ದಲಿತ ಸಾಹಿತ್ಯ ಪರಿಷತ್ ನಲ್ಲಿ ಭಿಕ್ಕಟ್ಟು

nagaraj-hettur-2

ನಾಗರಾಜ್ ಹೆತ್ತೂರು

ಖ್ಯಾತ ಕವಿ ಸತ್ಯಾನಂದ ಪಾತ್ರೋಟ ಅವರ ಸರ್ವಾಧ್ಯಕ್ಷತೆಯಲ್ಲಿ ಬಾಗಲ ಕೋಟೆಯಲ್ಲಿ 6 ನೇ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಂದು ಕೊನೆಯ ದಿನವಾಗಿದ್ದು ಯಶಸ್ವಿಯಾಗಿ ನಡೆಯಲಿ ಎಂದು ಆಶಿಸುತ್ತಲೇ , ದಸಾಪ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನವನ್ನು ರಾಜಿನಾಮೆ ನೀಡುತ್ತಿರುವ ವಿಷಯವನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಕಸಾಪಕ್ಕೆ ಪರ್ಯಾಯವಾಗಿಯೋ ಅಥವಾ ದಲಿತ ಸಾಹಿತ್ಯ ಮತ್ತು ದಲಿತ ಸಾಹಿತಿಗಳಿಗೆ ಅತ್ಯಂತ ಅವಶ್ಯವಿರುವ ಕಾಲಘಟ್ಟದಲ್ಲಿ ತಾವು ಮತ್ತು ಮತ್ತು ತಮ್ಮ ಗೆಳೆಯರು `ದಲಿತೋದಯ’ ಆಶಯದೊಂದಿಗೆ  1997 ರಲ್ಲಿ ಹುಟ್ಟುಹಾಕಿದ ದಸಾಪ ಇಂದು ನಾನು ಸೇರಿದಂತೆ ನನ್ನಂತಹ ಹಲವಾರು ಸಾಹಿತಿಗಳು, ಸಂಘಟಕರನ್ನು ಬೆಳಕಿಗೆ ತಂದಿದ್ದು ನೂರಾರು ದಲಿತ ಸಾಹಿತಿಗಳನ್ನು ಹುಟ್ಟುಹಾಕಿದೆ. ಈ ನಾಡಿದ ದಲಿತ ಸಾಹಿತ್ಯಕ್ಕೆ ದಸಾಪ ಕೊಡುಗೆ ಅಪಾರವಾಗಿದೆ. ಇದನ್ನು ಗೌರವಿಸುತ್ತಲೇ ರಾಜಿನಾಮೆ ಕಾರಣ ಮತ್ತು ಇತರೆ ಕೆಲವೊಂದು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

hands in linesನೆನ್ನೆ ಬಿ.ಟಿ. ಜಾಹ್ನವಿ ದಸಾಪ ನೀಡಿದ ಪ್ರಶಸ್ತಿಯನ್ನು ಹಿಂದುರುಗಿಸಿ ಕಾರಣ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಕಾರಣಗಳನ್ನು ನಾವು ಮತ್ತು ವಯಕ್ತಿಕವಾಗಿ ನನ್ನಂತಹವರು ಒಪ್ಪುವುದಿಲ್ಲ. ಯಾಕೆಂದರೆ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಸನ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳ್ಳದೆ. ನಾಡು-ನುಡಿ, ದಲಿತರ, ಹಲ್ಲೆ ದೌರ್ಜನ್ಯ ಗಳಿಗೆ ಬಹಿಷ್ಕಾರಗಳಿಗೆ ಸಂಬಂಧಪಟ್ಟಂತೆ ಪ್ರತಿ ಸಂದರ್ಭದಲ್ಲೂ ಹಾಸನ ಜಿಲ್ಲಾ ಘಟಕ ಬೀದಿಗಿಳಿದು ಪ್ರತಿಭಟಿಸಿದ್ದೇವೆ . ಉಳಿದ ಜಿಲ್ಲೆಗಳ ಬಗ್ಗೆ ಮಾಹಿತಿ ಇಲ್ಲ . ಈ ವಿಚಾರದಲ್ಲಿ ರಾಜ್ಯ ಘಟಕ ಸಂಪೂರ್ಣವಾಗಿ ಸೋತಿದೆ ಎಂದು ಹೇಳಬಲ್ಲೆ ಇಂತಹ ಸಂದರ್ಭದಲ್ಲಿ ರಾಜ್ಯ ಘಟಕ ಕರೆ ಕೊಟ್ಟ, ಖಂಡಿಸಿದ, ಬೀದಿಗಿಳಿದು ಪ್ರತಿಭಟಿಸಿದ ಉದಾಹರಣೆ ಇಲ್ಲ. ಹೀಗಾಗಿ ಜಾಹ್ನವಿ ಅವರು ಹೇಳುವುದರಲ್ಲಿ  ಅರ್ಥವಿದೆ. ( ಈ ವಿಚಾರದಲ್ಲಿ ಹಾಸನ ಜಿಲ್ಲಾ ಘಟಕ ಅನ್ವಯಿಸುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ಕೆಲಸ ಮಾಡಿದ ದಾಖಲೆಗಳಿವೆ. ಜಾಹ್ನವಿ ಅವರ ಆರೋಪಗಳನ್ನು ವಯಕ್ತಿಕವಾಗಿ ಅಲ್ಲಗೆಳೆಯುತ್ತಾ)

ಈ ಸಂದರ್ಭ ಜಾಹ್ನವಿ ಅವರ ಪ್ರಶ್ನೆಗಳು ಪ್ರಸ್ತುತವಾಗಿವೆ ಎಂದು ಹೇಳುತ್ತಲೇ ಒಂದಷ್ಟು ವಿಚಾರದ ಬಗ್ಗೆ ಚರ್ಚೆ ಮತ್ತು ತೀರ್ಮಾನವಾಗಲಿ ಎಂದು ಒತ್ತಾಯಿಸುತ್ತೇನೆ.  ದಸಾಪ ಇಡೀ ರಾಜ್ಯಾದ್ಯಂತ ಘಟಕಗಳನ್ನು ಹೊಂದಿದೆ. ಸರಕಾರದಿಂದ ಅನುದಾನ ಪಡೆಯುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಹೀಗಿದ್ದರೂ ಕಳೆದ 18 ವರ್ಷದಿಂದ ಪರಿಷತ್ ನ ರಾಜ್ಯಾಧ್ಯಕ್ಷರಾಗಿ  ತಾವು ಹಾಗೂ ಕಾರ್ಯದರ್ಶಿಯಾಗಿ ನೀವು ಹುಟ್ಟು ಹಾಕಿದ್ದಾಗ ಇದ್ದ ಬಾಡಿ (ವ್ಯಕ್ತಿಗಳು) ಮುಂದುವರೆದಿದೆ. ಬಹುಶಃ ಇದೊಂದು ದಾಖಲೆ. ಇದು ಪ್ರಜಾಪ್ರಭುತ್ವ ವ್ಯವಸ್ಥಗೆ ಮಾರಕವಲ್ಲವೇ…? ಮತ್ತು ಪರಿಷತ್ ನ್ನು ಒಂದು ವ್ಯಕ್ತಿ ಅಥವಾ ಒಂದು ತಂಡಕ್ಕೆ ಮನೋಪಲಿ ಮಾಡಿಕೊಂಡಿರುವುದು ತಪ್ಪಲ್ಲವೇ…? ಅಂಬೇಡ್ಕರ್ ಆಶಯಗಳಿಗೆ ವಿರುದ್ದವಲ್ಲವೇ..?  ಅಖಿಲ ಭಾರತ ಸಮ್ಮೇಳನದಲ್ಲಿ ಮುಂದಿನ ವರ್ಷ ಎಲ್ಲಿ ಸಮ್ಮೇಳನ ನಡೆಯುತ್ತದೆ ಎಂಬ ಬಗ್ಗೆ ಕೊನೆಯೆ ಅರ್ಧ ಗಂಟೆ ಸಭೆ ಕರೆದು ಇಡೀ ವರ್ಷದ ಒಂದು ಸಭೆಯನ್ನು ಮುಗಿಸುವ ತಾವುಗಳು ಈವರಗೆ ಯಾಕೆ ರಾಜ್ಯ ಮಟ್ಟದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆಯುತ್ತಿಲ್ಲ. ಈವರೆಗೆ ಚುನಾವಣೆಯೇ ನಡೆದಿಲ್ಲ,  ಅಥವಾ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿಟ್ಟುಕಡಲು ಮನಸ್ಸಿಲ್ಲವೇ..? ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ತಾವುಗಳು ಬೇರೆಯವರಿಗೆ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಡುತ್ತೀರೆಂದು ಖಂಡಿತವಾಗಿಯೂ ನಂಬಿರುತ್ತೇವೆ.

ಇನ್ನು 1-05-2011 ಹಾಸನ  ಜಿಲ್ಲಾ ಘಟಕದ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿದ ನಂತರ ಹಾಸನದಲ್ಲಿ ಈ ಹಿಂದೆಂದೂ ನಡೆಸದಷ್ಟು ದಲಿತ ಸಾಹಿತ್ಯ ಚಟವಟಿಕೆಗಳನ್ನು ನಡೆಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 2 ಜಿಲ್ಲಾ ಸಮ್ಮೇಳನ 24 ಕ್ಕೂ ಹೆಚ್ಚು ಕಾರ್ಯಕ್ರಮ (ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಸಿನಿಮಾ ಪ್ರದರ್ಶನ, ನಾಟಕೋತ್ಸವ, ಕವಿಗೋಷ್ಠಿ…) ಹೀಗೆ ರಾಜ್ಯದಲ್ಲೇ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನಾವು ಮಾಡಿದ್ದೇವೆ. ಈ 4 ವರ್ಷದಲ್ಲಿ ಇಷ್ಟು ಕೆಲಸ ಮಾಡಿದ ತೃಪ್ತಿ ನನಗಿದೆ.  ಆ ಕಾರಣಕ್ಕೆ ನಮ್ಮೊಳಗಿನ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುವ ದೃಷ್ಠಿಯಿಂದ ಪರಿಷತ್ ನನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಹೊಸಬರಿಗೆ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ನಾನು ಪರಿಷತ್ ಜಿಲ್ಲಾ ಘಟಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಿದ್ದೇನೆ. ಈ ಮಧ್ಯೆ ಕಳೆದ 3 ಅಖಿಲ ಭಾರತ ಸಮ್ಮಳನಗಳಿಗೆ ಭಾಗವಹಿಸಿದ್ದೇನೆ. ಈಗಾಗಲೇ 2 ಪುಸ್ತಕ ಬರೆದಿದ್ದೇನೆ. ಸಾಹಿತ್ಯ ಸಂಘಟನೆ, ಹೋರಾಟ ಎಲ್ಲದರಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆಯೂ ಪರಿಷತ್ ಕಟ್ಟಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ಕೆಲಸ ಮಾಡಿದ್ದೇವೆ.

ಇದನ್ನು ಯಾಕೆ ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ ಎಂದರೆ. ಇಂದು ದಲಿತ ಸಾಹಿತ್ಯ ಎತ್ತರಕ್ಕೆ ಬೆಳೆಯುತ್ತಿದೆ. ಸಾಹಿತ್ಯದ ಹೊಸ ಶಖೆ ಪ್ರಾರಂಭವಾಗಿದೆ. ನಾವು ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಹೊರಬರಬೇಕಿದೆ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಬರಹಗಾರರಿದ್ದಾರೆ. ಇವರ್ಯಾರನ್ನೂ ಪರಿಷತ್ ತಲುಪುತ್ತಿಲ್ಲ. ದಸಾಪ ಎಲ್ಲರ ಪರಿಷತ್ ಆಗಬೇಕು ಎಂಬುದು ನಮ್ಮ ಬಯಕೆ. ಈ ನಿಟ್ಟಿನಲ್ಲಿ ಹೊಸ ರೂಪಗಳೊಂದಿಗೆ ಇನ್ನೂ ಚೇತೂಹಾರಿಯಾಗಿ ಕಟ್ಟಬೇಕಾದ ಅವಶ್ಯಕತೆ ಇದೆ. ಕಸಾಪ ಕ್ಕೆ ಚುನಾವಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದಲಿತ ಸಾಹಿತ್ಯ ಪರಿಷತ್ ಗೂ ಚುನಾವಣೆ ನಡೆಯಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡುವ ಗೌರವ .ಈ ನಿಟ್ಟಿನಲ್ಲಿ ನೀವು ಮತ್ತು ಪದಾಧಿಕಾರಿಗಳು ಯೋಚಿಸಬೇಕಿದೆ. 18 ವರ್ಷದಿಂದ ಒಂದಿಬ್ಬರ ಕೈಯ್ಯಲ್ಲಿರುವ ಪರಿಷತ್ ನ್ನು ಪುನರ್ ಸಂಘಟಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕಿದೆ.  ಈ ನಿಟ್ಟಿನಲ್ಲಿ ಯೋಚಿಸುತ್ತೀರಾ ಎಂದು ಆಶಿಸುತ್ತಲೇ,  ಕಳೆದ 4 ವರ್ಷದಲ್ಲಿ ನನ್ನೆಲ್ಲ ಕೆಲಸಗಳನ್ನು ಬೆಂಬಲಿಸಿ ಬೆನ್ನು ತಟ್ಟಿರುವ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ದಯಮಾಡಿ ಇದನ್ನು ಬೇರೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೆ, ಪರಿಷತ್ ಕಟ್ಟುವ ನಿಟ್ಟಿನಲ್ಲಿ ಗಟ್ಟಿ ಗೆಜ್ಜೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿ ತೀರ್ಮಾನ ಕೈಗೊಳ್ಳುತ್ತೀರಾ ಎಂಬ ಸದಾಭಿಲಾಷೆಯೊಂದಿಗೆ ದಲಿತ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. 6 ನೇ ಅಖಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ.  7 ನೆಯ ಸಮ್ಮೇಳನಕ್ಕೆ ಹೊಸ ತಂಡದೊಂದಿಗೆ ಹೊಸ ರೂಪುಗಳೊಂದಿಗೆ ಹೊರಹೊಮ್ಮಲಿ….

ಇಂತಿ ವಿಶ್ವಾಸಗಳೊಂದಿಗೆ

ನಾಗರಾಜ್ ಹೆತ್ತೂರು, 

ಅಧ್ಯಕ್ಷರು, ದಸಾಪ ಜಿಲ್ಲಾ ಘಟಕ,

ಹಾಸನ

‍ಲೇಖಕರು admin

October 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವೀರಣ್ಣ ಮಂಠಾಳಕರ್

    ಸಾಹಿತ್ಯದ ಹೊಸ ಶಖೆ ಪ್ರಾರಂಭವಾಗಿದೆ. ನಾವು ಜಿಡ್ಡುಗಟ್ಟಿದ ವ್ಯವಸ್ಥೆಯಿಂದ ಹೊರಬರಬೇಕಿದೆ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ಬರಹಗಾರರಿದ್ದಾರೆ. ಇವರ್ಯಾರನ್ನೂ ಪರಿಷತ್ ತಲುಪುತ್ತಿಲ್ಲ. ದಸಾಪ ಎಲ್ಲರ ಪರಿಷತ್ ಆಗಬೇಕು ಎಂಬುದು ನಮ್ಮ ಬಯಕೆ.) ನಾಗರಾಜ್ ಹೆತ್ತೂರು, ಅವರು ರಾಜಿನಾಮೆ ಕೊಡುವ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಂಡಿರುವುದರಲ್ಲಿ ಎಲ್ಲರನ್ನು ಚಿಂತನೆಗೆ ಹಚ್ಚುವಂಥದ್ದು. ಅವರ ಎಲ್ಲಾ ವಿಚಾರಗಳು ಅಕ್ಷರಶಃ ಸತ್ಯವಾಗಿದೆ. ಇಂದು ಸಾಮಾಜಿಕ ಜಾಲತಾಣ, ಫೇಸ್‍ಬುಕ್‍ನಲ್ಲಿ ಉತ್ತಮೋತ್ತಮ ಬರಹಗಾರರು ಕಾಣಿಸಿಕೊಳ್ಳುತ್ತಿದ್ದಾರೆ. ಅಂತಹವರನ್ನು ಸಾಹಿತ್ಯ ಪರಿಷತ್ತಿನಂಥ ವೇದಿಕೆಗಳಡಿಯಲ್ಲಿ ಕರೆತಂದು ಪರಿಚಯಿಸಬೇಕಾದ್ದು ಎಲ್ಲರ ಕರ್ತವ್ಯವೂ ಆಗಿದೆ. ಎಲೆಮರೆ ಕಾಯಿಯಂತೆ ತಮ್ಮಷ್ಟಕ್ಕೆ ತಾವು ಬರೆದುಕೊಂಡು ಶ್ರೇಷ್ಟ ಬರಹಗಾರರ ಸಾಲಿನಲ್ಲಿ ನಿಲ್ಲುವಂಥ ಎಲ್ಲಾ ಸಾಮಥ್ರ್ಯ ಹೊಂದಿರುವವರನ್ನು ಪರಿಷತ್ತುಗಳು ಕಡೆಗಣಿಸುತ್ತಿವೆ ಎಂಬುದು ಮಾತ್ರ ನಿಜ. ಬದಲಾವಣೆಯ ಗಾಳಿ ಬೀಸಬೇಕಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: