ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಬಾಗಿಲು' ತೆರೆಯಿತು..
ಹೋಟೆಲ್ ಲಲಿತ್ ಅಶೋಕ್ ಕಳೆ ಈಗ ಸಂಪೂರ್ಣ ಬದಲಾಗಿದೆ. ಅಲ್ಲಿ ಈಗ ಕನ್ನಡದ ಕಲರವ. ಪ್ರತಿಭಾ, ಕಾಯ್ಕಿಣಿ, ಬಾಗಿಲು.. ಹೀಗೆ ಎಷ್ಟೊಂದು ನಿಮ್ಮ ಕಿವಿಗೆ ಬೀಳುತ್ತದೆ. ಇದಕ್ಕೆ ಕಾರಣ ಪ್ರತಿಭಾ ನಂದಕುಮಾರ್. ಜಯಂತ ಕಾಯ್ಕಿಣಿ ಅವರ ಬರಹಗಳಲ್ಲಿ ಇರುವ ಬಾಗಿಲುಗಳನ್ನು ಪ್ರತಿಭಾ ಇಣುಕಿ ನೋಡಿದ್ದಾರೆ. ಅರೆ! ಹೀಗೆಲ್ಲಾ ಒಬ್ಬ ಸಾಹಿತಿಯನ್ನು...
ವಾ2ಡೂ..
ನಾಗೇಂದ್ರ ಶಾ ಅದೊಂದು ಭಯಾನಕ ಸಿನೆಮ. ಅದರಲ್ಲಿ ನಂದು ಖಳನ ಪಾತ್ರ. ಮುಂಬೈನ ಬೆಡಗಿಯೊಬ್ಬಳನ್ನು ಮುಖ್ಯ ಪಾತ್ರಕ್ಕೆ ಕರೆಸಿದ್ದರು. ಒಂದು ಸನ್ನಿವೇಷದಲ್ಲಿ ಆಕೆಯ ರೆಟ್ಟೆ ಹಿಡಿದು ದೂರ ತಳ್ಳಬೇಕಿತ್ತು ನಾನು. ಎಲ್ಲವೂ ಸಿದ್ಧವಾಯಿತು. ಆದರೆ ಚಿತ್ರೀಕರಣಕ್ಕೆ ಮೊದಲು ಆಕೆಯ ಸಹಾಯಕ ಬಂದು ನನಗೆ 'ಸಾರ್... ಮೇಡಂ ಹೇಳ್ತಿದಾರೆ. ನಿಮ್ಮ...
ಶಂಕರನ ‘ಅನಂತ’ ನೆನಪು
ರಾಘವನ್ ಚಕ್ರವರ್ತಿ ೧೯೮೪-೮೫: ಇಂದಿರಾ ಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಹೀನಾಯವಾಗಿ ಸೋತಿದ್ದವು. ಸತ್ತ ಇಂದಿರಾ ಜೀವಂತ ಇಂದಿರಾರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಅನುಕಂಪದ ಅಲೆಯಲ್ಲಿ ಗೆದ್ದ ಕಾಂಗ್ರೆಸ್ ಬೀಗಿತ್ತು. ಕೇವಲ ನಾಲ್ಕೇ...
ಶಂಕರನ 'ಅನಂತ' ನೆನಪು
ರಾಘವನ್ ಚಕ್ರವರ್ತಿ ೧೯೮೪-೮೫: ಇಂದಿರಾ ಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಹೀನಾಯವಾಗಿ ಸೋತಿದ್ದವು. ಸತ್ತ ಇಂದಿರಾ ಜೀವಂತ ಇಂದಿರಾರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಅನುಕಂಪದ ಅಲೆಯಲ್ಲಿ ಗೆದ್ದ ಕಾಂಗ್ರೆಸ್ ಬೀಗಿತ್ತು. ಕೇವಲ ನಾಲ್ಕೇ...
ತಪ್ಪಿಸಿಕೊಂಡ ಕವಿತೆ
ಡಾ. ಶಿವರಾಜ ಬ್ಯಾಡರಹಳ್ಳಿ ಎದೆಯ ಬಾರವನ್ನೆಲ್ಲಾ ಬಸಿದು ಬಯಕೆ ಬೇಲಿಯ ಆಸೆಯತೊರೆದು ಬಟ ಬಯಲಲ್ಲಿ ಸಿಕ್ಕ ಕವಿತೆಯನ್ನು ಭಾವ ಲಹರಿಯೊಳಗೆ ಬಚ್ಚಿಟ್ಟು ತಂದೆ ಕವಿತೆ ಕಾಲವ ನೆನೆದು ಕದವ ತೆಗೆದ ಊರ ಬಾಗಿಲಿಗೆ ಹೋಗಿ ಕಂಡ ಕಂಡವರ ಮುಂದೆ ಅಂಗಲಾಚಿದೆ, ಗದ್ಯವನ್ನೇ ...
ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..
ಎಲ್ಲರೂ ಬೆಂಗಳೂರಿನ ಮಳೆ ಗುಡುಗು ಸಿಡಿಲಿನ ಬಗ್ಗೆಯೇ ಗಮನ ನೆಟ್ಟಿದ್ದರು. ಎಲ್ಲರ ಮಾತು ರಸ್ತೆಯಲ್ಲಿ ಬಿದ್ದ ಗುಂಡಿಗಳ ಬಗ್ಗೆ, ಬಿಬಿಎಂಪಿ ಬಗ್ಗೆ, ಸರ್ಕಾರದ ಬಗ್ಗೆ. ಆದರೆ ಅದೇ ವೇಳೆ ಇಡೀ ಜಗತ್ತು ಎರಡೇ ಎರಡು ಪದಗಳ ಸಿಡಿಲಿನ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿತ್ತು. ಹೌದು, ಎರಡೇ ಎರಡು ಪದಗಳು. ಅದು ಜಗತ್ತಿನಾದ್ಯಂತ ಸುದ್ದಿ...
ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ?
ಜ್ಯೋತಿ ಎ ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ? ಹೌದು, ಇದಕ್ಕೊಂದು ಐತಿಹ್ಯವಿದೆ, ಕೋಮುಸೌಹಾರ್ದತೆಯ ಪರಂಪರೆಯನ್ನು ಹೊತ್ತು ನಿಂತಿದೆ... ಬಾವಿಗೂ ಕೋಮುಸೌಹಾರ್ದತೆಗೂ... ಎತ್ತಿಂದೆತ್ತಣ ಸಂಬಂಧ ಎಂದು ಹುಬ್ಬೇರಿಸಬೇಡಿ! ಕೋಮುಗಳ ನಡುವೆ ವಿಷಬಿತ್ತಿ ಜನರನ್ನು ಬಾವಿಗೆ...
ಕಾಮನ ಬಿಲ್ಲ ಹಿಡಿದ ಬಿಳಿ ಚಾದರ
ಹೆಚ್ ಆರ್ ಸುಜಾತಾ ದೂರುತ್ತಾ, ದೂರ-ದೂರ ಅಂತರ ಕಾದು ದೂರಾದೆ, ಬಾನಾದೆ ಭೂಮಿ ತೂಕ ಹೊತ್ತು ಬಿಡದೆ ಹರಿದೆ ತೂಕ ತಪ್ಪದೆ ಬಾನಗಲಕೂ ಕಾಯವ ಹರವಿದೆ ಹಠ ಹಿಡಿದ ನದಿಯಂತೆ ಒಳಗಿನ ಝಲಝಲ ಕಣ್ಣ ಎಚ್ಚರಿಸಿ, ತೆರೆಸಿ ಹನಿಹನಿ ಕಲೆಹಾಕಿ ಸರಸರನೆ ಅರಸಿ ನಿನ್ನುದ್ದಕೂ ಕೈಚಾಚಿ ನಡೆದೆ ಹೂವಿನ ಚಿತ್ರ ಬಿಡಿಸಿ ಬಣ್ಣ...
ಮೀನ ಕಾಂಡ!
ರಾಜೇಂದ್ರ ಪ್ರಸಾದ್ ಈ ಮೀನಿಂದಲೇ ಪರಾಶರ ಪರಾಭವಗೊಂಡು ಪರಾಗಸ್ಪರ್ಶವಾದ ಬಳಿಕ ಪರಿಣಯ ಪರಿಸಮಾಪ್ತಿಗೊಳಿಸಿಕೊಂಡದ್ದು. ಈ ಮೀನಿಂದಲೇ ಶಾಕುಂತಲೆ ವಿರಹದುರಿಗೆ ಸಿಕ್ಕು ಕಾಡಿನಲ್ಲಿ ಕಾಲಯಾಪನೆಯ ಮಾಡಿ ಎಂದೂ ಮರೆಯದ ಉಂಗುರ ಉಪಾಖ್ಯಾನಕ್ಕೆ ಕಾರಣವಾಗಿದ್ದು. ಈ ಮೀನಿಂದಲೇ ಯೇಸುವು ಹಸಿದ ಜನರಿಗೆ ಅಕ್ಷಯವೆನಿವಷ್ಟು ಅನ್ನವುಣಿಸುತ್ತಾ...
ತೂಗು ಹಾಕಿದ ದುಃಖ
ರೇಣುಕಾ ರಮಾನಂದ್ ತಮ್ಮ 'ವೈಶಾಖದ ಕೊನೆಯ ರಾತ್ರಿ' ಕಥಾಸಂಕಲನದ ಮೂಲಕ ಉತ್ತರಕನ್ನಡ ಜಿಲ್ಲೆಯ ಕಥಾಪ್ರಿಯರಿಗೆ ಹತ್ತಿರವಾದ ನರೇಶ ನಾಯ್ಕರು ಕವಿತೆಗಳನ್ನೂ ಸೊಗಸಾಗಿ ಬರೆಯಬಲ್ಲರೆಂಬುದು ಆಗೊಮ್ಮೆ ಈಗೊಮ್ಮೆ ಅವರ ಕವಿತೆಗಳನ್ನು ಪತ್ರಿಕೆಗಳಲ್ಲಿ ಓದಿ ನನಗೆ ಗೊತ್ತಾಗಿತ್ತು. ಅವೆಲ್ಲವನ್ನೂ ಕಲೆಹಾಕಿ ಇದೀಗ 'ತೂಗು ಹಾಕಿದ ದುಃಖ' ಎಂಬ...
ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ..
ಸಂಧ್ಯಾರಾಣಿ ಕರೆಂಟ್ ಹೋದ ಸುಳಿವೂ ಕೊಡದಂತೆ ಯೂಪಿಎಸ್ ಗಳು ಮನೆಯನ್ನು ಝಗ್ ಎಂದು ಬೆಳಗುತ್ತಿರುವಾಗ ನಾನು ಯಾವುದೋ ಹಳೆ ನೆನಪಿನ ಸಂಭ್ರಮದಿಂದ ಎನ್ನುವಂತೆ ಮನೆಯಲ್ಲಿ ಕ್ಯಾಂಡಲ್ ಹಚ್ಚಿ ಸಂಭ್ರಮಿಸುತ್ತಿರುತ್ತೇನೆ. ಹೀಗೆ ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ. ...
ನೆನೆಯಬೇಕಾದದ್ದು ಕೆಂಗಲ್ ಹನುಮಂತಯ್ಯನವರನ್ನು..
ಜಿ ಎನ್ ನಾಗರಾಜ್ ವಿಧಾನಸೌಧದ ನಿರ್ಮಾರ್ತೃ ಕೆಂಗಲ್ ಹನುಮಂತಯ್ಯನವರ ಮುಖ್ಯ ಕೊಡುಗೆ ಕರ್ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ : ವಿಧಾನಸೌಧ ನಿರ್ಮಾಣದ ಬಗ್ಗೆ ಅನವಶ್ಯಕ ವೈಭವದ ಉತ್ಸವ ಉದ್ಘಾಟಿಸುತ್ತಿರುವ ದಿನ ನೆನೆಯಬೇಕಾದ್ದು ಕೆಂಗಲ್...
ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ..
10 ಕೊಳತ್ತೋಡಿನಲ್ಲಿ ಅತ್ಯಂತ ರುಚಿಯಾಗಿದ್ದ ಪರೋಟಾ, ಸಾಂಬಾರ್ ಮುಂತಾದವನ್ನು ಸ್ವಾಮಿಗಳ ಕೃಪೆಯಿಂದ ಹೊಟ್ಟೆಗಿಳಿಸಿದ ನಂತರ ನಮ್ಮ ಪಯಣ ಮುಂದುವರೆಯಿತು. ಮುಂದೆ ಉದ್ದಕ್ಕೂ ಬಯಲು; ಹಾಸಿಗೆ ಹಾಸಿದಂತೆ ನೇರಾನೇರ ರಸ್ತೆ. ಹಾತೂರು, ಕೈಕೇರಿ ಬಾಳೆಲೆ, ದೇವಮಚ್ಚಿ, ಮಜ್ಜಿಗೆ ಹಳ್ಳ, ಕಾರೆಕಂಡಿ, ಅಲ್ಲೂರು, ಮುದ್ದೇನಹಳ್ಳಿ, ಕೊಕ್ಕರೆ...
ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ
ಆಕೃತಿ ಆಶಯ ಪಬ್ಲಿಕೇಷನ್ಸ್ನ ಮೂಲಕ ಡಾ. ಬಿ.ಎ. ವಿವೇಕ ರೈ ಅವರ ಮೂರು ಪುಸ್ತಕಗಳ ಅನಾವರಣ ಕಾರ್ಯಕ್ರಮ ೨೨-೧೦-೨೦೧೭ ರಂದು ಕೆನರಾ ಕಾಲೇಜು, ಕೊಡಿಯಾಲ್ ಬೈಲ್ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ತಾಳ್ತಜೆ ವಸಂತ ಕುಮಾರ ಅವರು ವಹಿಸಿದ್ದರು. 'Oral Traditions in South India' ಪುಸ್ತಕವನ್ನು ಡಾ. ಬಿ. ಸುರೇಂದ್ರ...
ಬಹಳ ನೋವಿನಿಂದ ಹೇಳುತ್ತಿದ್ದೇನೆ..
ಒಂದು ಸಣ್ಣ ಲೆಕ್ಕಾಚಾರ ------------------------------------------ ಪಲ್ಲವಿ ಐದೂರು ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 58-60% ದಷ್ಟು ಜನ ಕೆಳ ಮಧ್ಯಮ ವರ್ಗದವರು. 30-32% ರಷ್ಟು ತೀರ ಕೆಳ ವರ್ಗದ ಅಂದರೆ below poverty...
ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?
ಕಾದಿದ್ದೇನೆ -------------------------------- ಶ್ರೀದೇವಿ ಕೆರೆಮನೆ ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು? ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ...
ಅಲ್ಲಿ ರಸ್ತೆಯ ಬದಿಯಲ್ಲೇ ‘ಅವು’..
8 'ಅಯ್ಯೋ... ಇವನಿಗೆ ಸ್ವಲ್ಪ ನಿಧಾನಕ್ಕೆ ಹೋಗಲು ಹೇಳಪ್ಪಾ... ಎಂಥದ್ದೂ ಕಾಣಿಸುತ್ತಿಲ್ಲ', ಎಂದೆ ನಾನು. ನಾನೇನೋ ಹೇಳಬಾರದ್ದನ್ನು ಹೇಳಿಬಿಟ್ಟೆ ಎಂಬಂತೆ ದುಭಾಷಿ ಮತ್ತು ನನ್ನ ಜೊತೆಗಿದ್ದ ಸಹೋದ್ಯೋಗಿ ಬಿಟ್ಟ ಕಣ್ಣು ಬಿಟ್ಟಂತೆ ನನ್ನತ್ತ ನೋಡಿದರು. ಕಳೆದ ಮೂರು ತಾಸುಗಳಿಂದ ಬರೀ ಕಾಡನ್ನೇ ನೋಡುತ್ತಿದ್ದೇವೆ, ಇನ್ನೇನು...
ಅಲ್ಲಿ ರಸ್ತೆಯ ಬದಿಯಲ್ಲೇ 'ಅವು'..
8 'ಅಯ್ಯೋ... ಇವನಿಗೆ ಸ್ವಲ್ಪ ನಿಧಾನಕ್ಕೆ ಹೋಗಲು ಹೇಳಪ್ಪಾ... ಎಂಥದ್ದೂ ಕಾಣಿಸುತ್ತಿಲ್ಲ', ಎಂದೆ ನಾನು. ನಾನೇನೋ ಹೇಳಬಾರದ್ದನ್ನು ಹೇಳಿಬಿಟ್ಟೆ ಎಂಬಂತೆ ದುಭಾಷಿ ಮತ್ತು ನನ್ನ ಜೊತೆಗಿದ್ದ ಸಹೋದ್ಯೋಗಿ ಬಿಟ್ಟ ಕಣ್ಣು ಬಿಟ್ಟಂತೆ ನನ್ನತ್ತ ನೋಡಿದರು. ಕಳೆದ ಮೂರು ತಾಸುಗಳಿಂದ ಬರೀ ಕಾಡನ್ನೇ ನೋಡುತ್ತಿದ್ದೇವೆ, ಇನ್ನೇನು...
ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ..
9 ಯಾನದ ಕೊನೆ ಅವತ್ತು ಜನವರಿ 12. ಚಳಿಯ ತವರುಮನೆಯೆನೋ ಅನ್ನಿಸುವಂತಿದ್ದ ವಿರಾಜಪೇಟೆಯ ಆ ನಸುಕಿನಲ್ಲಿ ಅವತ್ತೂ 6 ಗಂಟೆಗೇ ನಮ್ಮ ಪಯಣ ಆರಂಭಗೊಂಡಿತ್ತು. ಇನ್ನೂ ಕತ್ತಲು,ಕತ್ತಲು. ಹಿಂದಿನ ರಾತ್ರಿ ಬಿಸಿನೀರು ಸ್ನಾನ ಮಾಡಿದ್ದರೂ ಆ ಬೆಳಿಗ್ಗೆ ಮತ್ತೆ ತಣ್ಣೀರು ಸುರುವಿಕೊಂಡಿದ್ದೆವು. ಬೇರೆಲ್ಲ ಕಡೆಗಳಲ್ಲಿ ಲಾಡ್ಜ್ಗಳಲ್ಲಿ ಬೆಳಿಗ್ಗೆ...
ಅಬ್ಬಾ! ಎಂತಹ ಮಾಯಗಾತಿ ಅವಳು..
ಎನ್ ರವಿಕುಮಾರ್ / ಶಿವಮೊಗ್ಗ ಅಬ್ಬಾ! ಎಂತಹ ಮಾಯಗಾತಿ ಅವಳು ಹುಸಿ ಮಾತುಗಳನ್ನು ಹೆಣೆಯುತ್ತಲೆ ಹಣೆ, ಗಲ್ಲ, ತುಟಿಗಳಿಗೆಲ್ಲ ಮಾಯದ ಮದ್ದು ಸವರುತ್ತ ನಿಜದಂತೆ ಪ್ರೀತಿಯನ್ನು ವಂಚಿಸುತ್ತಿದ್ದಾಳೆ. ಒಂಟಿ ಮರವೊಂದು ಹೂಗಳ ಮುಕ್ಕಳಿಸಿ ಘಮಲಿಕ್ಕಿ ಸೆಳೆದಂತೆ...
ಕಾಯಬೇಕಾದವರದು ರಣವೇಷ; ಕಾದಿರುವವರದು ಅವಶೇಷ
ಗುರುವಾರ ಗುರೇಜ್ ಕಣಿವೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗಡಿರಕ್ಷಕ ಪಡೆಯ ಸೈನಿಕರ ಜೊತೆ ದೀಪಾವಳಿ ಆಚರಿಸಿಕೊಂಡರು ಮತ್ತು ಸೈನಿಕರ ಬಹುಕಾಲದ ಬೇಡಿಕೆಯಾದ ‘ಒಂದು ದರ್ಜೆಗೆ ಒಂದು ಪಿಂಚಿಣಿ’ (OROP)ಯನ್ನು ಹಣಕಾಸಿನ ಕೊರತೆಯ ಕಾರಣದಿಂದಾಗಿ ಒಂದೇ ಏಟಿಗೆ ಜಾರಿಗೆ ತರಲಾಗದಿದ್ದರೂ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂಬ ಭರವಸೆ...



















