ಜಿ ಎನ್ ನಾಗರಾಜ್ ಅಂಕಣ- ಜೆನೆಟಿಕ್ ವಿಜ್ಞಾನಿಗಳಾದ ‘ಅಮ್ಮ’ ಗಳು ಮಾಡಿದ ಸಾಮಾಜಿಕ ಇಂಜನಿಯರಿಂಗ್…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

13

ಒಂದು ಮದುವೆ ಮಾತುಕತೆ ನಡೆಯುತ್ತಿತ್ತು. ಈ ಕಡೆ ಗಂಡು ಹಲವು ಹೆಣ್ಣುಗಳನ್ನು ನೋಡಿ ನೋಡೀ ಈ ಹೆಣ್ಣನ್ನು ಒಪ್ಪಿದ್ದ. ಆ ಕಡೆ ಹೆಣ್ಣಿಗೂ ನೋಡಲು ಬಂದ ಹಲವು ಗಂಡುಗಳ ಮುಂದೆ ಪ್ರದರ್ಶನಕ್ಕೆ ಒಡ್ಡಿಕೊಂಡು ಸಾಕಾಗಿತ್ತು. ಗಂಡೂ,ಹೆಣ್ಣೂ ಪರಸ್ಪರ ಒಪ್ಪಿಕೊಂಡರು. ಮದುವೆ ಮಾತುಕತೆ ಆರಂಭವಾಯಿತು. ಅಳೆದು ಸುರಿದು ತೀರ್ಮಾನಕ್ಕೆ ಬಂದರು.

ಇನ್ನೇನು ಮದುವೆ ದಿನ ಇತ್ಯಾದಿ ಮಾತು ಆರಂಭ ಮಾಡುತ್ತಿದ್ದ ಹಾಗೇ ಹೆಣ್ಣಿನ ಕಡೆಯ ಯಜಮಾನರೊಬ್ಬರು ನಿಮ್ಮ ಬೆಡಗು ಯಾವುದು ಅಂತ ಒಂದು ಪ್ರಶ್ನೆ ಹಾಕಿದರು. ಅಲ್ಲಿದ್ದ ಎರಡೂ ಕಡೆಯ ಬಹಳ ಜನಕ್ಕೆ ಅದೇನೂ ಅಂತ ತಿಳಿಯಲಿಲ್ಲ. ಅಷ್ಡರಲ್ಲಿ ಗಂಡಿನ ಕಡೆಯ ಹಿರಿಯಳೊಬ್ಬಳು ಹೋತನೋರು ಎಂದಳು. ಆಗ ಆ ಯಜಮಾನರು ಹಾಗಾದರೆ ಈ ಮದುವೆ ನಡೆಯಲ್ಲ ಬಿಡಿ. ಇಲ್ಲಿಗೇ ಮಾತು ನಿಲ್ಲಿಸಿಬಿಡಿ ಎಂದರು.

ಗಂಡಿಗೂ, ಹೆಣ್ಣಿಗೂ ಅಘಾತವಾಯ್ತು. ಅವರ ತಂದೆ ತಾಯಂದಿರಿಗೂ ಏನೂ ತಿಳಿಯದೆ ಕಕಮಕವಾಯ್ತು. ಆಗ ಆ ಯಜಮಾನರು ಗಂಡೂ ಹೆಣ್ಣೂ ವಾವೆಯಲ್ಲಿ ಅಣ್ಣ ತಂಗಿ ಆಗ್ತಾರೆ. ಅಣ್ಣ ತಂಗಿಗೆ ಮದುವೆ ಮಾಡಕ್ಕಾದದಾ ಎಂದರು. ಆ ಕಡೆ ಗಂಡಿನ ಕಡೆಯ ಹಿರಿಯಳೂ ಕೂಡಾ ಅವರು ಏಳಿದ್ದು ಸರಿ ಅಯ್ತೆ, ಏಳಿ ಹೋಗೋಣ,ಇನ್ನೇನೂ ಮಾಡಕ್ಕಾಗೋಲ್ಲ ಎಂದು ತಮ್ಮ ಕಡೆಯವರನ್ನೆಲ್ಲಾ ಎಬ್ಬಿಸಿದರು.
ಅವರಿವರಲ್ಲಿ ಗುಜು ಬುಜು ಶುರುವಾಯ್ತು. ಗಂಡಿಗೂ, ಹೆಣ್ಣಿಗೂ ಈ ಮುದಿಯರಿಗೇನೂ ಕೆಲಸ ಇಲ್ಲ. ಏನೋ ಒಂದು ತಂದು ಎಲ್ಲಾದಕ್ಕೂ ಅಡ್ಡ ಬರ್ತಾರೆ ಅಂತ ಒಳಗೊಳಗೇ ಸಿಟ್ಟು. ಅವರ ತಂದೆ ತಾಯಂದಿರಿಗೂ ಇದೇನು ಅಂತ ಅರ್ಥವಾಗದಿದ್ದರೂ ಏನೋ ಕಟ್ಟಳೆ ಇದೆ. ಹಿರಿಯರ ಮಾತು ಮೀರುವಂತಿಲ್ಲ ಎಂಬ ಅನಿವಾರ್ಯತೆ. ಪಕೆಲವರು ಈ ಬೆಡಗು ಅಂದ್ರೇನು,ಅದ್ಯಾಕೆ ಮದುವೆಗೆ ಅಡ್ಡ ಬಂತು ಅಂತ ತಮ ತಮಗೆ ಗೊತ್ತಿದ್ದಂತೆ ವಿವರಿಸತೊಡಗಿದರು.
ಅವುಗಳ ಒಟ್ಟು ಸಾರಾಂಶ ಇಷ್ಟು : ಬೆಡಗು ಎಂಬುದು ಒಂದೇ ವಂಶದ ಮೂಲ ಇದ್ದಂತೆ. ಅವರೆಲ್ಲಾ ಒಂದೇ ತಂದೆಯ ಮಕ್ಕಳು,ಮೊಮ್ಮಕ್ಕಳುಗಳ ಮುಂದಿನ ತಲೆಮಾರುಗಳು. ಆದ್ದರಿಂದ ಒಂದು ಬೆಡಗಿಗೆ ಸೇರಿದವರೆಲ್ಲ ಅಣ್ಣ ತಮ್ಮ ಅಕ್ಕ ತಂಗಿ ಇದ್ದಂತೆ. ಅವರು ಪರಸ್ಪರ ಮದುವೆಯಾಗುವಂತಿಲ್ಲ. ಈ ಪದ್ಧತಿ ಎಲ್ಲ ಜನ ಸಮುದಾಯಗಳಲ್ಲಿಯೂ ಇದೆ. ಕೆಲವರು ಈ ಗುಂಪನ್ನು ಬಳಿ ಎಂದು ಕರೆದರೆ ವೈದಿಕ ಸಾಹಿತ್ಯದಲ್ಲಿ ಗೋತ್ರ ಎಂದು ಕರೆಯುತ್ತಾರೆ. ಇತ್ತೀಚೆಗೆ ಬಹಳ ಜನಕ್ಕೆ ತಂತಮ್ಮ ಬೆಡಗು/ ಬಳಿಗಳ ಅರಿವು ಇಲ್ಲದಾಗಿರುವುದರಿಂದ ಮದುವೆಗಳನ್ನು ನಿಶ್ಚಯಿಸುವಾಗ ಅವು ಅಲಕ್ಷ್ಯಕ್ಕೆ ಒಳಗಾಗಿವೆ.

ಪ್ರತಿಯೊಂದು ಜಾತಿ, ಉಪಜಾತಿಗಳಲ್ಲಿಯೂ ಇಂತಹ ಹಲವು ಬೆಡಗು ಅಥವಾ ಬಳಿಗಳಿರುತ್ತವೆ. ಕರ್ನಾಟಕದ ಕೆಲ ಜಾತಿಗಳ ಅಧ್ಯಯನಗಳನ್ನು ಅಧ್ಯಯನ ಮಾಡಿದ ಸಂಶೋಧಕರುಗಳು ಆಯಾ ಜಾತಿಗಳ ಬಳಿ ಯಾ ಬೆಡಗುಗಳನ್ನು ಪಟ್ಟಿ ಮಾಡಲು ಪ್ರಯತ್ನಿಸಿದ್ದಾರೆ. ಅಂತಹ ಕೆಲವು ಜಾತಿಗಳ ಬೆಡಗುಗಳ ಸಂಖ್ಯೆ ಹೀಗಿವೆ : ಗಂಗಡಿಕಾರ ಒಕ್ಕಲಿಗರಲ್ಲಿ 42 ಬಳಿಗಳು, ಕುಂಚಿಟಿಗರಲ್ಲಿ 55, ಮೊರಸು ಒಕ್ಕಲಿಗರಲ್ಲಿ 147, ಉತ್ತರ ಕನ್ನಡ ಜಿಲ್ಲೆಯ ನಾಡವರಲ್ಲಿ ಈಗ ಪಟ್ಟಿ ಮಾಡಲಾಗಿರುವ 20, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬಂಟರಲ್ಲಿ ಈಗ ಅಸ್ತಿತ್ವದಲ್ಲಿರುವ 65, ಇನ್ನೂ ಅನ್ವೇಷಿಸಬೇಕಾಗಿರುವ 55 ಬಳಿಗಳು ಇವೆ. ಉಪ ಸಂಸ್ಕೃತಿಯ ಮಾಲೆಯಲ್ಲಿ ಅಧ್ಯಯನ ಮಾಡಲಾಗಿರುವ ದಲಿತ, ಆದಿವಾಸಿ, ಹಿಂದುಳಿದ ಜಾತಿಗಳ ಸಮುದಾಯಗಳಲ್ಲಿ ಪ್ರತಿಯೊಂದರಲ್ಲಿಯೂ ಬೆಡಗುಗಳನ್ನು ನಮೂದಿಸಲಾಗಿದೆ.

ಈ ಬೆಡಗುಗಳಲ್ಲಿರುವ ಕುಟುಂಬಗಳ ಸದಸ್ಯರು ಪರಸ್ಪರ ಅಣ್ಣ ತಮ್ಮಂದಿರು ಎಂಬ ಭಾವನೆಯ ಜೊತೆಗೆ ಹಲವು ಬೆಡಗುಗಳು ಕೂಡಾ ಪರಸ್ಪರ ಅಣ್ಣ ತಮ್ಮಂದಿರು ಎಂದು ಭಾವಿಸುತ್ತವೆ. ಅಣ್ಣ ತಮ್ಮಂದಿರೆಂದು ಭಾವಿಸುವ ಬೆಡಗುಗಳು ತಾವು ಒಂದು ಕುಲ ಎಂದು ಭಾವಿಸುತ್ತಾರೆ. ಅದೇ ಸಮಯದಲ್ಲಿ ಬೇರೆ ಬೆಡಗುಗಳ ಸದಸ್ಯರ ಜೊತೆಗೆ ಮದುವೆಯಾಗಬಹುದೆಂದು ಭಾವಿಸುತ್ತಾರೆ. ಇದನ್ನು ಕಾಡುಗೊಲ್ಲರ ಅಧ್ಯಯನದ ಒಂದು ಉದಾಹರಣೆಯಿಂದ ವಿವರಿಸ ಬಯಸುತ್ತೇನೆ.
ಕಾಡುಗೊಲ್ಲರಲ್ಲಿ ಬೆಡಗುಗಳು ಹೀಗೆ ವಿಂಗಡಣೆಗೊಂಡಿವೆ. ಚಿತ್ತಮುತ್ತಿ ಕುಲದ ಬೆಡಗುಗಳು :
1.ಕರಡಿಗೊಲ್ಲರು 2.ಮಾರನವರ ಗೊಲ್ಲರು
ಚಂದಮುತ್ತಿ ಕುಲದವರು :

  1. ಅಜ್ಜಿಯವರ ಗೊಲ್ಲರು
  2. ಸನ್ನರ ಗೊಲ್ಲರು
  3. ಸೋಮನವರ ಗೊಲ್ಲರು
  4. ಬೊಮ್ಮನವರ ಗೊಲ್ಲರು
  5. ಕೋಣನವರ ಗೊಲ್ಲರು
  6. ಪೋಲನವರ ಗೊಲ್ಲರು
  7. ಎಗಡಿನವರ ಗೊಲ್ಲರು
    8.ಅರಿಸಿನ ಕಲ್ಲಿ ಗೊಲ್ಲರು.
    ರಾಮೇಗೌಡನ ಕುಲದವರು :
  8. ಅರೇನವರ ಗೊಲ್ಲರು
  9. ಮೇರೇನವರ ಗೊಲ್ಲರು
  10. ಕಂಬಿಯವರ ಗೊಲ್ಲರು.
    4 ಕಹಳೆಯವರ ಗೊಲ್ಲರು.
  11. ಒಡೆಯವರ ಗೊಲ್ಲರು
  12. ಒನಕೆಯವರ ಗೊಲ್ಲರು
    7.ಮಾಸಿನವರ ಗೊಲ್ಲರು.
    8.ಚೀರನವರ ಗೊಲ್ಲರು.
  13. ಬೆಳ್ಳೋರ ಗೊಲ್ಲರು.
  14. ಬೆಳ್ಳೂರವರು.

ಮೇಲಿನ ಕುಲಗಳ ಒಳಗಿನ ಬೆಡಗುಗಳಿಗೆ ಸೇರಿದವರು ಪರಸ್ಪರ ಮದುವೆ ಸಂಬಂಧ ಮಾಡುವುದಿಲ್ಲ. ಆದರೆ ಬೇರೆ ಎರಡು ಕುಲಗಳ ಜೊತೆ ಮದುವೆ ಸಂಬಂಧ ಬೆಳೆಸುತ್ತಾರೆ. ಇದನ್ನು ಒಳ ಸಂಬಂಧಗಳ ನಿಷೇಧ exogamy ಎಂದು ಕರೆಯಲಾಗಿದೆ. ಇದನ್ನೇ ವೈದಿಕ ಸಾಹಿತ್ಯದಲ್ಲಿ ಸಗೋತ್ರ ವಿವಾಹ ನಿಷೇಧ ಎನ್ನುತ್ತಾರೆ.

ಹೀಗೆ ರಕ್ತ ಸಂಬಂಧಿಗಳ ನಡುವಣ ಲೈಂಗಿಕ ಸಂಬಂಧಗಳನ್ನು ನಿಷೇಧಿಸಿ ಅದಕ್ಕಾಗಿ ಬೆಡಗು,ಬಳಿ ಎಂಬ ಸಾಮಾಜಿಕ ಹೆಣಿಗೆಯನ್ನು ರೂಪಿಸಿದ್ದು ಮಾನವ ವಿಕಾಸದ ಇತಿಹಾಸದಲ್ಲಿ ಒಂದು ದೊಡ್ಡ ನೆಗೆತ. ಮಾನವ ವಿಕಾಸದಲ್ಲಿಯೇ ಏಕೆ ಜೀವ ವಿಕಾಸದಲ್ಲಿಯೇ ಮೊತ್ತ ಮೊದಲು. ಈ ನಿಷೇಧ ಎಲ್ಲ ಪ್ರಾಣಿಗಳಿಗಿಂತ ಮಾನವ ಸಮುದಾಯ ಹೆಚ್ಚು ವೈವಿಧ್ಯಮಯ ಸಾಮರ್ಥ್ಯಗಳನ್ನು ಪಡೆದು ವಿಶ್ವದೆಲ್ಲೆಡೆ ವ್ಯಾಪಿಸಲು, ಇತರೆಲ್ಲ ಪ್ರಾಣಿಗಳ ದೌರ್ಬಲ್ಯವನ್ನು ಮೀರಿ ಬೆಳೆಯಲು ಒಂದು ಮುಖ್ಯ ಸಾಧನವಾಯಿತು. ಅಷ್ಟೇ ಅಲ್ಲದೆ ಬೆಡಗು,ಬಳಿ ಎಂಬ ಸಂಸ್ಥೆ ಮಾನವ ಸಮಾಜದ ಮೊತ್ತ ಮೊದಲ ಸಾಮಾಜಿಕ ರಚನೆಯಾಗಿ ಕೂಡಾ ಬಹು ದೊಡ್ಡ ಮತ್ತು ದೀರ್ಘ ಕಾಲ ಪರಿಣಾಮ ಬೀರಿತು.

ಈಗ ಶಿಕ್ಷಣ ಪಡೆದವರಲ್ಲಿ ಬಹಳ ಜನಕ್ಕೆ ತಿಳಿದ ವಿಷಯ ರಕ್ತ ಸಂಬಂಧಿಗಳಲ್ಲಿ ಮದುವೆಯಾಗುವುದು ಮುಂದೆ ಹುಟ್ಟುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾನಿಕರ. ಅದರಿಂದಾಗಿ ಅಂತಹ ಮಕ್ಕಳಲ್ಲಿ ದೈಹಿಕ ನ್ಯೂನತೆಗಳು, ಬೌದ್ಧಿಕ ಬೆಳವಣಿಗೆಯ ಸಮಸ್ಯೆಗಳು ಉಂಟಾಗಬಹುದು. ಮಕ್ಕಳು ಬೇಗ ಸಾಯಬಹುದು, ಉಳಿದುಕೊಂಡರೂ ಕೂಡಾ ಮಂದ ಬುದ್ಧಿಯವರಾಗುವ ಸಾಧ್ಯತೆಗಳು ಹೆಚ್ಚಿದೆ. ರಕ್ತ ಸಂಬಂಧಿಗಳ ನಡುವಣ ಲೈಂಗಿಕ ಸಂಬಂಧಗಳ ಅನಪೇಕ್ಷಿತ ಪರಿಣಾಮಗಳ ಅರಿವು ಇಂದಿನ ಜೆನೆಟಿಕ್ಸ್ ಎಂಬ ವಿಜ್ಞಾನದ ಕೊಡುಗೆ. ಇದನ್ನು ಗಣನೀಯವಾಗಿ ಮೊದಲ ಬಾರಿಗೆ 1839 ರಲ್ಲಿಯೇ ಅನ್ವೇಷಿಸಿದವರು ಚಾರ್ಲ್ಸ್ ಡಾರ್ವಿನ್.

ವಿಕಾಸವಾದದ ಬಗೆಗಿನ ಅವರ ಪ್ರಧಾನ ಪುಸ್ತಕ “ಜೀವ ಸಂಕುಲಗಳ ಉಗಮ ” ದಲ್ಲಿ ಈ ಅಂಶ ಪ್ರಕೃತಿಯ ಆಯ್ಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಲ್ಲದೆ ನಂತರ ಈ ಅಂಶದ ಬಗ್ಗೆಯೇ ಹಲವಾರು ರೀತಿಯ ಸಂಶೋಧನೆ ನಡೆಸಿ ಮುಂದಿನ ಪುಸ್ತಕಗಳಲ್ಲಿ ಬರೆದರು . ನಂತರ ಜೆನೆಟಿಕ್ಸ್ ಎಂಬ ವಿಜ್ಞಾನವನ್ನು ಹುಟ್ಟು ಹಾಕಿದ ಹತ್ತಿರದ ಸಂಬಂಧಿಗಳಲ್ಲಿನ ಲೈಂಗಿಕ ಸಂಬಂಧದ ಪರಿಣಾಮಗಳ ಬಗ್ಗೆ ಅನ್ವೇಷಣೆ ಮಾಡಿದ ಮೆಂಡೆಲ್ ಮತ್ತಿತರ ವಿಜ್ಞಾನಿಗಳು ಮತ್ತಷ್ಟು ಬೆಳೆಸಿದ್ದಾರೆ. ಆದರೆ ಹಲವು ಹತ್ತು ಸಾವಿರ ವರ್ಷಗಳ ಹಿಂದೆಯೇ ಈ ಅರಿವನ್ನು ಅದರ ಆದಿಮ ಮತ್ತು ಅಸ್ಪಷ್ಟ ಸ್ವರೂಪದಲ್ಲಿ ಜೀವನಾನುಭವವಾಗಿ ಪಡೆದು ಮಾನವ ಸಮುದಾಯವನ್ನು ಬೆಳವಣಿಗೆಯ ಉತ್ತುಂಗಕ್ಕೇರಿಸಿದ ಕೀರ್ತಿ ಅಂದಿನ ” ಅಮ್ಮ ” ಗಳಿಗೆ ಸಲ್ಲುತ್ತದೆ.

ಜೆನೆಟಿಕ್ಸ್ ವಿಜ್ಞಾನಿಯಾದ ” ಅಮ್ಮ ” ಗಳು.:ಹೀಗೆ ವಿಜ್ಞಾನಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಡಾರ್ವಿನ್ ಮೊದಲಾದವರ ಸಂಶೋಧನೆ ” ಅಮ್ಮ ” ಗಳಿಗೆ ದಕ್ಕಿದ್ದು ಹೇಗೆ ಎಂಬುದೊಂದು ವಿಸ್ಮಯ. ಮೊದಲ ಅರಿವಿನ ಸ್ಫೋಟದ ಬಗ್ಗೆ ಹಿಂದಿನ ಲೇಖನಗಳಲ್ಲಿ ವಿವರಿಸಿರುವಂತೆ ಸುಮಾರು ಕ್ರಿ.ಪೂ. 70,000 ವರ್ಷದಿಂದ 30,000 ವರ್ಷಗಳ ಸಂದರ್ಭದಲ್ಲಿ ರೂಪುಗೊಂಡ ಅಂದಿನ ಮಾನವ ಗುಂಪುಗಳ ಕೇಂದ್ರವಾದ ಅಮ್ಮ ಗಳು ಅವರವರ ಗುಂಪಿನಲ್ಲಿ ಅತ್ಯಂತ ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದರು. ಅವರು ಅನೇಕ ಪಾತ್ರಗಳನ್ನು ವಹಿಸುತ್ತಿದ್ದರು. ಅದರಲ್ಲಿ ಅವರು ಇಡೀ ಗುಂಪಿನವರಿಗೆ ಕಾಯಿಲೆಯಾದಾಗ ಮೂಲಿಕೆಗಳನ್ನು , ಗೊತ್ತಿರುವ ಚಿಕಿತ್ಸೆಗಳನ್ನು ನೀಡುವ ವೈದ್ಯರಾಗಿದ್ದರು, ತಮ್ಮದೇ ಮಕ್ಕಳು ಮೊಮ್ಮಕ್ಕಳಿಗೆ ಹೆರಿಗೆ ಮಾಡಿಸುವ ಸೂಲಗಿತ್ತಿಯರಾಗಿದ್ದರು. ಮಕ್ಕಳನ್ನು ಉಳಿಸಿಕೊಳ್ಳಲು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನು ಪಡುತ್ತಿದ್ದರು.
ಅವರು ಮಳೆ,ಋತುಮಾನ,ಮರ ಗಿಡಗಳು ಹಣ್ಣು ಬಿಡುವ ಕಾಲ,ಪ್ರಾಣಿ ಪಕ್ಷಿಗಳ ವರ್ತನೆ,ಬೆಳವಣಿಗೆಯ ಆವರ್ತನಗಳನ್ನು ಗಮನಿಸಿ ಹೊಸ ಅರಿವನ್ನು ಬೆಳೆಸಿಕೊಳ್ಳುತ್ತಿದ್ದಂತೆಯೇ ಗಿಡ ಮೂಲಿಕೆಗಳು, ಹೆರಿಗೆಗಳ ಸಂದರ್ಭದಲ್ಲಿಯೂ trial and error ವಿಧಾನಗಳು ಮತ್ತು ಹಲವು ಅನುಭವಗಳಿಂದ ಪಾಠ ಕಲಿಯುತ್ತಿದ್ದರು. ಮಕ್ಕಳ ಹುಟ್ಟು ಮತ್ತು ಹುಟ್ಟಿದ ನಂತರದ ಅವುಗಳ ಬೆಳವಣಿಗೆಯ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ವೀಕ್ಷಿಸಲು, ಏಕೆ, ಏನುಗಳ ಬಗ್ಗೆ ಚಿಂತಿಸಲು ಅವಕಾಶ ದೊರಕುತ್ತಿತ್ತು. ಆ ಸಮಯದಲ್ಲಿ ಬಹು ದೊಡ್ಡ ಸಮಸ್ಯೆ ಶಿಶು ಮರಣ. ಹುಟ್ಟಿದ ಕೆಲವೇ ದಿನ, ಕೆಲವೇ ವಾರಗಳಲ್ಲಿ ಮರಣ. ಈಗಾಗಲೇ ಬರೆದಂತೆ ಶೇ. 30 ರಷ್ಟು ಮಕ್ಕಳು ಒಂದು ವರ್ಷದ ಒಳಗೆ ಸಾಯುತ್ತಿದ್ದರು. ಜೊತೆಗೆ ಅಂಗವಿಕಲರಾಗಿ ಹುಟ್ಟುವುದು ಮತ್ತೊಂದು ಸಮಸ್ಯೆ. ಅಂದಿನ ಕಠಿಣ ಜೀವನದ ಪರಿಸ್ಥಿತಿಗಳಲ್ಲಿ , ಭಕ್ಷಕ ಮೃಗಗಳು, ಹಾವುಗಳು, ಕಾಡ್ಕಿಚ್ಚು ಮೊದಲಾದ ವಿಕೋಪಗಳು ಇಂತಹ ಸಂದರ್ಭಗಳಲ್ಲಿ ಅಂಗವಿಕಲ ಅಥವಾ ದುರ್ಬಲ ಮಕ್ಕಳ ಪೋಷಣೆ ದೊಡ್ಡ ಸಮಸ್ಯೆಯನ್ನು ಒಡ್ಡುತ್ತಿತ್ತು.

ಈ ಸಂದರ್ಭಗಳಲ್ಲಿ ಹಲವಾರು ಹೆರಿಗೆಗಳನ್ನು ಗಮನಿಸುವುದು, ಪರಸ್ಪರ ತುಲನೆ, ಚಿಂತನೆಗಳಿಂದ ಪಡೆದ ಅನುಭವದಿಂದ ಈ ಬಗ್ಗೆ ಹೆಚ್ಚಿನ ಅರಿವನ್ನು ಪಡೆಯುವುದನ್ನು ಸಾಧ್ಯ ಮಾಡಿತ್ತು. ತಮ್ಮದೇ ತಾಯಿ ಮಕ್ಕಳ ಗುಂಪಿನ ರಕ್ತ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧಗಳಿಂದ ಹುಟ್ಟಿದ ಮಕ್ಕಳಿಗೂ ಬೇರೆ ಗುಂಪುಗಳವರ ನಡುವೆ ಲೈಂಗಿಕ ಸಂಬಂಧಗಳಿಂದ ಹುಟ್ಟಿದ ಮಕ್ಕಳಿಗೂ ಶಿಶುಗಳ ಆರೋಗ್ಯ, ಅಂಗವಿಕಲತೆ, ಚುರುಕುತನ, ಮರಣ ಮೊದಲಾದವುಗಳಲ್ಲಿ ಗಣನೀಯ ವ್ಯತ್ಯಾಸ ಇರುವುದನ್ನು ಗುರುತಿಸಲು ಅಮ್ಮಂದಿರಿಗೆ ಸಾಧ್ಯವಾಗಿದೆ. ಅದರಿಂದಾಗಿ ಹಂತ ಹಂತವಾಗಿ ಸಾವಿರಾರು ವರ್ಷಗಳ ಸಮಯದಲ್ಲಿ ಹತ್ತಿರದ ಲೈಂಗಿಕ ಸಂಬಂಧಗಳನ್ನು ತಡೆಯುವ ಮಾರ್ಗಗಳನ್ನು ಹುಡುಕಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಹುಡುಕಾಟದ ಫಲ ಒಬ್ಬ ತಾಯಿ ಕೇಂದ್ರಿತ ಗುಂಪು ಬೇರೆ ತಾಯಿ ಕೇಂದ್ರಿತ ಗುಂಪುಗಳೊಡನೆ ಲೈಂಗಿಕ ಸಂಬಂಧ ಹೊಂದುವ ಸಾಧ್ಯತೆಯ ಅನ್ವೇಷಣೆ. ಈ ಸಾಧ್ಯತೆ ರೂಪುಗಳ್ಳುತ್ತಾ ತಮ್ಮ ರಕ್ತ ಸಂಬಂಧಿ ಗುಂಪಿನ ಒಳಗೆ ಸಂಬಂಧಗಳ ನಿಷೇಧದ ಕಟ್ಟಲೆಗಳ ನಿರೂಪಣೆ ಮಾಡಲು ಅಮ್ಮಗಳ ನೇತೃತ್ವದ ಮಾನವ ಗುಂಪುಗಳಿಗೆ ಸಾಧ್ಯವಾಗಿದೆ. ಈ ನಿಷೇಧ ಬೆಡಗು,ಬಳಿ,ಗೋತ್ರಗಳೆಂಬ ಬೇರೆ ಬೇರೆ ಗುಂಪುಗಳ ರಚನೆಗೆ ಕಾರಣವಾಗಿದೆ. ಒಂದು ಗುಂಪಿನಲ್ಲಿ ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ವಿವಿಧ ಸೋದರಿ ಬೆಡಗುಗಳು ಅವುಗಳು ಒಟ್ಟಾಗಿ ಸೇರಿದ ಕುಲಗಳು ಮತ್ತು ಲೈಂಗಿಕ ಸಂಬಂಧ ಬೆಳೆಸಬಹುದಾದ ಬೆಡಗುಗಳು ಮತ್ತು ಅವುಗಳ ಕುಲಗಳು ಏರ್ಪಟ್ಟಿವೆ.
ಇಲ್ಲಿಯವರೆಗೆ ಬಿಡಿ ಬಿಡಿಯಾದ ಚಿಕ್ಕ ಸಮನಾಂತರ ಗುಂಪುಗಳಾಗಿ ಜೀವಿಸುತ್ತಿದ್ದವರು ಹಲವಾರು ಬೆಡಗುಗಳು ಸೇರಿದ ಕುಲಗಳಾಗಿ ದೊಡ್ಡ ಗುಂಪುಗಳಾಗಿ ಜೀವಿಸಲು ಸಾಧ್ಯತೆ ಉಂಟು ಮಾಡಿದೆ. ಹೀಗೆ ಗುಂಪುಗಳು ದೊಡ್ಡದಾಗಿದ್ದರ ಫಲ ಆನೆ, ಘೇಂಡಾ ಮೃಗ ಕಾಡಾನೆ,ಕೋಣಗಳು,ದನಗಳ ಹಿಂಡು ಹಿಂಡುಗಳನ್ನೇ ಹಿಡಿಯಲು ಸಾಧ್ಯವಾಯಿತು. ಆಯುಧಗಳ ತಯಾರಿಕೆಗೇ ಕೆಲ ವ್ಯಕ್ತಿಗಳನ್ನು ವಿಶೇಷವಾಗಿ ನೇಮಿಸಲು, ಆಹಾರವನ್ನು ಗಳಿಸುವ ಹೊಸ ಮಾರ್ಗಗಳು, ಗಿಡ ಮೂಲಿಕೆಗಳು, ಇತರ ಔಷಧಿಗಳು, ಚಿಕಿತ್ಸಾ ಮಾರ್ಗಗಳು ಮುಂತಾದವನ್ನು ಅನ್ವೇಷಿಸುವುದು ಇಂತಹವುಗಳಿಗೆ , ದೈವಗಳ ಪೂಜೆ, ವಿವಿಧ ಆಚರಣೆಗಳನ್ನು ನಿರ್ವಹಿಸುವುದಕ್ಕೆ ಅಮ್ಮಂದಿರುಗಳು ತಮ್ಮೆಲ್ಲ ಗಮನ ನೀಡುವುದಕ್ಕೆ ಸಾಧ್ಯವಾಯಿತು.

ಸಾಮಾನ್ಯವಾದ ಪೂರ್ವಾಗ್ರಹಗಳಂತೆ ಪುರುಷರು ಬೇಟೆಕಾರರು, ಮಹಿಳೆಯರು ಮರ ಗಿಡಗಳಿಂದ ಹಣ್ಣು ಹಂಪಲು , ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುವವರು ಮಹಿಳೆಯರು. ನೂರಾರು ವರ್ಷಗಳ ಕಾಲ ಪುರುಷ ಮಾನವ ಶಾಸ್ತ್ರಜ್ಞರುಗಳು ಕೂಡಾ ಅಂತಹುದೇ ಪೂರ್ವಾಗ್ರಹಗಳ ಕಣ್ಣಿನಿಂದಲೇ ಉತ್ಖನನಗಳಲ್ಲಿ ದೊರಕಿದ ಪುರಾವೆಗಳನ್ನು ವಿಶ್ಲೇಷಿಸಿದ್ದರು. ಆದರೆ ಇತ್ತೀಚೆಗೆ ಮಾನವ ಶಾಸ್ತ್ರ ಮತ್ತು ಪುರಾತತ್ವ ಶಾಸ್ತ್ರಗಳನ್ನು ಪ್ರವೇಶಿಸಿ ಉತ್ಖನನಗಳಲ್ಲಿ ಪಾಲ್ಗೊಂಡ ಮಹಿಳಾ ಸಂಶೋಧಕಿಯರು ಇಂದು ತಮ್ಮ ಕ್ರಿಯಾಶೀಲ ಅನ್ವೇಷಣೆ ಮತ್ತು ಹರಿತ ವಿಮರ್ಶೆಗಳಿಂದ ಅಂದಿನ ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಅವು ಮುಂದಿನ ಲೇಖನದಲ್ಲಿ.

ಹೀಗೆ ವಿಜ್ಞಾನಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಡಾರ್ವಿನ್ ಮೊದಲಾದವರ ಸಂಶೋಧನೆ ” ಅಮ್ಮ ” ಗಳಿಗೆ ದಕ್ಕಿದ್ದು ಹೇಗೆ ಎಂಬುದೊಂದು ವಿಸ್ಮಯ. ಮೊದಲ ಅರಿವಿನ ಸ್ಫೋಟದ ಬಗ್ಗೆ ಹಿಂದಿನ ಲೇಖನಗಳಲ್ಲಿ ವಿವರಿಸಿರುವಂತೆ ಸುಮಾರು ಕ್ರಿ.ಪೂ. 70,000 ವರ್ಷದಿಂದ 30,000 ವರ್ಷಗಳ ಸಂದರ್ಭದಲ್ಲಿ ರೂಪುಗೊಂಡ ಅಂದಿನ ಮಾನವ ಗುಂಪುಗಳ ಕೇಂದ್ರವಾದ ಅಮ್ಮ ಗಳು ಅವರವರ ಗುಂಪಿನಲ್ಲಿ ಅತ್ಯಂತ ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದರು. ಅವರು ಅನೇಕ ಪಾತ್ರಗಳನ್ನು ವಹಿಸುತ್ತಿದ್ದರು. ಅದರಲ್ಲಿ ಅವರು ಇಡೀ ಗುಂಪಿನವರಿಗೆ ಕಾಯಿಲೆಯಾದಾಗ ಮೂಲಿಕೆಗಳನ್ನು , ಗೊತ್ತಿರುವ ಚಿಕಿತ್ಸೆಗಳನ್ನು ನೀಡುವ ವೈದ್ಯರಾಗಿದ್ದರು, ತಮ್ಮದೇ ಮಕ್ಕಳು ಮೊಮ್ಮಕ್ಕಳಿಗೆ ಹೆರಿಗೆ ಮಾಡಿಸುವ ಸೂಲಗಿತ್ತಿಯರಾಗಿದ್ದರು. ಮಕ್ಕಳನ್ನು ಉಳಿಸಿಕೊಳ್ಳಲು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನು ಪಡುತ್ತಿದ್ದರು.ಪ್ರಯತ್ನಿಸಿದ್ದಾರೆ

ಅವರು ಮಳೆ,ಋತುಮಾನ,ಮರ ಗಿಡಗಳು ಹಣ್ಣು ಬಿಡುವ ಕಾಲ,ಪ್ರಾಣಿ ಪಕ್ಷಿಗಳ ವರ್ತನೆ,ಬೆಳವಣಿಗೆಯ ಆವರ್ತನಗಳನ್ನು ಗಮನಿಸಿ ಹೊಸ ಅರಿವನ್ನು ಬೆಳೆಸಿಕೊಳ್ಳುತ್ತಿದ್ದಂತೆಯೇ ಗಿಡ ಮೂಲಿಕೆಗಳು, ಹೆರಿಗೆಗಳ ಸಂದರ್ಭದಲ್ಲಿಯೂ trial and error ವಿಧಾನಗಳು ಮತ್ತು ಹಲವು ಅನುಭವಗಳಿಂದ ಪಾಠ ಕಲಿಯುತ್ತಿದ್ದರು. ಮಕ್ಕಳ ಹುಟ್ಟು ಮತ್ತು ಹುಟ್ಟಿದ ನಂತರದ ಅವುಗಳ ಬೆಳವಣಿಗೆಯ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ವೀಕ್ಷಿಸಲು, ಏಕೆ, ಏನುಗಳ ಬಗ್ಗೆ ಚಿಂತಿಸಲು ಅವಕಾಶ ದೊರಕುತ್ತಿತ್ತು. ಆ ಸಮಯದಲ್ಲಿ ಬಹು ದೊಡ್ಡ ಸಮಸ್ಯೆ ಶಿಶು ಮರಣ. ಹುಟ್ಟಿದ ಕೆಲವೇ ದಿನ, ಕೆಲವೇ ವಾರಗಳಲ್ಲಿ ಮರಣ. ಈಗಾಗಲೇ ಬರೆದಂತೆ ಶೇ. 30 ರಷ್ಟು ಮಕ್ಕಳು ಒಂದು ವರ್ಷದ ಒಳಗೆ ಸಾಯುತ್ತಿದ್ದರು. ಜೊತೆಗೆ ಅಂಗವಿಕಲರಾಗಿ ಹುಟ್ಟುವುದು ಮತ್ತೊಂದು ಸಮಸ್ಯೆ. ಅಂದಿನ ಕಠಿಣ ಜೀವನದ ಪರಿಸ್ಥಿತಿಗಳಲ್ಲಿ , ಭಕ್ಷಕ ಮೃಗಗಳು, ಹಾವುಗಳು, ಕಾಡ್ಕಿಚ್ಚು ಮೊದಲಾದ ವಿಕೋಪಗಳು ಇಂತಹ ಸಂದರ್ಭಗಳಲ್ಲಿ ಅಂಗವಿಕಲ ಅಥವಾ ದುರ್ಬಲ ಮಕ್ಕಳ ಪೋಷಣೆ ದೊಡ್ಡ ಸಮಸ್ಯೆಯನ್ನು ಒಡ್ಡುತ್ತಿತ್ತು.

ಈ ಸಂದರ್ಭಗಳಲ್ಲಿ ಹಲವಾರು ಹೆರಿಗೆಗಳನ್ನು ಗಮನಿಸುವುದು, ಪರಸ್ಪರ ತುಲನೆ, ಚಿಂತನೆಗಳಿಂದ ಪಡೆದ ಅನುಭವದಿಂದ ಈ ಬಗ್ಗೆ ಹೆಚ್ಚಿನ ಅರಿವನ್ನು ಪಡೆಯುವುದನ್ನು ಸಾಧ್ಯ ಮಾಡಿತ್ತು. ತಮ್ಮದೇ ತಾಯಿ ಮಕ್ಕಳ ಗುಂಪಿನ ರಕ್ತ ಸಂಬಂಧಿಗಳ ನಡುವೆ ಲೈಂಗಿಕ ಸಂಬಂಧಗಳಿಂದ ಹುಟ್ಟಿದ ಮಕ್ಕಳಿಗೂ ಬೇರೆ ಗುಂಪುಗಳವರ ನಡುವೆ ಲೈಂಗಿಕ ಸಂಬಂಧಗಳಿಂದ ಹುಟ್ಟಿದ ಮಕ್ಕಳಿಗೂ ಶಿಶುಗಳ ಆರೋಗ್ಯ, ಅಂಗವಿಕಲತೆ, ಚುರುಕುತನ, ಮರಣ ಮೊದಲಾದವುಗಳಲ್ಲಿ ಗಣನೀಯ ವ್ಯತ್ಯಾಸ ಇರುವುದನ್ನು ಗುರುತಿಸಲು ಅಮ್ಮಂದಿರಿಗೆ ಸಾಧ್ಯವಾಗಿದೆ. ಅದರಿಂದಾಗಿ ಹಂತ ಹಂತವಾಗಿ ಸಾವಿರಾರು ವರ್ಷಗಳ ಸಮಯದಲ್ಲಿ ಹತ್ತಿರದ ಲೈಂಗಿಕ ಸಂಬಂಧಗಳನ್ನು ತಡೆಯುವ ಮಾರ್ಗಗಳನ್ನು ಹುಡುಕಿಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ಹುಡುಕಾಟದ ಫಲ ಒಬ್ಬ ತಾಯಿ ಕೇಂದ್ರಿತ ಗುಂಪು ಬೇರೆ ತಾಯಿ ಕೇಂದ್ರಿತ ಗುಂಪುಗಳೊಡನೆ ಲೈಂಗಿಕ ಸಂಬಂಧ ಹೊಂದುವ ಸಾಧ್ಯತೆಯ ಅನ್ವೇಷಣೆ. ಈ ಸಾಧ್ಯತೆ ರೂಪುಗಳ್ಳುತ್ತಾ ತಮ್ಮ ರಕ್ತ ಸಂಬಂಧಿ ಗುಂಪಿನ ಒಳಗೆ ಸಂಬಂಧಗಳ ನಿಷೇಧದ ಕಟ್ಟಲೆಗಳ ನಿರೂಪಣೆ ಮಾಡಲು ಅಮ್ಮಗಳ ನೇತೃತ್ವದ ಮಾನವ ಗುಂಪುಗಳಿಗೆ ಸಾಧ್ಯವಾಗಿದೆ. ಈ ನಿಷೇಧ ಬೆಡಗು,ಬಳಿ,ಗೋತ್ರಗಳೆಂಬ ಬೇರೆ ಬೇರೆ ಗುಂಪುಗಳ ರಚನೆಗೆ ಕಾರಣವಾಗಿದೆ. ಒಂದು ಗುಂಪಿನಲ್ಲಿ ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ವಿವಿಧ ಸೋದರಿ ಬೆಡಗುಗಳು ಅವುಗಳು ಒಟ್ಟಾಗಿ ಸೇರಿದ ಕುಲಗಳು ಮತ್ತು ಲೈಂಗಿಕ ಸಂಬಂಧ ಬೆಳೆಸಬಹುದಾದ ಬೆಡಗುಗಳು ಮತ್ತು ಅವುಗಳ ಕುಲಗಳು ಏರ್ಪಟ್ಟಿವೆ.

ಇಲ್ಲಿಯವರೆಗೆ ಬಿಡಿ ಬಿಡಿಯಾದ ಚಿಕ್ಕ ಸಮನಾಂತರ ಗುಂಪುಗಳಾಗಿ ಜೀವಿಸುತ್ತಿದ್ದವರು ಹಲವಾರು ಬೆಡಗುಗಳು ಸೇರಿದ ಕುಲಗಳಾಗಿ ದೊಡ್ಡ ಗುಂಪುಗಳಾಗಿ ಜೀವಿಸಲು ಸಾಧ್ಯತೆ ಉಂಟು ಮಾಡಿದೆ. ಹೀಗೆ ಗುಂಪುಗಳು ದೊಡ್ಡದಾಗಿದ್ದರ ಫಲ ಆನೆ, ಘೇಂಡಾ ಮೃಗ ಕಾಡಾನೆ,ಕೋಣಗಳು,ದನಗಳ ಹಿಂಡು ಹಿಂಡುಗಳನ್ನೇ ಹಿಡಿಯಲು ಸಾಧ್ಯವಾಯಿತು. ಆಯುಧಗಳ ತಯಾರಿಕೆಗೇ ಕೆಲ ವ್ಯಕ್ತಿಗಳನ್ನು ವಿಶೇಷವಾಗಿ ನೇಮಿಸಲು, ಆಹಾರವನ್ನು ಗಳಿಸುವ ಹೊಸ ಮಾರ್ಗಗಳು, ಗಿಡ ಮೂಲಿಕೆಗಳು, ಇತರ ಔಷಧಿಗಳು, ಚಿಕಿತ್ಸಾ ಮಾರ್ಗಗಳು ಮುಂತಾದವನ್ನು ಅನ್ವೇಷಿಸುವುದು ಇಂತಹವುಗಳಿಗೆ , ದೈವಗಳ ಪೂಜೆ, ವಿವಿಧ ಆಚರಣೆಗಳನ್ನು ನಿರ್ವಹಿಸುವುದಕ್ಕೆ ಅಮ್ಮಂದಿರುಗಳು ತಮ್ಮೆಲ್ಲ ಗಮನ ನೀಡುವುದಕ್ಕೆ ಸಾಧ್ಯವಾಯಿತು.

ಸಾಮಾನ್ಯವಾದ ಪೂರ್ವಾಗ್ರಹಗಳಂತೆ ಪುರುಷರು ಬೇಟೆಕಾರರು, ಮಹಿಳೆಯರು ಮರ ಗಿಡಗಳಿಂದ ಹಣ್ಣು ಹಂಪಲು , ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುವವರು ಮಹಿಳೆಯರು. ನೂರಾರು ವರ್ಷಗಳ ಕಾಲ ಪುರುಷ ಮಾನವ ಶಾಸ್ತ್ರಜ್ಞರುಗಳು ಕೂಡಾ ಅಂತಹುದೇ ಪೂರ್ವಾಗ್ರಹಗಳ ಕಣ್ಣಿನಿಂದಲೇ ಉತ್ಖನನಗಳಲ್ಲಿ ದೊರಕಿದ ಪುರಾವೆಗಳನ್ನು ವಿಶ್ಲೇಷಿಸಿದ್ದರು. ಆದರೆ ಇತ್ತೀಚೆಗೆ ಮಾನವ ಶಾಸ್ತ್ರ ಮತ್ತು ಪುರಾತತ್ವ ಶಾಸ್ತ್ರಗಳನ್ನು ಪ್ರವೇಶಿಸಿ ಉತ್ಖನನಗಳಲ್ಲಿ ಪಾಲ್ಗೊಂಡ ಮಹಿಳಾ ಸಂಶೋಧಕಿಯರು ಇಂದು ತಮ್ಮ ಕ್ರಿಯಾಶೀಲ ಅನ್ವೇಷಣೆ ಮತ್ತು ಹರಿತ ವಿಮರ್ಶೆಗಳಿಂದ ಅಂದಿನ ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಅವು ಮುಂದಿನ ಲೇಖನದಲ್ಲಿ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: