ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬನವಾಸಿ ನೆನೆದು ಹೆಜ್ಜೆ ಹಾಕಿದರು ಡಾ. ವಿಜಯಲಕ್ಷ್ಮಿ
ನೆನೆವುದೆನ್ನ ಮನ ಬನವಾಸಿ ನಡಿಗೆಯ.... ಡಾ. ವಿಜಯಲಕ್ಷ್ಮಿ ಡಿ. ಚಿತ್ರಗಳು: ಹರಿನಾಥ ಬಾಬು ಕಳೆದ ವರ್ಷ ಪದವಿ ಪರೀಕ್ಷೆಗಳ ಮೌಲ್ಯಮಾಪನ ನಡೆಯುತ್ತಿತ್ತು. ದಿನದ ಕಾರ್ಯ ಮುಗಿಸಿದ ಮೇಲೆ ನಮ್ಮ ಗೆಳೆಯರ ಬಳಗ ಒಂದೆಡೆ ಕುಳಿತು ಅದೂ-ಇದೂ ಮಾತು ಹಾಡು ಹರಟೆಯಲ್ಲಿ ತೊಡಗುವುದು ಮಾಮೂಲು. ಆಗ ಶಿವಸ್ವಾಮಿಯವರು ‘ನಮ್ಮ ಸಮಾಜಮುಖಿ ಬಳಗದಿಂದ...
‘ಅನುಪಮ ಆಖ್ಯಾನ’ದಲ್ಲಿ ಉಮೇಶ್ ದೇಸಾಯಿ
'ಅನುಪಮ ಆಖ್ಯಾನ' ಇದು ನಾನು ಬರೆದ ಒಂದು ಮಿನಿ ಕಾದಂಬರಿ... ಇದು ನೇರವಾಗಿ ಇ ಬುಕ್ ರೂಪದಲ್ಲಿ ನಿಮ್ಮ ಮುಂದಿದೆ.. 'ಮೈಲ್ಯಾಂಗ್' ಅವರ ಮೂಲಕ ಈ ಕೃತಿ ನಿಮ್ಮ ಮುಂದಿದೆ... ಕೊಳ್ಳುವ ಲಿಂಕ್ ಹೀಗಿದೆ.... https://mylang.in/collections/recent-additions/products/anupama-aakhyana-inr ಇನ್ನು ಕತೆಯ ಬಗ್ಗೆ....ಅನುಪಮಾ...
‘ಆಡಿಸಿ ನೋಡಲು’ ರಾಜಕುಮಾರ ಮಡಿವಾಳರ ಬಂದ್ರು..
ರಾಜಕುಮಾರ ಮಡಿವಾಳರ ಅವರ ಹೊಸ ಕೃತಿ ಓದುಗರ ಮುಂದೆ ಬರಲು ಸಜ್ಜಾಗಿದೆ. ಸ್ಟ್ಯಾಗ್ ಪಬ್ಲಿಕೇಶನ್ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು 'ಆಡಿಸಿ ನೋಡು' 'ಮಿತ್ರರು, ನನ್ನ ಪುಸ್ತಕ ಶ್ರಾವಣದ ಶುರುವಾತಿಗೆ, ಈ ಶ್ರಾವಣದ ಉಡುಗೊರೆಯಾಗಿ ಹೊರತಂದಿದ್ದಾರೆ, ತುಂಬು ಪ್ರೀತಿಯ ಧನ್ಯವಾದ ಅವರಿಗೆ. ಸುಮ್ಮನೆ ಕೆಲವು ನನ್ನವು-ನಿಮ್ಮವು ಮಾತುಗಳ...
ರಾಜ್ ಕಿಡ್ನಾಪ್ ಕಥೆ.. ಬನಶಂಕರ ಆರಾಧ್ಯ ಕಣ್ಣಲ್ಲಿ
ಬನಶಂಕರ ಆರಾಧ್ಯ । ಅವರ ಫೇಸ್ ಬುಕ್ ನಿಂದ । 2000 ನೇ ಇಸವಿ ಜುಲೈ 30 ವರನಟ ಡಾ. ರಾಜ್ ಕುಮಾರ್ ಅವರು ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾದ ದಿನ. ಅಂದು ಭೀಮನ ಅಮಾವಾಸ್ಯೆ ರಾತ್ರಿ ಚಾಮರಾಜನಗರದಿಂದ ಸುಮಾರು 25 ಕಿ.ಮೀ. ದೂರವಿರುವ ಗಾಜನೂರಿನ ಡಾ. ರಾಜ್ ಕುಮಾರ್ ಅವರ ಮನೆಯಿಂದ ವೀರಪ್ಪನ್ ರಾಜ್ ರನ್ನು ಕಿಡ್ ನ್ಯಾಪ್...
ಗಣೇಶ ಅಮೀನಗಡ ಕೊಟ್ಟ ಕಿಕ್ಕು: ಮದ್ಯದ ಬಗ್ಗೆ ಬರೆಯುತ್ತೇನೆ…
ಪತ್ರಕರ್ತ, ರಂಗಭೂಮಿ ವಿಮರ್ಶಕ ಗಣೇಶ ಅಮೀನಗಡ ಅವರ ಇತ್ತೀಚಿನ ಕೃತಿ 'ತುಸುವೆ ಕುಡಿವ ಗಂಡನ್ನ ಕೊಡು ತಾಯಿ...' ಮೈಸೂರಿನ 'ಕವಿತಾ ಪ್ರಕಾಶನ' ಇದನ್ನು ಪ್ರಕಟಿಸಿದೆ. ಇದರಿಂದ ಆಯ್ದ ಅದೇ ಹೆಸರಿನ ಪ್ರಬಂಧ ಇಲ್ಲಿದೆ- ಮದ್ಯದ ಬಗ್ಗೆ ಬರೆಯುತ್ತೇನೆ ಸೋಮರಸ ಕುಡಿದರಂತೆ ಸುರಾಸುರರು ಸುರೆಯ ಅಮಲೇರಿದ ದೇವಾನುದೇವತೆಗಳೇ...
ಮಾಲತಿ ಶಶಿಧರ್ ಬಿಂದಾಸ್ ಕವಿತೆ: ಇಪ್ಪತ್ತರ ಹರೆಯ
ಮಾಲತಿ ಶಶಿಧರ್ ದಿಕ್ಕು ತಪ್ಪಿಸುವ ಸಂಜೆಯಲಿ ಮೂತಿ ತಿರುಗಿಸೋ ಮೂಗುತಿಯ ಊರ ತುಂಬಾ ಮೆರವಣಿಗೆ ಮಾಡಿಸಿಕೊಂಡು ಒಂದು ಸುತ್ತು ಬರದಿದ್ದರೆ ನಿದ್ದೆ ಹತ್ತುತ್ತಿರಲಿಲ್ಲ. ಕತ್ತು ಕೊಂಕಿಸಿ, ಎದೆಯುಬ್ಬಿಸಿ, ಪರಿವಾಳದಂತೆ ಅಂಕು ಡೊಂಕು ಹೆಜ್ಜೆ ಇಡುವಾಗ ಕಂಪೌಂಡಿನ ಮೇಲೆ ಕೂತ ಗಂಡು ಹೈಕಳು ಸೊಕ್ಕಿನ ರಾಣಿ ಎಂದು ಕರೆದರೆ ಒಳಗೊಳಗೇ...
ಸಮತಾ ಆರ್ ಹೇಳಿದ ಸೂಪರ್ ಕಾರ್ ಕಥೆ
ಸೆಕೆಂಡ್ ಹ್ಯಾಂಡ್ ಕಾರುಗಳ ಲೋಭ ಸಮತಾ ಆರ್ "ಅಕ್ಕಾ , ಇವಳ್ ಕಾಟ ತಡಿಯೋಕಾಗೋಲ್ಲ, ಒಂಚೂರು ಒತ್ತಿ ಕೊಳ್ಳೆ ಅಂದ್ರೆ ಕಚ್ಚಕೇ ಬರ್ತಾಳೆ, ನಾನು ಅ ಮರದ ಕೆಳಗೆ ಬೇಕಾದ್ರೂ ಇರ್ತೀನಿ.ಇವಳ ಪಕ್ಕ ಮಾತ್ರ ಬೇಡ"ಎಂದು ಬೆಳ ಬೆಳಗ್ಗೆಯೇ ಲಿಯೋನ ರೋಧನೆ ಶುರುವಾಯಿತು. "ದಿನ ಇವರ ಜಗಳ ಬಿಡಿಸಿ ಬಿಡಿಸಿ ನನ್ನ ಜೀವನವೇ ಕಳೆದು ಹೋಗುತ್ತೆ" ಅಂತ...
ಸತೀಶ್ ಆಚಾರ್ಯ ಹೇಳ್ತಾರೆ: ‘ಹೆಣಾ ಒಂಚೂರ್ ಹಲ್ಲ್ ಕಿಸಿ ಕಾಂಬ!’
'ವಿಶ್ವ ಕುಂದಾಪ್ರ ಕನ್ನಡ ದಿನ' ಆಗಿ ಹೋಯ್ತು. ಆ ನೆನಪಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಬರೆದ ಒಂದಷ್ಟು ವ್ಯಂಗ್ಯಚಿತ್ರಗಳು ಇಲ್ಲಿವೆ. ಸತೀಶ್ ಆಚಾರ್ಯ ...
ಬಿಡಲಾರೆ ಬೆಂಗಳೂರ
ಉಪಾಧ್ಯಾಯ, ಧಾರೇಶ್ವರ ಒಪ್ಪಿದೆನು ಇಂದಿನ ಪರಿಸ್ಥಿತಿಯು ಹೀಗೆ ಸಪ್ಪೆಯಾದ ಬದುಕು ಉಪ್ಪಿಲ್ಲ ಹುಳಿಯಿಲ್ಲ ಈಗ ಅಪ್ಪಿ ಹಿಡಿದೆತ್ತಿ ಅನ್ನವನು ಕೊಟ್ಟೂರು ಬೆಂಗಳೂರು ಕಷ್ಟದಲ್ಲಿರುವ ಅಪ್ಪ ಅಮ್ಮಂದಿರಿಗೆ ಮೃಷ್ಪಾನ್ನವಲ್ಲದಿದ್ದಲೂ ಇಷ್ಟಾನ್ನ ಕೊಟ್ಟ ಶಿಷ್ಟರ ಚೀಲಕ್ಕೆ ಪುಷ್ಟಿಯನ ನೀಡಿದ ನನ್ನ ಕನಸಿಗೆ ಬಣ್ಣ ಕೊಟ್ಟಂತ ನನ್ನವರ...
ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ನಾನು ಬಂದು ತಲುಪಿಕೊಂಡದ್ದು ‘ಲಕ್ಷ್ಮಿ ಮುದ್ರಣಾಲಯ’ವನ್ನು…
ತರಲೆ ಮಾಡಿಕೊಂಡು ಕಾಲ ಕಳೆಯುತ್ತಿದ್ದ ನನ್ನನ್ನು ಹಿಡಿದು ಲಕ್ಷ್ಮೀ ಮುದ್ರಣಾಲಯಕ್ಕೆ ಸೇರಿಸಿದರು ಚಿತ್ರದುರ್ಗದ ನಮ್ಮ ದೊಡ್ಡಮ್ಮನ ಮನೆಯ ಕೆಳಗೆ ಒಂದು ಲೇಡೀಸ್ ಹಾಸ್ಟೆಲ್ ಇತ್ತು. ಆ ಹಾಸ್ಟೆಲಿನ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಒಂದು ಹುಡುಗಿ ನನ್ನ ಸ್ನೇಹಿತ ಗೋವಿಂದರೆಡ್ಡಿಯ ಸ್ನೇಹಿತೆ. ಆ ಹುಡುಗಿ ಒಂದು ದಿನ ನಮ್ಮ...
ವಿದ್ಯಾ ಭರತನಹಳ್ಳಿ ಕಾಡುವ ಕವಿತೆ: ಈ ಹಾಡು ಬೇರೆಯದು..
ಒಲವು ತೇಲುವ ಒಡಲು ವಿದ್ಯಾ ಭರತನಹಳ್ಳಿ ಪ್ರಥಮ ಪ್ರಹರದ ಬೈರಾಗಿ ಸಂಧಿಪ್ರಕಾಶದ ಶಾಮ್ ಕಲ್ಯಾಣ್ ನಡುರಾತ್ರಿಯ ಅಭೋಗಿ ಪ್ರೇಮಾಲಾಪ ವೈಭೋಗಕ್ಕೆ ಜಾವಗಳ ಲೆಕ್ಕಬೇಡ. ಈ ಹಾಡು ಬೇರೆಯದು ಬೇಗುದಿಯ ರಾಗವಿದು ಅವಳ ಎದೆಗೂಡಿನ ಜಾಡು ನೊಂದ ಕಂಗಳ ಪಾಡು ಕಾಣಿಸದಂತೆ ಎದೆಗೀರುಗಳ ಮುಚ್ಚಲಾಗದು ನನಗೆ ಸೆರಗು ಜಾರದಂತೆ ಆ ಕೈಗಳಿಗಷ್ಟು ಶಕ್ತಿ...
ಬಿ ವಿ ಭಾರತಿ ಕೇಳಿದ್ದು: ನಾನು ಮತ್ತು ಶಬನಾ ಈಗ ಅದೆಷ್ಟೊಂದು ಬದಲಾಗಿದ್ದೇವೆ ಗೊತ್ತೇ?
ಬಿ ವಿ ಭಾರತಿ ಆಗ, ಅಂದರೆ ಹಿಂದೆ, ಅಂದರೆ ಬಹಳ ಹಿಂದೆ ಸೀರೆಯುಡುವ ವಯಸ್ಸಿಗೆ ಕಾಲಿಟ್ಟಾಗ ಗರಿಗರಿ ಗಂಜಿ ಹಾಕಿದ ಹತ್ತಿಯ ಸೀರೆಗಳೆಂದರೆ ಮೋಹ ಹುಟ್ಟಲು ಕಾರಣ ಶಬಾನಾಳೆಂದರೆ ನೀವು ನಂಬಬೇಕು! ಅವಳ ಎದೆಸೆಟೆಸಿ ನಡೆವ ಗತ್ತು ಚಟಪಟ ಹೆಜ್ಜೆ ಹಾಕುವ ಶೈಲಿ ತೀರಾ ಸುಂದರಿಯಲ್ಲದ ಹೆಚ್ಚುವರಿ 'ಅರ್ಹತೆ' ಅವಳಲ್ಲಿನ ಆತ್ಮವಿಶ್ವಾಸದ...
ತೂಲಹಳ್ಳಿ ಕವನ ಸಂಕಲನ ಕುರಿತು ಬರೆದಿದ್ದಾರೆ ಜಿ ಪಿ ಬಸವರಾಜು
ಪುಟಪುಟದಲ್ಲು ಪ್ರೀತಿಯ ಸಿಂಚನ ಜಿ.ಪಿ. ಬಸವರಾಜು ಹೇಳಲೇ ಬೇಕಾದದ್ದು ಇನ್ನೂ ಇದೆ (ಕವನ ಸಂಕಲನ) ಲೇ: ಮಲ್ಲಿಕಾರ್ಜುನಗೌಡ ತೂಲಹಳ್ಳಿ ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ ಮೊ: 99161 97291 ಪ್ರೀತಿ ಎನ್ನುವುದು ಮನುಷ್ಯನ ಹುಟ್ಟಿನೊಂದಿಗೇ ಹುಟ್ಟಿಕೊಂಡದ್ದು. ಆಡಂ ಮತ್ತು ಈವ್ ಈ ಭೂಮಿಗೆ ಬಂದಾಗಲೇ ಪ್ರೀತಿಯನ್ನು...
ಗಂಗಾಧರ ಕೊಳಗಿ ನೆನಪಿನ ಬುತ್ತಿ: ಕಾಸರವಳ್ಳಿ ಎಂಬ ಬೆಳಕಿನ ಕಿರಣದ ಜೊತೆ..
ಗಂಗಾಧರ ಕೊಳಗಿ ಆಗ ಬಾಲ್ಯದಿಂದ ಯೌವನಕ್ಕೆ ದಾಟಿಕೊಳ್ಳುತ್ತಿರುವ ವಯಸ್ಸು: ಕೃಷಿ, ಅಭ್ಯಾಸ ಮತ್ತು ರಂಗಭೂಮಿ, ಸಾಹಿತ್ಯ ಎನ್ನುವ ನೂರೆಂಟು ತರಲೆಗಳನ್ನ ಹಚ್ಚಿಕೊಂಡು ಓಡಾಡುತ್ತಿದ್ದ ಸಮಯ. ಯಾವುದನ್ನೂ ಸರಿಯಾಗಿ ಮಾಡೋದಿಲ್ಲ, ಎಲ್ಲಾನೂ ಹಿಡ್ಕೊಂಡು ಹೋದ್ರೆ ಯಾವುದನ್ನೂ ದಡ ಹಚ್ಚೋಕೆ ಆಗೋದಿಲ್ಲ ಎಂದು ನನ್ನ ಅಪ್ಪ, ಅಮ್ಮ ನನ್ನ...
ಶ್ರೀಧರ್ ಫೋಟೋ ಆಲ್ಬಂ : ಬನ್ನಿ ಊಟ ಮಾಡೋಣ..
ಶ್ರೀಧರ್ ಡಿ ಸಿ ಈ ವರ್ಷದ ಎಳ್ಳಿನ ಬೆಳೆ ಚೆನ್ನಾಗಿ ಆಗಿದೆ... ಮಾರ್ಚಿ 2020ರ ನಂತರದ ಸಂಧಿಗ್ದ ಹಾಗೂ ವಿಷಮ ದಿನಗಳಲ್ಲಿ ಇದು ನಿಜಕ್ಕೂ ಮನಸ್ಸಿಗೆ ನೆಮ್ಮದಿಕೊಡುವ ವಿಷಯ! ಇನ್ನೊಂದು ವಾರದೊಳಗೆ ಫಸಲು ಮನೆ ಸೇರುತ್ತದೆ. ಇದಾದ ಕೆಲವು ದಿನಕ್ಕೆ ಮತ್ತೆ ಭೂಮಿಯನ್ನು ರಾಗಿ ಬೆಳೆಗೆ ಹದಗೊಳಿಸಬೇಕು. ಮಳೆಯಾಶ್ರಿತ ರೈತರಿಗೆ ಈಗ ಕೈತುಂಬಾ...
ಪಲ್ಲವ ಪ್ರಕಾಶನದಿಂದ..
ಎಲ್ಲಾ ಪುಸ್ತಕದ ಮುಖಪುಟ ವಿನ್ಯಾಸ: ಸೌಮ್ಯ ಪ್ರಭು ಕಲ್ಯಾಣಕರ್ ಪಲ್ಲವ ವೆಂಕಟೇಶ್ ಫೋಟೋ: ಶಿವಶಂಕರ ಬಣಗಾರ್
ಯು.ಪಿ. ಉಪಾಧ್ಯಾಯ ಎಂದರೆ ಒಂದು ಯೂನಿವರ್ಸಿಟಿ
ಸುಚಿತ್ ಕೋಟ್ಯಾನ್ ತುಳು ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿದ ಯು.ಪಿ. ಉಪಾಧ್ಯಾಯರು ನಮ್ಮನ್ನಗಲಿದ್ದಾರೆ.. ಅಗಲಿದ ಹಿರಿಯರಿಗೆ ಭಾವಪೂರ್ಣ ಶೃದ್ಧಾಂಜಲಿ.. ಒಂದು ಯೂನಿವರ್ಸಿಟಿ ಮಾಡುವ ಕೆಲಸವನ್ನು ಉಪಾಧ್ಯಾಯ ದಂಪತಿಗಳಿಬ್ಬರೇ ಮಾಡಿದ್ದರು.. ನಮ್ಮ ಎಂಜಿಎಂ ಕ್ಯಾಂಪಸ್ಸಿನಲ್ಲಿ ಆ ಹಿರಿಯ ಜೀವಗಳನ್ನು ಕಂಡಾಗಲೆಲ್ಲ...
ಹಗಲಿರುಳು ಯತ್ನಿಸಿದೆ ನಿನ್ನನು ಅರಿಯಲು..
ಮರಾಠಿ ಮೂಲ: ಮೋನಾ ಕನ್ನಡಕ್ಕೆ: ಗಿರೀಶ ಜಕಾಪುರೆ ಅನುಕ್ಷಣ ಚಿಂತಿಸಿದೆ ಹಗಲಿರುಳು ಯತ್ನಿಸಿದೆ ನಿನ್ನನು ಅರಿಯಲು ಆವರಿಸಿತು ನಿನ್ನ ದಿವ್ಯ ಪ್ರೇಮ ನನ್ನ ಮನೋಹಿಮಾಲಯವನು ನಿನ್ನ ನೋಡಿದ ಆ ಕ್ಷಣ ಕಂಗಳ ಕೊಳದಲಿ ಶಶಿಯುದಿಸಿದ ಅರೆಘಳಿಗೆಯ ದರುಶನದಿಂದಲೇ ನನ್ನ ಹೃದಯದಲಿ ಘಮಘಮಿಸಿದೆ ಶ್ರೀಗಂಧದ ವನ ನಿನ್ನ ಭೇಟಿ...
ಪ್ರಜ್ಞಾ ಮತ್ತಿಹಳ್ಳಿ ಕಾಡುವ ಕವಿತೆ: ದೊಡ್ಡ ದೊಡ್ಡ ಕತೆಗಳೆದುರು..
ಆದರೂ... ಪ್ರಜ್ಞಾ ಮತ್ತಿಹಳ್ಳಿ ಕ್ಷಮಿಸಿಬಿಡಿ ಗೊತ್ತಿದೆ ನನಗೆ ದೊಡ್ಡ ದೊಡ್ಡ ಬದುಕಲ್ಲಿ ಸಣ್ಣ ಸಣ್ಣ ವಿಷಯ ಕೇಳಲಿಕ್ಕೆ ಅಜೀಬಾತ್ ವೇಳೆಯಿಲ್ಲದವರು ನೀವು ಅಂತ ಆದರೂ.. ಆ ಸಣ್ಣ ಪೋರ ಗುಂಗುರು ಕ್ರಾಪು ತೀಡುತ್ತ ತುಸು ಗೂನು ಬೆನ್ನಾಗಿ ಕೂತು ಶ್ಲೋಕ ಹೇಳುತ್ತಿದ್ದಂವ ಬಗ್ಗಿಸಿದ ತಲೆಯೆತ್ತದೆ ಗುಂಡಗೆ ಮಗ್ಗಿ...
377ರ ಹೆದ್ದಾರಿ
ಸಂಗಮೇಶ ಸಜ್ಜನ ಸೂರ್ಯನ ಉರಿ ಬಿಸಿಲಿನ ಹಾಗೆನಿನ್ನ ಕಣ್ಣೋಟ ನನ್ನ ತಾಕಿದೆತಂಗಾಳಿ ಬೀಸಿದಂತೆ ನಿನ್ನಿರವು ನನ್ನ ಸೋಕಿದೆ ಚಳಿಗಾಲದ ತಣ್ಣನೆಯ ಗಾಳಿಯು ತಾಕಿದ ಹಾಗೆನಿನ್ನ ಆ ತಣ್ಣನೆಯ ಮೃದುವಾದ ಕೈಯು ತಾಕಿದಂತಿದೆ, ಮಳೆಗಾಲದಲ್ಲಿ ಹಾರಿ ಬರುವ ಹಕ್ಕಿಯ ಹಾಗೆನಿನ್ನ ನೆನಪುಗಳು ಒಮ್ಮೊಮ್ಮೆ ಹಾರಿ ಬಂದಂತಿದೆ, ಇವತ್ತೇನೋ ನಿನಗೆ...
ಸುಖಾಸುಮ್ಮನೆ ಬಸಿರಾಗುವ ತಾಪತ್ರಯ!
ಸಂಜೆ ಗಾಳಿ ಚಂದ್ರು ಎಂ ಹುಣಸೂರು ಟೆರೇಸಿನ ಮೇಲೆ ಗಾಳಿಯ ಮಾತನ್ನು ಆಯಬಲ್ಲವರು ಸಂಜೆ ಕಾಲು ನೋವು ಬರುವಷ್ಟು ಹೊತ್ತು ನಿಲ್ಲಬಾರದು ನಿಂತ ಮೇಲೆ ಸಂಜೆ ಗಾಳಿಯಲ್ಲಿ ತೇಲಿಬಂದ ನಾಲ್ಕೇ ನಾಲ್ಕು ಮಾತುಗಳಿಗೆಲ್ಲ ಸುಖಾಸುಮ್ಮನೆ ಬಸಿರಾಗುವ ತಾಪತ್ರಯ ಆ ಗಾಳಿ ಆಡದೆ ಉಳಿದ ನಮ್ಮದೇ ಮಾತುಗಳನ್ನು ಹೇಳಲು ಹವಣಿಸುತ್ತದೆ ಕೇಳಿಸಿಕೊಂಡು 'ಯಾರ...





















