ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೋಷಿಯಲ್ ಡಿಸ್ಟೆನ್ಸ್
‘ಜೀವಿ’ ಎಂದರೆ ಸಂಭ್ರಮ
ನಿಘಂಟು ಸಾರ್ವಭೌಮ ಜಿ. ವೆಂಕಟಸುಬ್ಬಯ್ಯನವರಿಗೆ ಇದು ನೂರೆಂಟು ತುಂಬಿರುವ ಸಂಭ್ರಮದ ಗಳಿಗೆ. ಅವರು ಇನ್ನೇನು ಶತಾಯುಷಿಗಳಾಗುತ್ತಿದ್ದಾರೆ ಎನ್ನುವ ಸಮಯದಲ್ಲಿ- ೨೦೧೨ರಲ್ಲಿ ಮುಂಬೈನ ಮೈಸೂರು ಅಸೋಸಿಯೇಷನ್ ಸದಸ್ಯರು ಅವರನ್ನು ಸನ್ಮಾನಿಸಿದ್ದರು. ಅವರ ಮನೆಯಲ್ಲೇ ಜರುಗಿದ ಸನ್ಮಾನದ ಸಂದರ್ಭದಲ್ಲಿ ಗಿರಿಜಾ ಶಾಸ್ತ್ರಿ ಅವರು...
‘ಸಫಾ’ಳ ಓದು ಹೀಗೆ ಕಾಡಿ..
-ಹೇಮಾ ಖುರ್ಸಾಪೂರ ಲೇಖಕರು ಖ್ಯಾತ ಪ್ರಕಾಶನ ಸಂಸ್ಥೆ' ಪ್ರಥಮ್ ಬುಕ್ಸ್' ನ ಕನ್ನಡ ವಿಭಾಗದ ಸಂಪಾದಕರು. 'ಅವಧಿ'ಯ ಅಂಕಣಕಾರರು ‘ಸಫಾ’ ಎಂಬ ಸುಟ್ಟುಸುರು ವ್ಯವಸ್ಥೆಯ ಸಾಕ್ಷಿಪ್ರಜ್ಞೆಯಾಗಲಿ… ನಾನು ಇಷ್ಟಪಟ್ಟು ಮಾಡುವ ಕೆಲಸಗಳಲ್ಲಿ ಅನುವಾದವೂ ಒಂದು. ಮೊನ್ನೆ ಹೀಗೆ ಅನುವಾದ ಮಾಡಬೇಕಾದ ಯಾವುದೋ ಒಂದು ಸಾಲನ್ನು ತಲೆಯಲ್ಲಿಟ್ಟುಕೊಂಡು...
ಸುದ್ಧಿ: ಹರಾಜು
ಪಿ ಮಹಮದ್
ರಾಮಸಮುದ್ರದ ದಡದಲ್ಲಿ ಪರಮ್ ಭಾರದ್ವಜ್..
ಕಾರ್ಕಳ ರಾಮಸಮುದ್ರದ ದಡದಲ್ಲಿ, ಪರಮ್ ಭಾರದ್ವಜ್ ಅವರ ಕರ್ಣ ಕುಂಡಲಧಾರಿಣಿ ಕಾದಂಬರಿ ಬಿಡುಗಡೆ. ಬಿಳೆಕಲ್ಲು ಪ್ರಕಾಶನ ಈ ಕೃತಿ ಪ್ರಕಟಿಸಿದೆ ಚಿತ್ರಗಳು: ಮಂಜುನಾಥ...
ಬೆಂದು ಅರಳುವುದ ಕಲಿಸುವ ಬಿರಿಯಾನಿ!
ಇರು, ಇರು ಅದಕ್ಕೆ ಈಗಲೇ ಮಾಂಸ ಬೆರೆಸಬೇಡ.. ಒಂಚೂರು ತೆಗದಿಡೋಣ ನನ್ನ ಸೊಸೆ ಮಾಂಸ ತಿನ್ನಲ್ಲ.ತಟ್ಟೆ ತುಂಬ ಮಾವಿನೆಲೆಯ ತಳಿರಿನಂಥ ಎಳೆಹಸಿರು ಬಣ್ಣದ ಅನ್ನ ಹೊಗೆಯಾಡುತ್ತಿತ್ತು.ಮೊದಲ ತುತ್ತು ತಿಂದಾಗಲೇ... ಥೂ ಜಾತಿವಾದವೇ... ಜೀವನದ ಕಾಲು ಭಾಗ, 25 ವರ್ಷ ಇಂಥ ಅಮೋಘವಾದ ರುಚಿಯಿಂದ ವಂಚಿತಳಾಗಿಸಿತಲ್ಲ... ಅಂತನಿಸದೇ ಇರಲಿಲ್ಲ....
ಸೊಳ್ಳೆ ಬೆಡ್ ಶೀಟಿಗೆ ಖಂಡಿತಾ ಕಚ್ಚುವುದಿಲ್ಲ..!!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ವೈದೇಹಿ ಮೇಡಂ ಹೇಳಿದ್ರು ‘ಇದೆಲ್ಲಾ ನಾನು ಬರೆದಿದ್ದಲ್ಲಾ ಕಣೇ…’
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. 'ರಂಗ ಮಂಟಪ' ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ 'ಗಾಂಧಿ ಬಂದ' ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ 'ಅಕ್ಕು' ಅಮ್ಮಚ್ಚಿ ಎಂಬ ನೆನಪು ಆಗಿ...
ಸೋಷಿಯಲ್ ಡಿಸ್ಟೆನ್ಸ್
ದಿನೇಶ್ ಕುಕ್ಕುಜಡ್ಕ
ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ..
ಇದು ಚಂದ್ರಶೇಖರ ಕಂಬಾರರ ಸಾಲು. ನಮ್ಮದೂ ಅದೇ ಸೊಲ್ಲು. ಸರಿಯಾಗಿ 14 ವರ್ಷಗಳಿಂದ ನಮ್ಮ ಕೈಹಿಡಿದು ಬಂದ ನಿಮಗಲ್ಲದೆ ಇನ್ನಾರಿಗೆ ಮೊದಲ ಶರಣಾರ್ಥಿ ಸಲ್ಲಬೇಕು. ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಕುಳಿತು ಜಗತ್ತಿಗೊಂದು ಕಿಟಕಿ ರೂಪಿಸಿಕೊಳ್ಳಬೇಕು ಎಂದು ಹೊರಟ ನಮಗೆ ಕಂಡಿದ್ದು ಈ ‘ಅವಧಿ’ ಎಂಬ ಬೆಳಕಿಂಡಿ....
‘ಚಂದ್ರಕೀರ್ತಿ’ ಗಣಪ
ಗಣೇಶನ ಹಬ್ಬ ಬಂತು ಎಂದರೆ ಸಾಕು ಚಂದ್ರಕೀರ್ತಿ ಈ ಬಾರಿ ಯಾವ ರೀತಿ ಗಣೇಶ ಮಾಡಬಹುದು ಎಂದು ಕಾದು ಕೂರುವ ದೊಡ್ಡ ಬಳಗವೇ ಇದೆ. ಯಾಕೆ ಅಂತೀರಾ...? ಚಂದ್ರಕೀರ್ತಿ ಗಣೇಶನ್ನ ಯಾವುದರಲ್ಲಿ ಬೇಕಾದರೂ ಸೃಷ್ಟಿಸುತ್ತಾನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಚಂದ್ರಕೀರ್ತಿಗೆ ಕ್ಷಣ...
ಸ್ಕರ್ಟ್ ಹಾಕಿ ಯುದ್ದದಲ್ಲಿ…
"ಅಯ್ಯೋ ಎದ್ದೇಳಿ, ಮಲಗೋದೆ ಆಯ್ತು, ಕೊಟ್ಟ ತಿಂಡಿಗಾದ್ರೂ ಮರ್ಯಾದೆ ಬೇಡ್ವಾ" ಎಂದು ಬ್ರೇಕಿನಲ್ಲಿ ಹುಡುಗಿ ಈ ಹುಡುಗರನ್ನ ಎಬ್ಬಿಸುತ್ತಿದ್ದಳು. "ಅವರು ಇವರಿಗೆ ಹೊಡೆದರು, ಇವರು ಅವರಿಗೆ ಹೊಡೆದರು, ಫಸ್ಟ್ ಆಫ್ ಆಲ್, ಜಗತ್ತನ್ನ ನಾವು ಯಾಕೆ ಗೆಲ್ಲಬೇಕು, ನಮ್ಮ ಪಾಡಿಗೆ ನಾವಿರಬೇಕು, ನಮ್ಮ ಜನರನ್ನ ಸರಿಯಾಗಿ...
‘ಮಂಜಣ್ಣ ಉರುಫ್ ಕುರಟ್ಟಿ ಮಾಸ್ತರ’ ಮದುವೆಗೆ ಬನ್ನಿ
“ಊರಲ್ಲಿ ಹುಡ್ರು ಸಾಮಾಜಿಕ ನಾಟಕ ಕಲೀತಿದಾರೆ. ನೀವೂ ನಾಟ್ಕಾ ಪಾಟ್ಕಾ ಮಾಡ್ತೀರಂತೆ… ಇಂದು ಇಲ್ಲೇ ಉಳ್ಕಂಬುಡಿ, ಸಂಜೆ ಟ್ರಯಲ್ ಮಾಡ್ಸಾಕೆ ನಾಟ್ಕದ ಮೇಷ್ಟ್ರೂ ಬತ್ತೌರೆ” ಅಂತ ಹೇಳಿ ಬರ್ರ್ ಅಂತ ಚೇತಕ್ ಗಾಡಿಯಲ್ಲಿ ಧೂಳೆಬ್ಬಿಸುತ್ತ ಹೋದರು ಚೇರ್ಮೆನ್ ಮಂಜಪ್ಪ. ‘ಐನೋರಹಳ್ಳಿ’ ಅನ್ನೋ ಊರು ಅದು. ಅಲ್ಲಿರುವ ಊರ ಸಂಘದ ಮುಖ್ಯಸ್ಥರು...
ಕುಪ್ಪಳಿಯಲ್ಲೇ ಮಳೆ ಇಲ್ಲ..!!
ನಾನು ಕುಪ್ಪಳಿಗೆ ಬಂದದ್ದು ಜೂನ್ 22, 2009ರ ಸೋಮವಾರ. ಆ ಹೊತ್ತಿಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರಬೇಕಿತ್ತು. ಆದರೆ ವಾಡಿಕೆಯ ಮಳೆ ಇಲ್ಲದೆ ಬಿಸಿಲ ಬೇಗೆ ತೀವ್ರತರವಾಗಿತ್ತು. ಮುಖಕ್ಕೆ ರಾಚುತ್ತಿದ್ದ ಬಿಸಿಲಿನ ಝಳ ಎಷ್ಟಿತ್ತೆಂದರೆ ಹಂಪಿಯ ಸುಡುಬಿಸಿಲನ್ನು ಮೀರಿಸುವಂತಿ...
ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’
ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ ಇವರ ಇತ್ತೀಚಿನ ಕೃತಿ 'ಕಾಡ ಸೆರಗಿನ ಸೂಡಿ' ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ. ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ. ‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?...
ಅಷ್ಟು ಸುಲಭವಾಗಿ ರೂಪುಗೊಂಡದ್ದಲ್ಲ ‘ನಾತಿಚರಾಮಿ’
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ 'ಹರಿವು' ಮೂಲಕ ರಾಷ್ಟ್ರದ ಗಮನ ಸೆಳೆದ ಇವರು 'ನಾತಿಚರಾಮಿ' ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ 'ಅವಧಿ'ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಸೆಣ್ಣಮ್ಮ ಮತ್ತು “ಹವಾಯ್ ರೋಡು”
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ...
ಕತ್ತಲಿನಿಂದ ಬೆಳಕಿನೆಡೆಗೆ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ 'ಓಂ' ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..
-ಜಿ ಎನ್ ಮೋಹನ್ ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು 'ಅಜ್ಜಿಮನೆ'ಗೆ ಎಂದೆ. 'ಅಜ್ಜಿಮನೆ' ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು. ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು...
ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ 'ಪ್ರಜಾವಾಣಿ' 'ಸುಧಾ'ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...





















