ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ನೀನೊಮ್ಮೆ ನನ್ನಂತೆ ಒಡಲುಗೊಂಡು ನೋಡಾ’ – ಗಿರಿಜಾ ಎಂ ಆರ್

ದೇಹಾಲಯ ಮತ್ತು ದೇಗುಲ ಗಿರಿಜಾ ಎಂ ಆರ್ ಮೊನ್ನೆ ಮೊನ್ನೆ ಥಾಯ್ಲ್ಯಾಂಡಿನ ಚಿಯಾಂಗ್ಮಯಿಗೆ ಕೆಲಸದ ನಿಮಿತ್ತ ಹೋಗಿ ಸ್ವಲ್ಪ ದಿನ ಇರಬೇಕಾಗಿ ಬಂತು. ಆ ಊರ ತುಂಬಾ ದೇವಸ್ಥಾನಗಳೋ ದೇವಸ್ಥಾನಗಳು. ತಲೆ ಎತ್ತಿದರೆ ಒಂದಲ್ಲಾ ಒಂದು ಬೌದ್ಧ ದೇವಾಲಯದ ಗೋಪುರ ಕಂಡೇ ಕಾಣುತ್ತೆ. ದಿನಾ ಒಂದೊಂದು ದೇವಾಲಯ ನೋಡೋಕೆ ಹೋಗ್ತಾ ಇದ್ದೆ. ವಾಟ್ ಇಂತಕಾನ್...

read more
ವೈಶಾಲಿ ಹೆಗ್ಡೆ ಬರೆದ ಹನಿಗವನಗಳು

ವೈಶಾಲಿ ಹೆಗ್ಡೆ 1. ಬೆಳಬೆಳಗೆ ನೇರ ಕಿಟಕಿಯನು ಹಾರಿ ಹೊದಿಕೆಯೊಳ ತೂರಿ ಲಲ್ಲೆಗರೆದು ಎಬ್ಬಿಸುವ ನಾನೋ ಶತಮೊಂಡಿ ಬಜಾರಿ ಅವನ ಕೆಂಪುಕಿರಣಗಳ ನಸು ಬಿಸಿಗೆಲ್ಲ ಎದ್ದುಬಿಡುವ ಸುಕುಮಾರಿ- ಅಲ್ಲ ವ್ಯರ್ಥ ಪ್ರಯತ್ನಿಸುವ ಅಯ್ಯೋ ಸೂರ್ಯಾ ನನ್ನ ಉರಿಯೆದುರು ನಿಂದೆಂತ ಉರಿಯೋ ಮುತ್ತಿಟ್ಟು ನೋಡೊಮ್ಮೆ ಅದಲು ಬದಲಿಯಾಗಿಬಿಟ್ಟೇವು ೨. ಆಗಲಿಂದ...

read more
’ಹರೆಯದ ವಿಧವೆ’ – ಜೆ ವಿ ಕಾರ್ಲೋ ಅನುವಾದಿಸಿದ ಸಣ್ಣ ಕಥೆ

ಇಂಗ್ಲಿಷಿನಿಂದ: ಜೆ ವಿ ಕಾರ್ಲೋ ಮೂಲ: ಗೇಯಸ್ ಪೆಟ್ರೊನಿಯಸ್ ಎಫೆಸಿಸ್ ನಗರದ ಈ ಹರೆಯದ ಹೆಣ್ಣುಮಗಳು ಮಹಾ ಪತಿವ್ರತೆಯೆಂದು ಹೆಸರಾಗಿದ್ದಳು. ಅಯ್ಯೋ ವಿಧಿವಿಲಾಸವೇ! ಅವಳ ಗಂಡ ತೀರಿಕೊಂಡ. ಎದೆ ಬಡಿದುಕೊಳ್ಳುತ್ತಾ ಕೂದಲು ಕೆದರಿಕೊಂಡು ವಿಲಾಪಿಸುತ್ತಾ ಅವಳು ಶವಯಾತ್ರೆಯಲ್ಲಿ ಭಾಗವಹಿಸುತ್ತಾಳೆಂದು ಎಲ್ಲರೂ ಊಹಿಸಿಕೊಂಡಿದ್ದು...

