ಹೊಡಿ ಮಗ.. ಹೊಡಿ ಮಗ.. ಹೊಡಿ ಮಗ..

Ayudha Pooja Special

ಅದೆಷ್ಟು ಬಾಡು ಬೆಂದು ಹೋಗಿದಿಯೋ

badu1

ಈ ತಾಂತ್ರಿಕ ಯುಗದಲ್ಲಿ ರಭಸದಿಂದ ಬೆಳೆಯುತ್ತಿರುವ ನಮ್ಮ ಪ್ರೀತಿಯ “ಬೆಂದಕಾಳೂರಿನಲ್ಲಿ ” ಅದೆಷ್ಟು ಬಾಡು ಬೆಂದು ಹೋಗಿದಿಯೋ ಲೆಕ್ಕ ಇಟ್ಟವರಾರು ! ಈಗ ಎಲ್ಲಿ ನೋಡಿದರೂ ಫೈನ್ ಡೈನಿಂಗ್ ರೆಸ್ಟೋರಂಟ್ ಗಳು, ಮೆಕ್ಸಿಕನ್ ಮತ್ತು ಇಟಾಲಿಯನ್ ವಿಧವಿಧ ಸ್ವಾದಗಳು, ಬಾರ್ಬೆಕ್ಯೂಗಳು , ತಂದೂರಿ ಜಾಯಿ೦ಟ್ ಗಳು, ಆಂಧ್ರ ಹೋಟೆಲ್ ಗಳು, ಬಿರ್ಯಾನಿ ಅಡ್ಡಾಗಳು ಒಂದಾ.. ಎರಡಾ..? ಆದರೆ ಅಂದಿನಿಂದ ಬದಲಾಗದೆ ನಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಮಾಂಸಾಹಾರ ಭಕ್ಷ್ಯಗಳನ್ನು ಮಾಡಿ ಹಳೆ ಬೆಂಗಳೂರಿಗರಿಗೆ ಉಣಬಡಿಸುತ್ತಿರುವ ನಮ್ಮ ಹಿಂದು ಮಿಲ್ಟ್ರಿ ಮೆಸ್ ಗಳು ಕೇವಲ ಬೆರಳಿಕೆಯಷ್ಟೇ ಇದೆ.

badu4ಬಾಡೂಟ ಮಾಡಬೇಕು ಅಂತ ನಾವು ನಿರ್ಧರಿಸಿದಾಗ ನಮಗೆ ಕಂಡದ್ದು ಈಗಿನ ಅರಳೆಪೇಟೆಯಲ್ಲಿರುವ  (ಕಾಟನ್ ಪೇಟ್ ) “ನ್ಯೂ ಗೋವಿಂದರಾವ್ ಮಿಲ್ಟ್ರಿ ಹೋಟೆಲ್” . ಕೆಂಪೇಗೌಡ ಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿರುವ ೧೦೭ ವರ್ಷಗಳ ಇತಿಹಾಸದ ಈ ಹೋಟೆಲ್ ನಲ್ಲಿ ನಮ್ಮ ಬಾಡೂಟ ಎಂದಾಕ್ಷಣ ಸದಸ್ಯರ ಜಿಹ್ವಾ ಚಪಲತೆ ಇಮ್ಮಡಿಯಾಯಿತು. ಹತ್ತು ದಶಕಗಳಿಂದ ಬೆಂಕಿ ಆರದೆ ತನ್ನ ಪ್ರಜ್ವಲ ಶಾಖದಿಂದ ಬೆಂಗಳೂರು ಪಟ್ಟಣದ ನಾಗರೀಕರಿಗೆ ಉದರಾನ೦ದ ನೀಡುತ್ತಿರುವ ಈ ತಾಣದಲ್ಲಿ ನಮ್ಮ ಪೂರ್ವಿಕರೂ ರುಚಿ ಸವಿದಿದ್ದರೆನೋ. ಅದರ ಕುರುಹನ್ನರಿಯಲು ತಂಡದ ಎಲ್ಲ ಸದಸ್ಯರು ಬಾಯಿ ಚಪ್ಪರಿಸಿಕೊಂಡು ಸನ್ನದ್ಧರಾದೆವು.

ನ್ಯೂ ಗೋವಿಂದರಾವ್ ಮಿಲ್ಟ್ರಿ ಹೋಟೆಲ್ ನ ಇತಿಹಾಸದಲ್ಲಿ ಪ್ರಪ್ರಥಮವಾಗಿ ರಾತ್ರಿ ಊಟ ಮಾಡಿದ ಹೆಗ್ಗಳಿಕೆ ನಮ್ಮ ‘ಬಾಡೂಟದ ಬಳಗ’ದವರಿಗೆ ಸಲ್ಲುತ್ತದೆ. ಜೋರು ಮಳೆ, ಟ್ರಾಫಿಕ್ ಜಾಮ್ ಇವೆಲ್ಲವನ್ನು ಗೆದ್ದು ಸಂಜೆ ಏಳು ಗಂಟೆಗೆ ಒಬ್ಬೊಬ್ಬರಾಗಿ ಆಗಮಿಸಿ ಏಳೂವರೆ ಅಷ್ಟರಲ್ಲಿ ಬಾಡೂಟದ ಬಳಗದ ಸಂಖ್ಯೆ ಮೂವತ್ತರ ಗಡಿ ದಾಟಿತ್ತು …ಆಗ ಹೊರಗೆ ಜೋರು ಮಳೆ.. ಒಳ ಹೊಕ್ಕ ನಮಗೆ ಒಂದು ವಿಶಿಷ್ಟ ಅನುಭವ… ಹಳ್ಳಿಯ ನಮ್ಮ ಮುತ್ತಾತರು ಕಟ್ಟಿದ ಮನೆಯ ಒಳಾಂಗಣ ಅನುಭವ… ಮಳೆಯಲ್ಲಿ ನೆನದು ಬಂದವರು ಚಳಿಯನ್ನೂ ಲೆಕ್ಕಿಸದೆ ಪಂಕ್ತಿಯಲ್ಲಿ ಕುಳಿತೇ ಬಿಟ್ರು …..

badu3ಇಸ್ತ್ರಿ ಎಲೆ ಬಂದು ಟೇಬಲ್ ನಲ್ಲಿ ಬಿದ್ದ ತಕ್ಷಣ ಎಲ್ಲರೂ ನೀರು ಚಿಮುಕಿಸಿ ಸಜ್ಜಾದೆವು…. ಮಸಾಲೆಯ ಘಮಲು ಗಾಳಿಯಲ್ಲಿ ಪಸರಿಸಿದ್ದು ನಮ್ಮ ಹಸಿವನ್ನು ಕೆರಳಿಸಿದಂತ್ತಿತ್ತು . ಎಲೆ ಮೇಲೆ ಈರುಳ್ಳಿ ಮತ್ತು ನಿಂಬೆ ಹಣ್ಣು ಬಂತು. ಅದನ್ನು ಹಿಂಬಾಲಿಸಿ ಬಂದದ್ದು ಮಟನ್ ಚಾಪ್ಸ್, ಹಾ..  ಹಾ…  ಎಂಥ ರುಚಿ, ಅದನ್ನು ಬಾಯಲ್ಲಿ ಇಟ್ಟ ಮರುಕ್ಷಣವೇ ಬೆಣ್ಣೆಯಾಗೆ ಕರಗಿ ಹೊಟ್ಟೆ ಸೇರಿತ್ತು. ತದನಂತರ ಬಂದದ್ದೇ ಚಿಕನ್ ಫ್ರೈ… ಅಮೋಘವಾದ ರುಚಿ ನೆನೆದರೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಹೊರಗಿನ ಮಳೆಯಲಿ ಮಿಂದು ಬಂದ ನಮಗೆ ಚಿಕನ್ ಫ್ರೈ ತಿಂದ ಕ್ಷಣವೇ ಮೈಮನಕ್ಕೆ ಹಿತವಾದ ಕಿಚ್ಚು ಹಚ್ಹಿದಂತಾಯ್ತು..

ರಾಗಿ ಮುದ್ದೆ ಮತ್ತು ಮಟನ್ ಕುರ್ಮದ ಹೊಂದಾಣಿಕೆ ಅದ್ಬುತವಾಗಿತ್ತು.. ಕೆಲವರು ಎರಡು ಮೂರು ಮುದ್ದೆ ಸವಿದದ್ದು ವಿಶೇಷ.. ಇಲ್ಲಿನ ವಿಶೇಷ ಅಂದ್ರೆ ಮಟನ್ ಪಲಾವ್.. ಬಿಸಿ ಬಿಸಿಯಾಗಿ ಬಡಿಸಿದ ಮಟನ್ ಪಲಾವ್ ಇಲ್ಲಿ ತಿನ್ನುವುದೇ ಒಂದು ಪರಮ ಸುಖ. ಗೋವಿಂದರಾವ್ ಹೋಟೆಲ್ ನ ಎಲ್ಲ ವಿಶೇಷ ಖಾದ್ಯಗಳಾದ ಕೈಮ. ಕುರ್ಮ, ಪಲಾವ್ ಮತ್ತು ಚಾಪ್ಸ್ ..ಎಲ್ಲರೂ ಎರಡು ಮೂರು ಬಾರಿ ಸವಿದರು.badu2

ಪ್ರೀತಿಯಿಂದ ನಮ್ಮ ಮನೆಯವರಂತೆ ಆರೈಕೆ ಮಾಡಿದ ಹೋಟೆಲ್ ನ ಉಸ್ತುವಾರಿ ಮತ್ತು ಮುಖ್ಯ ಬಾಣಸಿಗ ಈಶ್ವರ್ ರಾವ್ ಮತ್ತು ಅವರ ಸಹೋದ್ಯೋಗಿಗಳಿಗೆ ಬಳಗ ಅಭಾರಿ,.

ಇದರೊಂದಿಗೆ ನಮ್ಮ ಬಾಡೂಟದ “ಸ್ಟಾರ್ ಪರ್ಫಾರ್ಮರ್” ಪ್ರಶಸ್ತಿಯನ್ನು ನಮ್ಮ ಸದಸ್ಯರೇ ಆದ ಮಂಜುನಾಥ್ ಅವರು ಬಹುಮಾನ ಪಡೆದು ಎಲ್ಲರ ಮೆಚ್ಚುಗಗೆ ಪಾತ್ರರಾದರು..

badu7

badu8

badu9

badu1

 

‍ಲೇಖಕರು admin

October 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. lohith kumar

    ಲೇಖನ ಚೆನ್ನಾಗಿದೆ. ಫೋಟೊಗಳೆ ಬಾಯಲ್ಲಿ ನೀರೂರಿಸುವಂತಿವೆ.
    ಊಟ ಬಲ್ಲವನಿಗೆ ರೋಗವಿಲ್ಲ .. ಬಾಡು ತಿಂದವನೆಗೆ ಭಯವಿಲ್ಲ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: