ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ..
ರೇವಣಸಿದ್ದಪ್ಪ ಜಿ ಆರ್ ** ಹಳೆಯ ಕಾಲದ ಕಪ್ಪು ಬಿಳಿ ಫೋಟೋ ಅಚ್ಚುಕಟ್ಟಾದ ಕಟ್ಟಿನಲಿ ಬಂಧಿ. ಫೋಟೋದೊಳಗಿನ ಅವನ ಬಣ್ಣಗಳು ತರಹೇವಾರಿ. ಗೋಡೆಗೊರಗಿದ ಫೋಟೋದ ಸುತ್ತ ಓಲಾಡುವ ಮುದಿಯಾದ ಹಾರ. ಹುಣ್ಣಿಮೆ ಅಮಾವಾಸ್ಯೆಗೆ, ಹಬ್ಬ ಹರಿದಿನಕ್ಕೆ, ಅರಿಶಿನ ಕುಂಕುಮ ವಿಭೂತಿಯ ಸಿಂಗಾರ. ಒಮ್ಮೆ ನಕ್ಕಂತೆ, ಇನ್ನೊಮ್ಮೆ ಅತ್ತಂತೆ, ಮತ್ತೊಮ್ಮೆ...
ಗದ್ಯವೆನ್ನುವುದು ಸುಂದರವಾದ ಕಾವ್ಯವಾಗಿ ಹರಿದಿದೆ
ಡಾ. ಪಾರ್ವತಿ ಜಿ. ಐತಾಳ್ ** ಕತೆಗಾರ್ತಿ ಮಾಧವಿ ಭಂಡಾರಿ ಕೆರೆಕೋಣ ಅವರ ಹೊಸ ಕೃತಿ 'ಗುಲಾಬಿ ಕಂಪಿನ ರಸ್ತೆ'. ಈ ಕೃತಿಯ ಕುರಿತು ಖ್ಯಾತ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮಾಧವಿ ಭಂಡಾರಿ ಕೆರೆಕೋಣ ಅವರ 'ಗುಲಾಬಿ ಕಂಪಿನ ರಸ್ತೆ' ಎಂಬ ೧೨ ಸಣ್ಣ ಕಥೆಗಳ ಸಂಕಲನದ ವೈಶಿಷ್ಟ್ಯ ಅವುಗಳಲ್ಲಿ...
‘ಕಠಾರಿ ಅಂಚಿನ ನಡಿಗೆ’ ಫೋಟೋ ಆಲ್ಬಂ
** ಅಂಕಣಕಾರ, ಸಾಮಾಜಿಕ ಚಿಂತಕ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ಬಿಡುಗಡೆಯಾಯಿತು. ರಾಜಕೀಯ ವಿಶ್ಲೇಷಕ ಶಿವಸುಂದರ್ ಪುಸ್ತಕ ಬಿಡುಗಡೆ ಮಾಡಿದರು. "ಮಾನವತೆಯು ಮಸಣ ಸೇರುವ ಈ ಹೊತ್ತಿನಲ್ಲಿ ಸತ್ಯ ಮಾತನಾಡುವುದೇ ಕಷ್ಟವಾಗಿದೆ" ಎಂದು ಶಿವಸುಂದರ್ ವಿಷಾದಿಸಿದರು. ಈ ಸಂದರ್ಭದಲ್ಲಿ ಕೃತಿಯ ಲೇಖಕರಾದ ಚಂದ್ರಪ್ರಭ...
ಶ್ರೀನಿವಾಸ ಪ್ರಭು ಅಂಕಣ: ‘ರಂಗ ಶಂಕರ’ದಲ್ಲೂ ನಾಟಕ ತಡವಾಯ್ತು!!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಪುಸ್ತಕ ದಿನ ಆಚರಣೆ, ಸನ್ಮಾನದ ಫೋಟೋ ಆಲ್ಬಂ
ಕರ್ನಾಟಕ ಪ್ರಕಾಶಕರ ಸಂಘದ ವತಿಯಿಂದ 'ವಿಶ್ವ ಪುಸ್ತಕ ದಿನ'ವನ್ನು ಆಚರಿಸಲಾಯಿತು. ಬಿ ಎಂ ಶ್ರೀ ಪ್ರತಿಷ್ಟಾನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು ನಂಜನಗೂಡು ತಿರುಮಲಾಂಬ ಪುಸ್ತಕ ಪ್ರಕಾಶನ ಪ್ರಶಸ್ತಿಯನ್ನು ರೂಪಾ ಮತ್ತೀಕೆರೆ ಹಾಗೂ ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಯನ್ನು ನಿಂಗರಾಜು ಚಿತ್ತಣ್ಣನವರ್ ಅವರಿಗೆ ನೀಡಿ...
ಬರಹಗಾರರ, ಪ್ರಕಾಶಕರ ಸಂಘದಿಂದ ಪುಸ್ತಕ ದಿನ ಫೋಟೋ ಆಲ್ಬಂ
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ವಿಶ್ವ ಪುಸ್ತಕ ದಿನವನ್ನು ಆಚರಿಸಿತು. ಹಿರಿಯ ಚಿಂತಕರಾದ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಿದರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೂಡೇ ಪಿ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ಸಪ್ನ ಬುಕ್ ಹೌಸ್ ನ ಆರ್...
ಕೃಷ್ಣಮೂರ್ತಿ ಹನೂರು ಅವರ ‘ಕನ್ನಮರಿ’
ವಿದ್ಯಾ ರಾಮಕೃಷ್ಣ ** ಲೇಖಕರು: ಕೃಷ್ಣಮೂರ್ತಿ ಹನೂರು.ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ ೨೩೦. ** ಕೃಷ್ಣಮೂರ್ತಿ ಹನೂರು ಅವರು ಒಬ್ಬ ಉತ್ತಮ ಕಾದಂಬರಿಕಾರರಷ್ಟೇ ಅಲ್ಲದೆ ಸಾಂಸ್ಕೃತಿಕ ಅಧ್ಯಯನದಲ್ಲಿ ಆಸಕ್ತರೂ, ನುರಿತ ಜಾನಪದ ತಜ್ಞರೂ ಆಗಿದ್ದಾರೆ. ಬುಡಕಟ್ಟು ಜನಾಂಗದ ಮೇಲೆ ಅಧ್ಯಯನವನ್ನು ನಡೆಸಿ ಸಂಶೋಧನ ಗ್ರಂಥವನ್ನೂ...
ದಯಮಾಡಿ ಮತ್ತೆ ನಮ್ಮನ್ನ ಮರಿಬ್ಯಾಡ್ರಣ್ಣ..!
ವಿಶಾಲ್ ಮ್ಯಾಸರ್ ** ಅಲ್ಲಿ ನಿಮ್ ತಾತುಂದು ದ್ವಾಡ್ ಮೂರ್ತಿ ನಿಲ್ಸೀವಿ ಇಲ್ಲಿ ಇಲ್ಲೇ ನಿಮ್ ತಾತ ನಡೆದಾನಲ್ಲ ಬಂಗಾರದ ಟಾರು ಹಾಕಿಸೀವಿ ಅಲ್ನೋಡಿ ನಿಮ್ ತಾತ ನಮ್ಮುನ್ನೆಲ್ಲ ಒದ್ದು ಹೋದರು ಅದರ ಗುರುತಿಗೆ ಒಂದು ಊರನ್ನೇ ಕಟ್ಟೀವಿ ಬನ್ನಿ ಬನ್ನಿ ಅಗೋ ಕಂಕುಳದಲ್ಲಿ ಇಟ್ಕಂಡ ಬುಕ್ಕಾ...
‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..
ಡಾ ವಸುಂಧರಾ ಭೂಪತಿ ** ಮಲಯಾಳಂನ 'ಧನ್ಯವಾದಗಳು.. ಗಿಲ್ಲನ್ ಬ್ಯಾರಿ ಸಿಂಡ್ರೋಮ್' ಕೃತಿ ಪ್ರಕಟವಾಗಿದೆ. ರಾಸಿತ್ ಅಶೋಕನ್ ಅವರ ಈ ಕೃತಿಯನ್ನು ಕೆ ಪ್ರಭಾಕರನ್ ಅನುವಾದಿಸಿದ್ದಾರೆ. 'ಅಸ್ಮಿತೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ವಸುಂಧರಾ ಭೂಪತಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕನ್ನಡದಲ್ಲಿ...
ಹಕ್ಕಿ ಮತ್ತು ಹಾಡು..
ಪಿ ಬಿ ಪ್ರಸನ್ನ ** ಟೊಂಗೆ ಟೊಂಗೆಯ ಮೇಲೆಕೂತ ಹಕ್ಕಿಯುಸರಾಗ ಲಹರಿಹರಿಸುತ್ತಿತ್ತು ಅದರ ಭಾವಅದರ ಗತಿಒಲವು ತುಂಬಿದ ಜಾಡುಅದರದ್ದೇ ಒಂದು ಲೋಕ ಈಗ ಹಕ್ಕಿಗೂಇಷ್ಟೇ ಶ್ರುತಿಯಲ್ಲಿಹಿತಮಿತದ ಭಾವದಲಿಎಲೆಯೂ ಅಲುಗಾಡದಂತೆಹಾಡಬೇಕು ಎಂಬ ಹುಕುಂ ಇದೆ ಹಾಡು ಹಕ್ಕಿಗೆಆಜ್ಞೆ ಪಾಲಿಸುವುದು ಗೊತ್ತಿಲ್ಲಹುಕುಮಿಗೆ ಹೆದರಿಟೊಂಗೆ ಮರೆಯಲ್ಲಿ ಮುದುರಿ...
ಕಾಕದೋಷ: ಒಂದು ನಾಟಕ, ನಾಲ್ಕು ನೋಟ
ವೆಂಕಟೇಶ್ ಪ್ರಸಾದ್ ಅವರ ಬಹುಚರ್ಚಿತ ನಾಟಕ 'ಕಾಕದೋಷ' ಈ ನಾಟಕ 'ರಂಗ ಶಂಕರ'ದಲ್ಲಿ ಇದೇ ತಿಂಗಳ 26 ರಂದು ಮರು ಪ್ರದರ್ಶನಗೊಳ್ಳಲಿದೆ ಖ್ಯಾತ ರಂಗ ನಿರ್ದೇಶಕರಾದ ಶ್ರೀಪಾದ ಭಟ್ ಹಾಗೂ ಮೂವರು ರಂಗ ವಿದ್ಯಾರ್ಥಿಗಳು ಈ ನಾಟಕವನ್ನು ಕಂಡ ಬಗೆ ಇಲ್ಲಿದೆ- ಡಾ.ಶ್ರೀಪಾದ ಭಟ್ ** ನಂಬಿಕೆಗಳು ಅದು ಹುಟ್ಟಿದ ಕಾರಣಗಳ ಸಂದರ್ಭವನ್ನು ಮರೆತು...
ಸುರೇಶ ಎಲ್ ರಾಜಮಾನೆ ಹೊಸ ಕವಿತೆ – ‘ಸರಿಯೋ ತಪ್ಪೋ ಸರಿಪಡಿಸಿಕೊಳ್ಳಿ’
ಸುರೇಶ ಎಲ್ ರಾಜಮಾನೆ ** ಒಣಗಿಹೋದ ಮರದಲ್ಲಿ ಚಿಗುರು ನೋಡುವ ಅಸೆಗೆ ಭಾಷೆ ಗೊತ್ತಿಲ್ಲದ ಭಾವ ಗೊತ್ತಿಲ್ಲದ ಬೆಂಕಿ ಹಪಹಪಿಸುವದು ಸರಿಯೊ ತಪ್ಪೊ ಆಸೆ ಮಾತ್ರ ಸರಿಯಾಗಿಯೇ ಇದೆ ನೆಲಕ್ಕೆ ಉದುರಿ ಮಣ್ಣಾಗುವ ಬಯಕೆ ಹೊಂದಿದ್ದ ಎಲೆಗಳು ಬಿಡದೇ ಬೀಸಿದ ಬಿರುಗಾಳಿಗೆ ಹಾರಿ ಉರಿವ ಬೆಂಕಿಗೆ ಆಹುತಿಯಾದವು ಸಹಜತೆ ಅನ್ನೋದು ಎಷ್ಟು ಸರಿಯೋ ತಪ್ಪೊ...
ಗೀತಾ ದೊಡ್ಮನೆ ಓದಿದ ‘ಗೋಪಿ ಹಕ್ಕಿಯ ಹಾಡು’
ಗೀತಾ ದೊಡ್ಮನೆ ** ಕವಿ ಸಾವಿತ್ರಿ ಕೃಷ್ಣಮೂರ್ತಿ ಅವರ ಕವನ ಸಂಕಲನ ಪ್ರಕಟವಾಗಿದೆ. ಸಾಹಿತಿ ಗೀತಾ ದೊಡ್ಮನೆ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** ಮಲೆನಾಡಿನ ಮಡಿಲಲ್ಲೊಂದು ಮನೆ; ಮನೆಗೆ ಆತುಕೊಂಡ ಹಚ್ಚಹಸಿರಿನಲ್ಲಿ ಹಕ್ಕಿಯದೊಂದು ಗೂಡು. ಹಕ್ಕಿಗೆ ಮನ ಬಂದಾಗ, ತನ್ನ ಇಂಪಿನ ದನಿಯ ಶ್ರುತಿ-ಲಯದಲ್ಲಿ ಹರಿಸುವ ಹಾಡು; ಮನೆಯ...
ಶ್ರೀನಿವಾಸ ಪ್ರಭು ಅಂಕಣ: ತಪ್ಪು ಮಾಡಿಬಿಟ್ಟೆ ಪ್ರಭೂ.. ತಪ್ಪು ಮಾಡಿಬಿಟ್ಟೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಠಾರಿ ಅಂಚಿನ ನಡಿಗೆ..
ಸಾಮಾಜಿಕ ಚಿಂತಕರಾದ ಚಂದ್ರಪ್ರಭ ಕಠಾರಿ ಅವರ ಹೊಸ ಕೃತಿ 'ಕಠಾರಿ ಅಂಚಿನ ನಡಿಗೆ' ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಚಿಕ್ಕು ಕ್ರಿಯೇಷನ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ವಿದ್ವಾಂಸರಾದ ಪುರುಷೋತ್ತಮ ಬಿಳಿಮಾಲೆ ಅವರು ಬರೆದಿರುವ ಬೆನ್ನುಡಿ ಹಾಗೂ ಲೇಖಕರ ಮಾತು ನಿಮ್ಮ ಓದಿಗಾಗಿ ಇಲ್ಲಿದೆ. ** ಪುರುಷೋತ್ತಮ...
ಭಗ್ನಪ್ರೇಮಿಗಳಿಗಾಗಿ ಒಂದು ಡೈರಿ ಇಲ್ಲಿದೆ
ಸಚಿನ್ ತೀರ್ಥಹಳ್ಳಿ ** ಖ್ಯಾತ ಸಾಹಿತಿ ಜೋಗಿ ಅವರ ಹೊಸ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಸಾವಣ್ಣ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಕಥೆಗಾರ ಸಚಿನ್ ತೀರ್ಥಹಳ್ಳಿ ಬರೆದ ಬರಹ ಇಲ್ಲಿದೆ. ** "ನಾವು ಯಾವತ್ತೋ ಬರೆದು ಯಾರಿಗೂ ತೋರಿಸದೆ ಹರಿದ ನಮ್ಮ ಡೈರಿಯ ಪುಟಗಳಂತೆ.." ಕೇವಲ ಅಸಂಗತತೆ...
ಮಳೆಯೆಂದರೆ ಪೇಪರ್ ಆಯುವವ ನಗುತ್ತಾನೆ..
ದಾಕ್ಷಾಯಣಿ ಮಸೂತಿ ** ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ. 'ಪದ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ. ** "ಮಳೆಯೆಂದರೆ ಪೇಪರ್ ಆಯುವವ ನಗುತ್ತಾನೆ ಮಳೆಯ ನಂತರದ ಬೀದಿಯಲ್ಲಿ ನಿಮ್ಮೆಲ್ಲ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಈ...
ಪಾಪದ ಹೂವಿನಂತೆ..
ಸಂಘಮಿತ್ರೆ ನಾಗರಘಟ್ಟ ** ಊರುಕೇರಿಯ ಎದುರಾಗಿ ಸೂರ ತೊರೆದು ಶೆಹರಕ್ಕೆ ಬಂದ ನಿಮಗೆ ನಾನು ಕೇವಲ ಗಾಳಿ ಊದಿದ ಬಲೂನ್ನಂತೆ. ಚರ್ಮಕ್ಕೆ ಅಂಟಿಕೊಂಡಿದ್ದ ಅಪ್ಪನ ನೆತ್ತರು ನೋವ ಸುಟ್ಟ ಹಣೆಗೆ ಸವರಿದ ಅವ್ವನ ವಿಭೂತಿ ಕಟ್ಟು ಕೆಸರಲ್ಲಾಡಿದ ಎಮ್ಮೆಗೆ ಬಳಿದ ನಾಮದಂತೆ. ಎಷ್ಟೇ ತಿದ್ದಿ ತೀಡಿದರೂ ಹೊಡೆದು ಬಡಿದರೂ...
ಖ್ಯಾತ ಚಿತ್ರನಟ ದ್ವಾರಕೀಶ್ ಇನ್ನಿಲ್ಲ
ಹಿರಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ. ಅವರಿಗೆ 81 ವರ್ಷ ವಯಸ್ಸಾಗಿತ್ತು https://en.wikipedia.org/wiki/Dwarakish
ಚೈತ್ರ ಹುಸಿನಗೆ ಬೀರಿ ವಿಶ್ರಾಮ ಪಡೆಯುತ್ತಿದೆ..
ಸುಮತಿ ಕೃಷ್ಣಮೂರ್ತಿ ** ಅಳುವ ಫೋಟೋಗಳನ್ನು ಗೋಡೆಗೆ ಯಾರೂ ತೂಗು ಹಾಕುವುದಿಲ್ಲ ಹರಿದ ಬನೀನು ಅಕ್ಷರಶಃ ಅನಾಥ ಮಿಂಚುತ್ತಿರುವ ಕಪ್ಪು ಸೂಟಿನಡಿಯಲ್ಲಿ ಮುಟ್ಟು ನಿಂತ ಮುದುಕಿ ಸ್ಯಾನಿಟರಿ ಪ್ಯಾಡು ಕೊಳ್ಳುತ್ತಿದ್ದಾಳೆ ನಗರಗಳ ನಾಲಿಗೆ ತಣಿಸಿದ ಪಿಜ್ಜಾ ಬರ್ಗರ್ ಗಳು ಹಳ್ಳಿಯೆಡೆ ದಾಪುಗಾಲಿಡುವ ಹುನ್ನಾರದಲ್ಲಿ ಅದ್ಧೂರಿ...
‘ದುಡಿಮೆ’ ಎಂದರೆ..
ಕಾವ್ಯ ಎಂ ಎನ್ **ಬೇಸಿಗೆ ರಜೆ ಬಂದ್ರೆ ಅಕ್ತಗೀರು ನಾವ್ ಮೂವರು ಅಮ್ಮನ ಊರಿಗೆ ಹೋಗ್ಬಿಡ್ತಿದ್ವಿ. ಸಣ್ಣ ವಯಸಿಂದ್ಲು, ದುಡಿಯೊಕೆ ಹೋದ ಅಪ್ಪಅಮ್ಮ ಇಬ್ರೂ ಮನೆಗ್ ಬರೋತನಕ ಕದ ಹಾಕೊಂಡು ಒಳಗೇ ಇರ್ತಿದ್ ನಮಗೆ ಹೊರಜಗತ್ತಿನ ಮುಖ ಕಾಣ್ತಿದ್ದದ್ದು ಊರಿಗೆ ಹೋದಾಗ ಮಾತ್ರ. (ಗೊತ್ತಿಲ್ಲದ ಊರಿಗೆ ಹೊಟ್ಟೆಹೊರೆಯಲು ಬಂದೊರು. ಹಂಗಾಗಿ...




















