ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೇಗೆ ಪಾರಾಗಲಿ?
ರತ್ನಾ ಮೂರ್ತಿ 1993 ರವರೆಗೂ ನಾವು ಮುಂಬಯಿಯಲ್ಲಿದ್ದೆವು. ಮುಂಬಯಿಯ ಮಾತುಂಗಾ ಪಶ್ಚಿಮದಲ್ಲಿರುವ ಕರ್ನಾಟಕ ಸಂಘದ ಹೆಚ್ಚೂ ಕಡಿಮೆ ಎದುರಿಗೇ ಅಂದರೆ diagnoly opposite ನಮ್ಮ OCS ಕ್ವಾರ್ಟರ್ಸ್. ಕರ್ನಾಟಕದ ಸಂಸ್ಕೃತಿ, ಸಾಹಿತ್ಯ, ಸಂಗೀತ ಕಲೆಗಳನ್ನು ಪೋಷಿಸಿಕೊಂಡು, ಕನ್ನಡ ಮರಾಠಿ ಸಾಮರಸ್ಯಕ್ಕೆ ಶ್ರಮಿಸುತ್ತಿರುವ ...
ನಿನಗೆ ನೀನೇ ಗೆಳೆಯ, ನಿನಗೆ ನೀನೇ
ಗೊರೂರು ಶಿವೇಶ್ High noon ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ ಫ್ರೆಡ್ ಜಿನೆಮನ್ ನಿರ್ದೇಶನದ ಚಿತ್ರ.ನಾಯಕ ನಟ ಗ್ಯಾರಿ ಕೂಪರ್ ಹಾಗೂ ಚಿತ್ರಸಂಗೀತಕ್ಕೆ ಸೇರಿದಂತೆ 4 ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಘಟನಾವಳಿಗಳ ಅವಧಿ ನೂರು ನಿಮಿಷ. ಘಟನೆಯ ಸ್ಥಳ...
ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ
ಅದಾಗಲೇ ತಾತನ ಮನೆಯ ಮೇಲಿನ ಕಟ್ಟೆಗೆ ಐದು ಗಂಟೆಯಿಂದ ಬಾವಿ ನೀರನ್ನು ಸೇದಿ ಸುರಿದು ತಂಪಾಗಿಸಲು ಪ್ರಯತ್ನಿಸಿದ್ದರು . ಕಾದ ಬಂಡೆಗಳು ಕಾವನ್ನು ತಮ್ಮೊಳಗೆ ಹುದುಗಿಸಲು ಹೋರಾಟ ನಡೆಸಿದ್ದವು . ಮನೆಯ ಹಿಂದಿನ ಆಲದ ಮರದಲ್ಲಿ ಪಕ್ಷಿಸಂಕುಲಗಳು ಚಿಲಿ ಪಿಲಿ ಸದ್ದು ಮಾಡುತ್ತ ಗೂಡನ್ನು ಸೇರಲು ತವಕಿಸುತ್ತಿದ್ದವು ....
ಬಯಲಿಗೆ ಬಿದ್ದು ಗದ್ದೆಗೆ ಹೊರಟೆ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ನಿರ್ಮಾಪಕರ ಹುಡುಕಾಟ…!???
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಭಾಷೆ ಆಡು ಮಾತಿನಲ್ಲಿದ್ದರೆ ಸಾಲದು, ಬರೆಹದಲ್ಲೂ ಇರಬೇಕು
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
Pic by Mahendra
ಸುಮಾ ಆನಂದರಾವ್ ಸರಣಿ: ನನ್ನ ನೆನಪಿನ ಹಡಗು
। ನಿನ್ನೆಯಿಂದ । ಅನಿಯಮಿತ ಕಲ್ಪನೆ ಸ್ಮೃತಿಗಳ ಖಜಾನೆ ನೆನಪಿನಾ ಬುತ್ತಿ . ನಿಸರ್ಗದ ಭವ್ಯ ಸುಂದರ ದೃಶ್ಯಗಳು ಸಂತಸ ಸಂಭ್ರಮ ಗಾನ ಮೌನ ಗಂಭೀರ ಹೀಗೆ ಹಲವಾರು ಮಜಲುಗಳ ಸಮ್ಮಿಲನ.ನಮ್ಮ್ಮೆಲ್ಲರನ್ನು ಕೂರಿಸಿಕೊಂಡ ಎತ್ತಿನ ಗಾಡಿ ದಕ್ಷಿಣಾಭಿಮುಖವಾಗಿ ಊರಿನೆಡೆಗೆ ಹೊರಟಿತು. ಎತ್ತುಗಳು ಕತ್ತಿಗೆ ಕಟ್ಟಿದಾ ಗಂಟೆಯ...
ಮಂಗಳೂರಿನಲ್ಲಿ ‘ಅನಾಥ ಅಜೇಯ’
ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
ಬೆಚ್ಚಿ ಬಿದ್ರಾ…?
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ...
‘ಎಗ್ಲಾಂಟೈನ್ ಜೆಬ್’ ನೆನಪಲ್ಲಿ…
‘ಬಾಲ ಒಂದಿಲ್ಲ ಅಷ್ಟೇ...’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಮಕ್ಕಳ ಕೇಂದ್ರಿತ ಪುಸ್ತಕಗಳ ಪ್ರತಿಷ್ಠಿತ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....
ನವಕರ್ನಾಟಕ- ಅವಧಿ ಟಾಪ್ ಟೆನ್
Pic by Ramonkar
ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’
ಪ್ರತೀ ವರ್ಷ ಅತ್ಯುತ್ತಮ ಪ್ರಕಾಶನಕ್ಕೆ 'ಅಂಕಿತ' ದತ್ತಿ ನಿಧಿ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯ 'ಸಾಹಿತ್ಯ ಪ್ರಕಾಶನ'ಕ್ಕೆ ಸಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಕಾಶನದ ಮಾಲೀಕರಾದ ಎಂ ಎ ಸುಬ್ರಮಣ್ಯ ಅವರನ್ನು ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ....
ಸಾವೆಂದರೆ ಹೀಗೆಯೇ..
ಚಂದ್ರಶೇಖರ ಹೆಗಡೆ ಎಲ್ಲ ಇದ್ದೂ ಇಲ್ಲವಾಗುವುದೆ ? ಇಲ್ಲದಿರುವುದಕ್ಕೆ ಬೆನ್ನುಬಿದ್ದು ಖಾಲಿಯಾಗುವುದೆ ? ಹಸಿರು ತುಂಬಿದ್ದರೂ ಬರಡು ಕೊರಡಾದೆನೆಂದು ವ್ಯಸನಿಯಾಗಿ ಹೊರಟುಬಿಡುವುದೆ ? ವೈರಾಣುವಿಗೆ ಉಸಿರೆರೆದು ಸೋತು ನಮ್ಮವರನೆಲ್ಲಾ ಮಣ್ಣೊಳಗೆ ಹೂತು ಆಗಂತುಕನ ಬಲೆಯೊಳಗೆ ಸಿಲುಕಿ ಸಂಜೀವಿನಿಗಾಗಿ ಎಲ್ಲೆಲ್ಲೋ...
ಯಾವ ‘ಮೋಹನ’ ಮುರಲಿ ಕರೆಯಿತೋ…
ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು ನಮ್ಮನ್ನು ತೀರಾ ವಿಚಲಿತಗೊಳಿಸಿಬಿಡುತ್ತದೆ. ಇಂತಹ ಅಪರೂಪದ ವ್ಯಕ್ತಿಗಳು ನಮ್ಮ ನಡುವಿನಿಂದ ಸದ್ದಿಲ್ಲದೆ ಎದ್ದುಹೋಗಿಬಿಡುತ್ತಾರೆ. ನನ್ನನುಭವದಲ್ಲಿ ಹೀಗೆ ಇದ್ದು ಸಾದ ಸೀದವಾಗಿ ಬದುಕಿ...
ಆನಾ ಆಹ್ಮತೋವಾ ನೆನೆದು
ಜಿ.ಪಿ.ಬಸವರಾಜು ನಡುಗುವ ಕೈಗಳಿಂದ ನಿನ್ನ ಎದೆಯ ಪದಗಳನು ಎತ್ತಿಕೊಂಡೆ: ಸೆರೆಮನೆಯ ಮಹಾ ಗೋಡೆಯ ಈಚೆ ನೀನೊಂದು ಗುಬ್ಬಚ್ಚಿ, ಒಂಟಿ ನಿಂತು ಮೊರೆಯಿಡುವ ನಿನ್ನ ನೋವು ಭೂಮಿ-ಆಕಾಶಗಳ ಒಂದುಮಾಡಿದೆ, ನಿನ್ನ ನಿಟ್ಟುಸಿರು ಬಿರುಗಾಳಿಯಾಗಿ ಮೊರೆಯುತ್ತಿದೆ, ನಿನ್ನ ಕಣ್ಣೀರು ಮಳೆಗಾಲದಲ್ಲಿ ಭೋರ್ಗರೆಯುವ...
ನರೇಂದ್ರ ಪೈ ಅವರ “ಕನಸುಗಳು ಖಾಸಗಿ”
ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ, ಬೇರಿನ್ನೆಲ್ಲಿಯದೋ, ಇನ್ನೂ ಇಲ್ಲದೇ ಇರುವುದೋ, ಯಾವುದೇ ಆದರೂ, ಆ ಜಗತ್ತಿನಲ್ಲಿ ಕತೆಗೆ ಯೋಗ್ಯ ಚಿತ್ರ, ಪಾತ್ರ, ಘಟನೆಗಳನ್ನು ಎತ್ತಿಕೊಂಡು, ಕೌತುಕ, ಕುತೂಹಲ, ಕಾಣ್ಕೆಗಳ ಚೌಕಟ್ಟಿನಲ್ಲಿ...
ಸುಮಾ ಆನಂದರಾವ್ ಸರಣಿ: ಕನಸು ನನಸಾಯ್ತು
ಕನಸಿನಯಾನದ ಕಾಡುವ ಕ್ಷಣಗಳಿಗೆ ನನಸಾಗುವ ಯೋಗ ಕೂಡಿಬಂದಿತು. ಏಕತಾನತೆಯ ದಿನಗಳಿಗೆ ಬಿಡುಗಡೆಯ ಭಾಗ್ಯ. ಬಾಲ್ಯದ ಅವಿಸ್ಮರಣೀಯ ಸಂತಸದ ದಿನಗಳು ಅವು. ನಾಳೆ ರಜೆಯ ಮಜಾ ಸವಿಯಲು ತಾತನ ಊರಿಗೆ ಪಯಣ, ಭರದಿ ಸಿದ್ಧತೆ ನಡೆಯುತ್ತಿದೆ ಅಪ್ಪ ನಾವೆಲ್ಲಾ ಅಲ್ಲಿ ಕಳೆಯುವ ದಿನಗಳ ಬಗ್ಗೆ ಕಾಳಜಿ...
ಅಂದಿನಿಂದಿಂದಿಗೆ
ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು ಕಲ್ಲು ಕಟ್ಟಿದ ಮೆಟ್ಟಲುಗಳ ನಡುಮಧ್ಯೆ ನೀರಿರುವ ತೋಡುಬಾವಿಗಳು. ಚಬುಕಿನ ಸಸಿಗಳಿಗೂ, ತೆಂಗುಗಳಿಗೂ ನೀರುಣಿಸಲು ಕೊರೆದ ಬಾವಿಗಳವು. ತೋಪಿನಾಚೆ ತೆಂಗುಗಳು ತಲೆದೂಗುವ ಹಿತ್ತಿಲುಗಳಲ್ಲೂ...

















