ಊರಿಗೆ ಬಂದ ಮಾರಿ

ಸುಕನ್ಯಾ ಮಾರುತಿ

ಅಂದುಕೊಂಡಿದ್ದೆವು ನಾವು
ನಮ್ಮ ನೋವಿಗೆ ನೀವು
ಮಿಡಿಯಬಹುದೆಂದು
ನಾವಂದುಕೊಂಡಿರಲಿಲ್ಲ
ನಮ್ಮ ಮನೆಯಂಗಳದ
ಗಂಗಾಳಗಳು
ಅಕಾಲ ಬಿರುಗಾಳಿಗೆ ಹೆದರಿ
ಗುಳೆ ಹೊರಡುತ್ತಾವೆಂದು

ಅಂದುಕೊಂಡಿದ್ದೆವು ನಾವು
ನಮ್ಮ ಕಣ್ಣೀರಿಗೆ ನೀವು
ಕರಗಬಹುದೆಂದು
ನಾವಂದುಕೊಂಡಿರಲಿಲ್ಲ
ನಮ್ಮ ಸಾವೇ ನಿಮಗೆ ಬಂಡವಾಳವೆಂದು

ಅಂದುಕೊಂಡಿದ್ದೆವು ನಾವು
ಈ ರೋಗಕ್ಕೆ ನೀವು
ಮದ್ದಾಗಬಹುದೆಂದು
ನಾವಂದುಕೊಂಡಿರಲಿಲ್ಲ
ಆ ಮದ್ದೇ ನಿಮಗೆ
ಕಲ್ಪವೃಕ್ಷವೆಂದು

ಅಂದುಕೊಂಡಿದ್ದೆವು ನಾವು
ಮಾರಿಗೆ ಬಲಿಯಾಗುವ
ನಮ್ಮನ್ನು ನೀವು
ಉಳಿಸಬಹುದೆಂದು.
ನಾವಂದುಕೊಂಡಿರಲಿಲ್ಲ
ಕೊಂದು ತಿನ್ನುವ ಮಾರಿಯೇ
ನಿಮಗೆ ಕಾಮಧೇನುವೆಂದು,
ನೀವೇ ಮಹಾಮಾರಿಯೆಂದು.

ಬೇಲಿಯೇ ಎದ್ದು
ಹೊಲಮೇಯಬಹುದೆಂದು
ನಮ್ಮ ಗೋರಿಗಳ ಮೇಲೆ
ನಿಮ್ಮರಮನೆಗಳು
ಅರಳಬಹುದೆಂದು,
ಒಂದು ಕ್ಷಣ ನಿಲ್ಲಿ
ಊರಿಗೆ ಬಂದ ಮಾರಿ
ನಿಮ್ಮರಮನೆಗೂ ಬರಲಾರಳೆ?

‍ಲೇಖಕರು Avadhi

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: