ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವೆಂಬ ಕೂಗು…
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡವೆಂಬ ಕೂಗು…

ಡಿ ಎಸ್ ರಾಮಸ್ವಾಮಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯುವ ಅವಕಾಶಕ್ಕಾಗಿ ನಡೆದ ಆಂದೋಳನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲೂ  ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂಬ ಕೂಗು ಎದ್ದಿದೆ. ವಿವಿಧ ಕನ್ನಡ ಪರ...

read more
ಶರಣು ಹುಲ್ಲೂರ್ ಸಂಪಾದಕತ್ವದಲ್ಲಿ ‘ಸಂಚಾರಿ ವಿಜಯ್’ ಜೀವನ ಕಥನ
ಶರಣು ಹುಲ್ಲೂರ್ ಸಂಪಾದಕತ್ವದಲ್ಲಿ ‘ಸಂಚಾರಿ ವಿಜಯ್’ ಜೀವನ ಕಥನ

ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಹೊರಟಿದ್ದೇವೆ. ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು...

read more
ಶಿಕಾರಿಗೆ ಮಕ್ಕಳನ್ನೇ ಗಾಳಕ್ಕೆ ಸಿಕ್ಕಿಸಿದರಾಯಿತು
ಶಿಕಾರಿಗೆ ಮಕ್ಕಳನ್ನೇ ಗಾಳಕ್ಕೆ ಸಿಕ್ಕಿಸಿದರಾಯಿತು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಹೀಗಾದೆ ಏಕೆ?
ಪಿ ಆರ್ ವೆಂಕಟೇಶ್ ಹೊಸ ಕವಿತೆ- ಹೀಗಾದೆ ಏಕೆ?

ಪಿ ಆರ್ ವೆಂಕಟೇಶ್ ಕಾದನೆಲ ಮೈ ಸವರಿನನ್ನವರ ಹೆಜ್ಜೆಗಳಸಿಡಿಲ ಕೋಲನು ಹಿಡಿದುಹಲಿಗೆ ಬಾರಿಸಿದೆವಿಕೃತಿಯ ಸುಡಲುಬೆಂಕಿ ಆಕೃತಿ ಕೆತ್ತಿಸುಟ್ಟ ಬೂದಿಯ ರುಚಿಗೆರಂಗಾದೆ ಏಕೆ? ಬದುಕ ಬಾನಿನ ತುಂಬಚುಕ್ಕೆಗಳ ನೆಟ್ಪೆಅಬ್ಬರಿಸುವ ಮೊಡಕೆಸಿಡಿಲನಿಟ್ಪೆಧರೆಯ ಬತ್ತಳಿಕೆಗೆಆಕ್ರೊಶಗಳ ಎರೆದುಸಾವಿರದ ನದಿ ತೊರೆಗೆಹಾದಿ ಕೊರೆದೆ.ಕುಣಿದೆ ನೀ...

read more
ಶ್ರೀನಿವಾಸ ಪ್ರಭು ಅಂಕಣ- ಕೆಂಪು ಬಸ್ ಹತ್ತಿಯೇ ಬಿಟ್ಟೆ…
ಶ್ರೀನಿವಾಸ ಪ್ರಭು ಅಂಕಣ- ಕೆಂಪು ಬಸ್ ಹತ್ತಿಯೇ ಬಿಟ್ಟೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಟೆಲಿವಿಶನ್ ಎಂಬ ದೇವರು
ಟೆಲಿವಿಶನ್ ಎಂಬ ದೇವರು

ತಿಜಾನ್ ಸಲ್ಲಾ ಅಮೆರಿಕಾದಲ್ಲಿಟೆಲಿವಿಶನ್ ಬಹು ದೊಡ್ಡ ದೇವತೆ.ಅದಕ್ಕೆ ಅದರದೇ ಅರ್ಚಕರು, ಅರ್ಚಕಿಯರು.ಯಾರಿಗೂ ಯಾರೊಂದಿಗೂ ಸಂಭಾಷಣೆಗೆ ಸಮಯವಿಲ್ಲ, ಬೇಕಿಲ್ಲ.ಮೇಲುವರ್ಗದ ಸುಖದ ಎಲ್ಲ ಕಲ್ಪನೆಯನ್ನೂಟೆಲಿವಿಶನ್ ರಿಮೋಟ್ ಕಟ್ಟುತ್ತದೆ, ಕಂಟ್ರೋಲ್ ಮಾಡುತ್ತದೆ.‘ನನ್ನ ಮನೆಯಂಗಳದ ಕಿಟಕಿಯಿಂದ ಕಾಣುವ ಡೈಸಿ ಹೂಗಳು,ಸೂರ್ಯನ ಬೆರಳುಗಳಂತೆ...

read more
ಭೂಮಿ ಪಾದ..
ಭೂಮಿ ಪಾದ..

ಕೇಶವರೆಡ್ಡಿ ಹಂದ್ರಾಳ ನಾನು ಕಾಲಿಗೆ ಚಪ್ಪಲಿ ಹಾಕಿದ್ದೇ ಬೆಂಗಳೂರಿಗೆ ಹೈಸ್ಕೂಲು ಓದಲು ಬಂದ ಮೇಲೆ. ಆಗ ಊರಿನಲ್ಲೆಲ್ಲಾ ಹುಡುಕಿದರೂ ಚಪ್ಪಲಿ ಹಾಕುತ್ತಿದ್ದವರು ಅಮ್ಮಮ್ಮ ಎಂದರೆ ಒಂದಿಪ್ಪತ್ತು ಜನ ಸಿಗುತ್ತಿದ್ದರೇನೋ. ಸುಮಾರಾದ ಕುಳಗಳು ಚಪ್ಪಲಿಗಳನ್ನು ಮೆಟ್ಟಿಕೊಂಡು ಓಡಾಡುತ್ತಿದ್ದರು. ಹೆಂಗಸರು, ಮಕ್ಕಳಂತೂ ಚಪ್ಪಲಿಯ ಸಹವಾಸಕ್ಕೇ...

read more
ಅಮೃತಾ ಹೆಗಡೆ ಅಂಕಣ- ಆ ಮಗುವಿಗೆ ನೀನೇ ಕಿವಿ!
ಅಮೃತಾ ಹೆಗಡೆ ಅಂಕಣ- ಆ ಮಗುವಿಗೆ ನೀನೇ ಕಿವಿ!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ನೋಡೇ ಅಕ್ಕ, ಗಂಗೊಳ್ಳಿ ಹೊಳೆ ಕಾಣ್ತಿದೆ
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ನೋಡೇ ಅಕ್ಕ, ಗಂಗೊಳ್ಳಿ ಹೊಳೆ ಕಾಣ್ತಿದೆ

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಆರ್ ಜಿ ಹಳ್ಳಿ ನಾಗರಾಜ ಹೊಸ ಕವಿತೆ- ‘ಅಚ್ಛೇ ದಿನ’ದ ನಕ್ಷತ್ರಗಳ ಹುಡುಕಿ
ಆರ್ ಜಿ ಹಳ್ಳಿ ನಾಗರಾಜ ಹೊಸ ಕವಿತೆ- ‘ಅಚ್ಛೇ ದಿನ’ದ ನಕ್ಷತ್ರಗಳ ಹುಡುಕಿ

ಆರ್ ಜಿ ಹಳ್ಳಿ ನಾಗರಾಜ ನೂರು, ಮತ್ತಿಪ್ಪತ್ತು ಕೋಟಿ ಕೋಟಿ ಭಾರತೀಯರುಇದ್ದೇವೆ! ನೆಲದ ತುಂಬ ಹರಡಿ - ಗರಿಕೆ ಹುಲ್ಲಂತೆ! ಸನಾತನ ಧರ್ಮದ ಹೆಸರಲ್ಲಿಹಿಂದುತ್ವದ ಅಮಲಿನಲ್ಲಿಪುರೋಹಿತ, ಜ್ಯೋತಿಷಿಗಳ ಆಲಾಪನೆಯಲ್ಲಿಸಾಧನೆಯ ಹಾದಿಗೆ ಕಂದಕ ತೋಡಿದ್ದೇವೆ. ಎತ್ತರೆತ್ತರಕ್ಕೇರುವ ಕನಸಿಗೆ ಮೂಗುದಾರ ಪೋಣಿಸಿಕೊಂಡುಚೀನಾ, ಜಪಾನಿಯರ ಸಾಧನೆಯ...

read more
ಶ್ರೀವಿದ್ಯಾ ಸಿಂಗಾಪುರ ಡೈರಿ- ಸಿಂಗಾಪುರ ವಿಹಾರ ನೌಕೆ…
ಶ್ರೀವಿದ್ಯಾ ಸಿಂಗಾಪುರ ಡೈರಿ- ಸಿಂಗಾಪುರ ವಿಹಾರ ನೌಕೆ…

ಶ್ರೀವಿದ್ಯಾ ಜಾಗತಿಕ ಮಟ್ಟದ ಆರ್ಥಿಕತೆಯ ಬಹುಪಾಲು ಕಡಲ ವ್ಯಾಪಾರಕ್ಕೆ ಅವಲಂಬಿತವಾಗಿದೆ. ನಾವು ದಿನನಿತ್ಯ ಬಳಸುವಂತಹ ಆಹಾರ, ಎಲೆಕ್ಟ್ರಾನಿಕ್ಸ್, ಅಥವಾ ಇನ್ನಿತರೇ ಉತ್ಪನ್ನಗಳು ದೊಡ್ಡ ಮೊತ್ತದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಲು ಹಡಗುಗಳೇ ಸೂಕ್ತ. ಹಾಗೆಂದು ಕೇವಲ ಗಟ್ಟಿಮುಟ್ಟಾದ ಹಡಗುಗಳು ಮಾತ್ರ ಇದ್ದಲ್ಲಿ ಕೆಲಸ...

read more
ಸತ್ಯಬೋಧ ಜೋಶಿ ಹೊಸ ಕವಿತೆ- ಕಹಿ (ಹೂವಿನ) ಸ್ವಗತ
ಸತ್ಯಬೋಧ ಜೋಶಿ ಹೊಸ ಕವಿತೆ- ಕಹಿ (ಹೂವಿನ) ಸ್ವಗತ

ಸತ್ಯಬೋಧ ಜೋಶಿ ಬೃಂಗದೂರಿಗೆ  ನನ್ನ ಮಸುಕು ರಂಗನೇ ತೋರಿಕರೆದು ತಾರೆಯಾ ಗೆಳತಿ ಹೊತ್ತು ಮೀರುತಿದೆಬಾಡಿ ಮರಳುವ ಮುನ್ನ ತಿರುಳುಗಟ್ಟುವ ಆಸೆಕಹಿಯೇ ಇತ್ತರು ಅದುವೂ ಶಿವನಭಾಷೆ ಕಂದನಾಡುವ ನುಡಿಯ ಮುತ್ತನಾಗಿಸೊ ತೊದಲುಸೊಲ್ಲನಿಂಚರವೆನಿಸೋ ಇಹವು ನಾನುನನ್ನ ಇರುವಿಕೆ ಅಳಿದು ಮೀರಿ ಬೆಳೆದಂತೆಲ್ಲಇಂಪ ನೀಡುವ ಅಪಸ್ವರವು ನಾನು ಏಳುತೇಳುತ...

read more
ತಮ್ಮಣ್ಣ ಬೀಗಾರ ಓದಿದ ‘ನೀಲ ಕಿನ್ನರಿ’
ತಮ್ಮಣ್ಣ ಬೀಗಾರ ಓದಿದ ‘ನೀಲ ಕಿನ್ನರಿ’

ತಮ್ಮಣ್ಣ ಬೀಗಾರ ಬಾಲ್ಯವೇ ಹಾಗೆ. ಯಾವುದೋ ಕೆಲಸ ಮಾಡುತ್ತೇವೆ ಎಂದು ಹೊರಡುವುದು… ಆ ಕೆಲಸ ಮಾಡುವುದನ್ನು ಮರೆತು ಆಟಕ್ಕೆ ಇಳಿಯುವುದು, ಬಾಲಿನ ಕುರಿತಾಗಿಯೋ ಅಥವಾ ಯಾರು ಮೊದಲು ಆಟವಾಡುವುದು ಎಂಬುದಾಗಿಯೋ ತಕರಾರು ಮಾಡಿಕೊಂಡು ಸಿಟ್ಟಾಗುವುದು, ಸ್ವಲ್ಪ ಹೊತ್ತಿನಲ್ಲಿಯೇ ಇದನ್ನೆಲ್ಲಾ ಮರೆತು ಇನ್ಯಾವುದೋ ಆಕರ್ಷಣೆಯತ್ತ ಹೊರಡುವುದು...

read more
‘ರೀಗಲ್ ಪ್ರಿಂಟರ್ಸ್’ಗೆ ಪ್ರತಿಷ್ಠಿತ ಪುಸ್ತಕ ಪ್ರಾಧಿಕಾರ ಬಹುಮಾನ
‘ರೀಗಲ್ ಪ್ರಿಂಟರ್ಸ್’ಗೆ ಪ್ರತಿಷ್ಠಿತ ಪುಸ್ತಕ ಪ್ರಾಧಿಕಾರ ಬಹುಮಾನ

ಸುಧಾಕರ ದರ್ಬೆ, ಹಾದಿಮನಿ ಅವರ ಚಿತ್ರ ಹಾಗೂ ವಿನ್ಯಾಸಕ್ಕೆ ಮನ್ನಣೆ ಬೆಂಗಳೂರಿನ ಅತ್ಯುನ್ನತ ಮುದ್ರಣ ಸಂಸ್ಥೆಯಾದ ರೀಗಲ್ ಪ್ರಿಂಟರ್ಸ್ ಗೆ ೨೦೨೦ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರತಿಷ್ಠಿತ ಬಹುಮಾನವನ್ನು ಘೋಷಿಸಲಾಗಿದೆ. 'ಬಹುರೂಪಿ' ಪ್ರಕಾಶನದ ಕಿರಣ್ ಭಟ್ ಅವರ 'ರಂಗ ಕೈರಳಿ' ಮುದ್ರಣಕ್ಕಾಗಿ ರೀಗಲ್ ಪ್ರಿಂಟರ್ಸ್ ನ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೋಲು ಬಿಸಿಲು ಮೇಲೇರುವ ಹೊತ್ತಿಗೆ…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಕೋಲು ಬಿಸಿಲು ಮೇಲೇರುವ ಹೊತ್ತಿಗೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಹಂಸ ನಡಿಗೆಯ ದಿಲ್ಲಾಣ..!
ಹಂಸ ನಡಿಗೆಯ ದಿಲ್ಲಾಣ..!

ಅಕ್ಷಯ ಆರ್ ಶೆಟ್ಟಿ ಜೋಡಿ 1: ಒಂದೆರಡು ವಾರಗಳ ಹಿಂದೆ ಮಧ್ಯಾಹ್ನ ಜಾರುತ್ತಿದ್ದ ಹೊತ್ತು ಮಾಗಿದ ಜೋಡಿ ಹಕ್ಕಿಗಳು ತುಕ್ಕು ಹಿಡಿದ ಕಂಬಿಗಳಿಗೆ ಹಚ್ಚಿರುವ ಕೀಲೆಣ್ಣೆಗಳ ಭರವಸೆಯೊಡನೆ ತಮ್ಮ ತಮ್ಮ ರಥಗಳನ್ನು ಚಲಾಯಿಸುವ ಪಾಡು ಪಡುತ್ತಾ ಬಸ್ ಸ್ಟಾಪ್‍ಗೆ ಕಷ್ಟಪಟ್ಟು ಬಂದು, ಮತ್ತೆ ಬಸ್ ಏರಲು ಪಟ್ಟ ಪ್ರಯಾಸ ಸ್ವರ್ಗದ ಏಣಿಯನ್ನು...

read more
‘ಲಿಲಿಪುಟ್ಟಿ’ಯ ನಿದ್ದೆಗನಸು!
‘ಲಿಲಿಪುಟ್ಟಿ’ಯ ನಿದ್ದೆಗನಸು!

ಎಂ ಆರ್ ಕಮಲ ಬೆಳೆಬೆಳೆದು ದೊಡ್ಡವಳಾದಂತೆ ತಾನು ವಾಸವಾಗಿದ್ದ ಮನೆ, ಬೀದಿ, ತೋಟ ಎಲ್ಲವೂ ಅವಳ ಕಣ್ಣಿಗೆ ಚಿಕ್ಕದಾಗಿ ಹೋಯಿತು. ಜಗತ್ತಿಗೆ ಬೆಳಕನ್ನು ತೆರೆದಿದ್ದ 'ಕಿಟಕಿ' ಪುಟ್ಟ ಕಿಂಡಿಯಂತೆ, ಹರಟೆ ಹೊಡೆಯುತ್ತಿದ್ದ, ಪಗಡೆ ಆಡುತ್ತಿದ್ದ, ಕಂಬದಾಟದ 'ದೊಡ್ಡ'(!) ಜಗುಲಿ ಅಂಗೈ ಅಗಲವಾಯಿತು. ಅಜ್ಜನ 'ದೊಡ್ಡ ಮನೆ' ಬೊಂಬೆಯಾಟದ...

read more
ಓ ಎಲ್ ಎನ್ ಓದಿದ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’
ಓ ಎಲ್ ಎನ್ ಓದಿದ ‘ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ’

ಭುವನಾ ಹಿರೇಮಠ ಅವರ ಹೊಸ ಕವನ ಸಂಕಲನ - ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ ಈ ಕೃತಿಗೆ ಖ್ಯಾತ ವಿಮರ್ಶಕರಾದ ಓ ಎಲ್ ನಾಗಭೂಷಣಸ್ವಾಮಿ ಅವರುಬರೆದ ಮುನ್ನುಡಿ ಇಲ್ಲಿದೆ- ಓ ಎಲ್ ನಾಗಭೂಷಣ ಸ್ವಾಮಿ ನನಗೆ ವಯಸ್ಸಾಗುತ್ತಿರುವ ಕಾರಣಕ್ಕೇ ಇರಬೇಕು, ಕನ್ನಡ ಕವಿತೆ ದಣಿದಿದೆ ಅನಿಸುತ್ತದೆ. ನೋಡುವುದಕ್ಕೆ ಪದ್ಯದ ಹಾಗೆ ಕಾಣುವ ಆದರೆ...

read more

Pin It on Pinterest

Share This