ಪಂಪ ಕಂಡ ಪಾನಶಾಲೆ..

ಪಾನಶಾಲೆಯ rituals – ಪಂಪ.
ರೇಣುಕಾರಾಧ್ಯ ಎಚ್ ಎಸ್ 

ಜೈತ್ರಯಾತ್ರೆ ಕೈಗೊಂಡ ಅರ್ಜುನನು ದ್ವಾರಾವತಿಗೆ ಬಂದು ಸುಭದ್ರೆಯನ್ನು ಕಂಡು ಮೋಹಗೊಂಡು ಆ ಮೋಹದಿಂದ ಬಿಡಿಸಿಕೊಳ್ಳಲು ದ್ವಾರಾವತಿಯನ್ನು ಒಂದು ಸುತ್ತು ಹಾಕಿ ಬರಲು ಮನಸ್ಸಾಗಿ ನಗರ ಪ್ರದಕ್ಷಣೆಗೆ ಬರುತ್ತಾ,ಅಲ್ಲಿನ ಸೂಳೆಗೇರಿಗೆ ಬರುತ್ತೇನೆ.

ಅಲ್ಲಿದ್ದ “ಪಾನಶಾಲೆ” ಯೊಂದರಲ್ಲಿ ವಿಟರು ಹೆಂಡ ಕುಡಿಯುತ್ತಿರುವ rituals ನ ಅದ್ಭುತ ದೃಶ್ಯವೊಂದನ್ನು ಪಂಪ (ಹಿತಮಿತವಚನ ಕವಿಯಾದರೂ) ಇಲ್ಲಿ ಕೊಟ್ಟಿರುವ ಸಣ್ಣ ಸಣ್ಣ ವಿವರಗಳೇ ಸಾಕು ಅವನೆಂತಹ sensible poet ಮತ್ತು ಕನ್ನಡದ ಮಹಾಕವಿ ಎಂಬುದಕ್ಕೆ ಸಾಕ್ಷಿಯಾಗಿದೆ.

“ಮುನೂರ ಅರುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧು ಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾಳ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆರೆದು ತಲೆಯೊಳ್ ತಳಿದು ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರರ್ಗೆಲ್ಲಂ ಬೊಟ್ಟಿಟ್ಟು ಕಿರಿಯರ್ ಪಿರಿಯರ್ ಅರಿದು ಪೊಡವಟ್ಟು ಧರ್ಮಗಳ್ ಕುಡಿವರ್ಗೆ ಮೀಸಲ್ಗಳ್ಳನ್ ಎರೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿರಿಕಿರಿದನ್ ಎರೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದ ಅಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು”

(ಪಂಪಭಾರತದ ನಾಲ್ಕನೇ ಆಶ್ವಾಸದ 87 ನೇ ಪದ್ಯದ ನಂತರದ ಗದ್ಯದ ಸಾಲುಗಳಿವು)

– ಮುನ್ನೂರ ಅರವತ್ತು ಜಾತಿಯ ಕಳ್ಳು( ಹೆಂಡ) ಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಮದ್ಯದ ಮಂತ್ರದಿಂದ ಹೆಂಡದ ದೇವತೆಗಳನ್ನು ಪೂಜಿಸಿ, ಕ್ರೌಂಚಪಕ್ಷಿ, ಹಂಸ, ಕುಂತಳಿಕೆ ಪಕ್ಷಿ ರೀತಿಯ ಚಿಪ್ಪುಗಳಂತಿರುವ ಬಟ್ಟಲಲ್ಲಿ ಹೆಂಡ ತುಂಬಿಸಿಕೊಂಡು ಕುಡಿಯುವ, ಮುನ್ನ ಭೂದೇವಿಗೆ ತೃಪ್ತಿಯಾಗಲಿ ಎಂದು ಚೂರು ಹೆಂಡವನ್ನು ನೆಲಕ್ಕೆ ಸುರಿದು, ಆನಂತರ ಹೆಂಡವನ್ನು ತಲೆಗೆ ಚಿಮುಕಿಸಿಕೊಂಡು ( ಮಂತ್ರೋದಕದಂತೆ ಪ್ರೋಕ್ಷಿಸಿಕೊಂಡು) ಹೆಂಡದಲ್ಲಿ ಬೊಟ್ಟಿಟ್ಟುಕೊಂಡು, ಪಕ್ಕದ ಎಲ್ಲರಿಗೂ ಬೊಟ್ಟಿಟ್ಟು, ಇಲ್ಲಿ ಹಿರಿಯರಾರು, ಕಿರಿಯರಾರು ಎಂದು ಅರಿತು, ಹಿರಿಯರಿಗೆ ನಮಸ್ಕರಿಸಿ, ಬಿಟ್ಟಿ ಕುಡಿಯಲು ಬಂದವರಿಗೆ ಮೀಸಲಾಗಿದ್ದ ಹೆಂಡವನ್ನು ಚಿನ್ನ ಮತ್ತು ಬೆಳ್ಳಿಯ ಬಟ್ಟಲಲ್ಲಿ ಕೊಂಚ, ಕೊಂಚ ಹಾಕಿ, ಆನಂತರ ಮಾವಿನ ಮಿಡಿ, ಬಿಲ್ವಪತ್ರೆಯ ಕಾಯಿಯ ತಿರುಳು, ಕಾರದ ಕಡಲೆಗಳ ಪುಡಿಯಲ್ಲಿ ಬೆರೆಸಿದ, ಹಸಿಶುಂಠಿಯ ಮಿಶ್ರಣಗಳನ್ನುಳ್ಳ ಚಾಕಣಗಳನ್ನು ನಂಚಿಕೊಳ್ಳುತ್ತಾ ಹೆಂಡವನ್ನು ಸವಿಯುತ್ತಿದ್ದರು.

‍ಲೇಖಕರು avadhi

December 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಬಸವರಾಜು ದೇಸಿ

    ‘ಮದ್ಯಕ್ಕೆ’ ನಿಲ್ಲಿಸದೆ ಹೀಗೆ ಮುಂದುವರೆಯಲಿ ಪಂಪಾಯಣ… ಪ್ಲೀಸ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: