ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಪ್ನ ‘ಅವಧಿ’ ಟಾಪ್ ಟೆನ್
ರತ್ನಾ ಮೂರ್ತಿ ಹೊಸ ಕವಿತೆ – ಗಮ್ಯ…
ರತ್ನಾ ಮೂರ್ತಿ ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆಧನ ಪದವಿ...
ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಕೃತಿಗಳ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಬೆಂಗಳೂರಿನ ಬಾಪೂ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ...
ಮಧುಕರ್ ಬಳ್ಕೂರು ಸರಣಿ ಕಥೆ 10 – ತೆಂಡೂಲ್ಕರ್ ರೆಕಾರ್ಡ್ ಗಳಿಗಾಗಿ ಆಡುತ್ತಾರೆ ಅನ್ನೊದಕ್ಕೂ ಮೊದಲು…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 10 ತೆಂಡೂಲ್ಕರ್ ರೆಕಾರ್ಡ್...
ಜಿ ಎನ್ ನಾಗರಾಜ್ ಅಂಕಣ- ಪ್ಲೇಟೋ, ಅರಿಸ್ಟಾಟಲ್ ತೀರ್ಮಾನ ಸುಳ್ಳಾಗಿದ್ದು.
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಹೊಸ ಕಥಾ ಅಂಕಣ ಆರಂಭ…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಮತ್ತೆ ಮತ್ತೆ ತೇಜಸ್ವಿಯ ಜಪದಲ್ಲೇಕೆ ಶಾಮಣ್ಣ…
ನೆಂಪೆ ದೇವರಾಜ್ ನಮ್ಮ ನಡುವಿನ ವಿಧ್ವಾಂಸ ಡಾ.ಜೆ.ಕೆ ರಮೇಶ್, ಆಳದ ಆಲೋಚನೆಯ ಜಿ.ಎಸ್ ರಾಜೇಂದ್ರ, ಶಿಷ್ಯಲೋಕದ ಜೊತೆ ತಾಯ್ತನದ ಸಂಬಂಧ ಹೊಂದಿರುವ ಡಾ.ಬಿ ಗಣಪತಿ, ಚಂದದ ಹಾಡುಗಾರ ಬಿದರುಗೋಡು ಡಾ.ನಾಗೇಶ್ ಮತ್ತು ನಾನು ಮೊನ್ನೆ ಕಡಿದಾಳು ಶಾಮಣ್ಣನವರನ್ನು ನೋಡಲು ಭಗವತಿಕೆರೆಯ ಅವರ ಮನೆಗೆ ಹೋದಾಗ ಕಡಿದಾಳು ಶಾಮಣ್ಣನವರ ಬಾಯಲ್ಲಿ...
ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ…
ಧ್ವಜ ಸತ್ಯಾಗ್ರಹದ ಅಂಗವಾಗಿ ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ ನಡೆಯಿತು. ಶಿಬಿರದಲ್ಲಿ ರಂಗಾಯಣದ ಕಲಾವಿದರಾದಂತಹ ದ್ವಾರಕನಾಥ್, ರಂಗಕರ್ಮಿ ಪ್ರಸನ್ನ ಹಾಗೂ ಇತರ ಶಿಬಿರಾರ್ಥಿಗಳು ಚಿತ್ರ ರಚಿಸಿದರು. ಸಿದ್ಧಾರ್ಥ ಹೋಟೆಲ್ ನ ಮಾಲೀಕರು ಹಾಗೂ ಉದ್ಯಮಿ ಗಿರಿ ಅವರು ಕಲಾ ಶಿಬಿರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ...
ತಾಯಿ ಲೋಕೇಶ್ ಕಂಡಂತೆ ‘ಪೂಲನ್ ದೇವಿ’
ತಾಯಿ ಲೋಕೇಶ್ ಎಲ್ಲಾ ಹೆಣ್ಣು ಸಹಿಸಿಕೊಂಡು .. ಹೂವೇ ಆಗಿರುವುದಿಲ್ಲ ದೌರ್ಜನ್ಯಕ್ಕೆ ಪ್ರತಿರೋಧಿಸುವ .. ಬೆಂಕಿಯು ಆಗುತ್ತಾರೆ .. ಭಾರತದ ಇತಿಹಾಸ ಪುಟಗಳಲ್ಲಿ ತನ್ನದೇ ರಕ್ತಚರಿತ್ರೆ ಬರೆದ ಫೂಲನ್_ದೇವಿ ಅವರ ಹೋರಾಟದ ಬದುಕನ್ನು ಆಧರಿಸಿ ರಂಗಪಯಣ ತಂಡ ಇತ್ತಿಚೆಗೆ ಯಶಸ್ವಿಯಾಗಿ ಪ್ರಯೋಗಿಸಿದ "ಫೂಲನ್_ದೇವಿ" ನಾಟಕದ ಕೆಲವು...
Through moments in BNW
’ಎಲ್ಲೋ ಇದ್ದೀಯಾ ನೀನು’ ಎಂಬ ಪ್ರೀತಿಯ ಹುಡುಕಾಟದಲ್ಲಿ…
ಸಿದ್ಧರಾಮ ಕೂಡ್ಲಿಗಿ ಮನಸು ತುಂಬಾ ಸೂಕ್ಷ್ಮ. ಮನಸಿನ ಮನಸನ್ನು ಅರಿಯುವುದು ತುಂಬಾ ಕಷ್ಟವೂ ಹೌದು. ಹೊರಗಿನ ಪ್ರಪಂಚಕ್ಕೆ ತೋರುವ ಮನಸೇ ಬೇರೆ, ತೋರಲಾಗದ ಹಾಗೆ ಇರುವ ಒಳಮನಸೇ ಬೇರೆ. ಎರಡೂ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುತ್ತವೆ, ಅದು ಸಹಜವೂ ಕೂಡ. ಸದಾ ನಾವು ನಮ್ಮ ಮನಸಿಗೆ ಸಂತೋಷವನ್ನು ಕೊಡುವುದರ ಹುಡುಕಾಟದಲ್ಲೇ...
ಎಚ್ ಆರ್ ರಮೇಶ ಓದಿದ ‘ಸಾಹಿತ್ಯ ಮತ್ತು ಸಿದ್ದಾಂತಗಳು’
ನಟ್ ಶೆಲ್ ನಲ್ಲಿ ಸಾಹಿತ್ಯ ಮತ್ತು ಸಿದ್ಧಾಂತಗಳು ಎಚ್ ಆರ್ ರಮೇಶ ಇತ್ತೀಚೆಗಷ್ಟೇ ಪ್ರಕಟಗೊಂಡಿರುವ ರಾಜೇಂದ್ರ ಚೆನ್ನಿ ಅವರ ಸಾಹಿತ್ಯ ಮತ್ತು ಸಿದ್ಧಾಂತಗಳು ಕೃತಿಯು ಒಂದು ಅದ್ಭುತವಾದ ಪುಸ್ತಕ. ಕನ್ನಡಕ್ಕೆ ಈ ಪುಸ್ತಕ ತುಂಬಾ ಅನಿವಾರ್ಯವಾಗಿತ್ತು. ಅಷ್ಟೇ ಯಾಕೆ, ಭಾರತೀದ ರಾಜಕೀಯ ಮತ್ತು ಸಾಂಸ್ಕøತಿಕ/ಸಾಹಿತ್ಯಕ...
ಸುಡುಗಾಡಲ್ಲಿ ಸುಳಿದಾಡುವ ತಂಗಾಳಿ…
ಸುರೇಶ ಎಲ್ ರಾಜಮಾನೆ ಜಾರಿಹೋಗುವ ಕಣ್ಣ ಹನಿಗಳುಹೆಪ್ಪುಗಟ್ಟಿವೆ ಕಣ್ಣೊಳಗೆಮುಪ್ಪಿನ ಭಯಕ್ಕಲ್ಲಉಪ್ಪಿನ ಋಣಕ್ಕೆ ಮತ್ತದರ ಗುಣಕ್ಕೆಹೊಂದಿಕೊಳ್ಳಲಾಗದೆ.. ಮುಳ್ಳಿನ ಮೇಲೆ ಹೆಜ್ಜೆಯಿಟ್ಟುನಗುವಿನ ಜೋಪಡಿ ಕಟ್ಟಿಕೊಳ್ಳಲುತುಂಬಾ ಕಷ್ಟವಾಗುತ್ತಿದ್ದರೂನಗುವ ಮನಸ್ಸಾಗಿದ್ದರಿಂದನೋವು ಸಾವಿಗೆ ಶರಣಾಗಿದೆ.. ಹೆಚ್ಚುಕಡಿಮೆ ಎಲ್ಲರ ಬದುಕೂಹೀಗೆ...
ಕಾರುಣ್ಯದ ಒರತೆ…
ಸ್ವಭಾವ ಕೋಳಗುಂದ ಕೊಟ್ಟಿಗೆಯ ಕರುವಿನಕೂಗು ಕಾರುಣ್ಯದ ಒರತೆ ಅವ್ವನ ಕೈತುತ್ತುಅಪ್ಪನ ಬೆವರ ಹನಿಇವಳ ಅಪ್ಪುಗೆಕಂದನ ಹೊಳೆವ ಕಣ್ಣುಕಾರುಣ್ಯದ ನಿಧಿ ಕುಳ ಬಗೆದ ನೆಲಹದಗೊಂದು ನುಂಗಿದ ಬೀಜಕುಡಿಯೊಡೆದು ಎಲೆತೆನೆದೂಗಿದ ಘಳಿಗೆಕಾರುಣ್ಯದ ಪೈರು ನೈವೇದ್ಯ ಮಾಡಿದ ಎಡೆಜಂಗಮನ ಹಸಿವ ನೀಗಿದಕ್ಷಣ ಕಾರುಣ್ಯದ ಸಾರ್ಥಕತೆ ಬೊಚ್ಚು...
ಮಧುಕರ್ ಬಳ್ಕೂರು ಸರಣಿ ಕಥೆ 9 – ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯ ದಾಖಲೆ…
ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 9 "ಕಪಿಲ್ ದೇವ್ ರಿಚರ್ಡ್...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ವಿದ್ವಾಂಸರ ಮತ್ತು ಸಂಗೀತ ಕಲಾವಿದರ ನುಡಿಚಿತ್ರ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
Pic by Unknown
‘ರಾಮಾಯಣ ದರ್ಶನಂ’ ಕುರಿತು ರಾಜೇಗೌಡ ಹೊಸಹಳ್ಳಿ ನೋಟ…
ಎನ್ ಬೋರಲಿಂಗಯ್ಯ ಶ್ರೀ ಕುವೆಂಪು ಅವರ "ಶ್ರೀ ರಾಮಾಯಣ ದರ್ಶನಂ" ಮಹಾ ಕಾವ್ಯವನ್ನು ಕುರಿತು ಈಗಾಗಲೇ ಸಾವಿರಾರು ಲೇಖನಗಳು, ನೂರಾರು ಗ್ರಂಥಗಳು ಒಂದೆರಡಾದರೂ ಉದ್ಗ್ರಂಥಗಳು ಪ್ರಕಟವಾಗಿವೆ. ಇಷ್ಟಾದರೂ ಇಪ್ಪತ್ತನೆಯ ಶತಮಾನದ ಈ ಮಹಾಕೃತಿಯನ್ನು ಕುರಿತು ಹೊಸ ಹೊಸ ಬಗೆಯ ಓದು ಮತ್ತು ವ್ಯಾಖ್ಯಾನಗಳು ಇಲ್ಲಿಗೆ ಮುಗಿಯಿತು ಎನ್ನುವಂತೇನೂ...
ದೀಪಾ ಗೋನಾಳ ಹೊಸ ಕವಿತೆ- ಮೂರು ಸೀರೆಗಳು… ಮೂರು ಕವಿತೆಗಳು…
ದೀಪಾ ಗೋನಾಳ 1. ವಾರ್ಡರೋಬಿನ ಎದೆಬೀಗ ತೆಗೆದುಒಂದೊಂದೇ ಸೀರೆಬಿಚ್ಚಿ ತೋರಿಸುತ್ತಾಳೆಇವಳು,ಕವಿತೆ ಬರಿ ಸೀರೆಯ ಮೇಲೊಂದುಎಂದು ಒಂದೇ ಸಮನೆಹೇಳುತ್ತಲೇ ಇದ್ದಾಳೆ ಸ್ವತಃ ಕವಿತೆಯಂತೆಸೀರೆಯುಟ್ಟ ಲಯವಾಗಿನಡೆದರೆಎಲ್ಲಿ ಬರೆಯುವುದು ಕವಿತೆ!? ನೋಡಿದು ಇಳಕಲ್ ಸೀರೆಇದು ಮೊಳಕಾಲ್ಮೂರು ಸೀರೆಇದು ನೀನೆ ಮೊದಲ ರಾತ್ರಿಗೆಂದು ತಂದಬಿಳಿ ಸೀರೆ...
ಇನ್ನೊಂದು ‘ತಂಗ್ಜಾಮ್’ ಕವಿತೆ…
ಭಾಗ್ಯ ಅವರೇ, ನೀವು ತಂಗ್ಜಾಮ್ ಐಬೋಪಿಶಾಕ್ ಅವರ ಕವನ ಅನುವಾದಿಸಿದ್ದು ನೋಡಿ ಸಂತೋಷವಾಯಿತು. ಮಣಿಪುರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಅವರ ಕವನಗಳನ್ನು ಅನುವಾದ ಮಾಡಿರುವ ಇಂಗ್ಲಿಷ್ ಕವಿ ರಾಬಿನ್ ಎಸ್ ನಾಂಗ್ನೋಮ್ ಕೂಡಾ ನನಗೆ ಇಷ್ಟದ ಆತ್ಮೀಯ ಕವಿ ಗೆಳೆಯ. ತಂಗ್ಜಾಮ್ ನ ಇನ್ನೊಂದು ಕವನ...
ಇದು ಸಮಕಾಲೀನ ಸಂಗತಿಗಳ ಸುತ್ತ ಹೆಣೆದಿರುವ ಒಂದು ಕಥಾನಕ…
‘ಅವಧಿ’ ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ. ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ. ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ...




















