ಕಥೆ ಕದ್ದಿದ್ದಾರೆ ರಾಜಮೌಳಿ..

 

1779971_10202830521997281_2107307600_n

ಕೆ ಪುಟ್ಟಸ್ವಾಮಿ

ಮೂಕಿಯುಗದ ಅಮೆರಿಕ ಸಿನಿಮಾದ ತಾರೆಯರಲ್ಲಿ ಬಸ್ಟರ್ ಕೀಟನ್ ಒಬ್ಬರು. ಕೆಲವರು ಆತನನ್ನು ಚಾರ್ಲಿ imagesಚಾಪ್ಲಿನ್‍ಗಿಂತ ಮೇರುನಟ ಎಂದೂ ಹೇಳುತ್ತಾರೆ. ಸಿಟ್‍ಕಾಂ (ಸಿಚುಯೆಷನ್ ಕಾಮಿಡಿ- ಹಾಸ್ಯಮಯ ಸಂದರ್ಭಗಳನ್ನೇ ಜೋಡಿಸಿದ ಸಿನಿಮಾ ಎನ್ನಬಹುದೆನೋ) ಪ್ರಕಾರದ ಸಿನಿಮಾಗಳಲ್ಲಿ ಆತನೂ ಪ್ರಖ್ಯಾತಿ ಗಳಿಸಿದ್ದವನೇ. ಆದರೆ ಚಾಪ್ಲಿನ್ ಪ್ರಭೆಯಲ್ಲಿ ಆತ ಅಮೆರಿಕದಿಂದಾಚೆಗೆ ಪರಿಚಯವಾಗಿದ್ದು ಕಡಿಮೆ.

ನಾನು ಚಾಪ್ಲಿನ್ ಮತ್ತು ಆತ ‘ಲೈಂ ಲೈಟ್’ ಚಿತ್ರದ ಕೊನೆಯ ದೃಶ್ಯದಲ್ಲಿ ಒಟ್ಟ್ಆಗಿ ನಟಿಸಿದ್ದ ಚಿತ್ರವನ್ನು ಬಿಟ್ಟರೆ ಕೀಟನ್‍ನ ಕೆಲವು ಕಿರುಚಿತ್ರಗಳನ್ನು ಮಾತ್ರ ನೋಡಿದ್ದೆ. ಭಾನುವಾರ ಅವನ ಹಳೆಯ ಕಥಾ ಚಿತ್ರಗಳನ್ನು ನೋಡಲು ನಿರ್ಧರಿಸಿ ‘ಅವರ್ ಹಾಸ್ಪಿಟಾಲಿಟಿ ‘ ಎಂಬ ಕಥಾಚಿತ್ರವನ್ನು ನೋಡುತ್ತಾ ಆನಂದಿಸುತ್ತಾ ಹೋದಂತೆ ಇದನ್ನು ಈಗಾಗಲೇ ಎಲ್ಲಿಯೋ ನೋಡಿದ ಹಾಗಿದೆಯಲ್ಲ ಎಂದು ತಲೆಕೆರುದುಕೊ12140620_10207145983561123_8425145887182567294_nಳ್ಳುತ್ತುದ್ದಾಗ ಹೊಳೆಯಿತು- 2010ರಲ್ಲಿ ನಮ್ಮ ತೆಲುಗಿನ ಸ್ಟಾರ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಅವರು ತಮ್ಮದೇ ಕತೆಯೆಂದು ಹೊಸೆದ ‘ಮರ್ಯಾದ ರಾಮನ್ನ’ ಚಿತ್ರ ಇದರ ನಕಲೆಂದು.

ವೆಸ್ಟ್ ವರ್ಜೀನಿಯಾದ ಎರಡು ಕುಟುಂಬಗಳ ದ್ವೇ಼ಷದ ಕಥೆಯನ್ನು ಇಲ್ಲಿನ ರಾಯಲಸೀಮೆಗೆ ತಂದು ಒಗ್ಗಿಸಿದ್ದಾರೆ.

ಉಳಿದಂತೆ 1923ರಲ್ಲಿ ಬಿಡುಗಡೆಯಾದ ಅವರ್ ಹಾಸ್ಪಿಟಾಲಿಟಿ ಕತೆ, ಆಶಯ, ನಾಯಕ- ನಾಯಕಿಯರ ಪ್ರಣಯ, ಅತಿಥಿಯನ್ನು ಮನೆಯಲ್ಲಿ 12106834_10207145984201139_3400229990687247948_nಕೊಲ್ಲಬಾರದೆಂಬ ನಿಯಮ, ನಾಯಕ ಮನೆಯಿಂದಾಚೆಗೆ ಹೋದಾಗ ಕೊಲ್ಲಲು ಹೂಡುವ ಉಪಾಯ ಎಲ್ಲವೂ 2010ರ ಮರ್ಯಾದ ರಾಮನ್ನ ಚಿತ್ರದಲ್ಲಿ ರಿಪೀಟ್ ಆಗಿವೆ. ರಾಜಮೌಳಿಯವರು ಕತೆ ತಮ್ಮದೆಂದು ಹೇಳಿಕೊಂಡಿದ್ದಾರೆ.

ನಮ್ಮ ದಡ್ಡ ಕನ್ನಡಿಗರು ದುಡ್ಡ ತೆತ್ತು ಕದ್ದ ಕತೆಯ ಹಕ್ಕು ಪಡೆದು ಕೋಮಲ್ ನಾಯಕತ್ವದಲ್ಲಿ ‘ಮರ್ಯಾದೆ ರಾಮಣ್ಣ” ಚಿತ್ರ ನೀಡದರು. ಚಿತ್ರರಂಗ ಮಾಯಾ ಪ್ರಪಂಚ ಅನ್ನೋದೆನೂ ಹುಡುಗಾಟಕ್ಕಲ್ಲ. ಯಾರದೋ ಕತೆಯನ್ನು ತನ್ನದೆಂದು ಹೇಳಿಕೊಳ್ಳುವ ಭಂಡತನ, ಅದನ್ನು ಒಪ್ಪಿ ಹಕ್ಕು ಪಡೆಯುವ ಹುಂಬತನ ನನಮ್ಮ ಚಿತ್ರರಂಗಕ್ಕಲ್ಲದೆ ಬೇರೆಲ್ಲಿ ಸಾಧ್ಯ?

‍ಲೇಖಕರು admin

October 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಜೀಯೆನ್ಕೆ

    ವಿಕಿಪೀಡಿಯಾದಲ್ಲಿ ನೋಡಿದ್ರೆ ಗೊತ್ತಾಗುತ್ತೆ ಇದು ಅವರ್ ಹಾಸ್ಪಿಟಾಲಿಟಿ ಸಿನಿಮಾದ ಅಡಾಪ್ಟೇಶನ್ ಅಂತ…
    ಇದನ್ನ ರಾಜಮೌಳಿಯವರೇ ಹೇಳಿದಂತೆ ನೆನಪು.

    ನಿಮಗೆ ಸಾಧ್ಯಾನಾ ಯಾವ್ದೋ ದೇಶದ ಸಿನಿಮಾನ ಭಾರತದ ನೇಟಿವಿಟೀ ಗೆ ಹೊಂದಿಸೋಕೆ?
    ಒಬ್ಬ ಕಾಮೆಡಿಯನ್ ನ ಹೀರೊ ಮಾಡಿದಾರೆ ಸ್ವಾಮಿ..

    ಇನ್ನು, ಮುಖ್ಯ ವಿಷಯ ಅಂದ್ರೆ, ಈ ರಾಜಮೌಳಿಯವರ ಸಿನಿಮಾನ 5 ಭಾರತೀಯ ಭಾಷೆಗಳಲ್ಲಿ ರೀಮೇಕ್ ಮಾಡಿದ್ದಾರೆ ಇದುವರೆಗೆ.. 😀 😀

    ನೀವಿನ್ನೊ ಅನೌನ್ಸ್ ಮಾಡೋದ್ರಲ್ಲಿದೀರಾ “ರಾಜಮೌಳಿ ಕಥೆ ಕದ್ದಿದ್ದಾರೆ” ಅಂತ!! 😀 😀 😀

    ಪ್ರತಿಕ್ರಿಯೆ
    • ಜೀಯೆನ್ಕೆ

      Wikipedia:
      Maryada Ramanna is a 2010 Telugu comedy thriller film directed by S. S. Rajamouli starring Sunil and Saloni Aswani in lead roles. This film is an adaptation of Buster Keaton’s 1923 film, Our Hospitality. The film opened to favourable reviews by critics.

      Remakes
      Maryada Ramanna —- Telugu (2010)
      Maryade Ramanna — Kannada (2011)
      Faande Poriya Boga Kaande Re — Bengali (2011)
      Son of Sardaar—Hindi (2012)
      Vallavanukku Pullum Aayudham—-Tamil (2014)
      Ivan Maryadaraman—-Malayalam (2015)

      ಪ್ರತಿಕ್ರಿಯೆ
  2. ಜೋಗಿ

    ಪುಟ್ಟಸ್ವಾಮಿಯವರು ಅವರ್ ಹಾಸ್ಪಿಟಾಲಿಟಿಯನ್ನು ಮೊನ್ನೆ ಮೊನ್ನೆ ನೋಡಿದ್ದರಿಂದ ಅವರಿಗೆ ಸಿಟ್ಟು ಬಂದಿರಬಹುದು. ಆ ಸಿಟ್ಟಲ್ಲಿ ಅವರು ‘ನಮ್ಮ ದಡ್ಡ ಕನ್ನಡಿಗರು ದುಡ್ಡ ತೆತ್ತು ಕದ್ದ ಕತೆಯ ಹಕ್ಕು ಪಡೆದು ಕೋಮಲ್ ನಾಯಕತ್ವದಲ್ಲಿ ‘ಮರ್ಯಾದೆ ರಾಮಣ್ಣ” ಚಿತ್ರ ನೀಡದರು. ಚಿತ್ರರಂಗ ಮಾಯಾ ಪ್ರಪಂಚ ಅನ್ನೋದೆನೂ ಹುಡುಗಾಟಕ್ಕಲ್ಲ. ಯಾರದೋ ಕತೆಯನ್ನು ತನ್ನದೆಂದು ಹೇಳಿಕೊಳ್ಳುವ ಭಂಡತನ, ಅದನ್ನು ಒಪ್ಪಿ ಹಕ್ಕು ಪಡೆಯುವ ಹುಂಬತನ ನನಮ್ಮ ಚಿತ್ರರಂಗಕ್ಕಲ್ಲದೆ ಬೇರೆಲ್ಲಿ ಸಾಧ್ಯ?’ ಎಂದೆಲ್ಲ ಮಾತಾಡಿದ್ದಾರೆ.
    ಸತ್ಯ ಏನಪ್ಪಾ ಅಂದರೆ,
    1. ಮರ್ಯಾದಾ ರಾಮಣ್ಣ ಚಿತ್ರಕ್ಕೆ ಅವರ್ ಹಾಸ್ಪಿಟಾಲಿಟಿಯೇ ಸ್ಪೂರ್ತಿ ಎಂದು ರಾಜಮೌಳಿ ಅಂದೇ ಹೇಳಿದ್ದರು. ಅದನ್ನು ನಮ್ಮ ಪತ್ರಿಕೆಯಲ್ಲಿ ಕೋಮಲ್ ಅವರ ಮರ್ಯಾದಾ ರಾಮಣ್ಣ ಮುಹೂರ್ತ ಸಂದರ್ಭದಲ್ಲಿ ಬರೆದಿದ್ದೆವು.
    2. ಮರ್ಯಾದಾ ರಾಮಣ್ಣ ಚಿತ್ರದ ಕತೆಯ ಕ್ರೆಡಿಟ್ ರಾಜಮೌಳಿ ಹೆಸರಲ್ಲಿಲ್ಲ. ಕತೆಗಾರನ ಹೆಸರು ಟೈಟಲ್ ಕಾರ್ಡಿನಲ್ಲಿ ಎಸ್ ಎಸ್ ಕಂಚಿ ಎಂದಿದೆ.
    3. ಕನ್ನಡ, ಹಿಂದಿ, ತಮಿಳು, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಿಗೆ ಮರ್ಯಾದಾ ರಾಮಣ್ಣ ರೀಮೇಕ್ ಆಗಿದೆ.
    4. ಮಗಧೀರ ಚಿತ್ರ ಇನ್ನೊಂದೆರಡು ವರ್ಷ ತೆಗೆದುಕೊಳ್ಳುತ್ತದೆ. ಆ ಭಾರ ಮತ್ತು ಸುಸ್ತಿನಿಂದ ಹೊರಬರಲು ಒಂದು ತಮಾಷೆ ಸಿನಿಮಾ ಮಾಡಲು ನಿರ್ಧರಿಸಿದೆ. ಆಗ ಈ ಕತೆಯನ್ನು ನನಗೆ ಹೇಳಿದರು. ನಾನು ಒಪ್ಪಿಕೊಂಡೆ ಅಂತ ರಾಜಮೌಳಿ ಹೇಳಿಕೊಂಡಿದ್ದಾರೆ.

    ದಡ್ಡ ಕನ್ನಡಿಗರು ಎಂದು ಹೇಳುವ ಮೊದಲು, ಕೊಂಚ ವಿಚಾರ ಮಾಡುವುದು ಒಳ್ಳೆಯದು ಎಂಬ ಕಾರಣಕ್ಕೆ ನಾನಿದನ್ನೆಲ್ಲ ಹೇಳಿದೆ. ನೀವು ದಡ್ಡರೆಂದು ಕರೆಯುವ ಕನ್ನಡಿಗರು ಈ ಚಿತ್ರ ಕನ್ನಡದಲ್ಲಿ ಬಂದಾಗ ಅದನ್ನು ದಯನೀಯವಾಗಿ ಸೋಲಿಸಿದ್ದರು ಕೂಡ. ಪ್ರಚಾರದ ಖರ್ಚೂ ಕೂಡ ಹುಟ್ಟದ ಚಿತ್ರವೆಂದು ಕರೆಸಿಕೊಂಡ ಇದು, ಕೋಮಲ್ ಅವನತಿಯ ಮೆಟ್ಟಲಲ್ಲಿ ಒಂದೆಂಬಂತೆ ಪರಿಗಣಿತವಾಗಿದೆ.

    ಪ್ರತಿಕ್ರಿಯೆ
  3. ಎಸ್.k

    ದಿನಕ್ಕೆ ಎರಡು ಮೂರು ಚಿತ್ರ ರಿಲೀಸ್ ಆಗೋ ಈ ಕಾಲದಲ್ಲಿ. ಒ೦ದಲ್ಲ ಒ೦ದು ಅ೦ಶ ಸೇಮ್ ಇರುತ್ತೆ, ಕಥೆಗಿ೦ತ ರಾಜಮೌಳಿ ಮೇಕಿ೦ಗ್ ನೋಡಬಹುದು. ಎಲ್ಲ ಇ೦ಗ್ಲೀಶ್ ಸಿನೆಮಾವನ್ನು ಬಿಡದೆ ಯಾರು ನೋಡುವುದಕ್ಕೆ ಆಗೋದಿಲ್ಲ.

    ಪ್ರತಿಕ್ರಿಯೆ
  4. ೩ಋಖಾರಿ

    ಅಯ್ಯೋ ಬೆಕ್ಕಮ್ಮಗಳಿರಾ, ರಾಜಮೌ‌‍ಳಿಯ ಮರ್ಯಾದೆಗೂ ಮುಂಚೆಯೇ ಇದೇ ಕತೆಯನ್ನ ಎಸ್ನಾರಾಯಣ್ಣ ಬಲಗಾಲಿಟ್ಟು ಒಳಗೆ ಬಾ ಅಂತ ಕರಕಂಬಂದಿದ್ದು ಗೊತ್ತಿಲ್ವೇ? ಹಾ…ಡೆಂದರೆ…

    ಪ್ರತಿಕ್ರಿಯೆ
  5. Raj

    DInesh Babu’s movie, starring S. Narayan & Chaya Singh is probably the first Indian adaptation, which was silently remade in Telugu by attributing the credits to Hollywood movie so he doesn’t have to pay for remake rights.
    But this proves Kannadiags are still fools!
    Most movies from Tamil/Telugu/Malayalam are also copied/inspired, but they are so smart that their source will hardly be found, since they copy from old Hollywood, French, Italian, Korean etc. movies. But since we are lazy Kannadigaru, we just pay for remake rights & buy that story to make it in Kannada again!!!!!!!!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: