ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಿದ್ದೇಶ್ವರ ಸ್ವಾಮೀಜಿಯವರ ನಿಧನ… ತತ್ವಶಾಸ್ತ್ರೀಯ, ಅಧ್ಯಾತ್ಮಿಕ ನೆಲೆಗಳು ಇತ್ಯಾದಿ…
ಮ ಶ್ರೀ ಮುರಳಿ ಕೃಷ್ಣ ತತ್ವಶಾಸ್ತ್ರದಲ್ಲಿನ ಭೌತವಾದಿ ಎಳೆ ನನಗೆ ಆಕರ್ಷಣೀಯ ವಿಷಯ. ಪೌರ್ವಾತ್ಯ ಇರಬಹುದು ಅಥವಾ ಪಾಶ್ಚಿಮಾತ್ಯ ಇರಬಹುದು, ಭೌತವಾದಿ ಚಿಂತನೆಗಳ ಉಗಮ, ಬೆಳವಣಿಗೆ ಇತ್ಯಾದಿಗಳ ಅಧ್ಯಯನದ ಹಾದಿಯ ಪಯಣ ಚೇತೋಹಾರಿ ಅನುಭವವನ್ನು ನೀಡುತ್ತದೆ. ಹೀಗೆಂದಾಕ್ಷಣ, ಭಾವನವಾದಿ ತತ್ವಶಾಸ್ತ್ರವನ್ನು ಅಸಡ್ಡೆ ಮಾಡುವುದಿಲ್ಲ....
ಸಿದ್ದೇಶ್ವರ ಶ್ರೀಗಳಂತೆ ಸಂತನಾಗುವುದು ಅಷ್ಟು ಸುಲಭವಲ್ಲ…
ಶಿವಾನಂದ ತಗಡೂರು ಅದೇ ಜೇಬುಗಳಿಲ್ಲದ ಬಿಳಿ ಜುಬ್ಬ, ಬಿಳಿ ಪಂಚೆ ಧರಿಸಿದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮಾಮೂಲಿ ಚಪ್ಪಲಿ ಮೆಟ್ಟಿಕೊಂಡು ನಡೆದು ಬರುತ್ತಿದ್ದರೆ, ಅವರ ಮುಖದಲ್ಲಿನ ತೇಜಸ್ಸು ಸಂತ ಎಂದೇ ಪ್ರತಿಬಿಂಬಿಸುತಿತ್ತು. ನಿಜ. ಸಿದ್ದೇಶ್ವರ ಶ್ರೀಗಳ ಪ್ರವಚನಗಳನ್ನು ಕೇಳಿದವರು ಅವರನ್ನು ಸಂತ ಎಂದು ಎದೆಯೊಳಗೆ ಭಕ್ತಿಯ...
ಹಳೆಯ ವಸ್ತುಗಳ ವಿಲೇವಾರಿ ಸಂಕಟ…
ರಹಮತ್ ತರೀಕೆರೆ ಮನೆಯಲ್ಲಿ ಅಪ್ಪನಿಗೆ ಅವನವೇ ಆದ ಕೆಲವು ಪ್ರಾಣಪ್ರಿಯ ವಸ್ತುಗಳಿದ್ದವು. ಅವುಗಳಲ್ಲಿ ಅವನ ಕುರ್ಚಿ, ಕೋವಿ, ಟ್ರಂಕು ಕೋಟುಗಳು ಸೇರಿದ್ದವು. ಅವನು ಜಳಕಮಾಡಿ ತೇಗದಮರದಿಂದ ಮಾಡಿದ ಭಾರವಾದ ಕುರ್ಚಿಯನ್ನು ಹಾಲಿನಲ್ಲಿ ಹಾಕಿಕೊಂಡು ಕುಲುಮೆಯತ್ತ ನೋಡಿಕೊಂಡು ಕೂರುತ್ತಿದ್ದನು. ಅವನು ಮನೆಯಲ್ಲಿದ್ದಾಗ ಯಾರೂ...
