ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಉರ‍್ದು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

33

ಉರ‍್ದು

ಉರ‍್ದು ಬಾರತದ ಒಂದು ಪ್ರದಾನ ಬಾಶೆ. ಬಾರತದಲ್ಲಿ ಉರ‍್ದು ಬಾಶೆ ಮಾತಾಡುವವರ ಒಟ್ಟು ಸಂಕೆ 5,07,72,631. ಉರ‍್ದುವಿನಲ್ಲಿ ಒಟ್ಟು ಎರಡು ತಾಯ್ಮಾತುಗಳು ದಾಕಲಾಗಿವೆ. ಉರ‍್ದು (5,07,25,762), ಬನ್ಸಾರಿ (22,806). ಇವುಗಳ ಜೊತೆ ಇತರ (24,063) ಇತರ ಎಂಬ ಗುಂಪೊಂದು ದಾಕಲಾಗಿದೆ. ಕರ‍್ನಾಟಕದಲ್ಲಿ ದಾಕಲಾದ ಉರ‍್ದು ಮಾತುಗರು (66,18,324). ಇದು ದೇಶದ ಒಟ್ಟು ಉರ‍್ದು ಬಾಶೆಯ 13.035% ಆಗಿದೆ. ಇದರಲ್ಲಿ ಉರ‍್ದು ತಾಯ್ಮಾತನ್ನು ಆಡುವವರು (66,17,850). ಬನ್ಸಾರಿ (27) ಮತ್ತು ಇತರ (447) ಇವುಗಳಲ್ಲಿ ಕಡಿಮೆ ಮಂದಿ ದಾಕಲಾಗಿದ್ದಾರೆ. ಉರ‍್ದು ಮಾತುಗರು (66,17,850) ಕರ‍್ನಾಟಕದ 10.832% ಮಂದಿಯನ್ನು ರೂಪಿಸುತ್ತದೆ. 

ಕರ‍್ನಾಟಕದಾದ್ಯಂತ ವ್ಯಾಪಿಸಿಕೊಂಡಿರುವ ಉರ‍್ದು ಬಾಶೆಗೆ ಅತಿ ಹೆಚ್ಚು ಮಂದಿ ಮಾತುಗರು ದಾಕಲಾಗಿರುವುದು ಬೆಂಗಳೂರು ನಗರ ಜಿಲ್ಲೆಯಲ್ಲಿ. ಇಲ್ಲಿ ದಾಕಲಾದ ಉರ‍್ದು ಮಾತುಗರ ಸಂಕೆ 11,65,361. ಇದು ಕರ‍್ನಾಟಕದ ಒಟ್ಟು ಉರ‍್ದು ಮಾತುಗರ ಸುಮಾರು 17% ಆಗುತ್ತದೆ. ಇದರ ನಂತರ ಬೆಳಗಾವಿ (4,67,743) ಮತ್ತು ಕಲಬುರಗಿ (4,65,845) ಈ ಎರಡು ಜಿಲ್ಲೆಗಳಲ್ಲಿ ಅಯ್ದು ಲಕ್ಶಕ್ಕಿಂತ ಕಡಿಮೆ ಮತ್ತು ನಾಲ್ಕು ಲಕ್ಶಕ್ಕಿಂತ ಹೆಚ್ಚು ಮಂದಿ ಉರ‍್ದು ಮಾತುಗರು ಇದ್ದಾರೆ. ದಾರವಾಡ (3,39,802) ಮತ್ತು ವಿಜಯಪುರ (3,38,974) ಈ ಎರಡು ಜಿಲ್ಲೆಗಳಲ್ಲಿ ನಾಲ್ಕು ಲಕ್ಶಕ್ಕಿಂತ ಕಡಿಮೆ ಮತ್ತು ಮೂರು ಲಕ್ಶಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಮೂರು ಲಕ್ಶಕ್ಕಿಂತ ಕಡಿಮೆ ಮತ್ತು ಎರಡು ಲಕ್ಶಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಬೀದರ (2,92,182), ಹಾವೇರಿ (2,82,847), ಮಯ್ಸೂರು (2,78,292), ಬಳ್ಳಾರಿ (2,77,932), ದಾವಣಗೆರೆ (2,54,482), ತುಮಕೂರು (2,41,940), ರಾಯಚೂರು (2,23,200) ಮತ್ತು ಶಿವಮೊಗ್ಗ (2,22,699). ಒಂಬತ್ತು ಜಿಲ್ಲೆಗಳಲ್ಲಿ ಎರಡು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಉರ‍್ದುಗರು ದಾಕಲಾಗಿದ್ದಾರೆ. ಕೋಲಾರ (1,97,845), ಬಾಗಲಕೋಟೆ (1,75,680), ಉತ್ತರ ಕನ್ನಡ (1,70,010), ಚಿಕ್ಕಬಳ್ಳಾಪುರ (1,45,549), ಯಾದಗಿರಿ (1,40,605), ಚಿತ್ರದುರ‍್ಗ (1,21,645), ರಾಮನಗರ (1,13,804), ಹಾಸನ (1,09,441), ಮತ್ತು  ಕೊಪ್ಪಳ (1,02,024). ಇನ್ನುಳಿದಂತೆ ಅಯ್ದು ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಅಯ್ವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಬೆಂಗಳೂರುಗ್ರಾಮಾಂತರ (91,343), ಗದಗ (89,144), ಚಿಕ್ಕಮಗಳೂರು (84,131), ಮಂಡ್ಯ (76,497) ಮತ್ತು ಉಡುಪಿ (54,256). ಉಳಿದ ಮೂರು ಜಿಲ್ಲೆಗಳಲ್ಲಿ ಅಯ್ವತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇದ್ದಾರೆ. ಚಾಮರಾಜನಗರ (45,165), ದಕ್ಶಿಣ ಕನ್ನಡ (33,045) ಮತ್ತು ಕೊಡಗು (16,367).

ಉರ‍್ದು ಬಾಶೆಯು ಕರ‍್ನಾಟಕದ ಜಿಲ್ಲೆಗಳಲ್ಲಿ ಪಸರಿಸಿರುವ ಬಗೆಯನ್ನು ಕೆಳಗೆ ಕೊಟ್ಟಿದೆ

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 66,17,850
ಕರ‍್ನಾಟಕ6,10,95,29766,17,85010.832%100%
ಬೆಂಗಳೂರು96,21,55111,65,36112.111%17.609%
ಬೆಳಗಾವಿ47,79,6614,67,7439.786%7.067%
ಕಲಬುರಗಿ25,66,3264,65,84518.152%7.039%
ದಾರವಾಡ18,47,0233,39,80218.397%5.134%
ವಿಜಯಪುರ21,77,3313,38,97415.568%5.122%
ಬೀದರ17,03,3002,92,18217.153%4.415%
ಹಾವೇರಿ15,97,6682,82,84717.703%4.274%
ಮಯ್ಸೂರು30,01,1272,78,2929.272%4.205%
ಬಳ್ಳಾರಿ24,52,5952,77,93211.332%4.199%
ದಾವಣಗೆರೆ19,45,4972,54,48213.080%3.845%
ತುಮಕೂರು26,78,9802,41,9409.031%3.655%
ರಾಯಚೂರು19,28,8122,23,20011.571%3.372%
ಶಿವಮೊಗ್ಗ17,52,7532,22,69912.705%3.365%
ಕೋಲಾರ15,36,4011,97,84512.877%2.989%
ಬಾಗಲಕೋಟೆ18,89,7521,75,6809.296%2.654%
ಉತ್ತರ ಕನ್ನಡ14,37,1691,70,01011.829%2.568%
ಚಿಕ್ಕಬಳ್ಳಾಪುರ12,55,1041,45,54911.596%2.199%
ಯಾದಗಿರಿ11,74,2711,40,60511.973%2.124%
ಚಿತ್ರದುರ‍್ಗ16,59,4561,21,6457.330%1.838%
ರಾಮನಗರ10,82,6361,13,80410.511%1.719%
ಹಾಸನ17,76,4211,09,4416.160%1.653%
ಕೊಪ್ಪಳ13,89,9211,02,0247.340%1.541%
ಬೆಂಗಳೂರುಗ್ರಾಮಾಂತರ9,90,92391,3439.217%1.380%
ಗದಗ10,20,79189,1448.732%1.347%
ಚಿಕ್ಕಮಗಳೂರು11,37,96184,1317.393%1.271%
ಮಂಡ್ಯ18,05,76976,4974.236%1.155%
ಉಡುಪಿ11,77,36154,2564.608%0.819%
ಚಾಮರಾಜನಗರ10,20,79145,1654.424%0.682%
ದಕ್ಶಿಣ ಕನ್ನಡ20,89,64933,0451.581%0.499%
ಕೊಡಗು5,54,51916,3672.951%0.247%
C:\Users\DELL\Downloads\Distribution of Urdu .jpg

‍ಲೇಖಕರು Admin

27 October, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading