Breaking News: ಕೆ ಎಸ್ ಎಲ್ ಸ್ವಾಮಿ ಇನ್ನಿಲ್ಲ

K-S-L-Swamy

vajapeyiಗೋಪಾಲ ವಾಜಪೇಯಿ ಕಂಡಂತೆ

ಸುಸಂಸ್ಕೃತ, ಸಂಗೀತ ವಿಶಾರದ, ಸರಸ ಮಾತುಗಾರ, ಅನುಭವ ಸಂಪತ್ತನ್ನು ಹಂಚಿಕೊಳ್ಳುತ್ತಿದ್ದ ಸಹೃದಯಿ. ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಿದ್ದ ಖಂಡಿತವಾದಿ.
1971ನೆಯ ಇಸವಿಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಫೋಟೋ ನನ್ನ ಕಣ್ಣೆದುರು ಕಟ್ಟಿದಂತಿದೆ. ಅದರಲ್ಲಿ ಶ್ರೀನಾಥ್, ಗಂಗಾಧರ್, ರಾಜೇಶ್, ‘ಎಡಕಲ್ಲು ಗುಡ್ಡ’ದ ರಂಗ ಜೊತೆ ನಿಂತ ಕೆಎಸ್ಸೆಲ್ ಸ್ವಾಮಿ ಯಾನೆ ರವಿ… ಎಲ್ಲರೂ ಸಮವಯಸ್ಕರೆನಿಸುತ್ತಿದ್ದ ಸುಂದರಾಂಗರು.

ರವಿಯಣ್ಣ ನಿಲುವಿನಲ್ಲಿ ನಟನೆಯಲ್ಲಿ ಯಾವ ಹೀರೋಗೂ ಕಮ್ಮಿಯಿರಲಿಲ್ಲ. ಆದರೆ, ಅವರು ನಿರ್ದೇಶಶಕರಾಗಿ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿದರು, ಪ್ರತಿಭಾವಂತರನ್ನು ಪರಿಚಯಿಸಿದರು. ಗಾಯಕರಾಗಿ ಮರೆಯಲಾರದ ಹಾಡುಗಳನ್ನು ಕೊಟ್ಟರು. ‘

ಅವರೊಟ್ಟಿಗೆ ಮಾತಾಡುವ ಅವಕಾಶ ಅನೇಕ ಬಾರಿ ನನಗೆ ಸಿಕ್ಕಿತ್ತು. ಪ್ರತಿ ಸಲದ ಭೇಟಿಯಲ್ಲಿಯೂ ಅವರ ಒಂದೊಂದು ಮುಖದ ಪರಿಚಯ ; ಒಂದೊಂದು ಆಸಕ್ತಿಯ ಅನಾವರಣವಾಗುತ್ತಿತ್ತು. ಸಂಸ್ಕೃತವಂತೂ ಸರಿಯೇ ಹಿಂದಿ, ತೆಲುಗು, ತಮಿಳು, ಮಲಯಾಳಂ, ಒರಿಯಾ ಮತ್ತು ಬಂಗಾಳಿ ಭಾಷೆಗಳನ್ನೂ ಅವರು ಬಲ್ಲವರಾಗಿದ್ದರು.

ಮಾತಿಗೆ ಕೂತರೆ ಗಜಲ್, ಹಳೆಯ ಹಿಂದಿ ಚಿತ್ರಗೀತೆಗಳು, ಬೇಂದ್ರೆ ಕವಿತೆಗಳು ಒಂದೇ ಎರಡೇ…
ಕೆಎಸ್ಸೆಲ್ ಸ್ವಾಮಿ ಯಾನೆ ರವಿ ಎಂದರೆ ಅರ್ಧ ಶತಮಾನಕ್ಕೂ ಹೆಚ್ಚಿನ ಕನ್ನಡ ‘ಚಿತ್ರರಂಗದ ಅನುಭವಗಳ ಒಂದು ಸಂಪುಟ’.
ಅವರ ಕಣ್ಮರೆಯಿಂದಾಗಿ ಆ ‘ಸಂಪುಟ’ವೀಗ ಕಾಲಗರ್ಭದಲ್ಲಿ ಲೀನವಾದಂತಿದೆ.

ಕೆ.ಎಸ್.ಎಲ್.ಸ್ವಾಮಿ

 ರವಿ ಎಂದೇ ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುವ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ ) ‘ಕೆ.ಎಸ್.ಎಲ್.ಸ್ವಾಮಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ಮಂಡ್ಯ ಜಿಲ್ಲೆಯ ಕೃಶ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇವರ ಹುಟ್ಟೂರು. ಜಿ.ವಿ.ಅಯ್ಯರ್ ಮತ್ತು ಎಂ.ಆರ್.ವಿಠಲ್ ಅವರ ಸಹಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ರವಿಯವರ ನಿರ್ದೇಶನದ ಮೊದಲ ಚಲನಚಿತ್ರ ತೂಗುದೀಪ. ಗಾಂಧಿನಗರ, ಭಾಗ್ಯಜ್ಯೋತಿ, ಮಲಯ ಮಾರುತ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಇವರು, ತಮ್ಮ ಗುರು ಪುಟ್ಟಣ್ಣ ಅವರ ನಿಧನದಿಂದ ಅಪೂರ್ಣಗೊಂಡಿದ್ದ ಮಸಣದ ಹೂವು ಮತ್ತು “ಸಾವಿರ ಮೆಟ್ಟಿಲು” ಚಿತ್ರಗಳನ್ನು ಮುಂದುವರೆಸಿ, ಪೂರ್ತಿಯಾಗಿ ನಿರ್ದೇಶಿಸಿದರು. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮೊದಲಾದಂತೆ ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರನಟಿ ಬಿ.ವಿ.ರಾಧ ಇವರ ಪತ್ನಿ.

೧೯೯೦ರಲ್ಲಿ ಇವರ ನಿರ್ದೇಶನದ “ಜಂಬೂ ಸವಾರಿ” ಅತ್ಯುತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರಪತಿಯವರ “ಸ್ವರ್ಣ ಕಮಲ”ಪಡೆದು, ಮುಂದೆ ಜರ್ಮನಿಯ ಕೈಂಡರ್ ಚಲನಚಿತ್ರೋತ್ಸವ (೧೯೯೦) ಹಾಗೂ ಟೆಹರಾನ್ ಚಿತ್ರೋತ್ಸವದಲ್ಲಿ (೧೯೯೧) ಪಾಲ್ಗೊಂಡಿತ್ತು. ಇವರ ನಿರ್ದೇಶನದ ಆರು ಮೂರು ಒಂಬತ್ತು ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ಇವರು ಸುಮಾರು ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕೆ.ಎಸ್.ಎಲ್. ಸ್ವಾಮಿ ನಿರ್ದೇಶಿರುವ ಚಿತ್ರಗಳು

1. ತೂಗುದೀಪ

2. ಗಾಂಧೀನಗರ

3. ಲಗ್ನಪತ್ರಿಕೆ

4. ಭಾಗ್ಯದ ಭಾಗಿಲು

5. ಕುಳ್ಳ ಏಜೆಂಟ್ ೦೦೦

6. ದೇವರ ದುಡ್ಡು

7. ಕೃಷ್ಣ ರುಕ್ಮಿಣಿ ಸತ್ಯಭಾಮ

8. ಅರಿಶಿನ ಕುಂಕುಮ

9. ಲಕ್ಶ್ಮಿ ಸರಸ್ವತಿ

10. ಮಾಗಿಯ ಕನಸು

11. ಮುಗ್ಧ ಮಾನವ

12. ಭಾಗ್ಯ ಜ್ಯೋತಿ

13. ಮಲಯ ಮಾರುತ

14. ಡ್ರೈವರ್ ಹನುಮಂತು

15. ಜಿಮ್ಮಿ ಗಲ್ಲು

16. ಮತ್ತೆ ವಸಂತ

17. ಮಿಥಿಲೆಯ ಸೀತೆಯರು

18. ದೇವರು ಕೊಟ್ಟ ತಂಗಿ

19. ಭಲೆ ಅದೃಷ್ಟವೋ ಅದೃಷ್ಟ

20.ರಾಮ ಲಕ್ಶ್ಮಣ

‍ಲೇಖಕರು admin

October 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. shashikala

    with the demise of KSL Ravi Kannada film industry lost a great director, actor and a great personality

    ಪ್ರತಿಕ್ರಿಯೆ
  2. asha

    Great multifaceted personality and a Samaritan to the core. May his soul find eternal peace. We will miss you sir.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: