ಇದು ಶಾಲೆಯಲ್ಲ ಅಡುಗೆ ಮನೆ…

ಮೂಲ : ಮನೋಜ್ ಬೊಗಾಟೆ

ಕನ್ನಡಕ್ಕೆ : ಸಂವರ್ತ ಸಾಹಿಲ್

ಸುಧಾ ಆಡುಕಳ ಅವರ ಫೇಸ್ ಬುಕ್ ವಾಲ್ ನಿಂದ

ಸಂಗಂ ಸಮ್ಮೇಳನದಲ್ಲಿ ಎಲ್ಲರ ಗಮನ ಸೆಳೆದ ಬಹುಮುಖ್ಯ ಕವಿ ಮನೋಜ್ ಬೊಗಾಟೆ. ನೇಪಾಳಿ ಭಾಷೆಯಲ್ಲಿ ಬರೆದ ಮಾತ್ರಕ್ಕೆ ನನ್ನನ್ನು ನೇಪಾಳಿ ಕವಿಯೆಂದು ಗುರುತಿಸುತ್ತಾರೆ ಎಂದು ಮಗುವಿನಂತೆ ಮುಖವುಬ್ಬಿಸಿ ಹುಸಿಕೋಪ ತೋರುತ್ತಾ ನಾನು ಡಾರ್ಜಿಲಿಂಗ್ ನವನು. ಭಾರತೀಯ ಎಂದು ಎದೆಯುಬ್ಬಿಸಿ ಹೇಳುತ್ತಿದ್ದರು. ಅವರ ‘ಶಾಲೆಯಲ್ಲ, ಇದು ಅಡುಗೆಮನೆ’ ಎಂಬ ಪದ್ಯವನ್ನು ಅಷ್ಟೇ ಸಶಕ್ತವಾಗಿ ಸಂವರ್ತ ಸಾಹಿಲ್ ಅನುವಾದಿಸಿ, ಓದಿದರು. ಸಂಚಲನವುಂಟುಮಾಡಿದ ಕವಿತೆ….

ಇದು ಶಾಲೆಯಲ್ಲ ಅಡುಗೆ ಮನೆ:

ಇಲ್ಲಿ ಅಕ್ಕಿ ಬೇಯಲು
ಮೊದಲು ಪುಸ್ತಕ ಉರಿಯಬೇಕು
ಮತ್ತು ಬೇಳೆ ಬೇಯುವುದು
ಪೆನ್ಸಿಲ್ ಉರಿದಮೇಲೆ!
ನೀವು ಒಳ್ಳೆಯ ಕವಿತೆ ಕಟ್ಟುವುದು
ದೊಡ್ಡ ಸಂಗತಿಯಲ್ಲ
ಇಲ್ಲಿ ಒಲೆ ಉರಿಯುವುದು
ತುಂಬ ದೊಡ ಸಂಗತಿ
ಅಲ್ಲ್ಲಿ ಕಲ್ಲು ಗಳನ್ನೆ ಬರಿಗಾಲ್ಲಿ ಮೆಟ್ಟಿ
ನಡೆದು ಬರುತ್ತಾರೆ
ತೆರೆದಕಂಗಳಲ್ಲಿ ಕನಸು ಕಾಣುತ್ತಾರೆ
ಸ್ತತ್ತ ಸಪ್ನ ಗಳನ್ನೆ ಪೂಜಿಸುವ ಜಾತಿ
ನಿರಕ್ಷರ ದೇವರ ಭಕ್ತರು
ಕಾಡುಮೇಡುಅಲೆಯುತ್ತ, ಗೆಣಸು ಅಗೆಯುತ್ತ
ಇಷ್ಟಿ ದೂರ ಬಂದಿದಾ ರೆ.
ನದಿಗಳು ಇವರ ಕಾಲುದಾರಿ
ಹಳ್ಳಿ ಗಳು ಇವರ ಹೆಜ್ಜೆ ಗುರತು.
ಅಕ್ಷರ ಬರುವ ಮೊದಲೇ
ಅವರಿಗೆ ಹಾಡುಬರುತಿತ್ತು
ಹಾಡಿಗೂ ಮುನ್ನ ಅವರ
ಮೂಗುತ್ತಿ ಮೂಡಿತ್ತು
ಅಕ್ಷರ ಹರಿಯುವ ಮೊದಲೆ ಇಲ್ಲಿ
ಅವರ ರಕ್ತ ಹರಿದತ್ತು.
ಆ ರಕ್ತ ದಿಂದಲೇ ಪರ್ವತ ಗರ್ಭ ಧರಿಸಿದ್ದು
ರಕ್ತ ಸಿಕ್ತ ಹಾಡುಗಳನ್ನೆ ಹಾಡುತ್ತಲೇ
ಬಿದಿರನ ಚೀಲದ ದಂತದ ಓರಕೋರೆ ರಸ್ತೆ
ಪಕ್ಕ ದಲ್ಲಿ ಉಚ್ಛೆ ಹೊಯ್ದಿದ್ದಾರೆ
ಗೆಣಸುಮುಗಿದು ಹೋಗುತ್ತಿದ್ದಂತೆ
ಅಮ್ಮ ಹೊಟ್ಟೆಗೆ ಲುಂಗಿ ಸುತ್ತಿದ್ದಾಳೆ
ಆ ದಿನದಿಂದ ಹಳ್ಳಿಯನ್ನೆ
ಕಟ್ಟಿ ಹಿಡಿದಿದೆ ಲುಂಗಿ

ಎಂದು ಈ ಹಳ್ಳಿ ಬರಿಗಾಲ್ಲಿ
ಸಂಸತ್ ಭವನ ಏರಿತೋ
ಅಂದು ಆರಂಭವಾಯ್ತು
ಅಡುಗೆಮನೆಯಲ್ಲಿ ಶಾಲೆ
ಅಥವಾ ಶಾಲೆಯಲ್ಲಿ ಅಡುಗೆಮನೆ

ಅಡುಗೆಮನೆಯಲ್ಲಿ
ಕ , ಕಾ, ಕಿ, ಕಿೀ, ಕು, ಕೂ, ಕೆ ಅನ್ನಕ್ಕಾಗಿ ಸಾಲುಗಟ್ಟಿ ನಿಲ್ಲುತ್ತವೆ.
ಖ ಖಾ ಖಿ, ಖಿೀ, ಖು, ಖೂ, ಖೆ ಸಲ್ಪ ಬೇಳೆಗಾಗಿ ಸರದಿ ನಿಲ್ಲುತ್ತವೆ
ಯಾವುದೋ ಕವಿಯ
ಕಾಲಾತೀತ ಶಬ್ದಗಳು
ಪೆನ್ಸಿಲ್ ಚಮಚ ಎತ್ತುತ್ತವೆ

ಗುರುಗಳೇ, ಇದು ಸ್ಕೂಲಲ್ಲ. ಇದು ಪಾಕಶಾಲೆ.
ಅವರ ಮನಸ್ಸಿನಲ್ಲಿ ಪ್ರತಿ ಋತುವಿನಲ್ಲಿ
ಜ್ಞಾನಸ ಬಿಜ ಬಿತ್ತಲಾಗುವ ಮೊದಲೆ
ಹಸಿವಿನ ಮೊಗ್ಗು ಬಿರಿದು ಅರಳುತ್ತ ದೆ
ಹೂವಿನಿಂದ ಹೊರಬಂದ ಬೀಜಗಳೆಲ್ಲ
ನಡೆಯುತ್ತ ವೆ
ಅಡುಗೆಮನೆಯ ದಿಕ್ಕಿನಲ್ಲಿ
ಯಾಕೆಂದರೆ ಅಲ್ಲಿ
ಕಿಚಡಿ ಮಾಡುತ್ತಾರೆ
ಬೇಕಿದ್ದರೆ ನೀವೇ ಕೇಳಿನೋಡಿ
“ಭೂಮಿ ಹೇಗಿದೆ?” – ಎಂದು
ಮಕ್ಳು ಹೇಳುತ್ತಾರೆ “ಮೊಟ್ಟೆಯಾಕಾರ”.
ಯಾಕೆಂದರೆ ಇಂದು
ಓದಿನ ದಿನವಲ್ಲ. ಮೊಟ್ಟೆ ಯೂಟದ ದಿನ.
ಶ್ರೀಯುತರೆ, ಇದು ಶಾಲೆಯಲ್ಲ, ಇದು ಅಡುಗೆಮನೆ.

ಸರ್ಕಾರ್! ಅಕ್ಷರಗಳಲ್ಲಿ ವಿಷ ಬೆರೆಸಿಯಾಗಿದೆ
ಕಿಚಡಿಯಾವ ಮಹಾವಿಷ್ಯ?
ತುಂಬಿ, ವಿಷ ತುಂಬಿ
ಬೆರೆಸಿ, ವಿಷ್ ಬೆರೆಸಿ.
ಆದರೆ ಒಂದು ವೇಳೆ
ಒಂದಿಷ್ಟಿಟು ಅಕ್ಷರಗಳು ಉಳಿದುಕೊಂಡರೆ
ಅವುಗಳಿಂದ ಒಂದಿಷ್ಟಿಟು ವಾಕ್ಯ ರಚನೆಗೊಂಡರೆ
ಅದುವೇ ನಿಮ್ಮ ‘ಅಂತ್ಯ’ ಆಗಲಿದೆ.
ಸರ್, ಇದು ಶಾಲೆಯಲ್ಲ ಇದು ಅಡುಗೆಮನೆ.

‍ಲೇಖಕರು Admin

October 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: