ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಅದೇ ಬೆಳಕು ಮೂಡುತಿದೆ

ವೆಂಕಟೇಶ ಚಾಗಿ

**

ಮತ್ತೆ

ಅದೇ ಬೆಳಕು ಮೂಡುತಿದೆ

ಇರುಳ ಪರದೆಯನು

ಸರಿಸುತಲಿ

ಅದೇ ಜೀವನವನು ಹೊಸದಾಗಿಸಿ

ಈಗ

ಯಾವುದೂ ಹೊಸತಲ್ಲ

ಆದರೂ ಬೆಳಕು

ಎಲ್ಲವನೂ ಹೊಸದಾಗಿಸಿದೆ

ಮತ್ತೆ ಮತ್ತೆ ಮಾಡುವ

ಹಳೆ ಪ್ರಯತ್ನವೆಂಬಂತೆ

ಮನದೊಳಗೂ

ಮನೆಯೊಳಗೂ

ಬೆಳಕು ಹರಡುತಲಿದೆ

ಪ್ರತಿ ಗಳಿಗೆ ಖಾಲಿಯಾದಂತೆ

ಆ

ಬಿಸಿಯ ಚೈತನ್ಯಕೆ

ಹಗುರಾದ ಮುತ್ತುಗಳಿಗೆ

ಇಗೋ

ನನ್ನ ಪ್ರಣಾಮ

ಎಲ್ಲರೂ ಎಲ್ಲವೂ ಅತ್ಯಲ್ಪ

ಈ ಜಗವೇ

ಅದ್ಬುತ ಅತ್ಯದ್ಭುತ

‍ಲೇಖಕರು Admin MM

30 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading