ಇದು ‘ನಮ್ಮ ತೆಂಗು’

ಆಣೆಕಟ್ಟೆ ವಿಶ್ವನಾಥ್ 

‘ನಮ್ಮ ತೆಂಗು’ ಉತ್ಪಾದಕರ ಒಕ್ಕೂಟವು ತೆಂಗು ಬೆಳೆಗಾರರಿಗೆ ಸಹಾಯವಾಗುವಂತೆ ಕಳೆದ ಮೂರು ವರ್ಷಗಳಿಂದ ‘ನಮ್ಮ ತೆಂಗು’ ಕ್ಯಾಲೆಂಡರ್ ಪ್ರಕಟಿಸುತ್ತಿದೆ.

2018ರ ಕ್ಯಾಲೆಂಡರ್ ಅನ್ನು ‘ನಮ್ಮ ತೆಂಗು ನಮ್ಮ ಆರೋಗ್ಯ’ ಪರಿಕಲ್ಪನೆಯಡಿಯಲ್ಲಿ ತೆಂಗು ಬಳಸುವುದರಿಂದ ಆಗುವ ಆರೋಗ್ಯದ ಲಾಭಗಳನ್ನು ಕುರಿತು ಪ್ರಕಟಿಸಿದೆ.

ತೆಂಗು ಉತ್ಪನ್ನಗಳನ್ನು ಬಳಸಲು ವೈದ್ಯರು ಭಯ ಹುಟ್ಟಿಸುತ್ತಿದ್ದಾರೆ.

‘ಸ್ಯಾಚುರೇಟೆಡ್ ಫ್ಯಾಟ್‍ಗಳು ಹೃದಯ ಸಂಬಂಧಿ ರೋಗಗಳಿಗೆ ಕಾರಣ ಇದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ’ ಎಂದು ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್‍ನ ತುಕ್ಕು ಹಿಡಿದ ಗೈಡ್‍ಲೈನ್‍ಗಳನ್ನು ನಂಬಿರುತ್ತಾರೆ.

ಇದು ಈ ಕಾಲದ ಪೋಷಕಾಂಶ ಭಯೋತ್ಪಾದನೆ. ಇದರ ಮೂಲಕ ಸೋಯಾಬೀನ್‍ ಅನ್ನು ‘ತೃತೀಯ ಜಗತ್ತಿನ’ ಎಂದು ಕರೆಯಲಾಗುವ ರಾಷ್ಟ್ರಗಳ ಮೇಲೆ ಹೇರಲಾಗುತ್ತಿದೆ.

ತೆಂಗು ಒಂದು ಅಮೃತ ಸಮಾನ ಫಲ. ಸ್ವರ್ಗದ ಮರ, ಬದುಕಿನ ಮರ, ಕಲ್ಪವೃಕ್ಷ ಎಂದೆಲ್ಲಾ ಕರೆಯುವ ತೆಂಗಿನ ಎಣ್ಣೆಯಲ್ಲಿ ಇರುವುದು ಮಧ್ಯಮ ಸಂಕಲೆ ಕೊಬ್ಬುಗಳು ಇವುಗಳು ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳೂ ವಾಸಿಯಾಗುತ್ತವೆ.

ನಮ್ಮ ಆಹಾರ ಸಂಸ್ಕøತಿಯಲ್ಲಿ ತೆಂಗಿನ ವೈಭವ ಸಮೃದ್ಧವಾಗಿದೆ. ಇದನ್ನು ಆಹಾರವಾಗಿ, ಔಷಧಿಯಾಗಿ ಪರಂಪರೆಯಿಂದಲೂ ಬಳಸಲಾಗುತ್ತಿದೆ. ಅಷ್ಟೇ ಏಕೆ ನಿಸರ್ಗದಲ್ಲಿ ಮನುಷ್ಯನಿಗೆ ಜೈವಿಕವಾಗಿ ಹತ್ತಿರವಿರುವ ಜೀವಿಗಳಾದ ಇಲಿ, ಮಂಗಗಳ ಆಹಾರದಲ್ಲಿ ತೆಂಗನ್ನು ವಿಶೇಷವಾಗಿ ನೋಡಬಹುದು. ತೆಂಗಿನ ಎಣ್ಣೆ ಬಳಕೆಯಿಂದ ಹೆಚ್ಚು ತೂಕ ಹಾಗೂ ಬೊಜ್ಜು ಕಡಿಮೆಯಾಗುತ್ತದೆ ಹಾಗೂ ಅಲ್ಜಿಮಿರ್ಸ್, ಪಿಡ್ಸ್ ಕಾಯಿಲೆಗಳು ವಾಸಿಯಾಗುತ್ತವೆ. ಚರ್ಮ ಕಾಯಿಲೆಗಳಿಗೆ ದಿವ್ಯೌಷಧಿ, ತಲೆಗೂದಲಿಗೆ ಸೀತ್ಹಾರೈಕೆ. ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಶೇ.50ರಷ್ಟು ಲಾರಿಕ್ ಆಸಿಡ್ ತಾಯಿ ಎದೆ ಹಾಲು ಬಿಟ್ಟರೆ ಮತ್ತಿನ್ನೆಲ್ಲೂ ಸಿಗುವುದಿಲ್ಲ. ಇದೆಲ್ಲದರ ಮಹತ್ವವನ್ನು ಕ್ಯಾಲೆಂಡರ್ ಒಳಗೊಂಡಿದೆ.

ಈ ಬಾರಿಯ ಕ್ಯಾಲೆಂಡರ್ ತೆಂಗು ಬೆಳೆಗಾರರಿಗಲ್ಲದೆ ಗ್ರಾಹಕರಿಗೂ ಅನುಕೂಲಕರವಾಗಿದೆ. ಅರುಣ್‍ಕುಮಾರ್ ಜಿ. ವಿನ್ಯಾಸ ಹಾಗೂ ರಾಜು ಬಡಗಿ ಪೋಟೋಗಳು ಕ್ಯಾಲೆಂಡರ್‍ನ ಪ್ರತಿ ಪುಟವೂ ಆಕರ್ಷಕವಾಗಿ ಕಾಣುವಂತೆ ಮಾಡಿವೆ. ಅಣೇಕಟ್ಟೆ ವಿಶ್ವನಾಥ್ ಕ್ಯಾಲೆಂಡರ್ ರೂಪಿಸಿರುತ್ತಾರೆ.

ಕ್ಯಾಲೆಂಡರ್ ಖರೀದಿಸಲು ಆಸಕ್ತರು ರೂ120/-

(ಅಂಚೆ ವೆಚ್ಚ ಸೇರಿ) ಕೆಳಗಿನ ವಿಳಾಸಕ್ಕೆ ಮನಿ ಆರ್ಡರ್ ಕಳಿಸಲು ಕೋರಿಕೆ

ನಮ್ಮ ತೆಂಗು ಉತ್ಪಾದಕರ ಒಕ್ಕೂಟ(ರಿ)
ಮೊದಲನೇ ಮಹಡಿ, ವiಹಾಲಕ್ಷ್ಮಿ ಬಡಾವಣೆ ಮುಖ್ಯರಸ್ತೆ
ಚಿ.ನಾ.ಹಳ್ಳಿ- 572214 ತುಮಕೂರು ಜಿಲ್ಲೆ
ದೂ: 8762068755

 

 

 

 

‍ಲೇಖಕರು avadhi

December 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: