಾಸ ಇಲ್ಲಿದೆ.

ಮತ್ತಷ್ಟು ಓದಿ
ಎಚ್ಚೆಸ್ವಿ ಬರೆಯುತ್ತಾರೆ: ಸ್ಮೃತಿ ಸಂಪಾದನೆ

ಎಚ್ಚೆಸ್ವಿ ಬರೆಯುತ್ತಾರೆ: ಸ್ಮೃತಿ ಸಂಪಾದನೆ

“ನಾನು” ಅನ್ನುವುದು ಒಂದು ಕಾಲಾತೀತವೂ ದೇಶಾತೀತವೂ ಆದ ಕಲ್ಪನೆ ಅಲ್ಲವೇ ಅಲ್ಲ. ಸ್ವಲ್ಪ ವಿವರಣೆಯಿಂದ ಈ ಅಂಶವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ಸಾಯುವ ಸ್ವಲ್ಪ ದಿನದ ಹಿಂದೆ ನನ್ನ ಪತ್ನಿ ನನಗೆ ಹೇಳಿದ್ದು-ನೀವು ನನ್ನ ಮರೆಯಬೇಡಿ ಅಂತ. ಕೆಲವು ಬಾರಿ ನಾನು ಇಚ್ಛಿಸಿ, ಕೆಲವು ಬಾರಿ ತಾನಾಗಿಯೇ ಆಕೆ ನನ್ನ ನೆನಪಿನಲ್ಲಿ ಸುಳಿದಾಡುವುದುಂಟು. ಹಾಗೆ ನೆನಪಾದಾಗಲೆಲ್ಲಾ ಅವಳೊಬ್ಬಳೇ ನನ್ನ ಅರಿವಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಪ್ರತಿಬಾರಿಯೂ ಯಾವುದೋ ಒಂದು ಸಂದರ್ಭದಲ್ಲಿ, ಒಂದು ನಿಶ್ಚಿತ ಕಾಲ ಘಟ್ಟದಲ್ಲಿ, ಒಂದು ನಿರ್ದಿಷ್ಟ ಪರಿಸರದ […]

ಮತ್ತಷ್ಟು ಓದಿ
ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಬೆಳ್ಳಾಲ ಗೋಪಿನಾಥ ರಾವ್ ‘ಕನ್ನಡ ಬ್ಲಾಗರ್ಸ್’ ನಿಂದ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ ಕನ್ನಡ ಕಥನ ಕವನ” ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಹಿರಿಯ ಚೇತನ ರಾಷ್ತ್ರ ಕವಿ ಶ್ರೀಯುತ ಶಿವರುದ್ರಪ್ಪನವರು , ಡಾ ಚಂದ್ರ ಶೇಖರ ಕಂಬಾರರು ಮತ್ತು ಅವರ ಸಹಧರ್ಮಿಣಿಯವರು, ಶ್ರೀಮತಿ ಮತ್ತು ಶ್ರೀಯುತ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಎಚ್ಚೆಸ್ವಿ ಅವರಿಗೆ ಶುಭ ಹಾರೈಕೆಗಳು

ಇಂದು ಡಾ ಎಚ್ ಎಸ್ ವೆಂಕಟೇಶ್ ಮೂರ್ತಿಯವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಕನ್ನಡ ಬ್ಲಾಗರ್ಸ್ ನಲ್ಲಿ ಬಂದ ಬೆಳ್ಳಾಲ ಗೋಪಿನಾಥ ರಾವ್ ಅವರ ವಿವರ ಲೇಖನ ನಿಮ್ಮ ಮುಂದೆ   ತರುಣಿ ನಾಗರತ್ನಮ್ಮ ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆಯ ಅಕಾಲ ಮರಣ. ಹೊಟ್ಟೆಯಲ್ಲಿದ್ದ ಪುಟ್ಟಕೂಸಿನ ಕನಸಿನಲ್ಲಿ ಜೀವ ಹಿಡಿದಿಟ್ಟ “ಪುಟ್ಟ ವಿಧವೆ” ತೌರುಮನೆ ಹೋದಿಗ್ಗೆರೆಗೆ ಬಂದರು. ತಂದೆ ಭೀಮರಾಯರು ತಾಯಿ ಸೀತಮ್ಮ ಒಬ್ಬಳೇ ಮಗಳ ಬದುಕಿಗೆ ಭರವಸೆ ತುಂಬಿ ಪ್ರೀತಿಯ ಆಸರೆ ನೀಡಿದರು. ಸಾವಿರದೊಂಬೈನೂರಾ ನಲ್ವತ್ನಾಲ್ಕನೆಯ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’

ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’

ನಮ್ಮ ನೆಚ್ಚಿನ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ತಮ್ಮ ಆತ್ಮ ಕಥೆಯಲ್ಲದ ಅನಾತ್ಮ ಕಥನವನ್ನು ‘ಅವಧಿ’ಗಾಗಿ ಪ್ರೀತಿಯಿಂದ ಬರೆದುಕೊಟ್ಟರು. ಈ ಅನಾತ್ಮ ಕಥನ ಎಷ್ಟು ಜನಪ್ರಿಯವಾಗಿತ್ತೆಂದರೆ ಭಾನುವಾರ ಈ ಕಥನ ಪ್ರಕಟವಾಗುವುದು ಒಂದಿಷ್ಟು ತಡವಾದರೆ ಅಥವಾ ತಾಂತ್ರಿಕ ಕಾರಣದಿಂದ ಅದು ಪ್ರಕಟವಾಗದಿದ್ದರೆ ಓದುಗರು ಮುನಿಸಿಕೊಂಡೆ ಕೂರುತ್ತಿದ್ದರು. ಎಚ್ಚೆಸ್ವಿ ಅವರ ಬರಹದ ಗುಣ ಹಾಗಿತ್ತು. ಅವರ ಅನಾತ್ಮ ಕಥನವಂತೂ ಅವರ ಕಥನ ಮಾತ್ರ ಆಗದೆ ನಮ್ಮ, ನಿಮ್ಮ, ಪ್ರತಿಯೊಬ್ಬರ ಕಥನವಾಗಿಬಿದುತ್ತಿತ್ತು. ಈ ಕಥನ ಪ್ರಕಟವಾಗಿ ಬಂದಾಗಲೂ ಇದೆ ಪ್ರೀತಿಯನ್ನು […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ರಾಯಬಿಡದಿಯ ನಿಗೂಢ ನಕಾಷೆ…

ಎಚ್ಚೆಸ್ವಿ ಅನಾತ್ಮ ಕಥನ: ರಾಯಬಿಡದಿಯ ನಿಗೂಢ ನಕಾಷೆ…

ಅನಾತ್ಮಕಥನ-ಹದಿನೈದು ಅಲ್ಲಾಡಿ ರುದ್ರಣ್ಣನವರ ಬಗ್ಗೆ ನಾನು ಈಗಾಗಲೇ ಪ್ರಸ್ತಾಪಿಸಿದ್ದೇನೆ. ರುದ್ರಣ್ಣನವರ ಮರಣಾನಂತರ ಅವರ ರಾಯಬಿಡದಿಗೆ ಯಾವ ಗತಿ ಬಂತು ಎಂಬುದನ್ನು ಸಮಾಧಾನದ ಮನಃಸ್ಥಿಯಲ್ಲಿ ವಿವರಿಸೋದು ತುಂಬ ಕಷ್ಟ. ರುದ್ರಣ್ಣನವರದ್ದು ಬಾಳಿ ಬದುಕಿದ ಸ್ಥಿತಿವಂತರ ಮನೆತನ. ಅವರ ಮುತ್ತಾತನ ಕಾಲಕ್ಕೆ ಅವರೇ ನಮ್ಮೂರಿನ ಬಹಳ ದೊಡ್ಡಕುಳ. ಆಗರ್ಭಶ್ರೀಮಂತರು. ಲಕ್ಷ್ಮಿ ಅವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಎಂದೇ ನಮ್ಮ ಹಿರಿಯರು ನಾನು ಚಿಕ್ಕವನಾಗಿದ್ದಾಗ ಮಾತಾಡಿಕೊಳ್ಳುತ್ತಾ ಇದ್ದರು.ನಾನು ಹುಡುಗನಾಗಿದ್ದಾಗ ರುದ್ರಣ್ಣ ಏರುಯೌವನದ ಯುವಕರಾಗಿದ್ದರು. ಅವರ ತಂದೆ ಇರುಪಣ್ಣ ಭಾರೀಗಾತ್ರದ ವಜನ್ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಮದುವೆಯೇನೋ ಆಯಿತು. ಆದರೆ ಮದುಮಕ್ಕಳ ಹೊಸ ದಾಂಪತ್ಯದ ಕಿರುತೆಪ್ಪ ವಕ್ರಗತಿಯ ಅಬ್ಬರದ ಕಿರುಹೊಳೆಯಲ್ಲಿ ಸಿಕ್ಕು ತಲ್ಲಣಕ್ಕೊಳಗಾದ ಆರಂಭದ ರಾತ್ರಿಗಳವು. ಧುತ್ತೆಂದೆದುರಾಗುವ ಮಚ್ಚುಗಲ್ಲುಗಳು. ಆ ಎಂದು ಶೂನ್ಯವನ್ನೇ ನುಂಗಲಿಕ್ಕೆಂಬಂತೆ ಬಾಯಿ ತೆರೆಯುವ ಚಕ್ರಾವರ್ತಗಳು. ನೀರೊಳಗಿನ ಕಾಣದ ಚಾಚುಬಂಡೆಗಳಿಗೆ ತೀಡಿದಾಗಾದ ಗೀಚುಗಾಯಗಳಿಂದ ಘಾಸಿಗೊಂಡ ತೆಪ್ಪದ ತಳ. ಹಿಡಿದ ಹುಟ್ಟನ್ನು ತೆಪ್ಪದಲ್ಲಿಟ್ಟು ಮೊಣಕಾಲು ಮಂಡಿಗೆ ಕೈಹಚ್ಚಿ ತೆಪ್ಪಗೆ ನೀರ್ಗಣ್ಣಾಗಿ ಕೂತುಬಿಟ್ಟರು ಹುಡುಗ ಹುಡುಗಿ. ಆ ಹಳ್ಳಿಯ ಮನೆಯಲ್ಲಿ ಇದ್ದುದು ಒಂದೇ ಕೋಣೆ. ಕಿಟಕಿಗಳೇ ಇಲ್ಲದ ಅದನ್ನು ಕತ್ತಲಕೋಣೆ ಎಂದು ಕರೆಯುತ್ತಾ ಇದ್ದರು. […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…

ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…

ಅನಾತ್ಮಕಥನ-ಹದಿನಾಲಕ್ಕು ನಾನು ನಿನಗೆ ಮೊದಲೇ ಹೇಳಿದ್ದೇನೆ. ನೀನು ಯಾವುದು ನೀನು ಅಂದುಕೊಂಡಿದ್ದೇಯೋ ಅದಷ್ಟೇ ನೀನಲ್ಲ. ನಿನ್ನೊಳಗೇ ಇನ್ನೂ ಅನ್ವೇಷಿಸಬೇಕಾದ ಅನೇಕ ಅಪರಿಚಿತ ಭೂಭಾಗಗಳಿವೆ. ಹಾಗೇನೇ ನಾನು ಯಾವುದು ನಾನು ಅಂದುಕೊಂಡಿದ್ದೇನೋ ಅದಷ್ಟೇ ನಾನಲ್ಲ. ನೀನಾಗಲೀ ನಾನಾಗಲೀ ಕಂಡೇ ಇರದ ಅನೇಕ ನಿಗೂಢನಿರ್ಮಿತಿಗಳು ನಮ್ಮೊಳಗೇ ಹುದುಗಿದ್ದಾವೆ. ಚಿತ್ರರಥ ಇದನ್ನು ಬಿಡಿಸಿಬಿಡಿಸಿ ನನಗೆ ಹೇಳಿದ್ದಾನೆ. ನಿಜಕ್ಕೂ ಒಂದರ್ಥದಲ್ಲಿ ಅವನು ನನ್ನ ಗುರುವೇ. ಈವತ್ತು ನಸುಕಿನಲ್ಲೇ ಎದ್ದು ವ್ಯಾಘ್ರಗಿರಿಯ ತಪ್ಪಲಿನ ಬಳಿಗೆ ಬಾ. ನಾನು ನಿನಗೆ ನೀನೆಂದೂ ಕಾಣಿರದ ಅದ್ಭುತ ಲೋಕವೊಂದನ್ನು […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

ಎಚ್ಚೆಸ್ವಿ ಅನಾತ್ಮ ಕಥನ: ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಆ ನಕ್ಷತ್ರ…

ಅನಾತ್ಮಕಥನ-ಹನ್ನೆರಡು   ಹುಡುಗಿಗೆ ಮದುವೆ ಫಿಕ್ಸ್ ಆದ ಮೇಲೆ ತಾಯಿ ಮಗಳಿಗೆ ಮೂರುಬಾರಿ ಮೂಗು ಚುಚ್ಚಿಸುವ ಪ್ರಯತ್ನ ಮಾಡಿದರು. ಮೂರು ಸಾರಿಯೂ ಕೂಕು ಬೆಳೆದು, ವಿಪರೀತ ನೋವಾಗಿ ಮೂಗಿಗೆ ತೂರಿಸಿದ್ದ ದಾರ ತೆಗೆಸಬೇಕಾಯಿತು. ಮದುವೆ ಬೇರೆ ಹತ್ತಿರ ಬರುತ್ತಾ ಇತ್ತು. ಮದುವೆ ಹುಡುಗಿಗೆ ಮೂಗು ಚುಚ್ಚದಿದ್ದರೆ ಹೇಗೆ? ಹುಡುಗಿಯ ನೀಳವಾದ ಮೂಗಿಗೆ ಒಂದು ಕಿರುಮುತ್ತಿನ ಮೂಗುಬಟ್ಟು ಇಟ್ಟರೆ ಅದರ ಲಕ್ಷಣವೇ ಲಕ್ಷಣ..! ಎಂಬುದಾಗಿ ಮದುವೆ ಹುಡುಗನ ಪತ್ರಬಂದಿತ್ತು. ಹೈಸ್ಕೂಲೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಪದ್ಯ ಬೇರೆ ಬರೆಯುತ್ತಾ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಅನಾತ್ಮಕಥನ-ಹತ್ತು ಕಂಬಿಕ್ರಿಯೆ ಎಂಬ ನವೋನ್ನವ ಸಾಂಗತ್ಯ… ನಮ್ಮ ಮನೆಗೆ ನಾಕು ದಿಕ್ಕಿನಿಂದ ನಾಕು ಸೊಸೆಯರು ಬಂದಿದ್ದಾರೆ. ಹಿರೀಸೊಸೆ ಪ್ರತಿಮ ದಕ್ಷಿಣಕನ್ನಡದವಳು. ಮಂಗೆಬೆಟ್ಟು ಅಂತ ಅವರ ಊರು. ಆದರೆ ಬೆಳೆದದ್ದು ಹಾಸನದ ತನ್ನ ಸೋದರಮಾವನ ಮನೇಲಿ. ಎರಡನೇವಳು ಶಾಲಿನಿ; ಹುಬ್ಬಳ್ಳಿ ಹುಡುಗಿ. ಆದರೆ ಹುಟ್ಟಿಬೆಳೆದದ್ದೆಲ್ಲಾ ಬೆಂಗಳೂರಲ್ಲೇ. ಮೂರನೇ ಸೊಸೆ ವೇದ ಬೆಂಗಳೂರವಳು. ನಾಕನೇ ಹುಡುಗಿ ಸುಮಾ ತಮಿಳಿನವಳು. ಬೆಳೆದದ್ದು ಬೆಂಗಳೂರಲ್ಲೇ. ಇವರಲ್ಲಿ ಮೂವರು ಶೈವ ಸಂಪ್ರದಾಯದವರು. ಎರಡನೆಯವಳು ಮಾತ್ರ ವೈಷ್ಣವ ಸಂಪ್ರದಾಯದ ಮನೆಯಿಂದ ಬಂದವಳು. ಈ ಸಣ್ಣ ಅಂತರವೇ […]

ಮತ್ತಷ್ಟು ಓದಿ
ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…

ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…

ಎಚ್.ಎಸ್.ವೆಂಕಟೇಶಮೂರ್ತಿ   ಯುಗಾದಿ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ನನಗೆ ಮೊದಲು ನೆನಪಾಗುವುದು ಬೇಂದ್ರೆಯವರ ಪದ್ಯ. ಯುಗಪರಿವರ್ತನೆಯ ಸಂದರ್ಭದ ಎಲ್ಲ ಬೆಡಗು ಬಿನ್ನಾಣ ವೈಭವದ ನಡುವೆಯೂ ಅಲ್ಲಿ ಕಾಣುವ ಒಂದು ವಿಷಾದದ ದನಿ ನನಗೆ ಮುಖ್ಯವೆನಿಸಿದೆ. ನಾವು ಅನೇಕ ಬಾರಿ ಕವಿತೆಯ ಈ ವಿಷಾದವನ್ನು ಗ್ರಹಿಸದೆಯೇ ಮುಂದೆ ಹೋಗಿಬಿಡಬಹುದು. ಕವಿತೆಯಲ್ಲಿ ಬೇಂದ್ರೆ ಬಹು ಮುಖ್ಯವಾದ ಒಂದು ಪ್ರಶ್ನೆಯನ್ನೆತ್ತಿದಾರೆ: Photo Courtesy: Udaan Photo School ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ! […]

ಮತ್ತಷ್ಟು ಓದಿ
ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು

  ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು. ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ. ಇನ್ನಷ್ಟು ಕವಿತೆ ಹಾದಿಯಲ್ಲಿವೆ.. ಒಂದಕ್ಕೆ ಒಂದು ಸೇರಿದರೆ… ಕೇರಳದ, ವೈಕಂ ಎಂಬ ಮುಸ್ಲಿಮ್ ಲೇಖಕನ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ನಮ್ಮ ಮಾಸ್ತಿಯನ್ನ ನೆನಪಿಸುವಂಥ ಮಾಹೋನ್ನತ ಕತೆಗಾರ ಆತ. ಅವರು ಬರೆದ ಪಾತುಮಳ ಆಡು, ಬಾಲ್ಯದ ಸಖಿ, ನೆನಪಿನ ಕೋಣೆಗಳು ಮೊದಲಾದ- ವನ್ನ ನೀವು ಓದಿಯೂ ಇರುತ್ತೀರಿ. ಹಿಂದು […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಅನಾತ್ಮಕಥನ-ಒಂಭತ್ತು ಅರವತ್ತು ವರ್ಷಗಳ ಹಿಂದೆ ನಮ್ಮ ಹಿತ್ತಲು ಒಂದು ಸಣ್ಣ ಕಾಡಿನ ಹಾಗೇ ಇತ್ತು. ಅಗಳ್ತಿಗೆ ಅಂಚುಕಟ್ಟಿ ದಟ್ಟವಾದ ಉಪ್ಪೆ ಮೆಳೆಗಳು. ಈ ಕಡೆ ನಾಡಿಗರ ಹಿತ್ತಲಲ್ಲಿ ಸಣ್ಣ ಬೆಟ್ಟದ ಹಾಗಿದ್ದ ಬುರುಜು. ಅದರ ತುಂಬ ನಾನಾ ರೀತಿಯ ಪೊದೆಗಳು ಬೆಳೆದು ದುರ್ಭೇದ್ಯವಾಗಿತ್ತು. ಅದರ ಪಕ್ಕದಲ್ಲಿ ಭಾರಿ ಎತ್ತರದ ಬಾಗಿ ಮರ ಒಣಗಿದ ಕಾಯಿ ಸುರಿಸುತ್ತ ನಮ್ಮ ಅಜ್ಜನಿಗೆ ದಿನಾ ಹಿತ್ತಲು ಗುಡಿಸುವುದೇ ಒಂದು ಕೆಲಸವಾಗಿತ್ತು. ಚಳಿಗಾಲ ಬಂದರೆ ಒಣಗಿದ ಎಲೆಗಳೂ ಬಾಗಿ ಮರದಿಂದ ಒಂದೇ ಸಮನೆ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….

ಎಚ್ಚೆಸ್ವಿ ಅನಾತ್ಮ ಕಥನ: ಅಂಗೈ ಗದ್ದೆಯೊಳಗೊಂದು ಮುಂಗೈ ಅರಗಿಳಿ….

(ಅನಾತ್ಮಕಥನ-ಎಂಟು) ಉದ್ದಂಡಿಯ ಹೆಸರು ಬೇರೇನೇ ಇದೆ. ಆದರೆ ಆರೂವರೆ ಅಡಿ ಎತ್ತರ ಇದ್ದ ಆ ಆಸಾಮಿಯನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಉದ್ದಂಡಿಯೆಂದೇ ಕರೆಯುತ್ತಿದ್ದೆವು. ಉದ್ದಂಡಿ ನಮಗೆ ದೂರದ ಸಂಬಂಧಿಯೂ ಆಗಬೇಕಾದುದರಿಂದ ಆಗಾಗ ನಮ್ಮ ಊರಿಗೆ ಬಂದು ಮಾತಾಡಿಸಿಕೊಂಡು ಹೋಗುತ್ತಾ ಇದ್ದರು. ನನಗೆ ಗೊತ್ತಿರುವಂತೆ ಉದ್ದಂಡಿಗೆ ಇಂಥದೇ ಎಂದು ಹೇಳಿಕೊಳ್ಳಬಹುದಾದ ಯಾವ ಕೆಲಸವೂ ಇರಲಿಲ್ಲ. ಯಾರು ಏನೇ ಹೇಳಿದರೂ ಅವರು ಆ ಕೆಲಸ ಮಾಡಿಸಿಕೊಡುತ್ತಿದ್ದರು. ಬೇರೆಯವರ ಕೆಲಸವನ್ನು ಮುಗಿಸಿಕೊಡುವುದೇ ಅವರ ಕೆಲಸ ಎಂದು ಬೇಕಾದರೆ ಇಟ್ಟುಕೊಳ್ಳಿ. ನಮ್ಮ ಅಜ್ಜ ತೀರಿಹೋದ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ತುಂಗಭದ್ರಾ ತೀರದಲ್ಲಿ ಚನ್ನಕೇಸರಿ ನೆರಳು

ಎಚ್ಚೆಸ್ವಿ ಅನಾತ್ಮ ಕಥನ: ತುಂಗಭದ್ರಾ ತೀರದಲ್ಲಿ ಚನ್ನಕೇಸರಿ ನೆರಳು

ಚರಿತ್ರೆ ಎನ್ನುವ ಬಕಪಕ್ಷಿ ಸುಮ್ಮನೆ ಬಂದು ಸುಮ್ಮನೆ ಹೋಗುವುದಿಲ್ಲ. ಹೋಗುವ ಮುನ್ನ ಅದು ತನ್ನ ಅಸ್ತಿಪಂಜರವನ್ನು ವರ್ತಮಾನದ ಎದೆಯ ಮೇಲೆ ಒಗೆದು ಹೋಗುತ್ತದೆ. ಹಂಪಿಯನ್ನು ನೋಡಿದಾಗ ಅದು ನನಗೆ ವಿಜಯನಗರದ ಮಹಾಸಾಮ್ರಾಜ್ಯದ ಅಸ್ತಿಪಂಜರದ ಹಾಗೆ ಭಾಸವಾಗಿ ಎದೆ ಝಲ್ಲೆಂದಿದ್ದುಂಟು. ಹಂಪಿಯ ಆತ್ಮವನ್ನು ಮತ್ತೆ ವರ್ತಮಾನಕ್ಕೆ ಆವಾಹಿಸದೆ ಈ ಭೂತಕ್ಕೆ ಮೋಕ್ಷವೆಂಬುದಿಲ್ಲ. ಆತ್ಮಧಾರಣೆಗೆ ಅಲ್ಲಿ ಹೊಸ ಹಸಿರು ಕಾಯುತ್ತಾ ಇದೆ. ಹರಿದ್ರಾಕುಂಕುಮಶೋಭಿತೆಯಾದ ತುಂಗಭದ್ರೆ ಅಲ್ಲಿ ಈ ಕ್ಷಣವೂ ತರಂಗಲೀಲಾಲೋಲೆಯಾಗಿ ಹರಿಯುತ್ತಳೇ ಇದ್ದಾಳೆ. ಕಬ್ಬಿನ ಗದ್ದೆಗಳು ಸಾಮೂಹಿಕ ಮದುವೆ ದಿಬ್ಬಣದ […]

ಮತ್ತಷ್ಟು ಓದಿ
ಎಚ್ಚೆಸ್ವಿ ಅನಾತ್ಮ ಕಥನ: ಮೆಲ್ಲಗೆ! ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತೆ…

ಎಚ್ಚೆಸ್ವಿ ಅನಾತ್ಮ ಕಥನ: ಮೆಲ್ಲಗೆ! ಅಜ್ಜಿಯ ಕಾಲಿಗೆ ಬಾಗಿಲವಾಡ ತಾಕುತ್ತೆ…

೧೯೭೩. ನಾನು ಎಂ.ಎ ಪರೀಕ್ಷೆ ಮುಗಿಸಿ ಬೆಂಗಳೂರಿಂದ ಊರಿಗೆ ಹಿಂದಿರುಗಿ, ಮತ್ತೆ ಮಲ್ಲಾಡಿಹಳ್ಳಿಯ ಹೈಸ್ಕೂಲಲ್ಲಿ ಕ್ರಾಫ್ಟ್ ಟೀಚರ್ ಹುದ್ದೆ ಮುಂದುವರೆಸಿದೆ. ಎಂ ಎ ಆಗಿದ್ದರು ಯಾವುದಾದರೂ ಕಾಲೇಜಲ್ಲಿ ಕೆಲಸ ಸಿಗಬಹುದೆಂಬ ಗ್ಯಾರಂಟಿಯೇನೂ ನನಗೆ ಇರಲಿಲ್ಲ. ಸಂದರ್ಶನದ ಮೊದಲ ಎರಡು ಅನುಭವಗಳು ಕೂಡ ನನಗೆ ಹಿತಕಾರಿಯಾಗಿರಲಿಲ್ಲ. ಶಿವಮೊಗ್ಗದ ಡಿ ವಿ ಎಸ್ ಕಾಲೇಜಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದೆ. ನನ್ನ ಆಯ್ಕೆ ಆಗಲಿಲ್ಲ. ಸತ್ಯನಾರಾಯಣರಾವ್ ಅಣತಿಯವರ ಆಯ್ಕೆ ಆಯಿತು. ತೀರ್ಥಹಳ್ಳಿಯ ಕಾಲೇಜಿಗೆ ಶಿವಮೊಗ್ಗದಲ್ಲೇ ಸಂದರ್ಶನ ನಡೆಯಿತು. ಅಲ್ಲಿಯೂ ನನ್ನ ಆಯ್ಕೆ ಆಗಲಿಲ್ಲ. […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

%d bloggers like this: