'ಎಸ್.ಎಲ್.ಬೈರಪ್ಪ ಯಾಕೆ ಪ್ರಶಸ್ತಿ ಹಿಂತಿರುಗಿಸಿಲ್ಲ'…

ಚರ್ಚೆಗಾಗಿ ಈ ಲೇಖನವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ನಿಮ್ಮ ಅಭಿಪ್ರಾಯ ತಿಳಿಸಿ  

samvartha

ಸಂವರ್ಥ ಸಾಹಿಲ್ 

Cartoons: Satish Acharya, R Prasad

ಪ್ರಶಸ್ತಿ ಹಿಂದಿರುಗಿಸುತ್ತಿರುವ ಸಾಹಿತಿ-ಚಿಂತಕರನ್ನು ತಮಾಷೆಯ ವಸ್ತು ಆಗಿಸುತ್ತಿರುವ ಜನರು “ಸಿಖ್ ಮಾರಣ ಹೋಮ ಆದಾಗ ಯಾಕೆ ಇವರು ಪ್ರಶಸ್ತಿ ಹಿಂತುರುಗಿಸಲಿಲ್ಲ?” “ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯವನ್ನು ಪ್ರತಿಭಟಿಸಿ ಯಾಕೆ ಪ್ರಶಸ್ತಿ ಹಿಂತಿರುಗಿಸಲಿಲ್ಲ?” “ಮೂಡಬಿದಿರೆಯಲ್ಲಿ ಬಜರಂಗ ದಳದ ಕಾರ್ಯಕರ್ತನ ಹತ್ಯೆ ಖಂಡಿಸಿ ಯಾಕೆ ಪ್ರಶಸ್ತಿ ಹಿಂತಿರುಗಿಸಲಿಲ್ಲ?” “ರೈತರ ಆತ್ಮಹತ್ಯೆಗೆ ಸ್ಪಂದಿಸುತ್ತಾ ಯಾಕೆ ಪ್ರಶಸ್ತಿ ಹಿಂತಿರುಗಿಸಲಿಲ್ಲ?” ಎಂದೆಲ್ಲ ಪ್ರಶ್ನೆ ಕೇಳುತ್ತಿದ್ದಾರೆ ನಾಡಿನ ಬುದ್ಧಿಹೀನ-ಹೀನಬುದ್ಧಿ ಜೀವಿಗಳು.

ಇವರು ಪ್ರಸ್ತಾಪಿಸುವ ವಿಷಯ ಇಟ್ಟುಕೊಂಡು ಇವರೆಲ್ಲರ ಕುಲದೈವ ಸನ್ಮಾನ್ಯ ಎಸ್.ಎಲ್.ಬೈರಪ್ಪ ಯಾಕೆ ಪ್ರಶಸ್ತಿ ಹಿಂತಿರುಗಿಸಿಲ್ಲ ಎಂಬ ಪ್ರಶ್ನೆ ಕೇಳಬಹುದು ಆದರೆ ಕೇಳೋಲ್ಲ, ಬಿಡಿ. ಮರಳಿಸೋದು ಬಿಡೋದು ಅವರವರಿಗೆ ಬಿಟ್ಟ ಸಂಗತಿ.

satisha acharya on awardsಹಲವಾರು ಸಾಹಿತಿ ಚಿಂತಕರು ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಂದರ್ಭದಲ್ಲಿ ನನ್ನ ಗುರುಗಳಾದ ಎಚ್.ಎಸ್.ಶಿವಪ್ರಕಾಶ್ ಸದ್ಯದ ಪರಿಸ್ಥಿತಿ ಕಳವಳಕಾರಿ ಆಗಿದೆ ಎಂಬುದನ್ನು ಗುರುತಿಸುತ್ತಲೇ ತಾನು ಪ್ರಶಸ್ತಿ ಹಿಂತಿರುಗಿಸುವುದಿಲ್ಲ ಎಂದಿದ್ದಾರೆ ಮತ್ತು ಅದಕ್ಕೆ ಸಕಾರನವನ್ನೂ ಒದಗಿಸಿದ್ದಾರೆ. ಮರಳಿಸದೆ ಇರುವ ಎಲ್ಲ ಹಕ್ಕು ಅವರಿಗಿದೆ ಮತ್ತು ಮರಲಿಸಲೇ ಬೇಕಾದ ಒತ್ತಡ ಇಲ್ಲ, ಯಾರೂ ತರುತ್ತಿಲ್ಲ ಎಂಬುದು ಆರೋಗ್ಯಕರ ಸಂಗತಿ. ಅವರ ನಿರ್ಧಾರವನ್ನು ಗೌರವಿಸುತ್ತೇನೆ.

ಹೀಗಿರುವಾಗ, “ಬೈರಪ್ಪ ಯಾಕೆ ಹಿಂತಿರುಗಿಸಲಿಲ್ಲ?” ಎಂದು ಕೇಳೋದು ಸರಿಯಲ್ಲ. ಅದಿಕ್ಕೆ ಕೇಳೋಲ್ಲ. ಇರಲಿ. ಆ ಪ್ರಶೆ ಎತ್ತಿದರೂ ಈಗ ಪ್ರಶಸ್ತಿ ಹಿಂತಿರುಗಿಸುತ್ತಿರುವವರು ೧೯೮೪ರಲ್ಲಿ ಯಾಕೆ ಹಿಂತಿರುಗಿಸಲಿಲ್ಲ? ರಾಜ್ಯ ಸರಕಾರದ ವಿರುದ್ಧ ಯಾಕೆ ಪ್ರತಿಭಟಿಸಿ ಪ್ರಶಸ್ತಿ ಹಿಂತಿರುಗಿಸಲಿಲ್ಲ? ಕಾಶ್ಮೀರಿ ಪಂಡಿತರ ನೋವಿಗೆ ಯಾಕೆ ಸ್ಪಂದಿಸಿ ಪ್ರಶಸ್ತಿ ಹಿಂತಿರುಗಿಸಲಿಲ್ಲ ಎಂಬ ಪ್ರಶ್ನೆ ಉಳಿದು ಬಿಡುತ್ತದೆ.

ಆದರೆ ಈ ಸಾಹಿತಿ-ಚಿಂತಕರು ಗೋಧ್ರಾ ಘಟನೆಯ ಬೆನ್ನಿಗೆ ನಡೆದ ಮಾರಣಹೋಮ ವಿರೋಧಿಸಿಯೂ ಪ್ರಶಸ್ತಿ ಹಿಂತಿರುಗಿಸಿರಲಿಲ್ಲ. ಆಗ ಕೇಂದ್ರದಲ್ಲಿ ಇದ್ದದ್ದು ವಾಜಪೇಯಿ ಸರಕಾರ..ರಾಜ್ಯದಲ್ಲಿ ಚರ್ಚ್ ದಾಳಿ ನಡೆದ ಸಂದರ್ಭದಲ್ಲಿಯೂ ಪ್ರಶಸ್ತಿ ಹಿಂತಿರುಗಿಸಿರಲಿಲ್ಲ. ಆಗ ರಾಜ್ಯದಲ್ಲಿ ಇದ್ದದ್ದು ಯಡ್ಯೂರಪ್ಪ ಅವರ ಸರಕಾರ. ಈಗ ಯಾಕೆ ಇವರೆಲ್ಲ ಪ್ರತಿಭಟನಾ ರೂಪವಾಗಿ ಪ್ರಶಸ್ತಿ ಹಿಂತಿರುಗಿಸುತ್ತಿದ್ದಾರೆ? ಇದು ನಿಜವಾಗಿಯೂ ಬುದ್ಧಿಹೀನ-ಹೀನಬುದ್ಧಿ ಜೀವಿಗಳು ಹೇಳುತ್ತಿರುವಂತೆ ಭಾಜಪ ವಿರೋಧಿ, ಹಿಂದೂ ವಿರೋಧಿ ನಿಲುವೋ? ಒಂದುವೇಳೆ ಹಾಗೆ ಆಗಿದ್ದಲ್ಲಿ ೨೦೦೨ ಮತ್ತು ೨೦೦೮ರಲ್ಲಿ ಯಾಕೆ ಪ್ರಶಸ್ತಿ ಹಿಂತಿರುಗಿಸಿರಲಿಲ್ಲ?

ಯಾಕೆ ಅಂದರೆ ಈ ಪ್ರತಿಭಟನೆ ಕೇವಲ ಕಲ್ಬುರ್ಗಿ ಹತ್ಯೆ ಪ್ರತಿಭಟಿಸಿ ಇಲ್ಲ ದಾದ್ರಿ ಹತ್ಯೆ ಪ್ರಕಾರಕ್ಕೆ ಸ್ಪಂದಿಸುತ್ತಾ ನೆದೆದಿರುವುದಲ್ಲ. ಸದ್ಯ ದೇಶದ ಉದ್ದಗಲ ವ್ಯಾಪಿಸಿರುವ ವಿಷಕಾರಿ ವಾತಾವರಣ, ಅಸಹನೆಯ ವಾತವರವನ್ನು ಪ್ರತಿಭಟಿಸುತ್ತಾ.

ಇಂಥಾ ಒಂದು ವಾತಾವರ ಸೃಷ್ಟಿ ಆಗಲು ಕಾಂಗ್ರೆಸ್ ನಿಷ್ಕ್ರಿಯತೆ ಕಾರಣ ಅಲ್ಲವೆಂದೇನೂ ಅಲ್ಲ. ಇದು ಎಡಪಂಥೀಯರ ವೈಫಲ್ಯವೂ ಹೌದು. ಆದರೆ ಇದು ನಿಜವಾಗಿಯೂ ಯಾರ ಗೆಲುವು? ನಿಸ್ಸಂಶಯವಾಗಿ ಇದು ಹಿಂದುತ್ವದ ಗೆಲುವು.achche din cartoon

ಹೀಗಿರುವಾಗ ಇದು ಹಿಂದುತ್ವ ಮತ್ತು ಅದು ನಿರ್ಮಿಸಿರುವ ಅಸಹನೆಯ ವಾತಾವರಣದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ. ಮತ್ತು ಇದೇ ಸರಿಯಾದ ಪ್ರತಿಭಟನಾ ಮಾರ್ಗ ಎಂದೇನೂ ಅಲ್ಲ. ಪ್ರತಿಭಟನೆಗೆ ಹಲವಾರು ಮಾರ್ಗ ಇದೇ. ಇದೂ ಒಂದು ಮಾರ್ಗ.

ಇವಿಷ್ಟು ಬುದ್ಧಿಹೀನ-ಹೀನಬುದ್ಧಿ ಜೀವಿಗಳಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ಅಸಹನೆಯ ವಾತಾವರಣದಲ್ಲಿ ಸ್ವಾಮಿಭಕ್ತಿಯೇ ಹಬ್ಬಿರುವ ಸಂದರ್ಭದಲ್ಲಿ ಪ್ರತಿಭಟನೆ ಪ್ರತಿರೋಧವನ್ನು ಸಹಿಸಿಕೊಳ್ಳದ ಇವರು ಅವಾಚ್ಯವಾಗಿ ಮಾತನಾಡುವುದು, ವ್ಯಂಗ್ಯ ಮಾಡುವುದು ಬಿಟ್ಟು ಇನ್ನೇನು ಮಾಡಿಯಾರು?

‍ಲೇಖಕರು admin

October 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಪಂಡಿತಾರಾಧ್ಯ

    ಅಭಿಪ್ರಾಯ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾರನ್ನೂ ಅವಮಾನಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲ; ಇರುವುದೂ ಬೇಡ. ಬುದ್ಧಿ ಹೀನ -ಹೀನ ಬುದ್ಧ ಜೀವಿ ಎಂಬ ಪರಿಭಾಷೆ ದಯವಿಟ್ಟು ಬೇಡ.

    ಪ್ರತಿಕ್ರಿಯೆ
  2. Rj

    ಡಾ. ಕಲಬುರ್ಗಿ ಅವರ ಹತ್ಯೆಗೆ ಸಂಬಂಧಪಟ್ಟಂತೆ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಅವರು ಸ್ಪಂದಿಸುತ್ತಿರುವ ರೀತಿಯಿದು. ಸಾಹಿತ್ಯ ಅಕಾಡೆಮಿ ಸರ್ಕಾರದ ಅಧೀಕೃತ ಸಂಸ್ಥೆಯಲ್ಲದಿದ್ದರೂ ಕೂಡ ಸರಕಾರದ ಹಣದಲ್ಲಿ ನಡೆಯುವಂಥ ಸಂಸ್ಥೆಯಾಗಿರುವದರಿಂದ, ಅಕಾಡೆಮಿ ಒಂದರ್ಥದಲ್ಲಿ ಸರಕಾರದ ಮುಸುಕಿನ ಮುಖವೆಂದೇ ಭಾವಿಸಬಹುದಾಗಿದೆ. ತನ್ಮೂಲಕ, ಹೀಗೆ ಪ್ರಶಸ್ತಿಗಳನ್ನು ವಾಪಸ್ಸು ಮಾಡಿ, ಆ ಮೂಲಕ ಹತ್ಯೆಗೆ ಸಂಬಂಧಪಟ್ಟಂತೆ ಸರ್ಕಾರದ ಆಡಳಿತ ವೈಖರಿಯನ್ನು ವಿರೋಧಿಸುವಂಥ ಈ ವಾಪಸಾತಿ ಚಳವಳಿಯ ಬಗ್ಗೆ ಎರಡು ಮಾತಿಲ್ಲ. ಯಾಕೆಂದರೆ ಅದು ಅವರ ನಿರ್ಧಾರ. ಹಾಗಂತ ಪ್ರಶಸ್ತಿಯನ್ನು ವಾಪಸ್ಸು ಮಾಡದೇ ಇರುವವರನ್ನು ಸದರಿ ಹತ್ಯೆಗೆ ಸ್ಪಂದಿಸದಿರುವವರ ಪಟ್ಟಿಯಲ್ಲಿ ಹಾಕುವಂಥ, ಆ ಮೂಲಕ ಇವರೆಲ್ಲ ಬಲಪಂಥೀಯರು, ಮಾನವೀಯತೆ ಇಲ್ಲದವರು ಅಥವಾ ಪ್ರಶಸ್ತಿಗೆ ಅಂಟಿಕೊಂಡವರು-ಅನ್ನುವಂಥ ಭಾವನೆಗಳನ್ನೂ ಹುಟ್ಟುಹಾಕಲಾಗುತ್ತಿದೆ.
    ಇದೊಂಥರ, ಮುಲಾಜಿಗೆ ಬಸಿರಾಗುವಂಥ ಸ್ಥಿತಿ!

    ಪ್ರಶಸ್ತಿ ಹಿಂತಿರುಗಿಸುವದರ ಮೂಲಕ ಹೇಗೆ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಬಹುದೋ, ಹಾಗೆಯೇ ಅಕಾಡೆಮಿಯ ಪ್ರಶಸ್ತಿಗಳನ್ನು ಹಿಂದಿರುಗಿಸದೆಯೇ ಹತ್ಯೆಯನ್ನು ಖಂಡಿಸಬಹುದು. ನ್ಯಾಯಕ್ಕಾಗಿ ಒತ್ತಾಯಿಸಬಹುದು. ವೈಯಕ್ತಿಕವಾಗಿ ನನಗೆ ಅನಿಸುವದೇನೆಂದರೆ, ಪ್ರಶಸ್ತಿ ಅನ್ನುವದು ಆಯಾ ಕೃತಿಕಾರನ ಪ್ರತಿಭೆ ಮತ್ತು ಪರಿಶ್ರಮಗಳ ಸಂಗಮಕ್ಕೆ ದೊರಕಿರುವಂಥ ಮನ್ನಣೆ. ಅಕಾಡೆಮಿ ನೀಡುವ ಇಂಥ ಮನ್ನಣೆಗಳಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕತೆಯಿದೆ ಎನ್ನುವದು ಇನ್ನೊಂದು ಚರ್ಚಾಸ್ಪದ ವಿಷಯ. ಅದಿಲ್ಲಿ ಬೇಡ.

    ಹೀಗೆ, ಸಾಹಿತಿಯೋರ್ವನ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಂದಾಯವಾದ ಈ ಗೌರವವನ್ನು ವಾಪಸ್ಸು ಮಾಡುವದು ಎಷ್ಟರಮಟ್ಟಿಗೆ ಸರಿ? ಇದು ಅಕಾಡೆಮಿಯ ಸಾಹಿತ್ಯಕ ಪ್ರೋತ್ಸಾಹಕ್ಕೆ ಅಗೌರವ ಸಲ್ಲಿಸಿದಂತಾಗುವದಿಲ್ಲವೇ? ಇನ್ನು, ಪ್ರಶಸ್ತಿಗಳನ್ನು ಘೋಷಿಸುವ ಕಾಲದಲ್ಲೇ ಅದನ್ನು ತಿರಸ್ಕರಿಸಿರುವ ಸಾಹಿತಿಗಳೂ ನಮ್ಮಲ್ಲಿದ್ದಾರೆ. ಆ ಮೂಲಕ, ಬರಹ ಮಾತ್ರ ನನ್ನ ಪ್ಯಾಶನ್, ಪ್ರಶಸ್ತಿಗಳು ಅಲ್ಲ ಅಂತನ್ನುವದನ್ನೂ ಸಾರಿ ಹೇಳಿದವರಿದ್ದಾರೆ.
    ವಿಷಯ ಹೀಗಿರುವಾಗ, ಭೈರಪ್ಪ ಯಾಕೆ ಪ್ರಶಸ್ತಿ ವಾಪಸ್ಸು ಮಾಡಿಲ್ಲ ಅಂತೆಲ್ಲ ಪ್ರಶ್ನಿಸುವದೂ, ವಾಪಸ್ಸು ಮಾಡಿದವರ ಬಗ್ಗೆ ಹಗುರವಾಗಿ ಕಿಚಾಯಿಸುವದೂ- ಈ ಎರಡೂ ಬೆಳವಣಿಗೆಗಳು ಕೇವಲ ವ್ಯಂಗ್ಯವನ್ನೇ ಸ್ಫುರಿಸಬಲ್ಲವೇ ಹೊರತು, ಹತ್ಯೆಗೆ ಸಂಬಂಧಪಟ್ಟ ಯಾವ ಸಹಾಯವನ್ನೂ ಮಾಡಲಿಕ್ಕಿಲ್ಲ.

    ಇದೆಲ್ಲದರ ನಡುವೆಯೂ ನನಗೆ ಒಂದು ಸಂಗತಿ ಅರ್ಥವಾಗುತ್ತಿಲ್ಲ. ಮುಂದೊಮ್ಮೆ, ಕಲಬುರ್ಗಿ ಹತ್ಯೆಯ ನಿಜಾಂಶ ಪತ್ತೆ ಆಗಿ, ಅಪರಾಧಿಗಳಿಗೆ ಶಿಕ್ಷೆಯೂ ಆದ ನಂತರ ಮುಂದಿನ ಕತೆ ಏನು? ಈಗಾಗಲೇ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದವರು ಮತ್ತೇ ಅಕಾಡೆಮಿಗೆ ಹೋಗಿ ಅವನ್ನೆಲ್ಲ ವಾಪಸ್ಸು ತಗೆದುಕೊಳ್ಳುತ್ತಾರಾ? ಅಥವಾ ಇಂಥ ಘಟನೆಗಳು ನಿಲ್ಲುವವರೆಗೆ ನಾನು ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವದಿಲ್ಲ ಅಂತ ಘೋಷಿಸುತ್ತಾರಾ?

    ಸಾಹಿತ್ಯಕ ಗೌರವ ಮತ್ತು ಸಾಮಾಜಿಕ ಹಿತಾಸಕ್ತಿ ಎರಡೂ ಬೇರೇ ಬೇರೆಯಲ್ಲವೇ? ಒಂದನ್ನು ಧಿಕ್ಕರಿಸಿ ಅವಮಾನಿಸುವದರ ಮೂಲಕ ಇನ್ನೊಂದನ್ನು ಹೇಗೆ ಗೌರವಿಸಬಲ್ಲೆವು?

    ಪ್ರತಿಕ್ರಿಯೆ
    • Ajith

      Your comment is contradictory and confusing. By asking the question …are the writers going to review their decision after kalburgi killers are punished. …. you have taken this discussion to a new level. Can’t stop laughing, sorry 🙂

      ಪ್ರತಿಕ್ರಿಯೆ
  3. Raghavendra

    ಪ್ರತಿಭಟನೆಯ ಬೇರೆ ಬೇರೆ ವಿಧಾನಗಳಿರುವಾಗ ಸಾಹಿತಿಗಳು ತಮ್ಮ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಅದನ್ನು ಮಾಡಲು ಮುಂದಾದರೆ ಅದರಲ್ಲೇನು ವಿಶೇಷವಿದೆ? ಅದು ಅವರವರ ವೈಯಕ್ತಿಕ ವಿಚಾರ. ಅವರಿಗೆ ಪ್ರಶಸ್ತಿ ಬಂದಾಗಲೂ, ಅವರದನ್ನು ತ್ಯಜಿಸಿದಾಗಲೂ ಈ ದೇಶದ ಸಾಮಾನ್ಯ ಪ್ರಜೆ ಆ ಬಗ್ಗೆ ತಲೆಕೆಡಿಸಿಕೊಂಡವನಲ್ಲ. ಅದನ್ನು ಹಾಗೆಯೇ ಕಾಣುವುದು ಆರೋಗ್ಯಕರ. ಆದರೆ ಕೆಲವರಂತೂ ಚಡ್ಡಿಯಲ್ಲಿ ಇರುವೆ ಹೊಕ್ಕಂತೆ ಥೈಥೈ ಕುಣಿಯುತ್ತಿರುವುದು ಗಮನಿಸಿದರೆ ನಿಜಕ್ಕೂ ಈ ಬಗೆಯ ಪ್ರತಿಭಟನೆ ಪರಿಣಾಮಕಾರಿಯಾಗಿದೆ ಎಂದೇ ಅನಿಸುತ್ತದೆ! ಸಂವರ್ತ ಸಾಹಿಲ್ ಅವರ ಲೇಖನ ಸ್ವಸ್ಥ ಮನಸ್ಸಿನ ಅಭಿವ್ಯಕ್ತಿಯಾಗಿದೆ. ಅಲ್ಲಲ್ಲಿ ಟೈಪಿಂಗ್ ಮಿಸ್ಟೇಕುಗಳಿದ್ದು ಕಿರಿಕಿರಿಯಾಗುತ್ತದೆ.

    ಪ್ರತಿಕ್ರಿಯೆ
    • Kotresh Arsikere

      ಪ್ರಶಸ್ತಿ ಹಿಂದಿರುಗಿಸುವುದು ನೈತಿಕತೆ ಎಂಬ ಅಭಿಪ್ರಾಯ ಬಿಂಬಿಸುವುದು ಅಷ್ಟು ಸರಿಯಾದುದಲ್ಲ.ಅದು ಆಯಾ ಬರಹಗಾರ/ಕವಿ ಗೆ ಬಿಟ್ಟ ವಿಷಯ ಆದರೆ ಮಾನವೀಯ ಘಟನೆಗಳು ಆದಾಗ ಸ್ಪಂದಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ಲೇಖಕರ ಕರ್ತವ್ಯ ಆಗಿದೆ.ಎಡ ಮತ್ತು ಬಲ ಎಂಬುದು ಸೈಧಾಂತಿಕ ಸಂಘರ್ಷ ಇರಬೇಕಾದ ಹೊತ್ತಿನಲ್ಲಿ ಮಾನವೀಯ ಮೌಲ್ಯಗಳು ಅಪಮೌಲ್ಯವಾಗುತ್ತಿರುವುದು ನಿಜಕ್ಕೂ ದುಃಖ ತರುವ ಸಂಗತಿ.

      ಸಿಖ್ ಹತ್ಯೆಕಾಂಡವಾಗಲಿ, ಗೋದ್ರಾ ಹತ್ಯಾಕಾಂಡವಾಗಲಿ , ಕಲಬುರ್ಗಿಯವರ ಅಥವಾ ಗೌರೆಯವರ ಹತ್ಯೆಯಾಗರಿ ಈ ನೆಲದ ಮಾನವೀಯ ಘಟನೆಗಳು. ಇದು ಕೇವಲ ಒಂದು ಪಂಥದ ಲಂಖಕನೋ, ಬರಹಗಾರನೋ ಮಾತ್ರ ಖಂಡಿಸಬೇಕಾದದು ಅಲ್ಲ.ಮನುಷತ್ವ ಬರುವವರೆಲ್ಲರೂ ಖಂಡಿಸಬೇಕಾದದು.ಪ್ರಶಸ್ತಿ ಹಿಂದಿರುಗಿಸುವುದು ಆ ಲೇಖಕನ/ಬರಹಗಾರರಿಗೆ ಬಿಟ್ಟದ್ದು.

      ಹಾಗೆಯೇ ಈ ಲೇಖನದ ಭಾಷೆ ನನಗಂತೂ ಘಾಸಿಯುಂಟು ಮಾಡಿದೆ.ಅವಧಿಯಂತಹ ಪತ್ರಿಕೆಯಲ್ಲಿ ಈ ರೀತಿಯ ಭಾಷೆ ಸಲ್ಲದು.

      ಪ್ರತಿಕ್ರಿಯೆ
  4. Niveditha

    Nimma lekhanadalli nimma niluve sariyaagi vyakthavaagilla… Heegiruvaaga ashtu haguravaagi buddhiheena heenabuddhi emba padagala balakeya ouchithyave prashnaarha… Abhivyakthi swathnthrya innobbara gouravakke chyuthi thaaradirali.. Andahaage nimma kaladaiva yaaru endu thiliyalilla..

    ಪ್ರತಿಕ್ರಿಯೆ
  5. ನಾಗೇಶ್ ಕ್ಯಾತನಹಳ್ಳಿ

    ಪ್ರಶಸ್ತಿ ಹಿಂತಿರುಗಿಸಿಯೇ ತಮ್ಮ ಅಭಿಪ್ರಾಯ ಮಂಡಿಸಬೇಕು ಎಂಬ ತತ್ವ ಸರಿಯಲ್ಲ. ತಮ್ಮ ಅಭಿಪ್ರಾಯವನ್ನು ಹೇಗೆ ಬೇಕಾದರೂ ವ್ಯಕ್ತಪಡಿಸಬಹುದು. ಆದರೆ ಕೆಲವರು ತಮ್ಮ ಅಭಿಪ್ರಾಯವನ್ನು ಗಟ್ಟಿಯಾಗಿ ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದುದನ್ನು ತೋರಿಸಿಕೊಳ್ಳಲು ತಮಗೆ ಬಂದಿರುವ ಪ್ರಶಸ್ತಿಗಳನ್ನು ಹಿಂತಿರುಗಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದು ಅವರ ನಿಯಮ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: