ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಕನ್ನಗೀ, ನಿನ್ನಂತೆ ನಾನಾಗಲ್ಲ ಬಿಡು’ – ರಶ್ಮಿ ಕಾಸರಗೋಡು

ರಶ್ಮಿ ಕಾಸರಗೋಡು ಕನ್ನಗೀ... ನಿನ್ನಂತೆ ನಾನಾಗಲ್ಲ ಬಿಡು ನಿನ್ನ ಬಿಟ್ಟು ಪರ ಹೆಣ್ಣ ಜತೆ ಮೈ ಮರೆತು ಆಡಿದ ಗಂಡನ ಕ್ಷಮಿಸಲಾರೆ ದೇಹವನೆ ಮಾರಿ ಬಂದವನಾತ ಹೊಟ್ಟೆ ಹಸಿವೆಂದಾಗ ತೊಟ್ಟ ಕಾಲಂದುಗೆಯನು ಕೊಟ್ಟು ಮಾರಿ ರೊಕ್ಕ ತಾ ಎಂದೆ ಹೊಟ್ಟೆ ಹಸಿವಾದಾಗಲಷ್ಟೇ ನಾನು ನೆನಪಾದೆನೇ? ಕೇಳಬಹುದಿತ್ತು ನೀನು ನಿನ್ನ ಯೌವನದ ದೇಹ ಹಸಿವ ನುಂಗಿ...

read more
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಮತ್ತು ’ಸರಿಗಮ’

ಕನ್ನಡದ ಹಾಸ್ಯ ಕಲಾವಿದೆಯರಲ್ಲಿ ಉಮಾಶ್ರೀ ನಂಬರ್ ಒನ್ : ಸರಿಗಮ ವಿಜಿ ಸಂಸಾರದಲ್ಲಿ ಸರಿಗಮ ನಾಟಕದಲ್ಲಿ ತಲೆ ತುಂಬಾ ಸೇವಂತಿಗೆ ಹೂ ಮುಡಿದು, ವಡವೆ ಹಾಕ್ಕೊಂಡು ರಂಗದ ಮೇಲೆ ಬಂದ ಹಳ್ಳಿ ಪೆದ್ದು ಹುಡಿಗಿ ಮಾಡ್ರನ್ ಆಗುವ ಹೆಂಡತಿಯ ಪಾತ್ರ ಉಮಾಶ್ರೀ ಅವರದ್ದು. ನವಿರು ಹಾಸ್ಯ ಮತ್ತು ಹೊಟ್ಟೆ ಹಿಂಡುವಷ್ಟು ನಗು ತರಿಸುವ ಸಂಭಾಷಣೆಯಿಂದ...

read more
'ಅಸ್ಮಿತಾ’ ಫೋಟೋ ಆಲ್ಬಂ

ಇತ್ತೀಚೆಗೆ ಬಿಡುಗಡೆಯಾದ ದೀಪಾ ಗಿರೀಶ್ ಅವರ ’ಅಸ್ಮಿತಾ’ ಸಂಭ್ರಮದ ಕೆಲವು ಚಿತ್ರಗಳು ’ಅವಧಿ’ ಓದುಗರಿಗಾಗಿ :   ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...

read more
ಶಾಂತಾ ನಾಗರಾಜ್ ಬರೆಯುವ ’ನಾರ್ಸಿಸ್’ ಕಥೆ

ತನ್ನ ಬಣ್ಣಿಸ ಬೇಡ ಶಾಂತಾ ನಾಗರಾಜ್ ಹಿಂದೆ ಗ್ರೀಕ್ ದೇಶದಲ್ಲಿ ’ನಾರ್ಸಿಸ್ ’ ಹೆಸರಿನ ಅತ್ಯಂತ ಚಲುವ ರಾಜಕುಮಾರನೊಬ್ಬ ಇದ್ದನಂತೆ. ಆತ ರಸ್ತೆಯಲ್ಲಿ ಹೋಗುತ್ತಿದ್ದರೆ ಜನ ತಾವು ಮಾಡುತ್ತಿದ್ದ ಕೆಲಸವನ್ನೂ ಮರೆತು, ತೆರೆದ ಬಾಯಿ ಬಿಟ್ಟುಕೊಂಡು ಅವನನ್ನೇ ನೋಡುತ್ತಾ ನಿಂತುಬಿಡುತ್ತಿದ್ದರಂತೆ. ನಾರ್ಸಿಸ್‍ಗೂ ತನ್ನ ಸೌಂದರ್ಯದ...

read more
’ಕವಿಯ ತಾಲೀಮು ಹವ್ಯಾಸಿಯ ಮರುಳು..’ – ಕಾವ್ಯಾ ಕಡಮೆ ನಾಗರಕಟ್ಟೆ

ಆ್ಯಷ್-ಟ್ರೇ ಕಾವ್ಯಾ ಕಡಮೆ ನಾಗರಕಟ್ಟೆ ಬೊಗಸೆಯೊಡ್ಡಿ ಬಳಿ ಕರೆವ ಅರಳು ಪುಷ್ಪದಲಿ ಖರೇ ಖರೇ ಹೂವೊಂದರಳಿ ನಿಂತರೂ ಸರಿ ಈ ಎದೆಯ ತುಂಬಾ ಭರಪೂರ ಉಷ್ಣ ಗೂಡು ಮೇಲೆ ಸಿಂಪಡಿಸೋ ಬೂದು ಬಣ್ಣದಿಬ್ಬನಿಮೋಡ ಶ್ವಾಸದುರಿಯಲಿ ನರಳಿದ ನೆರಳು ಎರಡೇ ಬೆರಳಂಚಲ್ಲಿ ಹಿಡಿವ ಜೀವ ತೂಗುವ ಸುರುಳಿ ಸುತ್ತಿದ ಸರಳು ಜ್ವಾಲೆಗಾನಿಸಿಕೊಂಡೇ ಇರಿವ...

read more
ಡೈಲಿ ಬುಕ್ : ಪ್ರಕಾಶ್ ಬಿ ಜಾಲಹಳ್ಳಿ ’ನಲವತ್ತು ಗಜ಼ಲ್‌ಗಳು’

ಕನಸಿಡಿದು ಧ್ಯಾನಕೆ ಕೂತ ಗಜಲ್ ಸಾಲುಗಳು - ರೇಣುಕಾ ಎ ಕಠಾರಿ ಗಜಲ್ ಅನ್ನು ಉರ್ದು ಕಾವ್ಯದ ಮುಕುಟವೆಂದು ಹಿಂದಿನಿಂದ ಕರೆಯುತ್ತಾ ಬಂದಿದ್ದಾರೆ, ಭಾರತೀಯ ಕಾವ್ಯ ಲೋಕದಲ್ಲಿಯೇ ಅತ್ಯಂತ ವಿಶಿಷ್ಟವಾದ ಪ್ರಕಾರವೆಂದು ಇದನ್ನು ಕರೆಯುವುದುಂಟು. ಕಾವ್ಯ ಮಾದ್ಯಮಕ್ಕೆ ಅತ್ಯಂತ ಸಶಕ್ತ ಸಂವಹನವುಳ್ಳುದ್ದು ಭಾಷೆ. ಜಾಗತಿಕ ಭಾಷೆಗಳಲ್ಲಿ ಉರ್ದು...

read more
ಸಾಮಾಜಿಕ ಎಚ್ಚರದ ಕೈಗನ್ನಡಿ 'ಅತೀತ' – ಎನ್ ಎಸ್ ಶ್ರೀಧರ ಮೂರ್ತಿ

- ಎನ್ ಎಸ್ ಶ್ರೀಧರ ಮೂರ್ತಿ ಸಾಮಾಜಿಕ ರಂಗದಲ್ಲಿ ಸಂವೇದನಾಶೀಲತೆ ಕಳೆದು ಹೋಗುತ್ತಿದೆ ಎನ್ನುವ ಆತಂಕ ಕಾಡುತ್ತಿರುವಂತೆಯೇ ಸಮುದಾಯದ ಸಾಕ್ಷಿಪ್ರಜ್ಞೆಯಾಗ ಬೇಕಿದ್ದ ಮಾಧ್ಯಮ ಕೂಡ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಈ ಹೊತ್ತಿನಲ್ಲಿ ತಮ್ಮ ಚಿಂತನಶೀಲ ನಾಟಕಗಳಿಂದ ಗಮನ ಸೆಳೆಯುತ್ತಾ...

read more
ಜ್ಷಾನ್ ಜ್ಷಿಯೋನೊ ಮತ್ತು ಸಾಲುಮರದ ತಿಮ್ಮಕ್ಕ – ಎಸ್ ದಿವಾಕರ್

ಎಸ್ ದಿವಾಕರ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಲಂಡನ್ನಿನ ಹಾರ್ವಿಲ್ ಪ್ರೆಸ್ ಎಂಬ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ 10-12 ಪುಟಗಳ ಒಂದು ಸಣ್ಣಕತೆಯನ್ನು ಸೊಗಸಾದ ಕೆಲವು ಚಿತ್ರಗಳ ಸಮೇತ ಪುಸ್ತಕ ರೂಪದಲ್ಲಿ ಪ್ರಕಟಿಸಿತ್ತು. ಫ್ರೆಂಚಿನಿಂದ ಅನುವಾದಗೊಂಡಿದ್ದ ಆ ಸಣ್ಣಕತೆಯ ಹೆಸರು 'ದಿ ಮ್ಯಾನ್ ಹೂ ಪ್ಲ್ಯಾಂಟೆಡ್ ಟ್ರೀಸ್'. ಉತ್ತಮ...

read more
'ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ಫೋಟೋ ಆಲ್ಬಂ

ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶನಗೊಂಡ ’ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕದ ಕೆಲವು ದೃಶ್ಯಗಳು ’ಅವಧಿ’ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...

read more
ಉಳಿದ ಆರ್ದ್ರತೆ ಮಾತ್ರ ನಿನ್ನದು…

ಬಿಟ್ಟು ಬಿಡು ಸಂತೆಬೆನ್ನೂರು ಫೈಜ್ನಟ್ರಾಜ್ ಎಕ್ಕಡದ ಪಾದ ಮುಳ್ಳ ಸರಿಸಿ ನಡೆಯುತಿದೆ ಸಾಲಿಗನ ಮುಖ ತಪ್ಪಿಸಿ ಓಡುವ ಕಳ್ಳ ಕಣ್ಣಂತೆ ಹರಿದ ನೀರದು ಮುಂದಿನ ಹೊಲದ ಪಾಲು ಉಳಿದ ಆರ್ದ್ರತೆ ಮಾತ್ರ ನಿನ್ನದು ಕಣ್ಣು ಕವಡೆ ಹಾಕಿ ಹಾಕಿ ಲೆಕ್ಕ ತಪ್ಪುತಿದೆ ಅಕ್ಷರಗಳ ಬರೆ ಬರೆದು ಅಳಿಸೋ ಮಗುವಿನಂತೆ! ನೆನಪುಗಳ ಚಾದರ ಹೊದ್ದ ಮನಸು ಹಳೆಯ ಹಾಡ...

read more
’ಮೌನ ಕಾಡಿದಷ್ಟು ಮಾತು ಕಾಡಲಾರದೇನೋ ?’ – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ ಅಮೇರಿಕಾ ಅಮೇರಿಕಾ ಸಿನೆಮಾದಲ್ಲಿ  ಒಂದು ಸಂಭಾಷಣೆ  ಇತ್ತು . ಅಮೆರಿಕಾಗೆ ಹೋದ ಸೂರ್ಯ ಅರ್ಥಾತ್ ರಮೇಶ್ , ಶಶಾಂಕ್ ನನ್ನು ಅರ್ಥಾತ್ ಅಕ್ಷಯ್ ಆನಂದನನ್ನು  ನಿನಗೆ  ಊರು  ನೆನಪಾಗುವುದಿಲ್ಲವೇನೋ ? ಎಂದು ಕೇಳುತ್ತಾನೆ. ಅದಕ್ಕೆ ಶಶಾಂಕ್ ‘ನಮ್ಮೂರಿನಲ್ಲಿ  ಹಳೇ ಪೇಪರ್  ಕಬ್ಬಿಣಾss... ಅಂತ ಬರ್ತಿದ್ನಲ್ಲ ಸಾಬಿ,...

read more
ಹೀಗೊಂದು ಚಾಳಿನ ಹಾಡು…

ಚಾಳ ಲಕ್ಷ್ಮಿಕಾಂತ ಇಟ್ನಾಳ್ ಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಕವಿಯೊಬ್ಬನಿದ್ದ, ನಿರುಪದ್ರವಿ, ತನ್ನೆಡೆಗೆ ಹೋದ ಮಕ್ಕಳಿಗೂ ಕವನ ಹಂಚುತ್ತಿದ್ದ, ಅವುಗಳನ್ನೋದುವಾಗ ಮಾತ್ರ ಭಾವುಕನಾಗುತ್ತಿದ್ದ, ಕಣ್ಣುಗಳಲ್ಲಿ ಕನಸುಗಳ ಲಗೋರಿ, ಪ್ರೇಮಲೋಕದ ಬುಗುರಿಯಾಗಿದ್ದ, ಕವನಗಳಿಗೆ ಮೆಚ್ಚಿ ಒಬ್ಬಳೂ, ಅವನ ಕೈಹಿಡಿಯಲಿಲ್ಲ! 'ರಗಡ'ಆಗಿತ್ತು...

read more
ಕಲಾಮ್ ರ ಅಭಿಮಾನಿ ಈ ದಿಲ್ಲಾನ

ಬಂದೇಸಾಬ ಮೇಗೇರಿ ಇವರಪ್ಪ ಶ್ರೀಮಂತನಲ್ಲ. ಬಡವನಂತೂ ಅಲ್ವೇ ಅಲ್ಲ. ಹೊಟ್ಟೆ ತುಂಬಾ ಊಟ ಮಾಡಿ ಮಲಗುವ ವಯಸ್ಸದು. ಲೋಕದ ಚಿಂತೆ ಇವನಿಗಿರಲಿಲ್ಲ. ಮುಂಜಾನೆ ಲೇಟಾಗಿ ಏಳುವುದು ಈತನ ಸ್ಟೈಲ್. ನೀಟಾಗಿ ಬಿಸ್ಕೆಟ್ ಚಹಾ ಹೀರಿ ಆಟಕ್ಕೆ ಹೋದನೆಂದರೆ ಮತ್ತೆ 9 ಗಂಟೆಗೆ ಬಂದು ಶಾಲೆಗೆ ಹೋಗುವುದು. ನಂತರ ಮಧ್ಯಾಹ್ನ ಊಟಕ್ಕೆ ಅಮ್ಮ ಮಾಡಿದ ಬಿಸಿ...

read more
ಆಷಾಡದ ಮಳೆ ಹನಿಗಳ ನಡುವೆ ಕಥೆ ಹುಟ್ಟುವ ಪರಿ – ಸತೀಶ್ ಚಪ್ಪರಿಕೆ

- ಸತೀಶ್ ಚಪ್ಪರಿಕೆ ಆಷಾಡದ ಮಳೆ, ದಟ್ಟ ಮೋಡಗಳು, ಬೀಸುವ ಗಾಳಿ, ಕೊರೆಯುವ ಚಳಿಗೂ ಕಥೆಗಳಿಗೂ ಏನು ಸಂಬಂಧ!? ಬೇರೆಯವರ ಪಾಲಿಗೆ ಇವುಗಳ ನಡುವೆ ಯಾವುದೇ ಸಂಬಂಧ ಕಾಣದೇ ಹೋಗಬಹುದು. ಆದರೆ ಕಳೆದ 25 ವರ್ಷಗಳ ಅವಧಿಯಲ್ಲಿ ನನ್ನೆದೆಯಲ್ಲಿ ಹುಟ್ಟಿದ ಪ್ರತಿಯೊಂದು ಕಥೆ ಕೂಡ (ಒಂದನ್ನು ಬಿಟ್ಟು) ಆಷಾಢದ ಮಳೆಗೆ ತಳುಕು ಹಾಕಿಕೊಂಡಿದೆ. 23...

read more
’ಸಿರಿ’ ನಾಟಕ ಫೋಟೋ ಆಲ್ಬಂ

ನಾ ದಾಮೋದರ ಶೆಟ್ಟಿ ಅವರು ರಚಿಸಿ, ಬಿ ಜಯಶ್ರೀ ಅವರು ನಿರ್ದೇಶಿಸಿದ ’ಸಿರಿ’ ನಾಟಕ ಎನ್ ಎಸ್ ಡಿ ಬೆಂಗಳೂರು ತಂಡದಿಂದ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಂದು ನಾಟಕದ ಕಡೆಯ ಪ್ರದರ್ಶನ. ನಾಟಕದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರ ಕೃಪೆ : ಸಮೂಹ...

read more
'ಆ ಕ್ಷಣಕ್ಕೆ ಬದುಕುವ ತತ್ವಜ್ಞಾನಿ ಸಂತೃಪ್ತ' – ಶೇಷಗಿರಿ ಜೋಡಿದಾರ್

ಜಿಗಣೆ ಶೇಷಗಿರಿ ಜೋಡಿದಾರ್ ಮಳೆಕಾಡವಾಸಿ ಮಳೆಗಾಲದಲಿ ಮಾತ್ರ, ಪಡೆಯುವ ಅಸ್ತಿತ್ವಕ್ಕೆ ಮಹತ್ವದ ಪಾತ್ರ ಅರೆನೀರ ಆವಾಸಿ, ರಕ್ತ ಪಿಪಾಸಿ. ಆದರೂ ಬಹು ಹೃದಯ ಶ್ರೀಮಂತ ನಿರಾಹಾರಿ ಸಾಮಂತ, ಸಂತ ಚಲಿಸುತ್ತಾನೆ ವಂಕಿಯಾಗಿ ಉರುಳುತ್ತಾ, ಸರಾಗ ತೇಲುತ್ತಾ, ತೆವಳುತ್ತ, ಒಮ್ಮೊಮ್ಮೆ ಮುಳುಗುತ್ತ ಪರಾರಿ ಹರಿಯುವ ಹಳ್ಳಗಳಲ್ಲಿ ಕುಡಿದು,...

read more
ದುರಂತ ನಾಯಕಿ ಮೀನಾಕುಮಾರಿ

-  ಎಚ್ ಎ ಪಾಟೀಲ ಮೊನ್ನೆ ರಾತ್ರಿ ಸರಿ ಸುಮಾರು 10 ಗಂಟೆಯ ಸಮಯ ಮಳೆ ಗಾಳಿಗಳ ಅಬ್ಬರದ ನಡುವೆ ಕತ್ತಲಾವರಿಸುತ್ತಿತ್ತು. ಬೆಳಗಿನಿಂದ ಇಲ್ಲವಾಗಿದ್ದ ಕರಂಟ್ ತನ್ನ ಅಸ್ತಿತ್ವ ತೋರಿಸಿ ಮರೆಯಾಗಿತ್ತು. ಓದಲು ಚಿಮಣಿಯ ಬೆಳಕು ಸಾಲದು ಎಂದು ಗೋಕಾಕರ 'ಭಾರತ ಸಿಂಧು ರಶ್ಮಿಯ' ಎರಡನೆಯ ಭಾಗವನ್ನು ಮಡಿಚಿಟ್ಟು ಪಕ್ಕದಲ್ಲಿದ್ದ...

read more
ಆದರೂ ನಿರ೦ತರ, ಮರಳಿ ಮಣ್ಣಿಗೆ, ಮರಳಿ ಭೂಮಿಗೆ!

ಚಿರ೦ತನ ಜಯಶ್ರೀ ದೇಶಪಾಂಡೆ ದೂರದ ಲೋಕಕ್ಕೆ ಚಲಿಸುತಿವೆ ಇಲ್ಲಿ ಬೆಳಗುವ ದೀಪಗಳು, ದಾರಿ ಹುಡುಕುವ ಯತ್ನದಲ್ಲಿ ಭೂಮಿಯ ಬೀಳ್ಕೊಟ್ಟು, ಯುಗಯುಗಾ೦ತರಗಳಿ೦ದ... ಕಣ್ಣು ಕ೦ಡಿಲ್ಲದ ಲೋಕಕ್ಕೆ.!.ಅತ್ತ ಚಲಿಸಿದ ಚೇತನಗಳು ನಡುನಭದಲ್ಲಿ ಮಾಯವಾಗುತಿರುವುದೆಲ್ಲಿ? ತಿಳಿಯದ ಹೊಳೆಯದ ಈ ಸಮಯದಲ್ಲಿ ವ್ಯೋಮದಿ೦ದಿಳಿದ ದಿವ್ಯಧನು ಅತ್ತಣಿ೦ದಿತ್ತ...

read more
ಎಸ್ ಜಿ ಶಿವಶಂಕರ್ ಬರೆದ ಸಣ್ಣಕಥೆ ’ಆಡಂ ಮತ್ತು ಈವ್’

  ಎಸ್ ಜಿ ಶಿವಶಂಕರ್ ರಚ್ಚೆ ಹಿಡಿದ ಮಗುವಿನಂತೆ ಒಂದೇ ಸಮನೆ ಜಿಟಿಜಿಟಿ ಸೋನೇ ಮಳೆ! ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿತ್ತು. ಮೈಕೊರೆಯುವ ಚಳಿಗಾಳಿ ಮಳೆಗೆ ಸಾಥ್ ನೀಡಿತ್ತು. ನಡು ರಾತ್ರಿ ಮೀರಿದರೂ ಅವಿನಾಶ ಬಹಳ ಹೊತ್ತು ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದ. ಅವನಿಗೆ ಬೇಕಾದ...

read more

Pin It on Pinterest

Share This