ಜಮೀಲ್ ಗೆ ಮಾತ್ರ ಈ ಥರ ತಲೆ ಓಡಿಸಲು ಸಾಧ್ಯ..

ಜಮೀಲ್ ಗೆ ಬರೀ ಕೆಲಸ ಮಾಡಿದರೆ ಮಾತ್ರ ಸಾಲದು, ಅಚ್ಚುಕಟ್ಟಾಗಿ ಮಾಡಬೇಕು. ಅಚ್ಚುಕಟ್ಟಾಗಿ ಮಾಡಿದರೆ jameelಮಾತ್ರ ಸಾಲದು different ಆಗಿ ಮಾಡಬೇಕು. ಜಮೀಲ್ ಎಸ್ ಎಚ್ ಹಾಗಾಗಿ ಹುಟ್ಟು ಹಾಕಿದ್ದು ಸಾವನ್ನ ಪ್ರಕಾಶನವನ್ನ.

ಪ್ರಕಾಶನ ಮಾಡುವುದು ಸುಲಭ ಆದರೆ different ಆಗಿ ಮಾಡುವುದಕ್ಕೆ ಒಳಗೆ ಗುದ್ದಿಕೊಂಡು ಬರುವ ಕನಸುಗಳಿರಬೇಕು. ಅಂತಹ ಕನಸುಗಳ ಒಂದು ಲೋಕವನ್ನೇ ಹೊತ್ತವರು ಜಮೀಲ್. ಅವರು ಪುಸ್ತಕ ಪ್ರಕಟಿಸುವ ರೀತಿ, ಅದರ ಬಿಡುಗಡೆಯ style,  ಅವರ ತಂಡದ smartness, ಜೊತೆಗೆ ಪುಸ್ತಕ ಮಾರಾಟಕ್ಕಾಗಿ ರೂಪಿಸುವ ಮಳಿಗೆ, ಪುಸ್ತಕ ಬಿಡುಗಡೆ ಮಾಡಲು ಬಳಸುವ ವಿಧಾನ, ಅತಿಥಿಗಳಿಗೆ ನೀಡುವ ಗಿಫ್ಟ್, ಪುಸ್ತಕದ ಪ್ರೊಮೊಶನ್ ಗೆ ನೀಡುವ ಸೃಜನಶೀಲ ಟಚ್.. ಎಲ್ಲವೂ ಜಮೀಲ್ ಮಾತ್ರ ಜಮೀಲ್ ಆಗಲು ಸಾಧ್ಯ ಎನ್ನುವಂತೆ ಮಾಡಿದೆ

ಜಮೀಲ್ ಇತ್ತೀಚಿಗೆ ‘ಉದಯವಾಣಿ‘ಯ ರಾಜೇಶ್ ಶೆಟ್ಟಿ ಅಲಿಯಾಸ್ ದಶರಥ ಅವರ ಕೃತಿ ಪ್ರಕಟಿಸಿದರು. ‘ಆಲ್ ಈಸ್ ವೆಲ್’ ಕೃತಿ ಬರುತ್ತಿದೆ ಎನ್ನುವುದು ಗೊತ್ತಾಗುವುದು ಹೇಗೆ?. ಅದಕ್ಕಾಗಿ ಒಂದು ವಿಡಿಯೋ ತಯಾರಿಸಿದರು. ಅದು ಇಲ್ಲಿದೆ ನೋಡಿ…

ಹಾಗೆ ಪಬ್ಲಿಸಿಟಿ ಪಡೆದ ಪುಸ್ತಕ ಎಲ್ಲರೊಳಗೊಂದಾಗಿ ಬಿಡುಗಡೆಯಾಗಲಿಲ್ಲ. 200 ಪುಸ್ತಕ ಒಟ್ಟಿಗೆ ಬಿಡುಗಡೆ ಮಾಡುವ ಪ್ರಕಾಶಕರಿರುವ ಕಾಲದಲ್ಲಿ ಜಮೀಲ್, ಗೆಳೆಯ ಜೋಗಿ ಹಾಗೂ ಲೇಖಕರನ್ನು ಬಾಯಿ ನೀರೂರಿಸುವ ತಿಂಡಿಗಳ ಕೇಂದ್ರ ಜನಾರ್ಧನ್ ಹೋಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಬಿಡುಗಡೆ ಮಾಡಿ ಹೋಟೆಲ್ ಓನರ್ ಕೈಗೆ ಮೊದಲ ಪ್ರತಿ ಇಟ್ಟು, ಹೊಟ್ಟೆ ತಲೆ ಎರಡೂ ತುಂಬಿಸಿಕೊಂಡು ಬಂದರು. off course ಬಿಲ್ ಪಾವತಿ ಮಾಡಿಯೇ ಬಂದರು. ಹಾಗಾಗಿಯೇ ಇವರು ಜಮೀಲ್.
ಈ ಬಗ್ಗೆ ಜೋಗಿ, ರಾಜೇಶ್ ಶೆಟ್ಟಿ ಮಾಡಿರುವ ಕಾಮೆಂಟ್ ಇಲ್ಲಿದೆ ಓದಿ
ಅಂದ ಹಾಗೆ ನಿನ್ನೆ ತಾನೇ ಜಮೀಲ್ ಹುಟ್ಟುಹಬ್ಬ ಆಚರಿಸಿಕೊಂಡರು.
ಅದೂ ಹೇಗೆ ಅಂತೀರಾ..? ಪುಸ್ತಕೋತ್ಸವದ ಮಳಿಗೆಯಲ್ಲಿ ದಣಿವಿಲ್ಲದಂತೆ ಪುಸ್ತಕ ಮಾರಿ.
‘ಅphone logoವಧಿ’ ಬಳಗದ ಹಿತೈಷಿ ಜಮೀಲ್ ಗೆ ಹುಟ್ಟುಹಬ್ಬದ ಶುಭಾಷಯ. 
ಜಮೀಲ್ ಗೆ ವಿಶ್ ಮಾಡಲು-  98452 24979 

rajesh shetty udayavani book

ಜೋಗಿ ಉವಾಚ- 

ನಮ್ಮ ರಾಜೇಶ್ ಶೆಟ್ಟಿ ಬರೆದ ‘ಆಲ್ ಈಜ್ ವೆಲ್’ ಪುಸ್ತಕ ಶಿವಾನಂದ ಸರ್ಕಲ್ಲಿನ ಜನಾರ್ದನ ಹೋಟೆಲಿನಲ್ಲಿ ಬಿಡುಗಡೆಯಾಯಿತು.

ಭಾಷಣಗಳಿರಲಿಲ್ಲ, ಸ್ವಾಗತ, ಧನ್ಯವಾದಗಳಿರಲಿಲ್ಲ.

ಮೊದಲ ಪ್ರತಿಯನ್ನು ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುವ ವಾಸುದೇವ ಹೊಳ್ಳರಿಗೆ ನೀಡಲಾಯಿತು.

ನಾವು ಅಲ್ಲೊಂದು ಮಸಾಲೆ ದೋಸೆ ತಿಂದು ಹೊರಡುವಷ್ಟರಲ್ಲಿ ಅವರು ಅರ್ಧ ಪುಸ್ತಕ ಓದಿ ಮುಗಿಸಿದ್ದರು. ‘ಹಿಡ್ಕಂಡ್ರೆ ಬಿಡೂಕಾತಿಲ್ಲೆ ಮರಾಯ್ರೇ’ ಅಂತ ಕಾಂಪ್ಲಿಮೆಂಟ್ ಕೂಡ ಕೊಟ್ಟರು.

ಪುಸ್ತಕ ಬಿಡುಗಡೆ ಹೀಗಿರಬೇಕು. ಹೀಗೂ ಇರಬೇಕು.

jameel1ರಾಜೇಶ್ ಶೆಟ್ಟಿ ಉವಾಚ 

ಇವತ್ತು ಬಿಡುಗಡೆ ಅಂದಿದ್ದರು SH Jameel.
ಎಲ್ಲಿ ಅಂತ ಗೊತ್ತಿರಲಿಲ್ಲ.
ಹೇಗೆ ಅಂತ ಗೊತ್ತಿರಲಿಲ್ಲ.
ಜೋಗಿ ಸರ್ ಜೊತೆ ಇರ್ತಾರೆ ಅನ್ನೋ ನಂಬಿಕೆ ಇತ್ತು. ಅಷ್ಟೇ.
ಮಧ್ಯಾಹ್ನ ಆಯ್ತು. ಸಂಜೆ ಆಯ್ತು.
ಕೊನೆ ಪುಸ್ತಕ ಬಿಡುಗಡೆ ಆಗಿದ್ದು ಎಲ್ಲಿ ಗೊತ್ತಾ?
ಶಿವಾನಂದ ಸರ್ಕಲ್ಲಿನಲ್ಲಿರೋ ಜನಾರ್ಧನ ಹೋಟೆಲಿನಲ್ಲಿ.
ಮಾತಿಲ್ಲ. ಕತೆಯಿಲ್ಲ.
ಸಿಂಪಲ್‌ ಆಂಡ್‌ ಬ್ಯೂಟಿಫುಲ್‌.

‍ಲೇಖಕರು admin

October 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: