ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಜಾಲವಾದಿ ಹೊಸ ಕವಿತೆ- ಗಾಂಧಿ…
ಶ್ರೀನಿವಾಸ ಜಾಲವಾದಿ ಸ್ವಪ್ರಶಂಸೆಯ ಕುನ್ನಿಗಳೇ ಇಲ್ಲಿತುಂಬಿರುವಾಗ ನಿನ್ನ ಕಾರ್ಯಗಳಹೇಳುವವರಾರು ತಂದೆ? ಸತ್ಯ ಅಹಿಂಸೆ ನ್ಯಾಯಗಳು ಇಲ್ಲಿಮಖಾಡೆ ಮಲಗಿವೆ ಗಾಢನಿದ್ರೆಯಲಿ ಗಾಢಾಂಧಕಾರದಲಿ! ಗೋಡ್ಸೆಗಳ ವೈಭವೀಕರಣವೇ ಎಲ್ಲಮಹಾತ್ಮಾ ನೀನು ನಗುವೆಯಲ್ಲ?ಮತ್ತೇನು ಬೇಕು ವೈರುಧ್ಯ? ಗಾಂಧಿ ನೀನು ಎಂದಿಗೂ ನಾನೇನಾನೇ ಎನ್ನಲೇ ಇಲ್ಲವಲ್ಲ?ಈಗ...
ಭವ್ಯ ಕಬ್ಬಳಿ ಹೊಸ ಕವಿತೆ – ಮಹಾತ್ಮನಾಗುವುದೆಂದರೆ…
ಭವ್ಯ ಕಬ್ಬಳಿ ಅದೆಷ್ಟು ಸೋತಿರಬಹುದು?! ನಾವುಯಾರಿಗಾಗಿಯೂ,ಕಣ್ಣ ಹನಿಯೊಂದನ್ನುಹಡೆಯಲಾರದೆಎದೆಯ ದನಿಯೊಂದನ್ನುಮಿಡಿಯಲಾರದೆ ಬೆಳಕ ಹಂಚಲು ಸೂರ್ಯನಾಗಲಿತಂಪು ಸಾರಲು ಚಂದ್ರನಾಗಲಿಮಾತನಾಡದಿದ್ದರೂ-ಮಾತು ತಪ್ಪುವುದಿಲ್ಲ ಗೂಡು ಕಟ್ಟುವ ಹಕ್ಕಿಯಾಗಲಿಗುಟುಕು ಹೊತ್ತ ಸಣ್ಣ ಹುಳುವಾಗಲಿಬದುಕು ಹೋರಾಟವೆನ್ನುವುದ-ಸಾರಿ ಹೇಳುವುದಿಲ್ಲ...
ಮಹಾಮನೆ ಅಂಕಣ – ಹೊನ್ನೀನ ಊರಿಂದ ಚಂದಾದ ಹುಡುಗಿ ಬಾಂದಳು…
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...
Pic by Subhrarup Banerjee
ಹೊಕ್ಕಳ ಬಳ್ಳಿ…
ರಾ ಬಂದೋಳ್ 'ಸುರಿಬಾರ್ದಂತ ಮಳೆ ಸುರಿದು, ಕರೆದುಂಬಿ ಕೋಡಿ ಉಕ್ಕಿ, ಕೇರ್ಯಾಗೆಲ್ಲಾ ನೀರ್ ಹರಿದು, ಮೀನ್ಮರಿಗೆಳೆಲ್ಲಾ ಮನೆವಸ್ಲ ಮುಟ್ತಾವೋ! ಬಾಲ್ ಬಸ್ಸವ್ವೋ! ಹಣೆ ಹಣೆಯಾಂಗಿರಲ್ಲ, ಕಣ್ಣು ಕಣ್ಣಾಂಗಿರಲ್ಲ, ಮೂಗು ಮೂಗಾಂಗಿರಲ್ಲ, ಮೂತಿ ಮೂತಿಯಾಂಗಿರಲ್ಲ, ಮುಸುಡಿ ಮುಸುಡಿಯಾಂಗಿರಲ್ಲ, ಸೂಲ್ಗಿತ್ತಿ ಬೆಚ್ಬಿದ್ದು, ಮನೆಮಂದೀಗ್ ಬಾಯ್...
ಅಶ್ಫಾಕ್ ಪೀರಜಾದೆ ಗಜಲ್
ಬೇಲಿಯೇ ಹೊಲಕೆ ಕೊಳ್ಳಿ ಇಟ್ಟಿದೆ ಏನು ಮಾಡಲಿ ಅಶ್ಫಾಕ್ ಪೀರಜಾದೆ ಈ ವ್ಯವಸ್ಥೆ ನನ್ನ ಕಣ್ಣು ಕಟ್ಟಿದೆ ಏನು ಮಾಡಲಿಆ ಆವಸ್ಥೆ ನನ್ನ ನಾಲಿಗೆ ಸುಟ್ಟಿದೆ ಏನು ಮಾಡಲಿ ಲೆಕ್ಕಣಿಕೆಗೆ ಕ್ರಾಂತಿಯ ಭಾಷೆ ಕಲಿಸಬೇಕಾದ ತುರ್ತುನೆತ್ತರು ಶಾಯಿಯಾಗಿ ಹೆಪ್ಪುಗಟ್ಟಿದೆ ಏನು ಮಾಡಲಿ ಶಾಂತಿಯ ತೋಟದಲಿ ಸಾವಿನಾ ಆರ್ಭಟ ನೋಡುಆಕ್ರಂದನ ಮುಗಿಲು...
ಅಸಂಗತ…
ರವಿಕಿರಣ್ ಆರ್ ಬಳ್ಳಗೆರೆ ಸತ್ತ ಕಂಬಳಿಯ ನೇಯುತ್ತಿವೆ ನೆತ್ತರ ನೂಲುಗಳುಎಲ್ಲೆಲ್ಲೂ ಹುತ್ತ.. ನಾಗರೆಡೆಯ ನೆರಳು, ರಕ್ತ ರಂಗೋಲಿಅಷ್ಟಮಂಗಲದಲ್ಲಿ ಮೂರೇ ಪ್ರಶ್ನೆನಾನು ಯಾರು..? ನಾನು ಯಾರು…? ನಾನು ಯಾರು…? ಕಂಬಳಿಯಲ್ಲಿ ಕೂರೆ ಸೂಸಿ, ನಡೆದಿದೆಕನಸುಗಳ ಶವಯಾತ್ರೆ, ಒಣಗಣ್ಣ ತರ್ಪಣಹಸಿದ ಒಡಲಿನ ಕಿಚ್ಚು,ಕೂಳು ಮಡಿಕೆಯ...
ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ
ಖ್ಯಾತ ಕೃಷಿ ಬರಹಗಾರ ನರೇಂದ್ರ ರೈ ದೇರ್ಲ ಅವರು ತಮ್ಮ ಕನಸು ಪ್ರಕಾಶನದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕೃತಿಯೇ 'ನಂದನವನ-ಒಂದು ತೋಟದ ಕಥೆʼ. ಈ ಕೃತಿಗೆ ಮತ್ತೊಬ್ಬ ಕೃಷಿ ಬರಹಗಾರ ಶಿವರಾಂ...
ಪಿ ಚಂದ್ರಿಕಾ ಅಂಕಣ- ಶೂಟಿಂಗ್ ಶುರುವಾಗಿ ಮೊದಲ ಬ್ರೇಕ್‌ನಲ್ಲಿ..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Sesky Kiddo
‘ಸಿರಿಯಜ್ಜಿ’ ಸಂಭ್ರಮ…
ಮಲ್ಲಿಕಾರ್ಜುನ ಕಲಮರಹಳ್ಳಿ ಕಳ್ಳೆ ಸಾಲಿನ ಕಾಡುಗೊಲ್ಲರ ಹಾಡು ಕೋಗಿಲೆ ನಾಡೋಜ ಸಿರಿಯಜ್ಜಿ ಸ್ಮರಣೆಯಲ್ಲಿ ಪ್ರತಿಷ್ಠಾನವನ್ನು ರೂಪಿಸಿದ್ದು ಅದರ ಉದ್ಘಾಟನೆಯನ್ನು ಚಳ್ಳಕೆರೆ ತಾ. ಬೆಳೆಗೆರೆ ಗ್ರಾಮದಲ್ಲಿ ನೆರೆವೇರಿಸಲಾಯಿತು. ಇದರೊಂದಿಗೆ ಡಾ. ಕೃಷ್ಣಮೂರ್ತಿ ಹನೂರು, ಹಾಗೂ ಸಿರಿಯಜ್ಜಿ ಸಹವರ್ತಿ ಶ್ರೀಮತಿ ಸಿರಿಯಮ್ಮ ಅವರಿಗೆ...
ಈ ಖುಷಿಯನ್ನು ವಿವರಿಸಲು ಪದಗಳಿಲ್ಲ..
ಸಣ್ಣ ಹಳ್ಳಿಯ, ಪುಟ್ಟ ಕೆಲಸಕ್ಕೆ ಜೊತೆಯಾದ ದೊಡ್ಡವರು… ಕುಸುಮಾ ಆಯರಹಳ್ಳಿ ಈ ಖುಷಿಯನ್ನು ವಿವರಿಸಲು ನಾನು ನಿಜಕ್ಕೂ ಪದಗಳಿಗಾಗಿ ತಡಕಾಡುತ್ತಿರುವೆ. ನಮ್ಮ ತೋಟದಲ್ಲಿ ಪ್ರತಿ ಭಾನುವಾರ ಸುತ್ತಲ ಹಳ್ಳಿಮಕ್ಕಳಿಗಾಗಿ ಕಲೆಯ ತರಗತಿಗಳು ನಡೆಯುತ್ತದೆ. ಒಂದು ಹುಂಬ ಧೈರ್ಯದಲ್ಲಿ ಆರಂಭಿಸಿದ ಈ ಕೆಲಸಕ್ಕೆ ಆರಂಭದಲ್ಲಿ ಬಂದವರು ಮೂರು...
‘ರಂಗಾಯಣ’ದಲ್ಲಿ ಭೋರ್ಗರೆದ ಬಯಲಾಟ..
ಡಾ ಲಕ್ಷ್ಮಿಶಂಕರ್ ಜೋಶಿ ನಿನ್ನೆ ನನಗೆ ಅದೇ ಭಾವ.ಥೈ ತಕ ಥೈ ತಕ ಥೈ ತಕ,… ಧಿತ್ತಾ ಧಿಗಿ ಧಿಗಿ ಥೈ..ತಾ ಥೈ ತಕ ಥೈ…ತರಹೇವಾರಿ ತಿಹಾಯ್ ಗಳು, ತರಹ ತರಹದ ಜಾನಪಮಟ್ಟುಗಳು, ವಿಶಿಷ್ಟ ಡೋಲಕ್ ಬೋಲ್ ಗ ಳೊಂದಿಗೆ ಬೆಸೆದುಕೊಂಡಿರುವ ತುಂಬು ರಂಗೇರುವ ಧ್ವನಿಗಳ ಹಾಡುಗಬ್ಬ ಕಲಬುರ್ಗಿ ರಂಗಾಯಣದ ತುಂಬಾ ಚೆಲುವಿನ ಚಿತ್ತಾರ, ಒನಪು ಒಯ್ಯಾರದ...
ದರ್ವೇಶಿ
ಆಮಿರ್ ಬನ್ನೂರು ನೀನು ಒಂದು ಪುಟವಷ್ಟೇಜಗದ ಹೊತ್ತಿಗೆಯಲಿನೀನೊಬ್ಬನೇಒಂದು ಇಡೀ ಅಧ್ಯಾಯವಲ್ಲನೆನಪಿರಲಿ… ಮಸ್ತಕದೊಳಗಿರುವವರುಮತನಾಡುತ್ತಿಲ್ಲ ಇಲ್ಲಿಹರಿದು ತೆಗೆಯುವ ಕಾಲ ಬಂದರೆಉಳಿಗಾಲದ ಕಥೆ ಏನೋ?ನೀನೊಂದು ವಿಸ್ಮಯವೇ ಸರಿಅಧ್ಯಾಯದೊಳಗೆ ಸದ್ದಿಲ್ಲದೆ ಸೊರಗಿತುಂಬಿರುವ ನಿನ್ನ ಕೊರಗಿನ ಗಂಟೆಸಮಯವಲ್ಲದ ಸಮಯದಲ್ಲಿಯೂನನ್ನ ಹೃದಯದೊಳಗೆ...
ಕಸ…
ಸುಧನ್ವ ದೇರಾಜೆ ಅಪ್ಪ ಎಸೆದ ಮಗಳ ಆಟಿಕೆಯೊಂದುಕಸದ ಬುಟ್ಟಿ ಸೇರಿ,ಬೆಂಗಳೂರಿನ ಮನೆ ಮನೆಕಸ ಸಂಗ್ರಹಿಸೋ ರಿಕ್ಷಾ ಸೇರಿಅಲ್ಲಿಂದ ಲಾರಿ ಏರಿಕಸದ ಮಹಾ ಪರ್ವತ ರಾಶಿಯಲ್ಲಿಎಲ್ಲಿ ಹೋಯಿತೋ.ಅದು ಅಲ್ಲಿ ಕರಗದಿದ್ದರೂ ಸೇರಿತುಮತ್ತೆಂದೂ ಮರಳದ ಲೋಕಕೆ.ಮರುಗಿದಳು ಮಗಳು ಕಣ್ಣೀರ ಮಾಲೆ ಮಾಡಿಕಣ್ಣಲ್ಲೇ ಕಸವ ಇಟ್ಟುಕೊಂಡಂತೆ.ತನ್ನನ್ನೇ...
ಉಮೇಶ ದೇಸಾಯಿ ಹೊಸ ಕಥೆ- ಕತೆ ಕತೆ ಕಾರಣ…
ಉಮೇಶ ದೇಸಾಯಿ ಸುಶೀಲಾದೇವಿ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಮುಕ್ತ ವಿಚಾರ ಲಹರಿ ಅವರು ಸೃಷ್ಟಿಸಿದ ವಿಪ್ಲವದ ಪಾತ್ರಗಳು ಅವರ ಆಧುನಿಕ ವಿಚಾರ ಲಹರಿ ಹೀಗೆ ಎಲ್ಲ ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಸ್ಥಾನ ದೊರಕಿಸಿಕೊಟ್ಟಿದೆ. ಅವರ ಹಲವು ಕಾದಂಬರಿಗಳು...
ಪ್ರಸನ್ನ ಸಂತೇಕಡೂರು ಓದಿದ ‘ಉಸಿರೇ ಗಾಳಿಯಾದಾಗ…’
ಕಾಯಗುಣವಳಿದು ಮಾಯಾ ಜ್ಯೋತಿಯು ವಾಯುವ ಕೂಡುವ ಮುನ್ನ ಪ್ರಸನ್ನ ಸಂತೇಕಡೂರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಕುಸುಮಬಾಲೆಯವರು ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಅದು ಒಬ್ಬ ವ್ಯಕ್ತಿ ಸತ್ತು ಹೋದನು ಎಂಬುದನ್ನು ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಗೆಲ್ಲಾ ಹೇಳಬಹುದು ಎಂಬುದಾಗಿತ್ತು. ಸತ್ತು ಹೋದನು, ಮರಣ ಹೊಂದಿದನು, ಹತ...
ಶ್ರೀನಿವಾಸ ಪ್ರಭು ಅಂಕಣ – ಸಿನೆಮಾ ಕಥೆಗಿಂತ ಹೆಚ್ಚು ರೋಚಕ ಕುಟುಂಬದ ಕಥೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Masayuki
ಕನಸಿನಂತೆ…
ಡಾ ಪ್ರೇಮಲತ ಬಿ ಹಾಗಿದ್ದರೇ ಚೆನ್ನ ಕನಸಿನಂತೆಕಾತರಿಸಿ ಕನವರಿಸಿ ಕೈ ಹಿಡಿದು ನೇವರಿಸಿಮುಷ್ಠಿಯಲಿ ಸುತ್ತಿ ಬಳಸಿಡಿದರೂ ಬರಿದಾಗುಳಿವಬೆರಳುಗಳಂತೆ, ಮತ್ತೆ ಬೇಡುವಂತೆ ತುಟಿಯಗಲಿಸಿ ಬೇಡಿ, ನಾಲಗೆ ಚಪ್ಪರಿಸಿತಂಪು ತಂಪೆನಿಸಿ ಕುಡಿದಷ್ಟೂದಾಹ ತಣಿಸದ, ಬತ್ತದನಿರಂತರ ಸಿಹಿನೀರ ಒರತೆಯಂತೆ ಅಕ್ಷಯವಾಗುವ ಅಸ್ಪಷ್ಟ ಆಕಾರಬಿರುಬಿಸಿಲು...
ಯಜ್ಞ ಕುದುರೆಯ ಓಟ…
ಪಿ ಆರ್ ವೆಂಕಟೇಶ್ ಕರುಳ ತುಂಬೆಲ್ಲ ಕೆಂಡಕಾರಿಕನಿಕರವ ಕೊಂದವರಯಜ್ಞ ಕುದುರೆಯ ಓಟ.ದೇಶದೊರೆ ಕೈಯಲ್ಲಿ ಲಗಾಮಿನಾಟ. ಓಡುತಿದೆ ಕುದುರೆಬಿನ್ನಾಣ ಬಿತ್ತರಿಸಿಬಿರಿಸುಬಿಸಿ ಎತ್ತರಿಸಿಗಾಳಿಯನೆ ಕತ್ತರಿಸಿಧರೆಯ ಮೈ ಅದರಿಸಿಬಯಲ ತುಂಬೆಲ್ಲ ಧೂಳ ಹೂಂಕರಿಸಿ.ಹಸಿದ ಹೊಟ್ಟೆಯ ತಟ್ಟೆಬೆಳಗಿದೆ ಬೆವರೆಣ್ಣೆಯ ದೀಪಹುಡಿಜೀವ ಹರಡಿದೆ ಇದಕೆ ಲೋಬಾನ....





















