ಮಾಧವಿ ಭಂಡಾರಿ
ಭೂಮಿಯ ಹುಟ್ಟಾಗುಣ
ಬಿದ್ದಿದ್ದನ್ನೆಲ್ಲ ಹಡೆಯುವುದು
ಬಿಡದೆ ಪೊರೆಯುವುದು
ನಾಕು ಹನಿ ಉದುರಿದರೆ ಸಾಕು
ಸದ್ದಿಲ್ಲದೆ ಚಿಗಿಯುವುದು
ಹುಲ್ಲು ಗರಿಕೆ
ಕೊನರುವುದು ಕೊರಡು
ಹೂತು ಹಾಡುವುದು ಗಿಡಗಂಟಿಗಳು
ಆಘ್ರಾಣಿಸುವುದು ಪರಿಮಳದ ಬೀಜ
ಬಾನ ಮಳೆ ಹಾಡು
ಭೂತಾಯ ಎದೆ ಹಾಲು
ತೊಟ್ಟಿಕ್ಕುವ ಹನಿ ಹನಿ
ಜಗದ ತೊಟ್ಟಿಲ ತೂಗುವ
ಜೋಗುಳದ ಹಾಡು
ಮಳೆ ಜೀವ ಮಿಡಿವ
ಏಕತಾರಿ
ರಕ್ತ ಚೆಲ್ಲಿದರೆ!
ನಾಕು ಹನಿ ರಕ್ತ ಚಲ್ಲಿದರೆ
ರಾಶಿ ರಾಶಿ ರಕ್ತ ಬೀಜಾಸುರರು.
0 ಪ್ರತಿಕ್ರಿಯೆಗಳು