ಇರಬಾರದ

ವಿನತೆ ಶರ್ಮ
ತುಟಿ ಮೀರದ ಪದಗಳು
ಆಡಿವೆ ಎಷ್ಟೋ ಮಾತ.
ಶಬ್ದ ಹೊರಡಲೇಬೇಕು ಎನ್ನುವ
ಚೌಕಟ್ಟಿರದ ಕಂಠ.
ಅದು ಹಾಡಿದ,
ಹಾಡದ ರಾಗಗಳೆಷ್ಟೋ.

ತಡವರಿಸಿ ಹೊಮ್ಮುವ ಪದಗಳ
ಧಾವಂತ ಅರ್ಥವಾಗುವುದು
ಸಂಭಾಷಿಸಿದ ಹೃದಯಗಳಿಗೆ.
ಪದಗಳ ತಡವರಿಕೆಯ
ತುಂಬಿಕೊಳ್ಳಲು ನಮ್ಮ ಬಳಿ
ಇದೆಯೇ ಅವಳ ತಾಳ್ಮೆ?
ಅವಳು ನಿಧಾನಿಸಿದಾಗ
ಕಂಠ ಬಿಕ್ಕಿಮನ ತಲ್ಲಣಿಸಿದಾಗ
ಕಣ್ಣ ಹನಿ ಉಸುರಿದ
ಕೊನೆಯಿಲ್ಲದ ಕಥೆಗಳ
ನೋವುಂಡ ಒಂಟಿ ಬದುಕಿನ
ಕಳೆದುಹೋದ ಬದುಕಿನ ಸಂಭ್ರಮ.
ಸಮೀಕರಣಕ್ಕಿದೆಯೇ
ಅವಳ ಬಿಕ್ಕು, ಅವರ ಅಸಹ್ಯ?
ಅವಳ ಆ… ರಾಗಕ್ಕೆ ಸಾಥಿಇಲ್ಲ.
ಇರಬಾರದ ಕಲೆ ಅಳಿಸಲು
ಹುಟ್ಟಿ ಬರಲಿ ಪಟಾಕಿ
ಹಣೆಪಟ್ಟಿಗಳ ಹಚ್ಚಿ ಸುಡಲು.





0 Comments