ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮುಗ್ಧ ಬಾಲಕಿಯ ಬೆರಗುಗಣ್ಣಿನಿಂದ..
ಸತ್ಯಬೋಧ ಜೋಶಿ ಪುಸ್ತಕ : ಪುಟ್ಟ ಹೆಜ್ಜೆ ದೊಡ್ಡ ಕಣ್ಣುಲೇಖಕಿ : ಪ್ರಿಯಾ ಕೆರ್ವಾಶೆಪ್ರಕಾಶಕ: ಸಪ್ನ ಉತ್ತರ ಕರ್ನಾಟಕದವನಾದ ನನಗೆ ಶತಮಾನಗಳಿಂದ ಕರಾವಳಿಯ ಸುತ್ತಣ ಪ್ರದೇಶಗಳಲ್ಲಿ ಆರಾಧಿಸಿಕೊಂಡು ಬರುತ್ತಿರುವ ಭೂತ, ದೈವಗಳ ಅಸ್ತಿತ್ವ, ಆಚರಣೆಯ ಕುರಿತು ಏನಾದರೂ ತುಸು ಪರಿಚಯವಾಯ್ತು ಅಂದರೆ ಅದು ಪ್ರೊ.ಎ. ವಿ ನಾವಡ, ಡಾ....
ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’
ಚಿನ್ನಸ್ವಾಮಿ ವಡ್ಡಗೆರೆ ** 'ಭಾರತದ ನೀರಿನ ಡಾಕ್ಟರ್' ಎಂದೇ ಖ್ಯಾತರಾಗಿದ್ದ ಜಲ ತಜ್ಞ ಅಯ್ಯಪ್ಪ ಮಸಗಿ ಅವರುಗುರುವಾರ ನಿಧನರಾದರು. ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರು ಆಂದೋಲನ ದಿನಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದ ಅಂಕಣದ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ. ** "ನದಿ ಜೋಡಣೆ,...
ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಣ್ಣದ ಲೋಕದ ಕಪ್ಪು ನಕ್ಷತ್ರ..
ತೇಜಾವತಿ ಎಚ್ ಡಿ. ** ಕೆ ಎಸ್ ಕುಲಕರ್ಣಿ ಅವರು ಅನುವಾದಿಸಿದ ಕೃತಿ 'ನಾಳೀನ ಚಿಂತ್ಯಾಕ.' 'ಅಹರ್ನಿಶಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಸಾಹಿತಿ ತೇಜಾವತಿ ಎಚ್ ಡಿ. ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** 'ನಾಳೀನ ಚಿಂತ್ಯಾಕ' ಇದು ಕಲಾವಿದೆ ಶಾಂತ ಹುಬಳೀಕರ ಅವರ ಕನ್ನಡದಲ್ಲಿರುವ ಆತ್ಮ ಚರಿತ್ರೆ. ಮೂಲ...
ಗಡಿ ದಾಟಿ ಹರಡಿದ ಕತ್ತಲೆದೆ ಸೀಳಿ..
ಸರೋಜಿನಿ ಪಡಸಲಗಿ ** ಮನದ ಕಿಟಕಿ ಇಷ್ಟಗಲ ತೆಗೆದು ಅದ ಮೀರಿ ಕಣ್ಣರಳಿಸಿ ಅಷ್ಟಗಲ ಗಡಿದಾಟಿ ಹರಡಿದ ಕತ್ತಲೆದೆ ಸೀಳಿ ತಡಕಿ ಸೋತ ಜೀವ ದಿಕ್ಕು ತಪ್ಪಿದರೂ ಊಂ ಹೂಂ ಏನೂ ಗೊತ್ತಾಗಲೇ ಇಲ್ಲ ಹೌದು ಎಲ್ಲಾ ಅದಲು ಬದಲು ಗದ್ದಲ ನೂರು ಕತೆ ಹೇಳುವ ನೆನಪು ಇಣುಕುವ ನೆರಿಗೆಗಳ ನೆರವಿಯಲಿ ಮೌನ ಸಾಮ್ರಾಜ್ಯ ಯೋಚನೆಗಳ...
