ಬ್ರೇಕಿಂಗ್ ನ್ಯೂಸ್ : ಕೊನೆಗೂ ಮಣಿದ ಸಾಹಿತ್ಯ ಅಕಾಡೆಮಿ, ಕಲಬುರ್ಗಿ ಹತ್ಯೆ ಖಂಡಿಸಿ ನಿರ್ಣಯ

ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಇಂತಹ ಗಂಭೀರ ಪ್ರಕರಣಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಇಂದು ಒಮ್ಮತದ ನಿರ್ಣಯವನ್ನು ಕೈಗೊಂಡಿತು.
ಕಲಬುರ್ಗಿ ಅವರ ಹತ್ಯೆಯಾದರೂ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ಪಂದಿಸಿಲ್ಲ ಹಾಗೂ ದೇಶಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಬೀಳುತ್ತಿದ್ದರೂ ಮೌನವಾಗಿದೆ ಎಂದು ಖಂಡಿಸಿ ದೇಶಾದ್ಯಂತ ಹಲವಾರು ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಹಲವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು.
ದೇಶಾದ್ಯಂತ ಗಂಭೀರವಾಗಿ ಹಬ್ಬುತ್ತಿದ್ದ ಪ್ರಶಸ್ತಿ ವಾಪಸ್ ಹಾಗೂ ರಾಜಿನಾಮೆ ಪ್ರಕರಣಗಳಿಂದ ಕಂಗೆಟ್ಟ ಅಕಾಡೆಮಿ ಇಂದು ಕಾರ್ಯಕಾರಿ ಮಂಡಳಿ ಸದಸ್ಯರ ವಿಶೇಷ ಸಭೆಯನ್ನು ನಡೆಸಿತು. ಕಾರ್ಯಕಾರಿ ಮಂಡಳಿ  ರಾಜಿನಾಮೆ ನೀಡಿದ ನಾಲ್ವರು ಸದಸ್ಯರನ್ನು ಹೊರತುಪಡಿಸಿ ೨೦ ಮಂದಿ ಹಾಜರಿದ್ದರು. ಹತ್ಯೆಯ ಬಗ್ಗೆ ಖಂಡನಾ ನಿರ್ಣಯ ಅಂಗೀಕರಿಸಿದ ತಕ್ಷಣವೇ ಪ್ರಶಸ್ತಿ ವಾಪಸ್ ನೀಡಿದವರು ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಇನ್ನೊಂದು ನಿರ್ಣಯದಲ್ಲಿ ಒತ್ತಾಯಿಸಲಾಯಿತು.
ಇದಲ್ಲದೆ ಡಿಸೆಂಬರ್ 17 ರಂದು ಸಾಹಿತ್ಯ ಅಕಾಡೆಮಿಯ ಸರ್ವ ಸದಸ್ಯರ ಸಭೆ ಜರುಗಲಿದ್ದು ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಬಗ್ಗೆ ಅವಲೋಕನ ನಡೆಸಲಾಗುವುದು ಎಂದು ಅಕಾಡೆಮಿ ಹೇಳಿದೆ.
ಈ ಮಧ್ಯೆ ಸಭೆ ಆರಂಭಕ್ಕೂ ಮುನ್ನ ಸಫ್ದರ್ ಹಶ್ಮಿ ಮಾರ್ಗ್ ನಿಂದ ಸಾಹಿತ್ಯ ಅಕಾಡೆಮಿ ಕಚೇರಿಯವರೆಗೆ ಸಾಹಿತಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ದೇಶಾದ್ಯಂತ ಆಗಮಿಸಿದ್ದ ಸಾಹಿತಿಗಳು ಕಪ್ಪು ಪಟ್ಟಿ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

protest kalburgi delhi4

protest kalburgi delhi1

protest kalburgi delhi2

protest kalburgi delhi5

protest kalburgi delhi3

Sahitya Akademi condemns MM Kalburgi’s murder, appeals to writers to take back awards

At least 35 writers including Nayantara Sahgal, Ashok Vajpeyi, Uday Prakash, Keki N Daruwallah, K Veerabhadrappa had returned their Akademi awards

At an emergency meeting held in the wake of the writers’ protest, the literary body also appealed to the members who have stepped down to take back their resignations.

“The Akademi strongly condemns the killing of writer Kalburgi and appeals to the state and central government to take steps to prevent such incidents in the future,” Krishnaswamy Nachimuthu, an executive committee board member said, after the nearly two-hour meeting.

Today’s meeting was attended by 20 out of 24 executive council members of the Akademi, according to Huirem Behari Singh, another Executive Committee Board member.

K Satchidanandan, who had resigned from all positions in the Sahitya Akademi stating that it “failed in its duty to stand with the writers and to uphold freedom of expression guaranteed by the Constitution”, did not attend today’s meeting.

“All writers stand together in their unanimous decision to condemn the killings,” Nachimuthu said.

On the writers’ demand for condemnation of “rising intolerance”, he said, “Yes, we have have addressed that too,” adding that the Akademi would be issuing a detailed statement soon.

The Akademi’s Board meeting will be held on December 17, where it will further discuss the situation arising out of the returning of awards.

At least 35 writers including Nayantara Sahgal, Ashok Vajpeyi, Uday Prakash, Keki N Daruwallah, K Veerabhadrappa had returned their Akademi awards, and five writers had stepped down from official positions of the literary body, which in turn has convened an emergency meeting today to discuss the developments.

Earlier in the day, with black gags and arm bands, writers and their supporters held a solidarity march here ahead of the Akademi’s meeting.

Another group held a counter-protest, alleging that the move by authors to return awards was “motivated by their vested interests” and the literary body should not buckle under “pressure”

 

‍ಲೇಖಕರು admin

October 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸುಧಾ ಚಿದಾನಂದಗೌಡ

    thank god, at last…..!
    yes, this is what should have been done the day Kalburgi was killed.

    ಪ್ರತಿಕ್ರಿಯೆ
  2. ravi tripathi

    hope u will listen this video. It will answer u about selective protest
    I m agree with u upto certain extent not on complete basis.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: