ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾವಿದನ ಮನಸ್ಸು ಹೇಳುವ ಕತೆ…
'ಮನಸ್ಸಿದ್ದಲ್ಲಿ ಮಾರ್ಗ' ಗಣಪತಿ ಅಗ್ನಿಹೋತ್ರಿ ʻನನ್ನಿಂದ ಸಾಧ್ಯವೇʼ ಎಂದು ನನ್ನನ್ನೇ ಕೇಳಿಕೊಂಡಿದ್ದ ನನ್ನ ಮನಸ್ಸೇ ಇಂದು, ʻನೋಡು ನಿನ್ನಿಂದಲೂ ಸಾಧ್ಯʼ ಎಂದು ತೋರಿಸಿಕೊಟ್ಟಿತು. Friends, ನನ್ನದೊಂದು woodcut print ಕಲಾಕೃತಿ ಸೇರಿದಂತೆ ಒಟ್ಟು 75 ಕಲಾವಿದ -ಕಲಾವಿದೆಯರ ಕಲಾಕೃತಿಗಳು ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ...
ವ್ಯಭಿಚಾರಿ ಹೂವು…!?
ಮನು ಗುರುಸ್ವಾಮಿ ವ್ಯಭಿಚಾರಿ ಹೂವಷ್ಟೇ..!!ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,ಮೊನ್ನೆಯಷ್ಟೇ ಅರಳಿ,ದೇವರ ಮುಡಿಯನ್ನೇರುವ ಹೊತ್ತಿಗೆ,ಕಿಡಿಗೇಡಿಗಳ ಕೈಯೊಳಗೆಕೀಲುಬೊಂಬೆಯಂತೆ ಕಿತ್ತು, ಹರಿದ,ಬೆಂದು, ಬಳಲಿ,ದಳವಿಲ್ಲದೆ, ದಡ ಸೇರದೆಬೀದಿ ಪುಷ್ಪವಾದ ನಾನು..ವ್ಯಭೀಚಾರಿ ಹೂವಷ್ಟೇ..!! ಅಲೆದವಳು....ಅಲ್ಲಿ... ಇಲ್ಲಿ......
ಸಿದ್ಧರಾಮ ಮೋಟಗಿ ಓದಿದ ‘ಕೃಷ್ಣಾಯಿ ಜೋಗುಳ’
ಆಡುಭಾಷೆ ಕಥಾಶೈಲಿಯ ವಿಶಿಷ್ಟ ಪ್ರಯೋಗ ಸಿದ್ಧರಾಮ ಮೋಟಗಿ ಈ ಲೇಖನ 'ಸುಗಮ ಪುಸ್ತಕ' ಫೇಸ್‌ಬುಕ್ ಪೇಜ್ ನಲ್ಲಿ ಈ ಮೊದಲು ಪ್ರಕಟಗೊಂಡಿದೆ ಅಂತರರಾಷ್ಟೀಯ ಸಂವಹನ ಮಾಧ್ಯಮವಾಗಿ ಬೆಳೆದು ನಿಂತಿರುವ ಇಂಗ್ಲಿಷ ಭಾಷೆಯನ್ನು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ʻಬಂಡು ಕೋಳಿʼ ಗುರುಗಳು ಈ ಕಥಾ ಸಂಕಲನದ ಮೂಲಕ ನಮ್ಮ ಮನೆಯಂಗಳದ...
ಗುಪ್ತಗಾಮಿನಿ…
ಸುಧಾರಾಣಿ ನಾಯ್ಕ ಬಿಟ್ಟುಬಿಡು ಎಂದರೆಉಟ್ಟ ಬಟ್ಟೆಕಳಚೆಸೆದಂತಲ್ಲ, ಹಾವು, ಪೊರೆಬಿಟ್ಟು ಹೋದಂತೆಯೂ ಅಲ್ಲ,ಅಡಿಯಿಂದ ಮುಡಿಯವರೆಗೆಆವರಿಸಿದಮೈ ತೊಗಲಂತೆ ಪ್ರೀತಿ.. ಮಾತು ಮೌನಎಲ್ಲವೂ ಒಂದೇ..ಮಾತು, ಭೇಟಿದೀಪಾವಳಿಯಾದರೆ, ಮೌನ ಧ್ಯಾನಿಸುವಶಿವರಾತ್ರಿಯಂತೆ,ಎರಡೂ ಹಬ್ಬವೇ.. ನೆನೆ ನೆನೆದು ನೆನಪುಗಳಹಸಿಯಾಗಿಸಿಮನದ ತುಂಬ ಬಳ್ಳಿ...
ಭುವನೇಶ್ವರಿ ಹೆಗಡೆ ಅಂಕಣ- ನನ್ನ ಚಪ್ಪಲಿಯ ಮೇಲೆಯೇ ಅವನ ಕಣ್ಣು…
15 ನಾನು ಬಸ್ಸಿಂದಿಳಿದು ಧಾವಿಸುವ ನನ್ನ ಕಾಲೇಜಿನ ಎದುರು ಕೂತ ಚಪ್ಪಲಿ ಹೊಲಿಯುವವನಿಗೆ ದಿನವೂ ನನ್ನ ಚಪ್ಪಲಿಯ ಮೇಲೆಯೇ ಕಣ್ಣು. (ಬೆಕ್ಕು ನಿದ್ದಿಸಿದಾಗ ಕನಸಿನಲ್ಲಿ ಮಳೆ ಬಂದರೆ ಆ ಮಳೆಯಲ್ಲಿ ಉದುರುವುದು ಏನಿದ್ದರೂ ಇಲಿಗಳೇಯಂತೆ!) ಬಸ್ಸಿನಿಂದಿಳಿದ ನಾನು ಅವನನ್ನು ಸಂದರ್ಶಿಸದೆ ಮುಂದೆ ಹೋಗುವಂತಿಲ್ಲ ಎಂಬುದು ಅವನಿಗೆ ಗೊತ್ತು....
Pic by Paolo Silvestri
ಮಾಧ್ಯಮರಂಗಕ್ಕೆ ವೈರಸ್: ಅದನ್ನು ಗೆದ್ದ ಪತ್ರಕರ್ತರಿಗೆ ನೊಬೆಲ್…
ನಾಗೇಶ್ ಹೆಗಡೆ ವಾರ್ತಾವೃತ್ತಿಯಲ್ಲಿರುವ ಇಬ್ಬರಿಗೆ ಇದೇ ಮೊದಲ ಬಾರಿ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ. ಈ ಹಿಂದೆ ಬೆಲಾರಸ್ ದೇಶದ ಪತ್ರಕರ್ತೆಯೊಬ್ಬರಿಗೆ ನೊಬೆಲ್ ಸಿಕ್ಕಿತ್ತಾದರೂ ಅದು ಅವರ ಸಾಹಿತ್ಯ ಕೃತಿಗೆ ಸಿಕ್ಕಿತ್ತು; ಪತ್ರಿಕೆಯನ್ನು/ವಾರ್ತಾ ಸಂಸ್ಥೆಯನ್ನು ನಡೆಸುವವರಿಗೆ ಇದೇ ಮೊದಲ ಬಾರಿ ನೊಬೆಲ್ ಸಿಕ್ಕಿದೆ. ಈ...
ದೇವಿಯರು..
ಸುಜಾತ ಲಕ್ಷ್ಮೀಪುರ ಮೊನ್ನೆ ದೇವಾಲಯದಲಿ ದೇವಿಗೆವಿಶೇಷ ಅಲಂಕಾರನವರಾತ್ರಿಯ ವೈಭವಅಂದೇ ಪತ್ರಿಕೆ ತುಂಬಾಅತ್ಯಾಚಾರಕ್ಕೊಳಗಾದವಳ ಸುದ್ದಿಕುಂಕುಮ ಬಣ್ಣದ ರಕ್ತದ ಓಕುಳಿಮೈಮೇಲೆಲ್ಲಾ ಉಗುರಿನ ಗೀರು. ನಿನ್ನೆ ದೇವಿಯನ್ನು ಹೂವಿನ ಪಲ್ಲಕ್ಕಿಯತೊಟ್ಟಿಲಲ್ಲಿ ತೂಗಿ ತೂಗಿ ಗಾಳಿ ತೀಡಿಸಂಭ್ರಮಿಸಿದೆವುರಾತ್ರಿಗೆ ಟಿವಿ ಪರದೆಯ ತುಂಬಾಹಸುಕಂದನ...
ಸರೋಜಿನಿ ಪಡಸಲಗಿ ಹೊಸ ಕವಿತೆ- ಉಂಟಾ ಹೀಗೂ…
ಸರೋಜಿನಿ ಪಡಸಲಗಿ ಅದೇನೋ ಹಂಬಲ ಬಯಕೆವಿಲಕ್ಷಣ ತುಮುಲ ದುಗುಡಹುಬ್ಬ ಮಧ್ಯೆ ಮಬ್ಬು ಗೀರುಕಣ್ಣಲಿ ಅರ್ಥವೆ ಇರದ ಸುಕ್ಕುಯಾಕೆ ತಿಳಿಯದು ಉಂಟಾ ಹೀಗೂ ಏನೇನೋ ಹೇಳಲುಂಟು ಅಲ್ಲಿಅದೆಷ್ಟೋ ಕೇಳಲೂ ಉಂಟುಅಸಂಖ್ಯ ಭಾವಗಳ ಸುಳಿಯುಂಟುಮೌನ ದೊಡಲಲಿ ಮಟಾ ಮಾಯಯಾಕೆ ತಿಳಿಯದು ಉಂಟಾ ಹೀಗೂ ಮಾಯವಾದವುಗಳು ಅಂಕೆ ತಪ್ಪಿಗಾಳಿಯಲಿ ತೇಲಿ ದೂರ ಹೋಗಿಒಂದಕೂ...
ಗೋಪಾಲ ತ್ರಾಸಿ ಓದಿದ ‘ಕಡಲ ಕರೆಯ ಚಿತ್ರಗಳು’
ಅಕ್ಕರೆಯಿಂದ ಊರು ಸುತ್ತಾಡಿಸುವಂತಹ ಅನುಭೂತಿ ಗೋಪಾಲ ತ್ರಾಸಿ ‘ಚರಾ’ ಕಾವ್ಯನಾಮದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲರು ಬರೆದ ತಮ್ಮೂರು ಸೋಮೇಶ್ವರ- ಉಚ್ಚಿಲ ಕರಾವಳಿಯ ಜನಜೀವನ ಸಾಂಸ್ಕ್ರತಿಕ ಚಿತ್ರಣವುಳ್ಳ ವಿಶಿಷ್ಟ ಪ್ರಬಂಧ ಕೃತಿಯಿದು. ಮೊದಲು ಮುದ್ರಣಗೊಂಡದ್ದು 1956 ರಲ್ಲಿ, ಕನ್ನಡ ನಾಡು ಮೈಸೂರು ರಾಜ್ಯವಾಗಿ...
Art by Penellope Dullaghan
‘ಸೇವಾದಿನಗಳ ಚೌಚೌ ಬಾತ್ ಕತೆಗಳು’
ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ತಮ್ಮ ಅಮೆರಿಕಾ ಪ್ರವಾಸದ ನಂತರ ದಿಲ್ಲಿಯ ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಪ್ರಧಾನಮಂತ್ರಿಗಳು ನೀಡಿದ ದಿಢೀರ್ ಭೇಟಿಯು ದುರಾದೃಷ್ಟವಶಾತ್ ತಪ್ಪು ಕಾರಣಗಳಿಂದಾಗಿ ಸುದ್ದಿ ಮಾಡಿತು. ಈ...
ಗಂಗಾಧರ ಕೊಳಗಿ ಬದುಕಿನಲ್ಲಿ ಕಂಡ ಕಾರಂತರು…
ಗಂಗಾಧರ ಕೊಳಗಿ ಆಗಷ್ಟೇ ಚಂದಮಾಮ, ಬಾಲಮಿತ್ರ ಮುಂತಾದ ಮಾಸಿಕಗಳ ಜೊತೆಗೆ ಮಕ್ಕಳ ಕಥೆಗಳ ಓದಿನ ಜಾಡಿನಿಂದ ಪಕ್ಕಕ್ಕೆ ಸರಿಯುತ್ತಿದ್ದ ದಿನಗಳು. ಆ ಮೊದಲೇ ನಮ್ಮೂರಿನಲ್ಲಿ ಸಮಾಜಮಂದಿರವೆಂಬ ಸಾಕಷ್ಟು ದೊಡ್ಡದಾದ ಕಟ್ಟಡವೊಂದು ರೂಪುಗೊಂಡಿತ್ತು. ಈಗಿನಂತೆ ಸಭಾಭವನ ಕಟ್ಟಲು ಸರಕಾರದ ಅನುದಾನಕ್ಕೆ ಕೈಯೊಡ್ಡದೇ ಊರವರೇ ಸದಭಿರುಚಿಯ ಶ್ರಮದಾನದ...
ಅಬ್ಬಕ್ಕ ,ಶಿವರಾಮ ಕಾರಂತರು ಮತ್ತು ಮುಗಿಯದ ಸಂಕಥನ..
ಇಂದು ಶಿವರಾಮ ಕಾರಂತರ ಜನ್ಮ ದಿನ. ಅದರ ಅಂಗವಾಗಿ ಈ ಹಿಂದೆ ಹಿರಿಯ ವಿದ್ವಾಂಸರಾದ ಬಿ ಎ ವಿವೇಕ ರೈ ಅವರು ಜರ್ಮನಿಯಲ್ಲಿದ್ದಾಗ ಹಂಚಿಕೊಂಡ ನೆನಪುಗಳು ಇಲ್ಲಿವೆ. ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ೧೯೯೭.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು […]
‘ಮಾತಾಡ್ರೊ’
ಅಜಮೀರ ನಂದಾಪುರ ಇನ್ಮುಂದಾದ್ರು ಮಾತಾಡ್ರೋಇವರ ಆಜ್ಞೆಗಳು ಅರ್ಥವಾಗಿವೆ ಚಪ್ಪಾಳೆ ತಟ್ಟಿದ ಕೈಗಳಿಗೆ ಗೊತ್ತಾಗಿದೆತಾಟು ಬಾರಿಸಿದ ಕಾರಣ ತಿಳಿದಿದೆದೇಶವೆಂದರೆ ಮನುಷ್ಯಇನ್ಮುಂದಾದ್ರು ಮಾತಾಡ್ರೋ ಇನ್ಮುಂದಾದರೂ ನೀವು ಮಾತಾಡ್ರೋ ನಮ್ಮನ್ನ ದಾತರ ಮಗ್ಗಲು ಮುರಿದವರಕಾರ್ಪೊರೇಟರ್ ಕಾವಲು ನಿಂತವರ ಪಾಲೆಂಬುದು ರುಜುವಾಗಿದೆ ದೇಶವೆಂದರೆ...
ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ‘ರಂಗಾಂತರಂಗ’
ಲಕ್ಷ್ಮೀ ಮಚ್ಚಿನ ಇಳಂತಿಲ ಸಮೀಪದ ಮೂಡಾಜೆಯ ನನ್ನ ಅಕ್ಕನ ಮನೆಗೆ ಹೋಗುವವ ಅಲ್ಲೇ ಸಮೀಪದ ಅಮ್ಮಣ್ಣಾಯರ ಮನೆಗೂ ಹೋಗಿದ್ದೆ.ಹಾಗೆ ಹೋದಾಗ ಅವರು ಹೇಳುತ್ತಿದ್ದ ಅವರ ಕಲಾಯಾನದ ಅನುಭವಗಳು ಒಂದೊಂದೂ ಕಥೆಯ ಮಾದರಿಯಲ್ಲಿತ್ತು. ಇದಿಷ್ಟೇ ಅಲ್ಲದೇ ಉಳಿತ್ತಾಯರ ಮನೆಯಲ್ಲೂ ಅನೇಕ ಬಾರಿ ಅವರನ್ನು ಭೇಟಿಯಾದಾಗ ಹತ್ತಾರು ರಸಮಯ ಘಟನೆಗಳನ್ನು, ಕಟು...
‘ಕವಿತೆ ಬಂಚ್’ನಲ್ಲಿ ಗಾಯತ್ರಿ ರವಿ
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ಸುಶ್ರುತ ದೊಡ್ಡೇರಿ ಹೊಸ ಕವಿತೆ- ಬಿಸಿಲು ನೆರಳು
ಸುಶ್ರುತ ದೊಡ್ಡೇರಿ ನ್ಯಾಲೆ ಭರ್ತಿಯಾಗಿದೆ; ಮಗಳ ಎರಡು ಅಂಗಿಗಳಿಗೀಗ ಜಾಗವಿಲ್ಲಅಪ್ಪನೊಂದಿಗೇ ಬಟ್ಟೆಯೊಣಗಿಸಲು ಕ್ಲಿಪ್ಪಿನ ಸಂಗಡಟೆರೇಸಿಗೆ ಬಂದ ಮಗಳು, ತನ್ನೆರಡು ಅಂಗಿಹಾಗೆಯೇ ಉಳಿದುದು ಕಂಡು ಮುಖ ಸಣ್ಣದಾಗಿಬಿಸಿಲು ಸುರಿಸುವ ಸೂರ್ಯನಿಗೂ ದಿಗಿಲು ಚಪ್ಪಲಿ ಹಾಕಿಕೋ ಎಂದರೂ ಹಾಗೆಯೇ ಬಂದ ಮಗಳು, ಕಾದ ನೆಲ,ಕಣ್ಣಿಂದೆರಡು ಹನಿ...
ಎಸ್ ಬಿ ರವಿಕುಮಾರ್ ಓದಿದ ‘ಸೋಲಿಗ ಚಿತ್ರಗಳು’
ಡಾ ಎಸ್ ಬಿ ರವಿಕುಮಾರ್ ಹೆಚ್ಚಿನ ವಿದ್ಯಾವಂತರ ಗುರಿ ಉದ್ಯೋಗ ಪಡೆಯುವುದೇ ಆಗಿದೆ. ಅದರಲ್ಲೂ ಉಪನ್ಯಾಸಕರಂಥ ಬಿಳಿಕಾಲರಿನ ಉದ್ಯೋಗ ದೊಡ್ಡ ಪಟ್ಟಣದಲ್ಲಿ ದೊರೆತರಂತೂ ಜೀವನ ಸಾರ್ಥಕವಾಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ ಇಲ್ಲೊಬ್ಬ ಮಹಾಶಯರಿದ್ದಾರೆ. ಮೈಸೂರಿನ ಪ್ರತಿಷ್ಟಿತ ಸುತ್ತೂರು ಕಾಲೇಜಿನಲ್ಲಿ...
ಸಪ್ನ ’ಅವಧಿ’ ಟಾಪ್ ಟೆನ್
ಖುಷಿ ಖುಷಿಯಾಗಿ ‘ಸೋನ ಪಾಪಡಿ’
ತಮ್ಮಣ್ಣ ಬೀಗಾರ ರಾಜಶೇಖರ ಕುಕ್ಕುಂದ ಸೋನ ಪಾಪಡಿ ಹಿಡಿದುಕೊಂಡು ನಗುತ್ತ ನಿಂತಿದ್ದಾರೆ. ಸೋನ ಪಾಪಡಿ ಅಂದಮೇಲೆ ಕೇಳಬೇಕೇ? ಮಕ್ಕಳು ಮುತ್ತಿಗೆ ಹಾಕಿ ಚಪ್ಪರಿಸದೇ ಇರಲಾರರು. ಹೌದು ಮಕ್ಕಳಿಗೆ ರಂಜನೆಯ ತಿಳಿ ಹಾಸ್ಯ ಇಷ್ಟವೇ. ಅವರು ಮಂಗನ ಹಾಗೆ ಬಾಲ ತೂಗಿ (ಬಾಲ ಇಲ್ಲದಿದ್ದರೂ) ಕುಣಿಯತ್ತಾರೆ, ಕಪ್ಪೆಯ ಹಾಗೆ ಜಿಗಿಯುತ್ತ ದೊಪ್ಪನೆ...




