read more
ಅಬ್ದುಲ್ ಕಲಾಂ ನಿಮಗಿದೋ ಸಲಾಂ

ನಾ ದಿವಾಕರ ಸಾರ್ವಜನಿಕ ಜೀವನದಲ್ಲಿ ಸಾಧನೆಯ ಉತ್ತುಂಗ ಶಿಖರವನ್ನೇರಿ, ಜನಸಾಮಾನ್ಯರ ಮನದಾಳದಲ್ಲಿ ಶಾಶ್ವತವಾದ ಸ್ಥಾನ ಪಡೆಯುವ ಯಾವುದೇ ವ್ಯಕ್ತಿ ಚಾರಿತ್ರಿಕವಾಗಿ ಸ್ಮರಣಾರ್ಹರಾಗುತ್ತಾರೆ. ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಇಂತಹ ಮಹಾನ್ ದಾರ್ಶನಿಕ ವ್ಯಕ್ತಿಗಳು ವಿರಳ ಎನ್ನಬಹುದಾದರೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ....

read more
ಬೇಲೂರು ರಘುನಂದನ್ ಕಾಲಂ : ಮಗಳು ಕುಡಿತದ ಚಟ ಬಿಡಿಸಿದಳು

ಬಾಗಲ ಕೋಟೆಯ ಮಹಾಲಿಂಗಪುರದ ವಾಸಿ ಅನಿಲ್ ದೇಸಾಯ. ವಯಸ್ಸು ಮೂವತ್ತೆಂಟು ವರ್ಷ. ವಿದ್ಯಾವಂತರೂ ಕೂಡ. ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಊರು ಮನೆಯಲ್ಲಿ ಸತ್ಯನಾರಯಣ ಪೂಜೆ ಇತರೆ ಪೂಜೆಗಳನ್ನು ಮಾಡುವ ಪೌರೋಹಿತ್ಯ ಸಹ ಮಾಡುತಿದ್ದವರು. ಹೀಗಿರುವ ಅನಿಲ್ ಅವರ ಬದುಕು ಸದಾ ಕುಡಿತದ ಮತ್ತಿನಲ್ಲಿ ಇದ್ದು ಬದುಕನ್ನು ದುಸ್ತರ...

read more
ಕನ್ನಡತನ ಮತ್ತು ಕಾಸರವಳ್ಳಿ : ಜಿ ಶಿವಶಂಕರ್

  ~ ಶಿವಶಂಕರ್ ಜಿ ಬೆಂಗಳೂರಿನ ಹೊರವಲಯದಲ್ಲಿ ಒಮ್ಮೆ ಗಿರೀಶ್ ಕಾಸರವಳ್ಳಿ ಅವರ 'ಗುಲಾಬಿ ಟಾಕೀಸ್' ಚಿತ್ರದ ಪ್ರದರ್ಶನ ಮತ್ತು ಸಂವಾದವಿತ್ತು. ನಾನು ಮತ್ತು ನನ್ನೊಂದಿಗಿದ್ದ ಗೆಳೆಯನ ಹೊರತಾಗಿ ಆಯೋಜಕರು ಮತ್ತು ವೀಕ್ಷಕರೆಲ್ಲ ಕನ್ನಡೇತರರೇ ಆಗಿದ್ದ ಅಲ್ಲಿ, ಚಿತ್ರ ವೀಕ್ಷಣೆಯ ನಂತರದ ಸಂವಾದದಲ್ಲಿ ಒಬ್ಬರು ಕಾಸರವಳ್ಳಿಯವರನ್ನು...

read more
’ಅನಭಿಜ್ಞ ಶಾಕುಂತಲೆಗೆ ಈಗ ನೂರರ ನಿರೀಕ್ಷೆ!’ – ಪ್ರಕಾಶ್ ಶೆಟ್ಟಿ

2012 ಏಪ್ರಿಲ್ 27, ರವೀಂದ್ರ ಕಲಾಕ್ಷೇತ್ರದಲ್ಲಿ ಅನಭಿಜ್ಞ ಶಾಕುಂತಲ ನಾಟಕ. ನಾಟಕ ನೋಡಿ ಹೊರಬಂದವರು ಜೊನ್ನ ಮಳೆಯಲ್ಲಿ ತೊಯ್ದಂತಿದ್ದರು. ನಾಟಕ, ನಿರ್ದೇಶನ, ಸಂಗೀತ, ನಟನೆ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ ಎಲ್ಲವೂ ಅಲ್ಲಿ ಗೆದ್ದಿತ್ತು. ಹಾಗೆ ಆ ಎಲ್ಲಾ ಅಂಶಗಳೂ ಪರಸ್ಪರ ಪೂರಕವಾಗಿ ಗೆದ್ದಾಗ ಅಂತಹ ಒಂದು ನಾಟಕ ಮೂಡಿಬರುತ್ತದೆ....

read more
ಭಾರತೀಯ ಧರ್ಮಗಳ ಮೇಲೆ ಏಕ ಧರ್ಮದ ಹೇರಿಕೆ ಸಮಂಜಸವೇ?

-ನಾಗೇಶ ತಳವಾರ 'ಧಾರಣಾತ ಧರ್ಮ ಇತ್ಯಾಹಃ ಧರ್ಮ ಧಾರಯತಿ ಪ್ರಜಾಃ' ಈ ಸಾಲುಗಳು ಮಹಾಭಾರತದ ಕರ್ಣ ಪರ್ವದಲ್ಲಿ ಬರುತ್ತೆ. 'ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ ಅಥವಾ ಇನ್ನೊಂದಕ್ಕೆ ಆಧಾರವಾಗಿ ರಕ್ಷಿಸುವುದೋ ಅದು ಧರ್ಮ' ಎನ್ನುತ್ತೆ. ಅಂದ್ರೆ ಭಾರತದ ನೆಲದಲ್ಲಿ ಪ್ರತಿಯೊಂದು ಧರ್ಮಕ್ಕೂ ಸ್ಥಾನವಿದೆ. ಮಾನವನ ಅಂತರಂಗದ ಭಾವನೆಗಳ...

read more
ಸಂಧ್ಯಾರಾಣಿ ಕಾಲಂ : ಸೂರ್ಯನ ಕೊನೆಯ ಕಿರಣದಿಂದ, ಮೊದಲ ಕಿರಣದವರೆಗೂ…

ಏನಾಗಬಹುದು ’ಸೂರ್ಯನ ಕೊನೆಯ ಕಿರಣದಿಂದ ಸೂರ್ಯನ ಮೊದಲ ಕಿರಣದವರೆಗೂ...’? ಒಂದು ಮನೆಯ ಜೋಲಿಯಲ್ಲಿ ಮಗು ಲಾಲಿ ಕೇಳುತ್ತಾ ಮಲಗಿ, ಕಣ್ಣಂಚಿನಲ್ಲಿ ಕನಸು, ತುಟಿಯಂಚಿನಲಿ ನಗು ಇಟ್ಟುಕೊಂಡು ದೇವರಗೂಡಿನ ದೀಪದಂತೆ ಬೆಳಗಬಹುದು, ಹೆಣ್ಣು ಗಂಡಿನ ಒರಟುತನಕ್ಕೆ, ಅವಸರಕ್ಕೆ ಬಾಯಲ್ಲಿ ’ನಿಧಾನ ನಿಧಾನ’ ಎಂದು ಹೇಳುತ್ತಲೇ, ಮನಸ್ಸಿನಲ್ಲಿ...

read more
'ಸಂಬಂಧಗಳು’ – ಎಸ್ ದಿವಾಕರ್

ಎಸ್ ದಿವಾಕರ್ ಕೆಲವು ದಿನಗಳ ಹಿಂದೆ ಕಿರಾಣಿ ಅಂಗಡಿಯೊಂದರಲ್ಲಿ ನಾನೊಂದು ಪತ್ರಿಕೆಯನ್ನು ಕೊಂಡುಕೊಳ್ಳುತ್ತಿರುವಾಗ ಕೊಳ್ಳುವ ಆ ಪ್ರಕ್ರಿಯೆಯನ್ನು ಕುರಿತು, ಆ ಕ್ಷಣದ ವಿದ್ಯಮಾನವನ್ನು ಕುರಿತು (ಅಂಗಡಿಯವನಿಗೆ ನಾನು ಕೊಟ್ಟ ಹಣ, ಅವನು ಹಿಂತಿರುಗಿಸಿದ ಚಿಲ್ಲರೆ, ಪತ್ರಿಕೆಯನ್ನು ನಾನು ಮಡಿಚಿದ ರೀತಿ, ಇತ್ಯಾದಿ), ಚಾರಿತ್ರಿಕವಾಗಿ...

read more
'ದುಃಖದ ಲೆಕ್ಕವಿಡಬಹುದು ಲೆಕ್ಕವಿಲ್ಲ ಸುಖಕ್ಕೆ' – ಟಿ ಎಸ್ ಗೊರವರ ಕವಿತೆ

ತುತ್ತಿನ ಆಟ - ಟಿ ಎಸ್ ಗೊರವರ ನಾವಿಬ್ಬರೂ ಒಂದೇ ಗಂಗಾಳದಲಿ ಹಂಚಿ ತಿಂದೆವು ತುತ್ತು ; ಪ್ರೇಮವನೇ ಹಂಚಿ ತಿಂದಂತೆ   ತುತ್ತಿನಲಿ ಸುಖ, ಮುದ ಒಮ್ಮೆಗೇ ಮೇಳೈಸಿ ತುತ್ತಿನ ಲೆಕ್ಕವೇ ಮರೆತು ಹೋಯ್ತು ಯಾವ ತುತ್ತು ತಿಂದರೂ ತುಟಿ ಮುತ್ತಿನ ಸವಿ ನೆನಪಾಗಿ ತಿಂದದ್ದೇ ತಿಂದದ್ದು !   ದುಃಖದ ಲೆಕ್ಕವಿಡಬಹುದು ಲೆಕ್ಕವಿಲ್ಲ...

read more
ಸ್ವರ್ಣ ಹೇಳಿದ ಚಂದಲೆಯ ಕಥೆ

ಸ್ವರ್ಣ ಎನ್ ಪಿ ಬೆಂಬತ್ತಿದ ಭೂತ ಕುಣಿಯತೊಡಗಿದ್ದು ಈ ಕಲ್ಲನ್ನು ಕಂಡಾಗ .  ಬಸದಿಗಳ ನಾಡು ಗತಿಸಿದ್ದನ್ನು ಕಣ್ಣ ಮುಂದೆ ತಂದು ನಿಲ್ಲಿಸಬಹುದೆಂದು ಗೊತ್ತಿದ್ದರೆ ಇಲ್ಲಿಗೆ ಬರುವ ಧೈರ್ಯ ಮಾಡುತ್ತಿರಲಿಲ್ಲ. ಕೆಳುವವರಿದ್ದರೆ ಕಲ್ಲೂ ಕಥೆ ಹೇಳುತ್ತದೆ. ಬದುಕಿನಲ್ಲಿ ಸುಂದರ ಕನಸುಗಳಿಗಿಂತ ಕಾಡುವ ಭೂತದ ನೆನಪುಗಳೇ ಹೆಚ್ಚು. ಕಾಲದ ಮೇರೆ...

read more
’ಹಾಸಿರುವೆ ಆ ಕನಸುಗಳ ನಿನ್ನ ಪಾದದಡಿಯಲಿ…’ – ಪವಿತ್ರಾ

ಡಬ್ಲ್ಯು. ಬಿ. ಯೇಟ್ಸ್ ಬರೆದ "Aedh Wishes for the Cloths of Heaven" ಕವನದ ಅನುವಾದ - ಪವಿತ್ರ ಸತೀಶ್ ಕುಮಾರ್, ಟೆಕ್ಸಾಸ್ ನನ್ನಲ್ಲಿದ್ದರೆ ಸಗ್ಗದ ಕಸೂತಿ ಅರಿವೆಗಳು, ಬೆಳ್ಳಿ ಬಂಗಾರದ ಕಾಂತಿಯಿಂದೆಣೆದ, ಇರುಳು ಬೆಳಗು ನಸುಕಿನ, ನೀಲಿ ಕರಿ ಮಸುಕಿನರಿವೆಗಳು, ಹರಡುವೆ ಆ ಅರಿವೆಗಳ ನಿನ್ನ ಪಾದದಡಿಯಲಿ: ಆದರೆ ಬಡವ ನಾನು,...

read more
’ಪಂಪಾ ತೀರದಲ್ಲಿ ಸಾಹಿತ್ಯ ವಿಹಾರ’ – ಜಯಶ್ರೀ ಕಾಸರವಳ್ಳಿ

  ಜಯಶ್ರೀ ಕಾಸರವಳ್ಳಿ ಯಾವುದೇ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವಾಗ, ಆಯೋಜಕರ ಉದ್ದೇಶ ಮತ್ತು ನಿರೀಕ್ಷೆಗಳೇನೇ ಇರಲಿ, ಪರಸ್ಪರ ಕೊಟ್ಟು ಕೊಳ್ಳುವಿಕೆಯ ಸಾಹಿತ್ಯಿಕ ವಿನಿಮಯದಲ್ಲಿ ಬರಹಗಾರರಿಗೆ ಒಂದಷ್ಟು ಉಪಯೋಗವಾಗುವುದಂತೂ ನಿಜ. ಹಲವು ಬೌಗೋಳಿಕ ವೈವಿಧ್ಯತೆಯುಳ್ಳ, ಭಾರತೀಯ ವಿಭಿನ್ನ ಪ್ರಾದೇಶಿಕ ಭಾಷಾ...

read more
ನಮ್ಮ್ 'ಧಾರ್ವಾಡ್' ಅಂದ್ರ ಎಲ್ಲಾರಿಗೂ ಇಷ್ಟಾ ಐತ್ರೀ…

  ಎಂ ಬಿ ನದಾಫ ಎಲ್ಲಾರೂ ಈ ಮಾತ ಹೇಳ್ತಾರ...ರೀ. ಯಾಕಂತ್? ಕೇಳಿದ್ರ ನಾನೂ ಧಾರ್ವಾಡ್ದಾಗನ ಶಿಕ್ಷಣ ಮುಗಿಸಿದ್ದೆ, ಧಾರ್ವಾಡ್ ಅಂದ್ರ ನನ್ನ ಜೀವನದಾಗ ಮರ್ಯಾಕಾಗದ ಕ್ಷಣವು ಐತಿ. ಹಂಗ ಗಾಳಿ, ಗಂಧ ನೋಡ್ರಿ ಧಾರ್ವಾಡುದ್ದು. ಧಾರ್ವಾಡ್ ಅಂದ್ರನ ಸಾಕು ತುಂಬ ಪ್ರೀತಿ ತೊರಸ್ತಾರ ಧಾರ್ವಾಡಕ್ಕ ಮತ್ತ ಧಾರ್ವಾಡ್ದವರಿಗೆ...! ನಾನು...

read more
ಅಬ್ದುಲ್ ಕಲಾಂ ಎನ್ನುವ ಬೆಳಕು

ಡಾ  ಅಬ್ದುಲ್ ಕಲಾಂ ವಿಧಿವಶ - ಎಚ್ ಎ ಪಾಟಿಲ್ ಸೌಜನ್ಯ : ಉದಯ್ ಮೋಹಿತೆ ಇಂದು 2015ರ ಜುಲೈ 27 ರಂದು ರಾತ್ರಿ 9 ಗಂಟೆಯ ವೇಳೆಗೆ ಸ್ನೇಹಿತರಾದ ಎಲ್.ಮಂಜುನಾಥರವರು ಓದಲು ಕೊಟ್ಟಿದ್ದ ಹೊಸನಗರ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆಯವರ ಪಯಣ ಕಿರು ಕಾದಂಬರಿಯ ಏಳನೆಯ ಅಧ್ಯಾಯ ಮದಲೆ ಚೌಡಿ...

read more
'…..ತಲಾ ಒಬ್ಬ ರೈತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ…' – ಅಕ್ಕಿಮಂಗಲ ಮಂಜುನಾಥ್

’ಸಾಯಲೆಂದು ಸಾಲ ಮಾಡಬೇಡಿ ’ ಎನ್ನುವ ಡಾ ಎಸ್ ಬಿ ಜೋಗುರ ಅವರ ಲೇಖನಕ್ಕೆ ಅಕ್ಕಿಮಂಗಲ ಮಂಜುನಾಥ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ ಅಕ್ಕಿಮಂಗಲ ಮಂಜುನಾಥ್ ಆ ಸಿನೆಮಾದ ಹೆಸರು ಮಣ್ಣಿನ ಮಗನೆಂದೋ , ಕೃಷಿಕರ ಕುಡಿಯೆಂದೋ , ರೈತನ ಬಾಳೆಂದೋ ಅಥವಾ ಅನ್ನದಾತನೆಂದೋ ಹೆಸರಿಟ್ಟಿದ್ದಿದ್ದರೆ ಬಹುಶಃ ಅದು ಇಷ್ಟೊಂದು...

read more
ಅಂತಿಮ ಸಲಾಂ ಅಬ್ದುಲ್‌ ಕಲಾಂ

ಚಿತ್ರ ಕೃಪೆ : ಪಂಜು ಗಂಗೊಳ್ಳಿ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕಾರ್ಯಕ್ರಮಗಳಿಗೆ ಹಿರಿಯ ಕ್ಷಿಪಣಿ ತಂತ್ರಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ನೀಡಿರುವ ಕೊಡುಗೆಯನ್ನು ಬಣ್ಣಿಸಲು ಪದಗಳೇ ಸಾಲವು. ‘ಭಾರತದ ಕ್ಷಿಪಣಿ ಮನುಷ್ಯ’ ಎಂದೇ ಖ್ಯಾತರಾಗಿದ್ದ ಕಲಾಂ ತಮ್ಮ ಮಾನವೀಯ ಗುಣಗಳು ಮತ್ತು ಪರೋಪಕಾರಿ...

read more
ಪ್ರೇಮ ಎನ್ನುವ ವಿಸ್ಮಯ

ಬಿ ಎಂ ಬಶೀರ್ ಗುಜರಿ ಅಂಗಡಿ ಈ ಜಗತ್ತಿನ ಅತ್ಯಂತ ವಿಸ್ಮಯ ಯಾವುದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಉತ್ತರಿಸಬಹುದು, ಅದು ಪ್ರೇಮ. ದೇವರ ಎಲ್ಲಾ ಸೃಷ್ಟಿಗಳೂ ಅರ್ಥಪೂರ್ಣತೆಯನ್ನು ಪಡೆದುಕೊಳ್ಳುವುದು ಪ್ರೇಮದಿಂದ. ಕಡಲನ್ನು ಸೇರಲು ತಹತಹಿಸುತ್ತಾ ಓಡುವ ನದಿಗಳು, ನದಿಗಳನ್ನು ಸೇರಲು ತಹತಹಿಸುವ ತೊರೆಗಳು, ಮುಗಿಲ ಮೋಡವಾಗಲು...

read more

Pin It on Pinterest

Share This