ಸುಂದರ ಸುಳ್ಳುಗಳು ಸೂರ್ಯನನ್ನೆ ಸುಡುತ್ತಿರುವಾಗ
ಶ್ರೀಧರ ಜಿ ಯರವರಹಳ್ಳಿ ** ಈಗಷ್ಟೆ ಹಸಿವು ಎಂದು ಬಂದವನನ್ನ ಜೈಲಿನ ಒಳಗೆ ನೂಕಲಾಯಿತು ಆದರೆ ಹೆದ್ದಾರಿಯಲ್ಲಿ ಬಿದ್ದಿದ್ದ ಅನ್ನ ಅವನನ್ನ ಬಿಡಿಸಿಕೊಳ್ಳಲು ಪ್ರತಿಭಟಿಸುತ್ತಿದೆ! ಮೊದಲೇ ಎಲ್ಲ ಕಡೆಯೂ ರಾಜಕೀಯ ಧರ್ಮದ್ವೇಷದ ಕುಲುಮೆಯಲಿ ಬೇಯುತ್ತಿರುವಾಗ ಜಗದ ಪ್ರೇಮದ ಮಡಿಕೆಯಲಿ ಚಿಗುರೊಡೆಯುತ್ತಲೇ ಇದೆ ...
ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..
ಬೇಟೆ, ಒಂಟಿ ನಕ್ಷತ್ರ ಮತ್ತು ಒಲೆಗೊಂದು ಪಾಲು ಶೋಭಾ ಹಿರೇಕೈ ಕಂಡ್ರಾಜಿ. ಅದೊಂದು ಎಂದಿನಂತದ್ದೇ ಮುಂಜಾನೆ. ಬೆಳಗಿನ ಶೌಚ ಕಾರ್ಯಗಳಿಗೆ ಜೊತೆಯಿದ್ದ ಸ್ನೇಹಿತೆ ಸುನೀತಾ ಆ ದಿನ ಊರವರೆಲ್ಲಾ ಸೇರಿಕೊಂಡು ಕಣಿವೆಗೆ ಬೇಟೆಯಾಡಲು ಹೋಗುವ ವಿಚಾರ ತಿಳಿಸಿದಳು. ಬೇಟೆಗೆ (ಶಿಕಾರಿ) ಹೋಗುವುದು, ಕಾಡ ಪ್ರಾಣಿಗಳನ್ನು ಬೇಟೆಯಾಡಿ ತಂದು...
ಎಂತಾ ಭರತಿ ಕನಸು..
ದೀಪಾ ಗೋನಾಳ ** ಯಾವುದೋ ಉದ್ವೇಗ ಎಲ್ಲಿಂದ ತಲೆ ಹೊಕ್ಕು ಎದೆಗಿಳಿಯಿತೋ ಕಾಣೆ ಯಾವುದೋ ಒತ್ತಡ ಯಾರಿಗೆಲ್ಲ ಮಣಿಯಬೇಕು ಹೆಣ್ಣು ಜೀವವಿದು ಅರಿಯೆ ಮುಟ್ಟಿಗಿನ್ನೂ ವಾರವಿದೆ ಇಂದೇ ಹೊಟ್ಟೆ ಹಿಂಡುತಿದೆ ಜೀವವೆಲ್ಲ ಬಾಯಿಗೆ ಬಂದು ಭಯವಾಗಿ ಉಸಿರಲ್ಲಿ ಹೊರ ಬಂದಂತೆ ಈ ಕೆಟ್ಟ ಗಳಿಗೆಯಲೂ ಒಂದು ಪುಟ್ಟ ಕನಸು ಅದು ಬೀಳದಿದ್ದರೂ ನಾನೇ...
ನೆಲದ ನಂಜಿಗೆ ಮದ್ದು ಹುಡುಕುವ ಹಾಯ್ಕುಗಳು
ದೇವರಾಜ್ ಹುಣಸಿಕಟ್ಟಿ ** ಕವಿ ಹೆಬಸೂರ ರಂಜಾನ್ ಅವರ ಹೊಸ ಹಾಯ್ಕು ಸಂಕಲನ ಪ್ರಕಟವಾಗಿದೆ. 'ಉತ್ತರ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಇದರ ಕುರಿತು ದೇವರಾಜ್ ಹುಣಸಿಕಟ್ಟಿ ಬರೆದ ಬರೆಹ ಇಲ್ಲಿದೆ. ** ಪ್ರೀತಿಯ ಕವಿ ರಂಜಾನರ ಹೊಸ ಹಾಯ್ಕುಗಳ ಸಂಕಲನ 'ಮುರಿದು ಬಿದ್ದ ನಕ್ಷತ್ರಗಳು' ಒಂದು ಅನನ್ಯ ಅನುಭೂತಿ ನೀಡಿದ ಕೃತಿ. ಅವರ...
ಮತ್ತಾಯನಿಗೆ ಸತ್ಯದ ಸಾಕ್ಷಾತ್ಕಾರವಾಗುವ ಕ್ಷಣವಂತೂ…ಅಬ್ಬಾ!
ಮೇ 5 ರಂದು ಉದ್ಯಾವರದ ಚರ್ಚ್ ವಠಾರದಲ್ಲಿ, ನಿರಂತರ್ ಉದ್ಯಾವರ್ ಪ್ರಸ್ತುತಿಯಲ್ಲಿ 'ಮತ್ತಾಯ 22: 39'ಪ್ರದರ್ಶನವಿದೆ. ಮಿಸ್ ಮಾಡ್ಬೇಡಿ.. ಅಹಲ್ಯಾ ಬಲ್ಲಾಳ್ ಚಿತ್ರಗಳು: ಅರವಿಂದ ಕುಡ್ಲ ** ತಾನು ಉಳಿಯಬೇಕು ಬೆಳೆಯಬೇಕು, ಅದಕ್ಕೆ ಏನು ಬೇಕಾದರೂ ಮಾಡಿಯೇನು ಎನ್ನುವ ಬಹುಮಟ್ಟಿಗೆ ಸರ್ವವ್ಯಾಪಿ ಧೋರಣೆಯ ದೆಸೆಯಿಂದ ವ್ಯಕ್ತಿಯ...
ಮತ್ತೆ ಅದೇ ಬೆಳಕು ಮೂಡುತಿದೆ
ವೆಂಕಟೇಶ ಚಾಗಿ ** ಮತ್ತೆ ಅದೇ ಬೆಳಕು ಮೂಡುತಿದೆ ಇರುಳ ಪರದೆಯನು ಸರಿಸುತಲಿ ಅದೇ ಜೀವನವನು ಹೊಸದಾಗಿಸಿ ಈಗ ಯಾವುದೂ ಹೊಸತಲ್ಲ ಆದರೂ ಬೆಳಕು ಎಲ್ಲವನೂ ಹೊಸದಾಗಿಸಿದೆ ಮತ್ತೆ ಮತ್ತೆ ಮಾಡುವ ಹಳೆ ಪ್ರಯತ್ನವೆಂಬಂತೆ ಮನದೊಳಗೂ ಮನೆಯೊಳಗೂ ಬೆಳಕು ಹರಡುತಲಿದೆ ಪ್ರತಿ ಗಳಿಗೆ ಖಾಲಿಯಾದಂತೆ ಆ ಬಿಸಿಯ ಚೈತನ್ಯಕೆ ಹಗುರಾದ ಮುತ್ತುಗಳಿಗೆ ಇಗೋ...
ಪ್ರಾಮಾಣಿಕ ಪತ್ರಕರ್ತನೊಬ್ಬನ ‘ಅಫಿಡವಿಟ್’
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ ಮುನ್ನುಡಿ 'ಅವಧಿ'ಯ ಓದುಗರಿಗಾಗಿ ಇಲ್ಲಿದೆ- ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್ ಸರಜೂ...
ಮತ್ತೇನು ಮಾಡಬೇಕು?
ಕವಿತಾ ವಿರೂಪಾಕ್ಷ ** ಹುಟ್ಟಿದಾಗಲೇ ಹೆಣ್ಣೆಂದು ತಿಳಿದು ಸಣ್ಣದಾದ ಮುಖಗಳು ನೋಡಿಯೇ ಸುಮ್ಮನಾದಳೇನೋ ಇವಳು ಬೆಳೆದಂತೆಲ್ಲಾ ಸಂಕೋಲೆಗಳೇ! ನಿಲ್ಲಬೇಡ, ನಗಬೇಡ, ಹೊರ ಹೋಗಬೇಡ, ತಲೆ ಎತ್ತಬೇಡ ಮಾತಾಡಬೇಡ ಎದುರಾಡಬೇಡ!! ಮತ್ತೇನು ಮಾಡಬೇಕು? ಅಹಲ್ಯೆಯಂತೆ ಕಲ್ಲಾಗಬೇಕೆ..? ಊಹೂಂ ಅವರೂ, ಇವರೂ, ಯಾರ್ಯಾರೋ ಸಮಾಜವಿತ್ತ ಶಾಪಕ್ಕೆ ಏನಾಗಬೇಕೋ...
‘ಅವಿರತ ಹರೀಶ್ ಸಾಂಸ್ಕೃತಿಕ ಸಂಭ್ರಮ’ ಫೋಟೋ ಆಲ್ಬಂ
** ಲೇಖಕ, ಪ್ರಕಾಶಕ ಹಾಗೂ ಸಂಘಟಕರಾಗಿರುವ ಅವಿರತ ಹರೀಶ್ ಅವರಿಗೆ 60 ವರ್ಷ ತುಂಬಿದ ಸಂಭ್ರಮ. ಈ ಸಂಭ್ರಮ ಹೆಚ್ಚಿಸಲು ಅವರ ಗೆಳೆಯರ ಬಳಗ 'ಅವಿರತ ಹರೀಶ್ 60 ರ ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿತು. ಹೆಸರಾಂತ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ವಿವಿಧ...
ರಕ್ಷಿದಿಯಲ್ಲಿ ರಂಗ ಶಿಬಿರ
ರಕ್ಷಿದಿ ರಂಗ ಶಿಬಿರ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವವರಿಗೊಂದು ಸದವಕಾಶ ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ, ಹಾಗೂ ನೀನಾಸಂ ಪದವೀಧರರು, ಸಿನಿಮಾ ನಟರುಗಳಿಂದ ಶಿಬಿರದ ತರಗತಿಗಳು ನಡೆಯುತ್ತವೆ ಯಾವಾಗಿನಿಂದ - ಮೇ 1 ರಿಂದ ಮೇ 15ಎಲ್ಲಿ -...
‘ಅಮೂಲ್ಯ’ದಲ್ಲಿ ಪುಸ್ತಕ ದಿನಾಚರಣೆ, ಫೋಟೋ ಆಲ್ಬಂ
** ಅಮೂಲ್ಯ ಪುಸ್ತಕ ಮಳಿಗೆಯಲ್ಲಿ ವಿಶ್ವ ಪುಸ್ತಕ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಮೂಲ್ಯ ಪುಸ್ತಕ ಪ್ರಕಾಶನದ 2 ನೇ ವರ್ಷದ ಸಂಭ್ರಮ ಮತ್ತು 25 ನೇ ಪುಸ್ತಕ ಪ್ರಕಟಣೆಯ ಸಂತೋಷವನ್ನು ಸಂಭ್ರಮಿಸಲಾಯಿತು. ಖ್ಯಾತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ ಎಂ ಬಸವಣ್ಣ ಅವರು 'ಸಾಹಿತ್ಯ ಮತ್ತು ಮನೋವಿಜ್ಞಾನ' ಕುರಿತು ವಿಶೇಷ...
ಕವಿತೆಯೊಳಗೂ ಒಂದು ರಾಸಾಯನಿಕ ಕ್ರಿಯೆ..
ಜೋಗಿ ** ನನ್ನೊಳಗಿನ ನೀರು (ಕವನ ಸಂಕಲನ)ಪ್ರಕಾಶಕರು: ಮಾಣಿಕ್ಯ ಪ್ರಕಾಶನ, ಹಾಸನ.ಪುಟಗಳು: ೭೬ಬೆಲೆ: ೧೦೦ ರೂಪಾಯಿಗಳು. ಕವಿ ಎಂ ವಿ ಶಶಿಭೂಷಣರಾಜು ಅವರ ಹೊಸ ಕವನ ಸಂಕಲನ ಬಂದಿದೆ. ಈ ಕೃತಿಗೆ ಪ್ರಸಿದ್ಧ ಸಾಹಿತಿ ಜೋಗಿ ಅವರು ಬರೆದ ಮುನ್ನುಡಿ ಇಲ್ಲಿದೆ. ** ಬೆಂಕಿ ಬೆಳಕಾಗುವ ಕ್ಷಣ - ಕವಿತೆ ಕಷ್ಟ ಮತ್ತು ಸುಲಭ. ಅದು...
ಕಳಚಿದ ಮತ್ತೊಂದು ಕೊಂಡಿಯ ನೆನೆಯುತ್ತಾ
ಅಗಲಿದ ಜೀವಗಳು ನಮ್ಮೊಳಗೆ ಉಳಿಸುವ ನೆನಪುಗಳಿಗೆ ಒಡಗೂಡಿ ಇಟ್ಟ ಹೆಜ್ಜೆಗಳೇ ಇಂಧನ ನಾ ದಿವಾಕರ ** ಬರೆಯುವ ಮುನ್ನ : ಒಂದು ವಾರದ ಹಿಂದೆ, ಕೇವಲ ಹತ್ತು ವರ್ಷಗಳ ಒಡನಾಟವಿದ್ದು ಮೂವತ್ತು ವರ್ಷಗಳ ಹಿಂದೆ ಅಗಲಿದ ಆಪ್ತರ ಬಗ್ಗೆ ಲೇಖನ ಬರೆದಿದ್ದೆ. ಕಣ್ಣುಗಳಲ್ಲಿ ಅಲ್ಲದಿದ್ದರೂ ಎದೆಯಾಳದಲ್ಲಿ ಒಂದು ಕಂಬನಿ ಬತ್ತದೆ ಉಳಿದಿದೆ. ಅದು...
ನಿನ್ನ ಮೇಲಿನ ಪ್ರೀತಿಗೆ..
ಮಾಲತಿ ಗೋರೆಬೈಲ್ ** 1 ನಿನ್ನ ಮೇಲಿನ ಪ್ರೀತಿಗೆ ಸಾಕ್ಷಿಯಾಗಿವೆ ನನ್ನ ಕಣ್ಣುಗಳು. 2 ಕಣ್ಣ ಹನಿಗಳನ್ನು ಜತನದಿಂದ ಉಳಿಸಿಕೋ. ಬೇಕಾಗಬಹುದು ತೀವ್ರ ಬರಗಾಲವಿದೆ. 3 ಜ್ವರದ ಕಾವು ಇಳಿಯಲು ಸುರಿಯಬೇಕು ಪ್ರೀತಿಯ ಮಳೆ ...
ಬಿದ್ದು ಯಾರದೋ ಬಾಯಿ ಬಾವಿಗೆ!
ವೆಂಕಟೇಶ ಪಿ ಮರಕಂದಿನ್ನಿ ** ಎಲ್ಲಿ ಹೋದವು ಗೆಳೆಯ ನಿನ್ನ ಕನಸಿನ ದಿನಗಳು ಮನೆಯ ಹಿತ್ತಲಲ್ಲಿ ಹೀರೆಬಳ್ಳಿಯಂತೆ ಮನದ ಕತ್ತಲಲ್ಲಿ ನೀನು ಹಬ್ಬಿಸಿದ್ದ ನಿನ್ನ ಮುತ್ತಿನ ದಿನಗಳು ಎಲ್ಲಿ ಹೋದವು? ಎಲ್ಲಿ ಹಾದವು ಗೆಳೆಯ ಗಿಲ್ಲಿ ನಿನ್ನೆಳೆ ಎದೆಯ ಮಲ್ಲಿಗಿ ಕನಸ ದಿನಗಳು ಬದುಕುಗಲ್ಲು ಕುಟ್ಟುವಾ ಏಟಿಗೆ ಹೊಟ್ಟೆ ನುಡಿಸುವ ನಾದದಾ...
ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುವಂತಾಗಬೇಕು
** ದಿಲಾವರ್ ರಾಮದುರ್ಗ ** ಕಾನ್ ಫಿಲಂ ಫೆಸ್ಟಿವಲ್ ನ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ 'ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು'. ಇದರ ಕುರಿತು ಸಾಹಿತಿ ದಿಲಾವರ್ ರಾಮದುರ್ಗ ಅವರು ಬರೆದ ಬರಹ. ** ಮೈಸೂರಿನ ಡಾ. ಚಿದಾನಂದ ನಾಯಕ್ ಎನ್ನುವ ಎಂಬಿಬಿಎಸ್ ಓದಿದ ಲಂಬಾಣಿ ಜನಾಂಗದ...





