ಸೆಲ್ಯುಲಾಯ್ಡ್ ಸಿನಿಮಾ ಮೋಹದ ಕತೆ – ಚೆಲ್ಲೊ ಶೊ
ಚಂದ್ರಪ್ರಭ ಕಠಾರಿ ನಾನು ಬೆಳಕನ್ನು ಕಲಿಯಬೇಕು…ಬೆಳಕಿದ್ದರೆ ಕತೆ…ಕತೆಯಿದ್ದರೆ ಸಿನಿಮಾ. ಇದು ಚೆಲ್ಲೊ ಶೊ ಗುಜರಾತಿ ಸಿನಿಮಾದಲ್ಲಿ ಪ್ರೊಟಗಾನಿಷ್ಟ್ ಬಾಲಕ ಸಮಯ್ ಹೇಳುವ ಮಾತಿದು. ಹಾಗಾದರೆ ಕತ್ತಲೆಯಲ್ಲಿ ಕತೆ ಇರುವುದಿಲ್ಲವೇ? ಅದು ಹಾಗಲ್ಲ. ಸಮಯ್ ಹೇಳುತ್ತಿರುವುದು – ಟಾಕೀಸಿನಲ್ಲಿ ಪ್ರೊಜೆಕ್ಟರ್ ನಿಂದ ಬೆಳ್ಳಿಪರದೆಯ ಮೇಲೆ...
ಭವ್ಯ ಕಬ್ಬಳಿ ಕವಿತೆ- ಎಷ್ಟೆಲ್ಲಾ ಪಳಗಿಸುವ ಬದುಕು…
ಭವ್ಯ ಕಬ್ಬಳಿ ಮುಳ್ಳು ತಾಕಿಸಿಕೊಂಡ ಎದೆಯೊಳಗೆಕವಿತೆ ಹುಟ್ಟುವುದು ಬಲು ಸಲೀಸು ಮೋಟಾರು ಬೈಕಿನಲ್ಲಿಬೆನ್ನ ಹಿಂದೆ ಕುಳಿತ ಮಗುವನ್ನುಆಗಾಗ ಹಿಂದೆ ತಿರುಗಿನೋಡುವ ತಂದೆ ಶಾಲೆಗೆ ಬಿಟ್ಟ ಮಗುವನ್ನುಆವರಣದಲ್ಲಿ ಮರೆಯಾಗುವವರೆಗುದೃಷ್ಟಿನೆಡುವ ತಾಯಿ ಅಂತೆಯೇ ಎಷ್ಟೊಂದು ಮಹಾ ಕಾವ್ಯಗಳ ಪರಿಚಯ ಮೋಡಕಟ್ಟಿದ ದಿನಆಗಸಕ್ಕೆ ಮೊಗತೋರಿ ನಿಂತ...
Pic by Moses Levy
ಪಿ ಪಿ ಉಪಾಧ್ಯ ಕವಿತೆ- ಭ್ರಾಂತಿ…
ಪಿ ಪಿ ಉಪಾಧ್ಯ 1. ಭ್ರಾಂತಿ ಕಡಲತಡಿಯಲಿ ಹವಳಶಿಖರದೆತ್ತರ ಧವಳನಡುವಿನಲಿ ಚದುರಿದ್ದಗಟ್ಟ್ಟಿ ರೊಟ್ಟಿಯ ತುಣಕುಕೋಟಿ ಬಾಯ್ದೆರೆದಿದ್ದುಚೂರುಗಳು ಸಾಕಾಗಲಿಲ್ಲಕಚ್ಚಾಟ ಕಾದಾಟ ಮತ್ತೆಗೆದ್ದವರ ಕೈಯ್ಯಲ್ಲಿ ಮಣ್ಣ ಹೆಂಟೆ ಹಸಿದವರು ಸಾಗಿದರುಸಾಗುತ್ತ ಕೂಗಿದರುಈ ಕಿಚ್ಚಿನ ಕೂಗುಬರಿ ಕ್ರಾಂತಿಯ ಸೋಗುಕೈಯ್ಯ ಬಾವುಟಕ್ಕಿದೆಯಲ್ಲಹಿಡಿಯಾದ...
ಸಪ್ನ ʼಅವಧಿʼ ಟಾಪ್ ಟೆನ್…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -4..
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಪೀಲೆ ನೆನಪು ಸದಾ…
ಶ್ರೀಪಾದ್ ಭಟ್ ಹಿಂದೊಮ್ಮೆ ಕ್ರೀಡಾ ಬರಹಗಾರರೊಬ್ಬರು 'ಪೀಲೆ ಮನುಷ್ಯನಾಗಿ ಹುಟ್ಟದಿದ್ದರೆ ಪುಟ್ಬಾಲ್ ಆಗಿ ಜನಿಸುತ್ತಿದ್ದರು' ಎಂದು ಹೇಳಿದ್ದರು. ಅದು ಹಾಗೇನೆ. (ನಮ್ಮ ರಾಜ್ ನಟರಾಗದಿದ್ದರೆ? ಓಹ್ ಊಹಿಸಲೂ ಸಾದ್ಯವಿಲ್ಲ) ಬಡತನದಲ್ಲಿ ಹುಟ್ಟಿ ಬೆಳೆದ ಪೀಲೆ ಸಾಕ್ಸ್ ನಲ್ಲಿ ಪೇಪರ್ ತುರುಕಿ ಫುಟ್ಬಾಲ್ ಆಡುತ್ತಿದ್ದರು. ನಂತರ...
ಕಾಮರೂಪದ ಪ್ರಭಾಕರ…
ರಹಮತ್ ತರೀಕೆರೆ ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ ಆದಿಮ'ಕ್ಕೆ; ಇನ್ನೊಂದು-ಕಾಮರೂಪಿ' ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. ೫೦ರ ದಶಕದ...
ಗೀತಾ ಹೆಗಡೆ ಓದಿದ ‘ವಿಚಿತ್ರಸೇನನ ವೈಖರಿ’
ದೈನಿಕತೆಯಲ್ಲೆ ದೈವಿಕತೆ.. ಗೀತಾ ಹೆಗಡೆ ದೊಡ್ಮನೆ “ಸುಶ್ರಾವ್ಯವಾದ ನಿಃಶ್ಶಬ್ದವಿತ್ತುಹೆಜ್ಜೆ ಇಡದ ಜಾಗದಲ್ಲಿಹಿಡಿಯಹೋದರೆ ಹೊರಟುಬಿಡುತ್ತಿತ್ತು” (‘ಹಿಡಿಯಹೋದರೆ’) ಬಹುಶಃ ಇದೊಂದು ವ್ಯಾಖ್ಯಾನದಂತೆ ಸಲ್ಲಬಹುದು; ಎಲ್ಲ- ಕವಿಗಳ, ಕವಿತೆಗಳ ಸಂಭಾವ್ಯ, ಅಸಂಭಾವ್ಯ ಅಂತರಂಗ-ಬಹಿರಂಗಗಳ ನಿಷ್ಪನ್ನ ತೊಳಲಾಟಗಳ, ನಿಗೂಢದ ಅನ್ವೇಷಣೆಗಳ...
ರಾಜಶ್ರೀ ಟಿ ರೈ ಪೆರ್ಲ ಕವಿತೆ- ವಿಪರ್ಯಾಸ…
ರಾಜಶ್ರೀ ಟಿ ರೈ ಪೆರ್ಲ ನಿದ್ದೆಗೆ ಜಾರುವ ಹೊತ್ತಿಗೆ ಅವಳುಹಸುಳೆಗೆ ಎದೆ ಹಾಲು ಹಿಂಡಿದ್ದಾಳೆಹಸಿವಿನ ಅಮಲಿಗೆ ಅಲೆಮಾರಿಯ ಉಸಿರುಅಲೆದಾಡುತ್ತಿದೆ.ಬೀದಿ ನಾಯಿಯೊಂದುಹಾಲುಗೆನ್ನೆಯಲಿ ಹರಿದ ಹಾಲಿನ ಹನಿಗೆಬಾಯಿ ಇಕ್ಕಿ ನೆಕ್ಕಿದೆ.ದೊರಗಿಗೆ ಮಗು ಬೆಚ್ಚಿದೆಗಾಭರಿಗೆ ಬೊಬ್ಬಿರಿದು ಅತ್ತಿದೆ.ನಾಯಿ ದುರುಗುಟ್ಟಿ ಬೆದರಿಸಿ ಬೆನ್ನು...
ಚಿಕ್ಕಲ್ಲೂರು ಜಾತ್ರೆ: ಸಾಂಸ್ಕೃತಿಕ ಅನನ್ಯತೆ…
ಗೋಳೂರ ನಾರಾಯಣಸ್ವಾಮಿ ಜಾತ್ರೆ ಎಂಬುದು ಜನಪದರಲ್ಲಿ ಬರುವ ರೂಢಿ ಸಂಪ್ರದಾಯಗಳ ಒಂದು ಭಾಗವಾಗಿರುತ್ತದೆ. ಯಾವುದೋ ಒಂದು ಘನ ಉದ್ದೇಶಕ್ಕಾಗಿ ತಮ್ಮ ಇಷ್ಟ ಬಂದ ಸಾಂಸ್ಕೃತಿಕ ನಾಯಕನಿಗಾಗಿ ಒಂದು ನಿರ್ಧಿಷ್ಟ ಜಾಗದಲ್ಲಿ ಸಂಪ್ರದಾಯ, ಆಚರಣೆಯ ಹಿನ್ನೆಲೆಯಲ್ಲಿ ಸೇರುವ ಜನ ಸಮೂಹವೇ ಜಾತ್ರೆ. ಜಾತ್ರೆಯು ಕೂಟ, ಸಂತೋಷ, ಮನರಂಜನೆ, ಭಕ್ತಿ-ಭಾವದ...
ಜಿ ಎನ್ ನಾಗರಾಜ್ ಅಂಕಣ- ಜ್ಯೋತಿಷ್ಯಕ್ಕೂ ಕರ್ಮಕ್ಕೂ, ವರ್ಣಗಳಿಗೂ ಕರ್ಮಕ್ಕೂ ಸಂಬಂಧವಿದೆಯೇ ?
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಪ್ರೊಫೈಲ್ ಪಿಕ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Vizorturkiyem
ಮಹಾದೇವ ಎಸ್ ಪಾಟೀಲ ಕವಿತೆ – ಕಾಣದಂತೆ ಹೋದಳು…
ಮಹಾದೇವ ಎಸ್ ಪಾಟೀಲ ಮಾತಾಡಿಸಿದರು ಮಾತಾಡದಂತೆ ಹೋದಳುಎದುರುಬದುರಾದರು ನೋಡದಂತೆ ಹೋದಳು ಪ್ರೇಮದ ಪತ್ರಗಳು ಬರೆದು ಬರೆದು ಹಾಕಿದೆಹರಿದು ಹಾಕಿ ಕಣ್ಣಿಗೂ ಕಾಣದಂತೆ ಹೋದಳು ಮಾತು ಮಾತಿನಲಿ ಪ್ರೀತಿಯ ಮಳೆ ಸುರಿದುತಂಗಾಳಿ ಬೀಸಿ ಬೀರುಗಾಳಿಯಂತೆ ಹೋದಳು ಹಗಲಿರುಳು ಅವಳಿಗಾಗಿ ಶಭರಿಯಂತೆ ಕಾದೆಪ್ರೇಮದಿಂದ ತಾಕಿದರು ಕರಗದಂತೆ ಹೋದಳು...
ಮಲರ್ ವಿಳಿ ಕೆ ಅನುವಾದಿತ ಕವಿತೆ- ಮರಣದ ಸುದ್ದಿ ಸಾರುವವನ ಮರಣ…
ತಮಿಳು ಮೂಲ: ತಂಗಂ ಮೂರ್ತಿ ಅನುವಾದ ಡಾ. ಮಲರ್ ವಿಳಿ ಕೆ ತಂಗಂ ಮೂರ್ತಿ ಇವರು ತಮಿಳಿನ ಪ್ರಸಿದ್ಧ ಕವಿ ಇವರು ಪ್ರಸ್ತುತ ಪುದುಕೋಟ್ಟೈಯಲ್ಲಿ ವಾಸಿಸುತ್ತಿದ್ದಾರೆ.ಸೂಚನೆ: ತಮಿಳು ನಾಡಿನ ಕೆಲವು ಹಳ್ಳಿಗಾಡಿನಲ್ಲಿ ಸತ್ತವರ ಸುದ್ದಿಯನ್ನು ಸಾರುವ ಪದ್ಧತಿ ಉಂಟು. “ದು:ಖದ ಸುದ್ದಿಮರಣದ ಪ್ರಕಟಣೆ”ಮುಂಜಾನೆಆಟೋದಲ್ಲಿ...
ಪಾರ್ವತಿ ಜಿ ಐತಾಳ್ ಓದಿದ ʼಪ್ರೀತ್ ಸುʼ
ಪಾರ್ವತಿ ಜಿ ಐತಾಳ್ ಮುಂಬಯಿ ಕನ್ನಡಿಗ ಸಣ್ಣ ಕಥೆಗಾರ ರಾಜೀವ ನಾಯಕರ ಮೊದಲ ಕಾದಂಬರಿ 'ಪ್ರೀತ್ ಸು' ಶೀರ್ಷಿಕೆಯೇ ಹೇಳುವಂತೆ ಇದರ ವಸ್ತು ಪ್ರೀತಿ-ಪ್ರೇಮ. ಮುಖ್ಯವಾಗಿ ಗಂಡು-ಹೆಣ್ಣುಗಳ ನಡುವಣ ಪ್ರೀತಿ. ಇಲ್ಲಿ ಪ್ರಧಾನ ಭೂಮಿಕೆಯಲ್ಲಿರುವವರು ಹದಿಹರೆಯದವರಾದರೂ ವಯಸ್ಸಾದಂತೆ ಮಾಗುವ ಪ್ರೀತಿ ಆಧ್ಯಾತ್ಮಿಕತೆಯನ್ನು ಹೇಗೆ...
ʼದಕ್ಲಕಥಾ ದೇವಿಕಾವ್ಯʼ: ಕೆಬಿ ಆತ್ಮಕ್ಕೆ ಕೆಪಿ ದೇಹ…
ಎಂ ನಾಗರಾಜ ಶೆಟ್ಟಿ ಕೆ ಬಿ ಸಿದ್ಧಯ್ಯನವರ ಖಂಡ ಕಾವ್ಯಗಳ ಗ್ರಹಿಕೆ ಸುಲಭದ್ದಲ್ಲ.ನೆಲನುಡಿಯ ಗಂಧವನ್ನು ಹೀರಿ, ಅನುಭಾವಿಕ ನೆಲೆಯಲ್ಲಿ ವಾಸ್ತವವನ್ನೂ ಎದುರುಗೊಳ್ಳುವ ಕಾವ್ಯಗಳವು. ʼಬಕಾಲʼ ʼದಕ್ಲಕಥಾ ದೇವಿ ಕಾವ್ಯʼ, ʼಅನಾತ್ಮʼ ʼಗಲ್ಲೆಬಾನಿʼ ಸಾಹಿತ್ಯಿಕ ವಲಯದಲ್ಲಿ ಮೆಚ್ಚುಗೆಗೆ, ಚಿಂತನೆಗೆ ಕಾರಣವಾದ ಖಂಡಕಾವ್ಯಗಳು.ಇವುಗಳಲ್ಲಿ...





















