ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಿಟ್ಲರ್ ಒಳ್ಳೆಯವನಂತೆ…!!
ಹಿಟ್ಲರ್ ಒಳ್ಳೆಯವನಂತೆ…!!

ಕಾಲಲ್ಲಿ ಚಕ್ರಗಳಿದ್ದಿದ್ದರೆ ಹೀಗೆ ಹೋಗಿ ಹಾಗೆ ಬೇಕು ಎಂದು ಜಗತ್ತನ್ನು ಸುತ್ತಿಕೊಂಡು ಬರುತ್ತಿದ್ದೆ ಎನ್ನುವಷ್ಟು ಪ್ರಯಾಣಪ್ರಿಯೆ ಭಾರತಿ. ಯಾವ ದೇಶಕ್ಕಾದರೂ ಹೇಗಬೇಕು ಎಂದರೆ ಅದರ ಹೆಸರು ಹೇಗೆ ಬಂದಿರಬಹುದು ಎನ್ನುವಲ್ಲಿಂದ ಹಿಡಿದು, ಯಾವ ಗಲ್ಲಿಯ, ಯಾವ ರೆಸ್ಟೋರೆಂಟಿನಲ್ಲಿ ಏನೇನು ಸಿಗುತ್ತದೆ ಎನ್ನುವವರೆಗೆ ಮಾಹಿತಿ ಕಲೆಹಾಕಿ,...

read more
‘ಧೂಪದ ಮಕ್ಕಳು’ ಎಂಬ ಮಕ್ಕಳ ಗಾಥೆ…
‘ಧೂಪದ ಮಕ್ಕಳು’ ಎಂಬ ಮಕ್ಕಳ ಗಾಥೆ…

ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕಾಲದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಿದ್ದ ಒಂದು ಪುಟ್ಟ ಹಳ್ಳಿಯ ಹೆಸರು ಪೊನ್ನಾಚಿ. ಪೊನ್ನಾಚಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಒಂದು ಕುಗ್ರಾಮ. ಈ ಪೊನ್ನಾಚಿ ಎಂಬ ಪದದ ಮೂಲ ತಮಿಳು ಭಾಷೆ ಇರುವ ಹಾಗೆ ಕಾಣಿಸುತ್ತದೆ. ಕರ್ನಾಟಕ ಮತ್ತು...

read more
‘ಫಟಾ ಫಟ್’ ರಾಜಕುಮಾರ
‘ಫಟಾ ಫಟ್’ ರಾಜಕುಮಾರ

“ಫಟಾ ಫಟ್” ಸಂದರ್ಶನ ರಾಜಕುಮಾರ ಮಡಿವಾಳರ ಅವರ ಹೊಸ ಪುಸ್ತಕ ”ಆಡಿಸಿ ನೋಡು” ಬಿಡುಗಡೆಯಾಗುತ್ತಿದೆ. ಅಲ್ಲಿಯವರೆಗೆ ಇವರು ಏನು ಮಾಡ್ತಿದ್ದಾರೆ ಅಂತ 'ಅವಧಿ' ಸಂದರ್ಶನ ನಡೆಸಿತು. ಏನು 'ಆಡಿಸ್ತಾ' ಇದೀರಿ ?  'ಆಡಿಸಿ ನೋಡು' ಅಂದ್ರೆ ಮಾತಾಡಿಸಿ ನೋಡು ಅಂತ. ಪೇಡೆ ಅಂಗಡೀಲಿ ಕವಿತೆಗೆ ಏನು ಕೆಲ್ಸಾ ?  ಜಗತ್ತಿಗೆ ಸಿಹಿ ಹಂಚೋದು....

read more
”ಯೇ ಶಹರ್ ನಹೀಂ, ಮೆಹಫಿಲ್ ಹೈ!”
”ಯೇ ಶಹರ್ ನಹೀಂ, ಮೆಹಫಿಲ್ ಹೈ!”

''ನಾನು ಮಲಗುವುದಿಲ್ಲ,'' ಎನ್ನುತ್ತದೆ ಮಹಾನಗರಿ ಆತ್ಮಕಥನಗಳನ್ನು ಬರೆದಿರುವ ಈ ಜಗತ್ತಿನ ಮಹನೀಯರಿಗೆಲ್ಲಾ ಒಂದು ಸಲಾಂ ಹೊಡೆಯಬೇಕು ಎಂದು ನಾನು ಹಲವು ಬಾರಿ ಅಂದುಕೊಂಡಿದ್ದಿದೆ. ಏಕೆಂದರೆ ಆತ್ಮಕಥನಗಳನ್ನು ಬರೆಯುವುದೆಂದರೆ ಸುಲಭದ ಮಾತಲ್ಲ. ಅದಕ್ಕೊಂದು ಭಂಡ ಧೈರ್ಯ ಬೇಕು. ಈವರೆಗೆ ಬರೆದಿರುವವರಲ್ಲಿ ಎಲ್ಲರೂ ಎಲ್ಲವನ್ನೂ...

read more
ಆತ್ಮಹತ್ಯೆಯ ಆಲೋಚನೆ ನನ್ನೊಳಗೆ ಮೂಡಿತ್ತು..
ಆತ್ಮಹತ್ಯೆಯ ಆಲೋಚನೆ ನನ್ನೊಳಗೆ ಮೂಡಿತ್ತು..

ಸ್ವಂತ ಕಾಲಮೇಲೆ ನಿಲ್ಲಬೇಕೆಂಬ ಛಲದಿಂದ ನಾನೇ ಸ್ವಂತ ಮುದ್ರಣಾಲಯ ಸ್ಥಾಪಿಸಲು ಲಕ್ಷ್ಮೀ ಮುದ್ರಣಾಲಯದಿಂದ ಹೊರಬಂದೆ. ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ನನ್ನ ಬಳಿ ಇದ್ದವಾದರೂ ಅವಕ್ಕೆ ಬೇಕಾದ ಮೂಲ ಬಂಡವಾಳ ನನ್ನ ಬಳಿ ಸ್ವಲ್ಪವೂ ಇರಲೇ ಇಲ್ಲ..! ನಮ್ಮ ಅತ್ಯಂತ ಆತ್ಮೀಯರೊಬ್ಬರು ದೊಡ್ಡ ಮೊತ್ತದ ನೆರವು ಕೊಡುವುದಾಗಿ ಭರವಸೆ...

read more
ಯಡ್ಡಿ ಸಪೋರ್ಟಿನಿಂದ ಸಿಎಂ ಆಗಲು ಹೊರಟವರ ಕತೆ
ಯಡ್ಡಿ ಸಪೋರ್ಟಿನಿಂದ ಸಿಎಂ ಆಗಲು ಹೊರಟವರ ಕತೆ

ರಾಜ್ಯ ರಾಜಕೀಯದ ಅಂಗಳದಲ್ಲಿ ವಿಚಿತ್ರವೊಂದು ಘಟಿಸುತ್ತಿದೆ. ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಯಡಿಯೂರಪ್ಪ ಅವರ ತನಕ ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಇಂತಹ ವಿಚಿತ್ರ ಸನ್ನಿವೇಶ ಉದ್ಭವಿಸಿರಲಿಲ್ಲ. ಈ ವಿಚಿತ್ರವೆಂದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲದಿಂದಲೇ ಮುಂದಿನ ಮುಖ್ಯಮಂತ್ರಿಯಾಗುವ ಕನಸು ರಾಜ್ಯ ಬಿಜೆಪಿಯ...

read more
ಆಹ್ವಾನಿತ ಕವಿತೆ: ಜಿ ಎನ್ ರಂಗನಾಥರಾವ್ ಕವಿತೆಗಳು
ಆಹ್ವಾನಿತ ಕವಿತೆ: ಜಿ ಎನ್ ರಂಗನಾಥರಾವ್ ಕವಿತೆಗಳು

ಕಾಲ ಪುರುಷನಿಗೆ ಬಂದೆಯಾ, ಇಷ್ಟು ಬೇಗ, ಇಷ್ಟು ಹಠಾತ್ತನೆ. ಮೊನ್ನೆಯಷ್ಟೆ ಕೈಹಿಡಿದು ನಡೆಸಿ ಕರೆತಂದುದಲ್ಲವೆ ಭೂರಮೆಯ ಈ ರಮ್ಯದುದ್ಯಾನಕೆ? ಜಾಜಿ, ಮಲ್ಲಿಗೆ ಸುರಗಿ ಸಂಪಿಗೆ ಪುನ್ನಾಗರ ದವನ ಮರುಗ ಸಸ್ಯ ಶ್ಯಾಮಲೆ, ಕೊಯ್ಯುವುದರಲ್ಲೇ ಕಾಲ ಕಳೆಯಿತು. ಸೂತ್ರದಲಿ ಕೋದು ಇನ್ನೂ ಮಾಲೆ ಕಟ್ಟಿಲ್ಲ ಸ್ವಯಂವರಕೆಲ್ಲಿ ಸಮಯ? ಮಾವು ಹಲಸು ಕದಳಿ...

read more
ಕರದೂ ಕರದು ಕರದೊಡಿ ಕೊಡ್ಲಿಲ್ಲಂತ!!
ಕರದೂ ಕರದು ಕರದೊಡಿ ಕೊಡ್ಲಿಲ್ಲಂತ!!

ಹಬ್ಬಕ್ಕ ಕರದ್ರು. ಎಲ್ಲಾ ಕೊಟ್ರು ಕರದೊಡಿ ಕೊಡ್ಲಿಲ್ಲ ನೋಡು... ಇರಲಿ ಬಿಡು ಮಾಡಿರಲಿಕ್ಕಿಲ್ಲ.. ಅಯ್ಯ.. ನಿನ್ನೆ ಸಂಜಿಯಿಂದ ತಯ್ಯಾರಿ ನಡದಿತ್ತು. ಅವರು ಮನಿಮುಂದ ತರಕಾರಿ ಮಾರೂವಕ್ಕಿಗೆ ನಿಲ್ಲಿಸಿ, ಎಳೀ ಕೊತ್ತಂಬರಿ, ಹಸಿಮೆಣಸಿನಕಾಯಿ ತೊಗೊಂಡಾಗೆ ನನಗ ವಾಸನಿ ಹತ್ತಿತ್ತು. ಮತ್ತ ಮನ್ನೆ ನಾಗರ ಅಮಾಸಿ ಹಿಂದಿನ ದಿನ ಕಡಲಿಬ್ಯಾಳಿ...

read more
ನಾನೂ ಬೇಲಿ ಹಾರಿದೆ..
ನಾನೂ ಬೇಲಿ ಹಾರಿದೆ..

ಬೆಟ್ಟದೂರಿನ ಆ ದೇವರ ಹಣ್ಣೆಂಬ ಅಮೃತ! ಆಗ ದೆಹಲಿಗೆ ಬಂದ ಹೊಸದು. ಲಜಪತ್‌ ನಗರದ ಮಾರ್ಕೆಟ್ಟಿನಲ್ಲಿ ಕೇಸರಿ ಬಣ್ಣದ ಚೆಂದನೆಯ ಹಣ್ಣೊಂದು ಕಣ್ಣಿಗೆ ಬಿತ್ತು. ಹೊಸ ಪರಿಸರದ ಹೊಸ ಹಣ್ಣು, ತರಕಾರಿ, ತಿನಿಸು ಏನೇ ಇರಲಿ, ಅದರ ಬಗ್ಗೆ ನನಗೆ ಸದಾ ಕುತೂಹಲ. ಆ ಸಹಜ ಕುತೂಹಲದಿಂದಲೇ ನಾನು ಆತನಲ್ಲಿ ಹಣ್ಣಿನ ಪೂರ್ವಾಪರ ವಿಚಾರಿಸಲಾಗಿ, ರೇಟು...

read more
ಗಣಿತಜ್ಞೆ ಶಕುಂತಲಾ ಅಲ್ಲ… ನಾಟಕದ ಶಕುಂತಲಾ!
ಗಣಿತಜ್ಞೆ ಶಕುಂತಲಾ ಅಲ್ಲ… ನಾಟಕದ ಶಕುಂತಲಾ!

1956ರ ಜುಲೈ 15ರ ಸಂಜೆ 6-30ಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ತಿ’ನಲ್ಲೇ ನಾಟ್ಕಾ ಆಡಿದ್ದಾರೆ ಇವರು. ಶಕುಂತಲಾದೇವಿ ಅಂದ್ರೆ ಫಟಾಫಟ್ ಅಂತ ಕಂಪ್ಯೂಟರ್ ಗಿಂತ ವೇಗವಾಗಿ ಅಂಕಿ-ಸಂಖ್ಯೆ ಲೆಕ್ಕ ಕೊಡುತ್ತಿದ್ದವರು ಮಾತ್ರವಲ್ಲ. ಗೌರಿ ದತ್ತು ಅವರು ಹೇಳುವ ಹಾಗೆ ಶಕುಂತಲಾದೇವಿ ಅವರು ಸ್ಟೇಜ್ ಮೇಲೂ ಚಕಾ ಚಕ್ ಎನ್ನುವ ಹಾಗೆ...

read more
ತೇಜಸ್ವಿಯವರಿಗೆ ‘ಗುಡ್ ಡೇ’ ಬಿಸ್ಕತ್ ಗಿಫ್ಟ್..
ತೇಜಸ್ವಿಯವರಿಗೆ ‘ಗುಡ್ ಡೇ’ ಬಿಸ್ಕತ್ ಗಿಫ್ಟ್..

­ಎತ್ತಣಿಂದೆತ್ತ ಸಂಬಂಧವಯ್ಯಾ! ಮೂಲತಃ ­ತುಮಕೂರು ­ಜಿಲ್ಲೆ ಕುಣಿಗಲ್ ­ತಾಲ್ಲೂಕಿನ ಹಿತ್ತ­ಲಪುರ­ವೆಂಬ ಕುಗ್ರಾಮದ­ವ­ನಾದ ­ನನಗೂ ­ದೂರದ ಮಲೆನಾ­ಡಿನ ಕುಪ್ಪಳಿಗೂ ­ಯಾವ ­ಸಂಬಂಧ? ­ ಬಾಲ್ಯವನ್ನು ಹಳ್ಳಿಯಲ್ಲಿ ­ಕಳೆದು, ವಿದ್ಯಾಭ್ಯಾ­ಸವನ್ನು ಬೆಂಗಳೂ­ರಿ­ನಲ್ಲಿ ಮುಗಿಸಿ, ­ಅಲ್ಲೇ ­ಉನ್ನತ ನೌಕರಿ ­ಹಿಡಿದು ಜಂಜಾ­ಟದ ­ಜೀವನ ­ಸಾಗಿಸಿ,...

read more
ದಡವ ನೆಕ್ಕಿದ ಹೊಳೆಯ ಹಾಡು
ದಡವ ನೆಕ್ಕಿದ ಹೊಳೆಯ ಹಾಡು

ಎಲ್ಲಿಯೋ ಓದಿದ ಸಾಲು ಇದು. ‘ದಡವ ನಾಲಗೆ ನೀಡಿ ನೆಕ್ಕುವ ಹೊಳೆ.’  ಹೊಳೆಯ ನಾಲಿಗೆ ದಡವನ್ನೂ ನೆಕ್ಕುತ್ತ ಅದನ್ನೂ ಹೊಳೆಯ ಭಾಗವಾಗಿಸಿಕೊಳ್ಳುವ ಈ ಚಿತ್ರ ಮತ್ತೆ ಮತ್ತೆ ನನಗೆ ಕಾಣುತ್ತಲೇ ಇರುತ್ತದೆ; ಬಣ್ಣದ ಹೊಳೆಯಾಗಿ. ನನ್ನೊಳಗಿನ ಈ ಬಣ್ಣದ ಹೊಳೆಯ ನಾಲಿಗೆ ನನ್ನ ದೈನಂದಿನ ಬದುಕಿನ ದಡವನ್ನೆಷ್ಟೋ ನೆಕ್ಕಿ ಬಿಟ್ಟಿದೆ…...

read more
“ಚರಿತ್ರೆ ನಿನ್ನನ್ನ ಬಿಡ್ತಿಲ್ವಲ್ಲೇ…”
“ಚರಿತ್ರೆ ನಿನ್ನನ್ನ ಬಿಡ್ತಿಲ್ವಲ್ಲೇ…”

"ಈ ಎಲೆನಾ ಅನ್ನೋ ಹುಡುಗಿ ಜೊತೆ ಇದ್ದು ಇದ್ದು ನಿನಗೆ ಬೋರ್ ಆಗೋದಿಲ್ವಾ, ನಿನ್ನ ವಯಸಿನಲ್ಲಿ ನಾನು ಈ ಚರಿತ್ರೆ ಅನ್ನೋ ಹುಳ  ಬಿಟ್ಟುಕೊಳ್ಳದೆ ನೆಮ್ಮದಿಯಾಗಿ ಬಾರ್ಸಾದ ಬೀಚಿನಲ್ಲಿ ಖುಷಿಯಾಗಿದ್ದೆ. ನಿನ್ನ ಕಥೆ ಒಂಥಾರಾ ಬೋರಿಂಗಪ್ಪ, ಗತಕಾಲದ ವೈಭವವನ್ನ ಎಷ್ಟು ಮೆರೆಸಬೇಕೋ ಅಷ್ಟೇ ಮೆರೆಸಬೇಕು. ಅದು ಮುಗಿದುಹೋದ ಅಧ್ಯಾಯ,...

read more
ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ…
ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ…

ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ. ನಾಗೇಶ್ ಕಾಳೇನಹಳ್ಳಿ ಸುಧೀರ್ಘವಾದ ಕೋರ್ಟ್ ಆದೇಶದ ಸಾರಾಂಶ ಇಲ್ಲಿದೆ ಅಗ್ರಹಾರ ಕೃಷ್ಣಮೂರ್ತಿ, ನಿವೃತ್ತ ಕಾರ್ಯದರ್ಶಿ, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ತಮ್ಮ ಮೇಲೆ ಹೊರಿಸಿದ್ದ ಕೆಲವು ಆರೋಪಗಳನ್ನು ಪ್ರಶ್ನಿಸಿ, ಕರ್ನಾಟಕ ಉಚ್ಚ...

read more
ನಿವೃತ್ತಿ ವೇತನ ದೊರಕಬೇಕು
ನಿವೃತ್ತಿ ವೇತನ ದೊರಕಬೇಕು

ಈ ಅಭಿಪ್ರಾಯವನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ. ರಾಮಲಿಂಗಪ್ಪ ಬೇಗೂರು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ತಡೆಹಿಡಿದಿರುವ ನಿವೃತ್ತಿ ವೇತನ ಕೂಡಲೆ ದೊರಕಬೇಕು. ಹೈಕೋರ್ಟ್ ಅವರ ಪರ ತೀರ್ಪು ಕೊಟ್ಟಿರುವಾಗ ಮೀನಮೇಷ ಏಕೆ? ಹೈಕೋರ್ಟ್ ತೀರ್ಪನ್ನು ಒಪ್ಪದೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ಅಕಾಡೆಮಿ...

read more
ಅಗ್ರಹಾರ ಕೃಷ್ಣಮೂರ್ತಿ ಈಗ ವಿವಾದದ ಮಡಿಲಲ್ಲಿ..
ಅಗ್ರಹಾರ ಕೃಷ್ಣಮೂರ್ತಿ ಈಗ ವಿವಾದದ ಮಡಿಲಲ್ಲಿ..

ಈ ವಾರದ ವಾದ ವಿವಾದದ ಕೇಂದ್ರ ಬಿಂದು ಅಗ್ರಹಾರ ಕೃಷ್ಣಮೂರ್ತಿ.

ಬೆಂಗಳೂರಿನಲ್ಲಿ ಕೇಂದ್ರ ಹೊಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕೆಂದ್ರದಲ್ಲಿ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿಯವರು ನಂತರ ಸಾಹಿತ್ಯ ಅಕಾಡೆಮಿಯ ದೆಹಲಿ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಅಗ್ರಹಾರ ಕೃಷ್ಣಮೂರ್ತಿಯವರು ಅಕಾಡೆಮಿಯ ಕಾರ್ಯದರ್ಶಿಯಾಗುತ್ತಾರೆ ಎನ್ನುವ ಸುದ್ದಿಯೇ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಾದ ವಿವಾದಗಳು ತಾರಕಕ್ಕೇರಿದವು.

ದೆಹಲಿಯ ಕನ್ನಡಿಗರು ಎರಡು ಬಣವಾಗಿ ಹಂಚಿಹೋದರು. ರಾಜ್ಯದಲ್ಲಿ ಇದೇ ಪರಿಸ್ಥಿತಿ.

read more
‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ  ಪುರುಷೋತ್ತಮ ಬಿಳಿಮಲೆ
‘ಕಾಗೆ ಮುಟ್ಟಿದ ನೀರು’ ಎಂಬ ಕನ್ನಡಿಯಲ್ಲಿ ಕಂಡ
ಪುರುಷೋತ್ತಮ ಬಿಳಿಮಲೆ

-ಜಿ ಎನ್ ಮೋಹನ್ ಚಿತ್ರಗಳು: ಅವಧಿಮ್ಯಾಗ್ ಹಾಗೂ ಬಿಳಿಮಲೆ ಅವರ ಸಂಗ್ರಹದಿಂದ ನಾನು ಚಂದ್ರಹಾಸ ಕೋಟೆಕಾರರನ್ನು ಬೆನ್ನಿಗಿಟ್ಟುಕೊಂಡು ಕೊಣಾಜೆಯ ಆ ಮನೆಯ ಬಾಗಿಲು ಬಡಿದಾಗ ರಾತ್ರಿ ಸರಿಯಾಗಿ ಎಂಟು ಗಂಟೆಯಾಗಿತ್ತು. ಬಾಗಿಲು ತೆಗೆದ ಪುರುಷೋತ್ತಮ ಬಿಳಿಮಲೆ ಹಾಗೂ ಶೋಭನಾ ನೇರವಾಗಿ ನಮ್ಮನ್ನು ಕರೆದುಕೊಂಡು ಹೋಗಿ ಕೂರಿಸಿದ್ದು ಊಟದ ಟೇಬಲ್...

read more
ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು
ಬ್ಲಾಗ್ ಲೋಕದಲ್ಲಿ ತೆರೆದಷ್ಟೂ ಬಾಗಿಲು

ಈ ಬರಹ ಪ್ರಕಟವಾದದ್ದು ತರಂಗದ ಯುಗಾದಿ ವಿಶೇಷಾಂಕದಲ್ಲಿ. ಅದನ್ನು ಈಗ ನಿಮ್ಮ ಮುಂದೆ ಇಡಲು ಕಾರಣ ಅವಧಿ ಹೇಗೆ ಡಿಜಿಟಲ್ ಸಾಗರದಲ್ಲಿ ಒಂದು ಬಿಂದು ಅಷ್ಟೇ ಎಂಬುದನ್ನು ನೆನಪಿಸಲು. ಅವಧಿ ತನ್ನ ೧೪ನೆಯ ವಸಂತದಲ್ಲಿರುವಾಗ ಅದು ತನ್ನ ಪೂರ್ವಸೂರಿಗಳಿಂದ ಹುಮ್ಮಸ್ಸು ಪಡೆದಿದೆ. ಹಾಗೆಯೇ ನಂತರ ಬಂಡ ಬ್ಲಾಗ್ ಗಳಿಂದಲೂ ಕಲಿತಿದೆ. -ಜಿ ಎನ್...

read more

Pin It on Pinterest

Share This