'ರಾಜಮೌಳಿ ಅಂದೇ ಹೇಳಿದ್ದರು..' ಅಂತಾರೆ ಜೋಗಿ

ರಾಜಮೌಳಿ ಕಥೆ ಕದ್ದಿದ್ದಾರೆ ಎಂಬ ಅನಿಸಿಕೆ ನಿನ್ನೆ ಅವಧಿಯಲ್ಲಿ ಪ್ರಕಟವಾಗಿತ್ತು

ಅದಕ್ಕೆ ಸಂಬಂಧಿಸಿದ ಎರಡು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡುತ್ತಿದ್ದೇವೆ. 

ರಾಜಮೌಳಿಯವರು ‘ಮರ್ಯಾದ ರಾಮನ್ನ’ ಕತೆ ತಮ್ಮದೆಂದು ಹೇಳಿಕೊಂಡಿದ್ದಾರೆ ಎಂದು ಕೆ ಪುಟ್ಟಸ್ವಾಮಿ ಅಭಿಪ್ರಾಯಪಟ್ಟಿದ್ದರು.

ಅದು ಇಲ್ಲಿದೆ . ಕ್ಲಿಕ್ಕಿಸಿ 

jogi

ಜೋಗಿ 

ಪುಟ್ಟಸ್ವಾಮಿಯವರು ಅವರ್ ಹಾಸ್ಪಿಟಾಲಿಟಿಯನ್ನು ಮೊನ್ನೆ ಮೊನ್ನೆ ನೋಡಿದ್ದರಿಂದ ಅವರಿಗೆ ಸಿಟ್ಟು ಬಂದಿರಬಹುದು. ಆ ಸಿಟ್ಟಲ್ಲಿ ಅವರು ‘ನಮ್ಮ ದಡ್ಡ ಕನ್ನಡಿಗರು ದುಡ್ಡ ತೆತ್ತು ಕದ್ದ ಕತೆಯ ಹಕ್ಕು ಪಡೆದು ಕೋಮಲ್ ನಾಯಕತ್ವದಲ್ಲಿ ‘ಮರ್ಯಾದೆ ರಾಮಣ್ಣ” ಚಿತ್ರ ನೀಡದರು. ಚಿತ್ರರಂಗ ಮಾಯಾ ಪ್ರಪಂಚ ಅನ್ನೋದೆನೂ ಹುಡುಗಾಟಕ್ಕಲ್ಲ. ಯಾರದೋ ಕತೆಯನ್ನು ತನ್ನದೆಂದು ಹೇಳಿಕೊಳ್ಳುವ ಭಂಡತನ, ಅದನ್ನು ಒಪ್ಪಿ ಹಕ್ಕು ಪಡೆಯುವ ಹುಂಬತನ ನನಮ್ಮ ಚಿತ್ರರಂಗಕ್ಕಲ್ಲದೆ ಬೇರೆಲ್ಲಿ ಸಾಧ್ಯ?’ ಎಂದೆಲ್ಲ ಮಾತಾಡಿದ್ದಾರೆ.

rajamouliಸತ್ಯ ಏನಪ್ಪಾ ಅಂದರೆ,
1. ಮರ್ಯಾದಾ ರಾಮಣ್ಣ ಚಿತ್ರಕ್ಕೆ ಅವರ್ ಹಾಸ್ಪಿಟಾಲಿಟಿಯೇ ಸ್ಪೂರ್ತಿ ಎಂದು ರಾಜಮೌಳಿ ಅಂದೇ ಹೇಳಿದ್ದರು. ಅದನ್ನು ನಮ್ಮ ಪತ್ರಿಕೆಯಲ್ಲಿ ಕೋಮಲ್ ಅವರ ಮರ್ಯಾದಾ ರಾಮಣ್ಣ ಮುಹೂರ್ತ ಸಂದರ್ಭದಲ್ಲಿ ಬರೆದಿದ್ದೆವು.
2. ಮರ್ಯಾದಾ ರಾಮಣ್ಣ ಚಿತ್ರದ ಕತೆಯ ಕ್ರೆಡಿಟ್ ರಾಜಮೌಳಿ ಹೆಸರಲ್ಲಿಲ್ಲ. ಕತೆಗಾರನ ಹೆಸರು ಟೈಟಲ್ ಕಾರ್ಡಿನಲ್ಲಿ ಎಸ್ ಎಸ್ ಕಂಚಿ ಎಂದಿದೆ.
3. ಕನ್ನಡ, ಹಿಂದಿ, ತಮಿಳು, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಿಗೆ ಮರ್ಯಾದಾ ರಾಮಣ್ಣ ರೀಮೇಕ್ ಆಗಿದೆ.
4. ಮಗಧೀರ ಚಿತ್ರ ಇನ್ನೊಂದೆರಡು ವರ್ಷ ತೆಗೆದುಕೊಳ್ಳುತ್ತದೆ. ಆ ಭಾರ ಮತ್ತು ಸುಸ್ತಿನಿಂದ ಹೊರಬರಲು ಒಂದು ತಮಾಷೆ ಸಿನಿಮಾ ಮಾಡಲು ನಿರ್ಧರಿಸಿದೆ. ಆಗ ಈ ಕತೆಯನ್ನು ನನಗೆ ಹೇಳಿದರು. ನಾನು ಒಪ್ಪಿಕೊಂಡೆ ಅಂತ ರಾಜಮೌಳಿ ಹೇಳಿಕೊಂಡಿದ್ದಾರೆ.

ದಡ್ಡ ಕನ್ನಡಿಗರು ಎಂದು ಹೇಳುವ ಮೊದಲು, ಕೊಂಚ ವಿಚಾರ ಮಾಡುವುದು ಒಳ್ಳೆಯದು ಎಂಬ ಕಾರಣಕ್ಕೆ ನಾನಿದನ್ನೆಲ್ಲ ಹೇಳಿದೆ. ನೀವು ದಡ್ಡರೆಂದು ಕರೆಯುವ ಕನ್ನಡಿಗರು ಈ ಚಿತ್ರ ಕನ್ನಡದಲ್ಲಿ ಬಂದಾಗ ಅದನ್ನು ದಯನೀಯವಾಗಿ ಸೋಲಿಸಿದ್ದರು ಕೂಡ. ಪ್ರಚಾರದ ಖರ್ಚೂ ಕೂಡ ಹುಟ್ಟದ ಚಿತ್ರವೆಂದು ಕರೆಸಿಕೊಂಡ ಇದು, ಕೋಮಲ್ ಅವನತಿಯ ಮೆಟ್ಟಲಲ್ಲಿ ಒಂದೆಂಬಂತೆ ಪರಿಗಣಿತವಾಗಿದೆ.

12106834_10207145984201139_3400229990687247948_nಜೀಯೆನ್ಕೆ ಪ್ರಕಾರ –

Wikipedia:
Maryada Ramanna is a 2010 Telugu comedy thriller film directed by S. S. Rajamouli starring Sunil and Saloni Aswani in lead roles. This film is an adaptation of Buster Keaton’s 1923 film, Our Hospitality. The film opened to favourable reviews by critics.

Remakes
Maryada Ramanna —- Telugu (2010)
Maryade Ramanna — Kannada (2011)
Faande Poriya Boga Kaande Re — Bengali (2011)
Son of Sardaar—Hindi (2012)
Vallavanukku Pullum Aayudham—-Tamil (2014)
Ivan Maryadaraman—-Malayalam (2015)

‍ಲೇಖಕರು admin

October 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Raj

    DInesh Babu’s movie, starring S. Narayan & Chaya Singh is probably the first Indian adaptation, which was silently remade in Telugu by attributing the credits to Hollywood movie so he doesn’t have to pay for remake rights.
    But this proves Kannadiags are still fools!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: