ಅರುಣ್ ಎಂಬ ಮಾಂತ್ರಿಕ

artist arun kumar

ಅರುಣ್ ಎಂಬ ಮಾಂತ್ರಿಕನ ಬಗ್ಗೆ ಮಾತನಾಡದೆ ಈ ದಿನ ‘ಅವಧಿ’ಯಲ್ಲಿ ಪ್ರಕಟವಾದ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಎನ್ನುವ ಕೃತಿಯನ್ನು ಬಿಡುಗಡೆ ಮಾಡುವುದು ಸರಿಯಲ್ಲ. ಈ ದಿನಮಾನದಲ್ಲಿ ಯಾವುದೇ ಪುಸ್ತಕದ ಅಂಗಡಿಗೆ ಭೇಟಿ ಕೊಟ್ಟರೆ, ಕುಲಾವಿ ಏರಿಸಿಕೊಂಡ ಕಿಲ ಕಿಲ ನಗುವ ಮಕ್ಕಳಂಥಾ ಪುಸ್ತಕಗಳು ಕಾಣಿಗೆ ಬಿದ್ದರೆ, ಅದರ ಹಿಂದೆ ಒಂದೋ ಅಪಾರ ಇರುತ್ತಾರೆ ಇಲ್ಲವೇ ಅರುಣ್ ಕುಮಾರ್ ಇರುತ್ತಾರೆ

artist arun kumar1ಅರುಣ್ ಪತ್ರಕರ್ತ. ಲಂಕೇಶ್ ಪತ್ರಿಕೆಯಲ್ಲಿ ಸಿನೆಮಾ ವರದಿಗಾರರಾಗಿದ್ದವರು. ಈಗಲೂ ‘ಅವಧಿ’ ಸೇರಿದಂತೆ ಹಲವು ಪತ್ರಿಕೆಗಳಿಗೆ ಸಿನೆಮಾ ಸಂಬಂಧಿ ಬರಹಗಳನ್ನು ಬರೆಯುತ್ತಾರೆ. ಸಿನೆಮಾದ ಮೋಹ ಬರೀ ನೋಡಿ ಸುಮ್ಮನಾಗುವುದಕ್ಕಲ್ಲ. ಯಾವುದೇ ಸಿನೆಮಾದ ಆಳಕ್ಕೆ ಇಳಿದು ಮಾತನಾಡಬಲ್ಲ ಶಕ್ತಿ ಇವರಿಗಿದೆ. ಬಹುಷಃ ಈ ಹವ್ಯಾಸದಲ್ಲಿಯೇ ಚಿತ್ರಿಕೆಗಳು ಇವರ ತಲೆಯಲ್ಲಿ ಕೂಡುತ್ತಾ ಹೋಯಿತೇನೋ.. ಅವರು ದಿನೇ ದಿನೇ ಕಂಪ್ಯೂಟರ್ ಮೌಸ್ ನಲ್ಲಿ ಆಟವಾಡತೊಡಗಿದರು. ಕಂಪ್ಯೂಟರ್ ತೆರೆ ಇವರ ಗೆರೆಗಳಿಂದ ತುಂಬಿ ಹೋಯಿತು.
ಇವತ್ತು ಮಾರುಕಟ್ಟೆಯಲ್ಲಿ ಇವರನ್ನು ತುಂಬಾ ಭಿನ್ನ ಎನ್ನುವಂತೆ ಮಾಡಿದ್ದರೆ ಅದು ಅವರ ಗೆರೆ ಹಾಗೂ ಬಣ್ಣದ ಪ್ರಜ್ಞೆ. ಚಕಾಚಕ್ ಇವರು ಗೆರೆ ಎಳೆಯುವ ರೀತಿ, ಕೃತಿಯನ್ನು ಅರ್ಥ ಮಾಡಿಕೊಳ್ಳುವ ವಿಧಾನ, ಪ್ರಕಾಶಕರ ಸದಾ ಬಡ ಜೋಬುಗಳಿಗೆ ಸ್ಪಂದಿಸುವ ವ್ಯವಧಾನ, ಇವರು ನಮ್ಮವರು ಎನ್ನುವ ಭಾವ ಮೂಡಿಸಿಬಿಡುತ್ತದೆ ಅಂಕಿತ ಪುಸ್ತಕದಿಂದ ಹಿಡಿದು ಪಲ್ಲವ ಪ್ರಕಾಶನದವರೆಗೆ ಯಾರನ್ನಾದರೂ ಕೇಳಿ.. ಇವರ ವೇಗ ಮತ್ತು ಒಂದು ಕೇಳಿದರೆ ಹತ್ತು ಮುಖಪುಟ ಕೈಗಿಡುವ ಇವರ ಉದಾರ ಮನಸ್ಸು ಎಂತಹವರನ್ನೂ ಆವರಿಸಿಕೊಂಡುಬಿಡುತ್ತದೆ.
ಅರುಣ್ ‘ಸಿನಿ ಗಂಧ’ ಸಿನೆಮಾ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿದ್ದಾರೆ. ಅಂದ ಹಾಗೆ ಅವರದ್ದೇ ಆದ ‘ಫಲ್ಗುಣಿ’ ಪುಸ್ತಕ ಪ್ರಕಾಶನವಿದೆ.
ಅರುಣ್ ಮಿತಭಾಷಿ. ಅವರ ಮಾತೇನಿದ್ದರೂ ಅವರು ರೂಪಿಸುವ ಕೃತಿಗಳಲ್ಲಿಯೇ. ಅವರ ಜನ ನಂಟು ಎಷ್ಟು ಅಗಾಧವೆಂದರೆ ಇಂದಿಗೂ ಹಲ ಪತ್ರಿಕೆ, ಚಾನಲ್ ಗಳಿಗೆ ತತ್ ಕ್ಷಣ ಮಾಹಿತಿ, ತತ್ ಕ್ಷಣದ ಕಾಂಟ್ಯಾಕ್ಟ್ ಬೇಕಾದರೆ ಅದು ಅರುಣ್ ಕುಮಾರ್ ಮೂಲಕವೇ. ದೊಡ್ಡ ಅಂಕಿಯ ಸಂಬಳದ ಆಮಿಷಗಳಿದ್ದರೂ ಅದನ್ನು ಪಕ್ಕಕ್ಕೆ ಸರಿಸಿ ಕಂಪ್ಯೂಟರ್ ಡಬ್ಬಿಯ ಮೊರೆ ಹೋಗಿರುವ ಅರುಣ್ ಒಂದರ್ಥದಲ್ಲಿ ಇಂದು ಕನ್ನಡ ಪ್ರಕಾಶನ ಉದ್ಯಮದ ಚರಿತ್ರಕಾರ. ಪತ್ರಕರ್ತ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಸಂತಸದ ಬದುಕು ಸಾಗಿಸುತ್ತಿರುವ ಅರುಣ್ ‘ಅವಧಿ’ಯ ಅವಿಭಾಜ್ಯ ಅಂಗ ಕೂಡಾ . ಗುಡ್ ಲಕ್ ಅರುಣ್
ಅರುಣ್ ದೂರವಾಣಿ ಸಂಖ್ಯೆ: 99000 00579
ಅರುಣ್ ಕೆಲಸ ಹೇಗಿರುತ್ತೆ ಅಥವಾ ನೀವು ಪುಸ್ತಕದಲ್ಲಿ ಕಾಣುವ ಒಂದು ಮುಖಪುಟದ ಸಾಹಸ ಯಾತ್ರೆ ಹೇಗಿರುತ್ತದೆ, ಅದು ಏರಿಳಿಯುವ ದಾರಿಗಳೇನು ಎಂದು ತೋರಿಸಲು ಇಂದು ಬಿಡುಗಡೆಯಾಗುತ್ತಿರುವ ಎನ್ ಸಂಧ್ಯಾರಾಣಿ ಅವರ ಪುಸ್ತಕದ ಎಲ್ಲಾ ಮುಖಗಳನ್ನೂ ಮುಂದಿಡುತ್ತಿದ್ದೇವೆ. ಈ ಪುಸ್ತಕದಲ್ಲಿ ಅಭಿನವ ಲೋಗೋ ಇದೆ. ಇದು ಕರಡು ಮುಖಪುಟ ರೂಪಿಸುವಾಗ ಕಲಾವಿದರು ಸುಮ್ಮನೆ ಬಳಸುವ ಲೋಗೋ ಮಾದರಿ ಮಾತ್ರ. ಈ ಕೃತಿ ಪ್ರಕಟಿಸಿದವರು ಪಲ್ಲವ ಪ್ರಕಾಶನ Yake Kaduthide-12

Yake Kaduthide-13

Yake Kaduthide-14

Yake Kaduthide-15

Yake Kaduthide-10

Yake Kaduthide-16

Yake-Kaduthide-10D

‍ಲೇಖಕರು admin

October 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ವಸುಧೇಂದ್ರ

    ಯಾವುದೇ ಅನುಮಾನವಿಲ್ಲದಂತೆ ಅರುಣ್ ಒಬ್ಬ ಅತ್ಯುತ್ತಮ ಮುಖಪುಟ ಕಲಾವಿದರು. ಬಣ್ಣಗಳ ಬಗ್ಗೆ ಅವರಿಗಿರುವ ಕಲಾಪ್ರಜ್ಞೆ ವಿಶೇಷವಾಗಿದೆ. ಜೊತೆಗೆ ಅವರು ಕೆಲಸ ಮಾಡುವದರಲ್ಲಿ ಶಿಸ್ತನ್ನು ಪರಿಪಾಲಿಸುತ್ತಾರೆ. ಅದು ನನಗೆ ಹೆಚ್ಚು ಇಷ್ಟವಾಗುತ್ತದೆ. ಅಪಾರ ಮತ್ತು ಅರುಣ್ ಕನ್ನಡದ ಪುಸ್ತಕಗಳನ್ನು ಅಂತಱ್ರಾಷ್ಟ್ರೀಯ ಮಟ್ಟಕ್ಕೆ ಒಯ್ದಿದ್ದಾರೆ ಎಂದರೆ ಖಂಡಿತಾ ಉತ್ಪ್ರೇಕ್ಷೆ ಅಲ್ಲ.

    ಪ್ರತಿಕ್ರಿಯೆ
  2. ಅರುಣ್ ಕುಮಾರ್ ಜಿ

    ಮೇಡಂ… ಎಷ್ಟೊಂದು ಬರೆದುಬಿಟ್ಟಿದೀರಿ… ನೋಡಿದ್ದು ತಡವಾಯ್ತು. ಕ್ಷಮಿಸಿ. ಥ್ಯಾಂಕ್ಸು ಒಪ್ಪಿಸಿಕೊಳ್ಳಿ….

    ಪ್ರತಿಕ್ರಿಯೆ
  3. Bharavi

    ಒಂದು ರೀತಿಯಲ್ಲಿ ಜಾದೂಗಾರನೇ ಅವರು….ಗ್ರೇಟ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: