ಟೈಂ ಪಾಸ್ ಕಡ್ಲೆ ಕಾಯ್!

ಸೂತ್ರಧಾರ ರಾಮಯ್ಯ

ಸ್ಟ್ರೇಂಜ್ : ನಮ್ಮ ಪರ ದೇಶೀಯ ನಿಲುವು
66 ವರ್ಷಗಳ ಹಿಂದೆ ,ಆರು ಆರು ನೀನಾರು? ತೊಲಗು ಬಿಟ್ಟು ನಮ್ಮೂರು , ‘ಕ್ವಿಟ್ ಇಂಡಿಯಾ ‘ ಅಂತಾ ಅಂದ ನಾವೇ ಇದೀಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಕುರಿತು ‘ಪರ್ದೇಸಿ ಪರ್ದೇಸಿ ಜಾನಾ ನಹೀಂ’ ಅಂತಾ ಅಂಗಲಾಚೋದು ಸಾಲ ದೇ, ‘ಮಧು’ ಪಾತ್ರೆ ಹಿಡಿದು ‘ಬಾಲ’ ಆಡಿಸುತ್ತಾ ‘ಆಯಿಯೇ ಮೆಹರುಬಾನ್ ‘ ಅಂತ ನೇರವಾಗಿ ನೆರವಾಗಿ, ಪ್ಲೀಸ್ ‘ಕಿಟ್ ಇಂಡಿಯಾ’ ಅಂತಾ FDI ಗಳಿಗೂ ‘ಕಮ್ಇನ್’ ಫಾರ್ ಮೋರ್ ‘ಇನ್ ಕಮ್’ ಎಂದು ಸ್ವಾಗತಿಸುತ್ತಿರುವುದು ವಿಪರ್ಯಾಸ.
ಎವೆರಿ ಡೇ SON ಡೇ ?
ಸನ್ 1947 ರಿಂದಲೂ ದೇಶದ ರಾಜಕಾರಣದಲ್ಲಿ ಸನ್ ಗಳು, ಸನಿನ್ ಲಾಗಳು ಸೃಷ್ಟಿಸುತ್ತಿರುವ ಅವಾಂತರ ಬಾರ್ ಮುಜುಗರಗಳಿಗೆ ಲೆಕ್ಕವಿಲ್ಲ. ತತ್ ಸಂಬಂಧ ಉರುಳುವ ಕುರ್ಚಿಗಳಿಗೂ ಜಮಾ ಇಲ್ಲಾ. ಒಂದು ರೀತಿ ಅಳಿಯ’ದ ಪರಿ’ಪಾಠ ಅನ್ನಿರಿ. ಇದರಿಂದ ಕಲೀಬೇಕಾದ ಲೆಸನ್ ಒಂದೇ: less’son’s ಇಂಟರ್ ವೆನ್ಷನ್.
ಓಲ್ಡ್ ಏಜ್ – ಡ್ಯಾಮ್ ಏಜ್!
ಓಲ್ಡ್ ಎಜ್ ನಲ್ಲಿ ಮನುಷ್ಯನೆಂಬ ಪ್ರಾಣಿ ಪಡುವ unt-old ಯಾತನೆಗಳು, ಗೊಣಗಾಟಗಳು, ಹಲುಬಿಕೆಗಳು, ಅರ್ಥವಾಗದ ಪೆಕ್ಯೂ-ಲಿಯರ್ ವರ್ತನೆಗಳು ಒಂದು ರೀತಿ ‘ಏಜ್ ಓಲ್ಡ್’ ಫೆನಾmen on, on men. ಅಹು’ದಾದ’ರಹುದೆನ್ನಿ.
draw ಮಾಡ್ಕೊಂಡು- ಡ್ರಾಮ ಆಡ್ ಕೊಂಡು..

ಜೀವನಾಂದ್ರೆ ‘ಎಳೆ’ವ, ಜಗ್ಗುವ, ತುಡಿ’ಯುವ’, ಆಕರ್ಷಿಸುವ, ಒಲಿಸುವ , ಓಲೈಸುವ, ಕೇಳುವ, ಕೀಳುವ, ಸರಿವ-ಸಮೀಪಿಸುವ ಕಡೆಗೆ,ಸಾಯೋ ನಾರ ಹೇಳಿ ಬಿಡುವ with drawma! ಹಾಗಾಗಿ, ಎಲಿಮೆಂಟ್ ಆಫ್ ಆಕ್ಸಿಜನ್ ಇಲ್ಲದೆ ಹೇಗೆ ಬದುಕಿರಲಾರೆವೋ, ಎಲಿಮೆಂಟ್ ಆಫ್ ಡ್ರಾಮಾ, ಸರ್ಕಸ್ ಇಲ್ಲದೆ ಜೈಸಲಾರೆವು. ಜೀವಿತದ ಪುಟಿವ ಪೂರ್ವಾರ್ದವನ್ನು ಗೋಯಿಂಗ್ ಪ್ಲೇಸಸ್ – ಪ್ಲೇಯಿಂಗ್ ಸರ್ಕಸ್ ಅಂಶಗಳು ಡಾಮಿನೇಟ್ ಮಾಡಿದರೆ, ಉಳಿದಂತೆ ನೆರವಿಗೆ ಬರೋದು ಡ್ರಾಮವೇ; ಇನ್ ಆರ್ಡರ್ ಟು ಲಿವ್, ಮೇಕ್ ಬಿಲೀವ್: ಡ್ರಾಮವೆ ಜಯವೆಂಬ ದಿವ್ಯ ಮಂತ್ರ!
ಛೇ ಇಷ್ಟೊಂದು ಚೀ. ಪಾ ?
ದೇಶದ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಆಕ್ರಮಣ ಮತ್ತು ಹಿಂಸಾಚಾರಗಳು ನಡೆಯುತ್ತಿದ್ದರೂ, ನಾವು ಮಾತ್ರ ಎಂದಿನ ‘ಋಜು’ ಸ್ವಭಾವದಲ್ಲಿ ಶಾಂತಿ ಒಪ್ಪಂದಗಳಿಗೆ ರುಜು ಹಾಕುತ್ತಲೇ ಸಮಸ್ಯೆಗಳನ್ನು drag on ಮಾಡುತ್ತಾ ಬಂದ ಅಲ್ಲಲ್ಲ.., ಕುಂತ ಪರಿಣಾಮ, ಉತ್ತರದಿಂದ dragon ನುಸುಳಿ, ನಮ್ಮ ಸಾವಿರಾರು ಕಿಲೋ ಮೀಟರ್ ಭೂಮಿಕೋ ‘ಚೀನ್’ ಲಿಯಾ! ಇತ್ತ ಪಾಕ್ಡಾ ಪಶ್ಚಿಮದ ಗಡಿಯಲ್ಲಿ ಶರೀಫ್ ನವಾಜರು, ಕೈಲಿ ಪಾರಿವಾಳ ಹಿಡಿದು ಶಾಂತಿ ಜಪಿಸುವುದ ಕಂಡು ಮೈಮರೆತ ನಮ್ಮ ಬೆನ್ನ ಹಿಂದೆಗೆ ತು-ಪಾಕಿಗಳು ಬಾಯ್ನೆಟ್ ನಿಂದ ಅಮಾನುಷವಾಗಿ ತಿವಿವುದ ಕಂಡು ಛೇ, ನೆರೆ ಹೊರೆ ಇಷ್ಟೊಂದು ಚೀ.ಪಾ ? ಐ ಮೀನ್ ಚೀನಾ ಪಾಕಿಸ್ತಾನ ಎಂದು ಹೌಹಾರುವಂತಾಗಿದೆ!
END ಗುಟುಕು
ಯಾವನೇ ಯಾವುದನ್ನೇ ಅತಿ ಮಾಡಿಕೊಂಡರೂ ಸ್ವತಃ ಸಿದ್ಧ – ಅವನತಿ!
ಎಗ್ ಜಾಮ್ ಪಲ್ : ವೈನ್ ಅತಿ ಮಾಡಿಕೊಂಡು ಹೊಂದಿದನಂತೆ ಅವನತಿಯ, ಪಾಪ ಆ ವೈನತೇಯ!
 

‍ಲೇಖಕರು avadhi

October 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: