ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅನಾವರಣ ಅರ್ಪಿಸುವ ’ಮೆಕ್ಕಾ ದಾರಿ’
ಪಾಟ್ನಾದಲ್ಲಿ ಸಂತೋಷ್ ಅನಂತಪುರ
ಸಂತೋಷ್ ಅನಂತಪುರ ಅದಾಗ ತಾನೆ ಉತ್ತರ ಪ್ರದೇಶದ ಜನತೆಗೆ ಆನೆ ಸವಾರಿ ಸಾಕಾಗಿ ಸೈಕಲ್ ಸವಾರಿಗೆ ಮೊರೆ ಹೋದ ಕ್ಷಣಗಳವು. ಆ ಸಂದರ್ಭದಲ್ಲಿ ನಾನು ಬರೇಲಿಗೆ ಪ್ರಯಾಣ ಬೆಳೆಸಿದ್ದೆ. ದೆಹಲಿ ಮಾರ್ಗವಾಗಿ ಗಾಜ಼ಿಯಾಬಾದ್ ಗೆ ಬಂದು ರೈಲಿನ ಮೂಲಕ ಬರೆಲಿಗೆ ತೆರಳುವವನಿದ್ದೆ. ಗಾಜಿಯಾಬಾದ್ ನಲ್ಲಿ ಒಂದಿಷ್ಟು ಮೊಘಲ್ ರುಚಿ ಉಂಡು...ನಿಲ್ದಾಣದಲ್ಲಿ...
ಶೇಕ್ಸ್ ಪಿಯರ್ ಮನೆಗೆ ಬಂದ: ಒಬ್ಬ ಕವಿಯನ್ನು ಅರ್ಥ ಮಾಡಿಸುವ ಪ್ರಯೋಗ
ಶೇಕ್ಸ್ ಪಿಯರ್ ಮನೆಗೆ ಬಂದ ಡಾ.ಎ.ಆರ್.ಗೋವಿಂದಸ್ವಾಮಿ ಥಿಯೇಟರ್ ತತ್ಕಾಲ್ ರವೀಂದ್ರ ಕಲಾಕ್ಷೇತ್ರದಲ್ಲಿ ನಟರಾಜ್ ಹುಳಿಯಾರ್ ರಚಿಸಿ, ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ 'ಶೇಕ್ಸ್ ಪಿಯರ್ ಮನೆಗೆ ಬಂದ' ನಾಟಕ ಪ್ರಯೋಗಿಸಿತು. ಮಹಾಕವಿ ನಾಟಕಕಾರ ಅಯ್ಸ್ಕಿಲೂಸ್ ಹಾಗೂ ಸೊಪೊಕ್ಲಿಸ್ ಅವರ ಪ್ರಭಾವದಲ್ಲಿ ಬೆಳೆದ ನಾಟಕ ಚಕ್ರವರ್ತಿ ವಿಲಿಯಂ...
ಕುಂ ವೀ ಕಥೆ : 'ನ್ಯೂ ಭಾರತ್ ಟಾಕೀಸ್'
ನಿಲುಗನ್ನಡಿ ನಾಲ್ಕು ಅಡಿಗಿಂತ ಹೆಚ್ಚು ದೂರವಿರಲಿಲ್ಲ, ವೃದ್ಯಾಪ್ಯದಿಂದಾಗಿಯೋ, ಪಾದರಸದ ಅಲ್ಲಲ್ಲಿ ಅಳಿಸಿರುವ ಕಾರಣಕ್ಕೋ 'ನ್ಯೂ ಭಾರತ್ ಟಾಕೀಸ್' ಚಿತ್ರಮಂದಿರದ ಪ್ರತಿಬಿಂಬ ಅಸ್ಪಷ್ಟವಾಗಿರುವುದು. ವಿವಿಧ ಅಂತರದಿಂದ ನೋಡಿದರು, ಆದರೂ ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿಲ್ಲ. ಕಣ್ಣುಗಳು ದಣಿದವು, ಅವುಗಳನ್ನು ಮುಚ್ಚಿ ಪುನಃ ಮೆಲ್ಲಗೆ...
ಅಹವಿ ಹಾಡು : ’ರೇಪ್ ಆದ ಹೆಣ್ಣು ಮೈತುಂಬ ಬಟ್ಟೆ ತೊಡಬೇಕು ಅನ್ನುವ ಮಾತೂ…’
ಈಗೊಂದಿಷ್ಟು ತಿಂಗಳ ಹಿಂದೆ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣ ನಡೆದಿದ್ದು ನೆನಪಿದೆಯಲ್ಲವೇ? ಆಗೆಲ್ಲ ಅದೇನು ಭಯಂಕರ ಹೋರಾಟ, ಚೀರಾಟ. ಇಡೀ ಪತ್ರಿಕೆಯ ತುಂಬ, ಟಿ.ವಿ ಯ ತುಂಬ ಆ ಹುಡುಗಿಯದ್ದೇ ಸುದ್ದಿ. ಆಮೇಲೆ ಆ ಹುಡುಗಿ ಸತ್ತು ಹೋದಳು. ಆಮೇಲೆ ಒಂದಿಷ್ಟು ದಿನ ಅವಳ ಹೆಸರಿನಲ್ಲಿ ಹಣತೆ ಹಚ್ಚಿದೆವು, ಮೌನ ಆಚರಿಸಿದೆವು .... ಅಲ್ಲಿಗೆ...
’ನಾವಂತೂ ಶ್ರೀಕೃಷ್ಣನಿಂದ ಡಿಸ್ಟೆನ್ಸ್ ಮೇಂಟೇನ್ ಮಾಡಿದ್ವಿ’ – ರಶ್ಮಿ ತೆಂಡೂಲ್ಕರ್
ಪಾಪ ಕೃಷ್ಣ! ರಶ್ಮಿ ತೆಂಡೂಲ್ಕರ್ ಗುರುವಾಯುರಪ್ಪ (ಶ್ರೀಕೃಷ್ಣ)ನನ್ನು ತುಂಬಾ ಪ್ರೀತಿಸಿದರೆ, ಅವನು ರಿಯಲ್ ಲೈಫ್ನಲ್ಲಿ ಲವ್ ಸಕ್ಸಸ್ ಆಗೋಕೆ ಬಿಡಲ್ಲ ಎಂಬ ವಿಶ್ವಾಸ ನಮ್ಮ ಕಡೆ ಇದೆ. ಕೆಲವು ಗೆಳತಿಯರ ಲವ್ ಬ್ರೇಕ್ ಅಪ್ ಆದುದಕ್ಕೆ ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯೇ ಕಾರಣ ಎಂದು ಹೇಳಲಾಗುತ್ತಿತ್ತು. ಇದು ಎಷ್ಟು ನಿಜ, ಎಷ್ಟು...
ನಿನ್ನೊಳಗಿಳಿಯದ ಹುಡುಗನ ಹಳಹಳಿಕೆ…
ಎಚ್ ಕೆ ಶರತ್ ಕೂತು ಬರೆಯಬೇಕೆನಿಸಿತು ಕನಸುಗಳ ಮುನ್ನುಡಿಯನ್ನು ಹಾಳೆಯ ಖಾಲಿತನದ ಎದೆ ಗೂಡಲ್ಲಿ ನಿನ್ನದೇ ನಗುವಿನ ಹಾಜರಿ ಮಧ್ಯಾಹ್ನದ ಉರಿ ಬಿಸಿಲಲ್ಲೂ ತಣ್ಣಗೆ ನಗುವ ನಿನ್ನ ಮೊಗದ ಅಂಚಿನಲ್ಲಿ ನಿಂತು ನಗಬೇಕು ಅಂದುಕೊಂಡೆ ನಿನ್ನ ನೋವುಗಳ ಪಾಲಿಗೆ ನಾನು ಕುರುಡ ಯಾರೋ ಹೆಣೆದ ನೋವಿನ ಕಥೆಯಲ್ಲಿ ನೀನೆ ನಾಯಕಿ ನಾನು ಕೇಳುಗ...
ವಿರೂಪಗೊಂಡಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳು – ಡಾ ಶ್ರೀನಿವಾಸ ಕಕ್ಕಿಲಾಯ
ಡಾ ಶ್ರೀನಿವಾಸ ಕಕ್ಕಿಲಾಯ ಪ್ರಾಮಾಣಿಕ ವಿದ್ಯಾರ್ಥಿಗಳ ಹೋರಾಟದಿಂದ ಜಾರಿಗೆ ಬಂದ ಪ್ರವೇಶ ಪರೀಕ್ಷೆ ಖಾಸಗಿ ಸಂಸ್ಥೆಗಳ ಸೊತ್ತಾಗಿದೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕಾಗಿ ರಾಷ್ಟ್ರಾದಾದ್ಯಂತ ಏಕರೂಪದ,ಕೇಂದ್ರೀಯ ನಿಯಂತ್ರಣದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು...
ರಂಗತಂತು ತಂಡದಿಂದ ’ಸುಳಿ’
ರಾಘವೇಂದ್ರ ಜೋಷಿ, ಅನು ಪಾವಂಜೆ ಹಾಗೂ ಹರಿಹರನ್
ರಾಘವೇಂದ್ರ ಜೋಷಿ ರಾವಣ,ಕೀಚಕ,ವಾಲಿ-ಇವರೆಲ್ಲರೂ ಹೆಣ್ಣಿನ ಹಿಂದೆ ಬಿದ್ದವರೇ.ಕೃಷ್ಣ ಕೂಡ.ಆದರೆ ಅವರೆಲ್ಲ ಆಯಾ ಹೆಣ್ಣುಗಳಿಂದ ಏನೋ ಪಡೆಯಲೆತ್ನಿಸಿದವರು.ಕೃಷ್ಣ ಬರೀ ಕೊಡಲು ಯತ್ನಿಸಿದವ.Mostly,ಪಡೆಯುವದಕ್ಕಿಂತ ಕೊಡುವದು ಆತನಿಗೆ ಸುಲಭವಾಗಿ ಕಂಡಿರಬೇಕು.ಅಥವಾ ಹಾಗೆ ಕೊಡುವದರಿಂದ ಮಾತ್ರ ಪಡೆಯುವದು ಸಾಧ್ಯ ಅಂತ ಅನಿಸಿರಬೇಕು.ಒಮ್ಮೆ...
ಶೇಕ್ಸ್‌ಪಿಯರ್ ಮನೆಗೂ ಬಂದ, ಮನಕ್ಕೂ ಬಂದ
ಸುರೇಶ್ ನಾಗಲಮಡಿಕೆ ಕನ್ನಡ ರಂಗಭೂಮಿಯಲ್ಲಿ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕಗಳು ಹಲವು ಬಾರಿ ನಡೆದಾಡಿವೆ. ಆದರೆ ಸ್ವತ: ಶೇಕ್ಸ್‌ಪಿಯರ್‌ನ ವೈಯಕ್ತಿಕ ಬದುಕು ಮತ್ತು ಆತನದೇ ಪಾತ್ರಗಳ ಮುಖಾಮುಖಿಗಳು ಅಪರೂಪವೆಂದೇ ಹೇಳಬೇಕು. ನಟರಾಜ್ ಹುಳಿಯಾರ್ ಆತನ ಬದುಕು ಮತ್ತು ಬರಹಗಳನ್ನು ಬಳಸಿಕೊಂಡು ' ಶೇಕ್ಸ್‌ಪಿಯರ್ ಮನೆಗೆ ಬಂದ ' ಎಂಬ...
ಅಶೋಕ ಶೆಟ್ಟರ್ ಕಾಲಂ : ಒಂದಿಷ್ಟು ಕವಿತೆಯ ಕುರಿತು, ಒಂದಿಷ್ಟು ಸ್ವಂತ..
ನೀವು ಕವಿಯಾದದ್ದು ಹೇಗೆ? ನೀವು ಮೊದಲ ಕವಿತೆ ಬರೆದದ್ದು ಹೇಗೆ? ಎಂದೆಲ್ಲ ಕೇಳಿದರೆ ಹೇಗೆ ಉತ್ತರಿಸಬೇಕೆಂದು ಅರ್ಥವಾಗುವದಿಲ್ಲ. ನಮ್ಮ ಮನೆತನದಲ್ಲಿ ಅಂಥ ಮಹಾ ಕವಿ-ಸಾಹಿತಿಗಳೇನೂ ಇರಲಿಲ್ಲ. ಒಬ್ಬಿಬ್ಬರು ಸಾಹಿತ್ಯಾಸಕ್ತರಿದ್ದರು. ನನ್ನ ಸೋದರ ಮಾವಂದಿರ ಪೈಕಿ ಒಬ್ಬರು ತತ್ವಶಾಸ್ತ್ರದಲ್ಲಿ ಬಿ.ಎ ಮಾಡಿ ಹೈಸ್ಕೂಲ್ ಹೆಡ್...
ನಿಸಾರರ ಕವನದಲ್ಲಿ ಕೃಷ್ಣ ಕಂಡದ್ದು ಹೀಗೆ…
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ
ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ
ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು ತೌಲನಿಕ ಧರ್ಮ ದ ಪ್ರಾಧ್ಯಾಪಕರಾಗಿ ಜಾಗತಿಕ ಜಾನಪದ ವಿದ್ವಾಂಸರ ಸಾಲಿನಲ್ಲಿ ಮೊದಲನೆಯ ಸ್ಥಾನದಲ್ಲಿ ಇದ್ದವರು . ಜನಪದ ನಂಬಿಕೆಗಳು, ಜನಪದ ವೈದ್ಯ , ಶೋಕ ಗೀತೆಗಳಿಂದ ತೊಡಗಿ ಸಂಸ್ಕೃತಿ ,...
’ಸುತ್ತ ಮುತ್ತ ಕಳ್ಳ ಚಿತ್ತ ಇತ್ತ ಬಂದರಾರು?’ – ಜ್ಯೋತಿ ಮಹಾದೇವ್ ಕವಿತೆ
ಬೆಣ್ಣೆ ಕಳ್ಳ ಜ್ಯೋತಿ ಮಹಾದೇವ್ ನೆಲುವಿನಲ್ಲಿ ಹಾಲು ಮೊಸರು ನೆಲದ ಮೇಲೆ ಗೊಲ್ಲ ಮೆಲ್ಲಬೇಕು ಅಚ್ಚ ಬೆಣ್ಣೆ ಕೈಗೆ ನಿಲುಕದಲ್ಲ ಹಾರಿ ಕುಣಿದು ಕಪ್ಪೆ ಜಿಗಿದು ತೂರಿ ನೋಟದೇಣಿ ಭಾರಿ ಕಷ್ಟ ಪಟ್ಟರೇನು ಕೈಗೆ ಸಿಗದು ಭರಣಿ ಸುತ್ತ ಮುತ್ತ ಕಳ್ಳ ಚಿತ್ತ ಇತ್ತ ಬಂದರಾರು? ಮೆತ್ತಗೊಮ್ಮೆ ಇಣುಕಿ ನೋಡೆ ಕೈಗೆ ಹೆಗಲ ಊರು...
ಮೀರತ್ ಪಿತೂರಿ : ಶ್ರಮಜೀವಿಗಳು ಸದಾ ನೆನಪಿಸಿಕೊಳ್ಳಬೇಕಾದ ಚರಿತ್ರೆಯ ಪಾಠ
ಕೆ ಮಹಾಂತೇಶ ಮೀರತ್ 1857 ರ ಪ್ರಥಮ ಸ್ವಾತಂತ್ರ ಸಂಗ್ರಾಮದ ಕೇಂದ್ರ ಬಿಂದು. ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಾ ದೇಶದ ಜನರನ್ನು ತೀವ್ರವಾಗಿ ಶೋಷಣೆ ಮಾಡುತ್ತಿದ್ದ ಬ್ರಿಟಿಷ ಆಳರಸರ ಸೊಕ್ಕನ್ನಡಗಿಸಲು ಎದ್ದ ದೇಶಪ್ರೇಮಿ ಪ್ರಥಮ ಸ್ವಾತಂತ್ಯ್ರ ಹೋರಾಟಕ್ಕೆ ಕಹಳೆಯೂದಿದ್ದು ಇದೇ ಮೀರತ್ ಎಂಬ ಪುಟ್ಟ ನಗರ. ಈ ಪುಟ್ಟದಾದ ನಗರ...
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ತಿಮ್ಮದಾಸುವಿನ ಪನ್ನೇರಳೆ ಮರ ಮತ್ತು ಪದ್ದಕ್ಕ ಎನ್ನುವ ಮುತ್ತೈದೆ
(ಇಲ್ಲಿಯವರೆಗೆ ) ಕೊಳದ ಬಳಿಯ ಪನ್ನೇರಳೇ ಮರದಲ್ಲಿ ಹಣ್ಣಾಗಿದೆ ಎನ್ನುವ ಸುದ್ಧಿಯನ್ನು ಕೂರೆ ಪಾರ್ವತಿ ಎಂಬ ಬ್ರಾಹ್ಮಣತಿ ಕಮಟು ವಾಸನೆಯ ತನ್ನ ಬಟ್ಟೆಯ ಜೊತೆ ಹೊತ್ತು ತಂದಾಗ ಎಲ್ಲರ ಕಣ್ಣುಗಳಲ್ಲೂ ಹೊಳಪನ್ನ ನೋಡಲಿಕ್ಕೇ ಸುತ್ತಲಿದ್ದ ವನದೇವತೆಗಳು ಕಿಕ್ಕಿರಿದು ನಿಂತವೇನೋ ಎನ್ನುವಂತೆ ಮರಗಳು ಬಾಗಿದ್ದವು. ಸ್ಕೂಲಿಗೆ ಹೋಗಲು ಹೆಗಲಿಗೆ...
`ನನಗೆ ಈ ಉಂಗುರದಲ್ಲಿ ನೆಚ್ಚಿಗೆಯಿಲ್ಲ!' – ಎಂ ಆರ್ ಕಮಲಾ ಅವರ ಒಂದು ಕಾಡುವ ಕವನ
ಶಾಕುಂತಲೋಪಾಖ್ಯಾನ ಎಂ ಆರ್ ಕಮಲಾ ಅಪ್ಸರೆಯ ಮಗಳು, ಕೂದಲೆಳೆಯಲ್ಲಿ, ಉಗುರ ತುದಿಯಲ್ಲೂ ಸೌಂದರ್ಯ! ಆಶ್ರಮದ ತರು, ಲತೆಗು ಉಕ್ಕಿ ಬಂದು ಜೀವೋನ್ಮಾದ ಧುಮ್ಮಿಕ್ಕಿ ಹರಿವ ಎದೆಯೀಗ ಹುಚ್ಚು ಹೊಳೆ! ಪುರುಕುಲದ ಅರಸು ಬೇಟೆಗೆ ಬಂದವನು.. ಬೇಟೆಯಾಡಿಯೇ ಬಿಟ್ಟ ಗಿಡದೊಂದಿಗೆ ಗಿಡವಾದವಳ, ಹುಲ್ಲೆ ಮರಿಯಾದವಳ ಅಂಗುಲಂಗುಲವೂ...
ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ಸಂಭ್ರಮ …
’ಈಗ ನನ್ನ ಕಣ್ಣ ತುಂಬಾ ನೀರ ಪಸೆ…’ – ಶ್ರೀದೇವಿ ಕೆರೆಮನೆ ಕವನ
ಲಾಲಸೆ ಶ್ರೀದೇವಿ ಕೆರೆಮನೆ ನೀನು ಇಷ್ಟ ಪಟ್ಟೆ ಎಂದು ಮೊಲೆ ತೊಟ್ಟಿಗೆ ಕಹಿಬೇವು ಲೇಪಿಸಿ ಮಗುವಿನ ಹಾಲು ಬಿಡಿಸಿದೆ ಹಾಲು ಕಟ್ಟಿದ ಮೊಲೆಗೀಗ ಬಾವು ಬಂದಿದೆ ಬಚ್ಚಲಿನ ಚಿಲಕ ಹಾಕಿ ಕಷ್ಟಪಟ್ಟು ಹಾಲು ಹಿಸುಕಿ ಅನಾಥವಾಗಿ ಚೆಲ್ಲಿ ಮೇಲೊಂದಿಷ್ಟು ಬಿಸಿನೀರ ಶಾಕ ಕೊಟ್ಟು ಬಿಸಿಯಾದ ನಿಟ್ಟುಸಿರಿಟ್ಟು ಮಲಗಲೆಂದು ಬಂದರೆ... ನಿನ್ನ...
ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದರೆ ಮಾತ್ರ ಕನ್ನಡ ಉಳಿಯುತ್ತದೆ
ಮುಂದಿನ ದಿನದಲ್ಲಿ ಕನ್ನಡ ಉಳಿಯುತ್ತಾ? ಶರಣಪ್ಪ ಬಾಚಲಾಪುರ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಇಲ್ಲಿಯ ಸಾಹಿತ್ಯ ಶ್ರೀಮಂತವಾಗಿದ್ದು ರಾಷ್ಟ್ರದಲ್ಲಿಯೇ ಅತ್ಯಧಿಕ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಲ್ಲಿಯ ಸಾಹಿತ್ಯ, ಸಂಸ್ಕೃತಿ, ಆಡು ಭಾಷೆ, ನುಡಿಗಟ್ಟು, ಗಾದೆಗಳು ಸೇರಿದಂತೆ ಕನ್ನಡಿಗರದ್ದು...
