ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ರಂಗಾ… ಬಿಳಿಗಿರಿ ರಂಗಾ ಬೇಕು ನಿನ್ನ ಸಂಗ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ದ್ವಾರಕೆ ಎನ್ನುವ ಸ್ವರ್ಗದ ಬಾಗಿಲು…
ವಾಣಿ ಡಿಸೆಂಬರ್ ತಿಂಗಳ ಅದೊಂದು ವಾರದಲ್ಲಿ ಕೆಲಸ ಬಹಳ ಹೆಚ್ಚಾಗಿತ್ತು. ಒಂದೇ ವಾರದಲ್ಲಿ ಮೂರು ನಾಲ್ಕು ರಾಜ್ಯಗಳನ್ನು ತಿರುಗುವ ಪರಿಸ್ಥಿತಿ. ಕೆಲಸ ಹೆಚ್ಚಾದಾಗ ನಮ್ಮ ಸಮಕ್ಕೂ ನಿಂತು ಕೆಲಸ ಮಾಡಿ, ನಮಗೂ ಸ್ವಲ್ಪ ಕೆಲಸ ಕಲಿಸಿ ಎಲ್ಲ ಕ್ರೆಡಿಟ್ ಅನ್ನು ನಮಗೆ ಕೊಡುವ ಮಹಾನುಭಾವ ನಮ್ಮ ಬಾಸ್. ಈ ತರಹದ ಜನರೊಂದಿಗೆ ಕೆಲಸ...
ʼದಿ ಕಪ್ʼ ನಿರಾಶ್ರಿತರ ಫುಟ್ ಬಾಲ್…
ಎಂ ನಾಗರಾಜ ಶೆಟ್ಟಿ ಫುಟ್‌ಬಾಲ್ ಪ್ರಿಯರೆಲ್ಲರ ಕಣ್ಣು ಮಧ್ಯಪ್ರಾಚ್ಯದ ಕತಾರ್‌ನತ್ತ ನೆಟ್ಟಿದೆ.ನಾಲ್ಕು ವರ್ಷಗಳಿಗೊಮ್ಮೆ ವರ್ಲ್ಡ್‌ಕಪ್ ಫುಟ್‌ಬಾಲ್ ಟೂರ್ನಮೆಂಟ್ ನಡೆಯುತ್ತದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ವಿಶ್ವಕಪ್ ಫುಟ್‌ಬಾಲ್‌ಟೂರ್ನಮೆಂಟ್ ನಡೆದಾಗ ಇಂದಿನ ಸೂಪರ್‌ಸ್ಟಾರ್ ರೊನಾಲ್ಡೋ ಭರವಸೆಯ ಯುವ ಆಟಗಾರನಾಗಿದ್ದ....
ಸೌಂದರ್ಯದ ಅಪರಾವತಾರ…
ನೂತನ ದೋಶೆಟ್ಟಿ ಕೆಲವು ದಶಕಗಳ ಹಿಂದೆ ಅಲ್ಲಿಗೆ ಹೋಗುವುದು ಮುಜುಗರದ ಹಾಗೂ ಸಂಕೋಚದ ವಿಷಯವಾಗಿತ್ತು. ಒಂದು ದಶಕದ ಅನಂತರದಲ್ಲಿ ಚುಂಬಕದಂತೆ ಆಕರ್ಷಿಸುವ, ಹೆಮ್ಮೆಯ ತಾಣವಾದ ಅದು ಬಹು ಬೇಗನೇ ಅನಿವಾರ್ಯವಾಯಿತು. ಪಾಲಕರಿಗೆ ತಮ್ಮ ಹೆಣ್ಣುಮಕ್ಕಳ ಬಗ್ಗೆ ಆತಂಕ ತರುವ ಸ್ಥಳವಾದರೆ ಹರೆಯದ ಹುಡುಗಿಯರಿಗೆ ಸಂಭ್ರಮದ ಜೊತೆಗೆ ಬಾಯ್...
ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’
ಸಿ ಎಸ್ ಭೀಮರಾಯ ಬೊಳುವಾರು ಮಹಮದ್ ಕುಂಞೆ ಕನ್ನಡ ಸಾಹಿತ್ಯದ ಮಹತ್ವದ ಲೇಖಕ. ಅವರು ಕಳೆದ ನಾಲ್ಕು ದಶಕಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಸಾಹಿತ್ಯದ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರಿಗೆ ಪರಿಚಯ ಮಾಡಿಕೊಡುತ್ತ ಬಂದಿರುವ ಸೂಕ್ಷ್ಮ ಸಂವೇದನಾಶೀಲ ಲೇಖಕ. ಪ್ರಸ್ತುತ...
ಕರ್ನಾಟಕ ರಾಜ್ಯಕ್ಕೆ ಈ ಬಾರಿ ಬಂಪರ್…
ಸಿ ಕೆ ಗುಂಡಣ್ಣ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗಳುಕರ್ನಾಟಕ ರಾಜ್ಯಕ್ಕೆ ಈ ಬಾರಿ ಬಂಪರ್… ಕೇಂದ್ರ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಗಳ ಸುರಿಮಳೆ…. ರಂಗಭೂಮಿ, ಸಂಗೀತ, ಎಲ್ಲ ಕ್ಷೇತ್ರಗಳಲ್ಲೂ ಪ್ರಶಸ್ತಿಗಳು….ಕನ್ನಡ ರಂಗಭೂಮಿಯ ಹಿರಿಯ ನಟ, ನಿರ್ದೇಶಕ ರಂಗ ಸಂಘಟಕ, ನಾಟಕ ಅಕಾಡಮಿ ಮತ್ತು ರಂಗಾಯಣ ಮೈಸೂರಿನ ಮಾಜಿ...
ಮಂಡಲಗಿರಿ ಪ್ರಸನ್ನ ಮಕ್ಕಳ ಕಥೆ- ‘ಜನ ಅದೇಕೆ ಹೀಗೆ?’
ಮಂಡಲಗಿರಿ ಪ್ರಸನ್ನ ತಾತ ಮತ್ತು ಮೊಮ್ಮಗ ಬೆಳಗಿನ ವಾಕಿಂಗ್ ಹೊರಟಿದ್ದರು. ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ತಾತ ಮುಂದೆ ಮುಂದೆ ಸಾಗುತ್ತಿದ್ದರೆ, ಮೊಮ್ಮಗ ವಿಹಾನ್ ತಾತನ ಹಿಂದೆ ಜಿಗಿಯುತ್ತಾ, ನೆಗೆಯುತ್ತ, ಅವರ ಹೆಜ್ಜೆ ಸರಿಗಟ್ಟಲು ಓಡುತ್ತಿದ್ದ. ವಾಕಿಂಗ್ ಮಾಡಲು ಅವರಿಬ್ಬರೂ ಪ್ರತಿದಿನ ಹೋಗುತ್ತಿದ್ದುದು ಸಾರ್ವಜನಿಕ...
ಜಿ ಎನ್ ನಾಗರಾಜ್ ಅಂಕಣ- ಹಜ್ ಎಂಬ ಶಬರಿಮಲೆ ಯಾತ್ರೆ, ಅಲ್ಲಾ ಎಂಬ ಸಾರ್ವತ್ರಿಕ ದೇವರು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಶ್ರೀ ದೇವಿ ಕೆರೆಮನ ಕವಿತೆ – ನನ್ನ ದೂಷಿಸಬೇಡ…
ಶ್ರೀ ದೇವಿ ಕೆರೆಮನೆ ಮನಸ್ಸು ಅಧೀರವಾದರೆ ನನ್ನ ದೂಷಿಸಬೇಡಮಾತಿರದೆ ಮೌನವಾದರೆ ನನ್ನ ದೂಷಿಸಬೇಡ ಕಣ್ಣುಗಳಿಗೆ ಕಪ್ಪು ಹಚ್ಚುವ ರೂಢಿಯಿಲ್ಲ ನನಗೆಚುಕ್ಕಿಗಳೇ ಮಸುಕಾದರೆ ನನ್ನ ದೂಷಿಸಬೇಡ ಬರೆಯುವುದು ಹೇಗೆ ಜೀವವಿಲ್ಲದ ಅಕ್ಷರಗಳನುಪದಗಳಲಿ ನೀ ಇಣುಕಿದರೆ ನನ್ನ ದೂಷಿಸಬೇಡ ಹುಣ್ಣಿಮೆಯಂದು ಸಮುದ್ರವೂ ಉಕ್ಕೇರುವುದಂತೆಆಸೆಯ ಅಲೆ...
ಮಹಾಂತೇಶ ಪಾಟೀಲ ಕವಿತೆ – ಮಿಥುನಕ್ಕೆ ಮೈದೆರೆದರೆ…
ಮಹಾಂತೇಶ ಪಾಟೀಲ 1.ನಿನ್ನೆಯಷ್ಟೇ ಅವನಮದುವೆಯಾಯಿತು. ಉಳಿದ್ದ ಬಿತ್ತಿದ್ದಪಾದ ಸ್ಪರ್ಶಿಸುತ್ತಲೆಹೊಲವನೆಲ್ಲ ಸುತ್ತಿದ್ದ. ಮಳೆ ಬಾರದ ಕಾಲಕೆಗಿಡಗಿಡಕ್ಕೆ ಕೂತು ಕಣ್ಣೀರ ಮಳೆಗರೆದುಮೈಯೆಲ್ಲ ಮೂಡಿ ಹಸಿರಾಗಿದ್ದ. ನನ್ನ ರೆಂಬೆಕೊಂಬೆಗಳಲಿಸುಳಿದಾಡುತ್ತ; ಹೂ ಬಿರಿವ ಕಾಲಕ್ಕೆಹಣ್ಣಿನ ಲೆಕ್ಕಹಾಕಿದ್ದ. 2. ಈ ಹುಡುಗರೇ ಹೀಗೆಮೈಯೆಲ್ಲ ಹಸಿರು...
ಸದಾಶಿವ್ ಸೊರಟೂರು ಕಥಾ ಅಂಕಣ- ಬದುಕು ಕೊಟ್ಟ ಉಡುಗೊರೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic through she is not lost
ಹತಾಶೆ…
ಮೂಲ: ವಿನೋದ್ ಶುಕ್ಲ ಕನ್ನಡಕ್ಕೆ: ಹೇಮಾ ಖುರ್ಸಾಪೂರ ಹತಾಶೆಯಿಂದ ವ್ಯಕ್ತಿಯೊಬ್ಬ ಕೂತಿದ್ದಅವನ ಪರಿಚಯ ನನಗಿಲ್ಲಹತಾಶೆ ಎಂದರೇನು ಅಂತ ಮಾತ್ರ ಗೊತ್ತಿತ್ತುಅದಕ್ಕೆ ಕೈ ಚಾಚಿದೆ ಅವನತ್ತಕೈ ಹಿಡಿದವನು ಎದ್ದು ನಿಂತಅವನಿಗೂ ನನ್ನ ಪರಿಚಯವಿಲ್ಲ ಕೈಚಾಚಿದೆ ಎಂದು ಅರಿತಇಬ್ಬರೂ ಒಟ್ಟಿಗೆ ನಡೆದೆವುಇಬ್ಬರೂ ಅಪರಿಚಿತರೇಒಟ್ಟಿಗೆ ನಡೆಯುವುದು...
‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಕವನ ಸಂಕಲನಗಳ ಆಹ್ವಾನ…
ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ-೨೦೨೨ -೨೩ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ (ಗಜಲ್) ಸಂಕಲನಗಳನ್ನು ಆಹ್ವಾನಿಸಲಾಗಿದೆ.ಮರು ಮುದ್ರಣ,ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.ಪ್ರಶಸ್ತಿಯು ಮೂರು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ನಿಯಮಗಳು: -...
ಅಭಿಜ್ಞಾ ಪಿ ಎಮ್ ಗೌಡ ಕವಿತೆ- ಯಾರೂ ಇಲ್ಲ…
ಅಭಿಜ್ಞಾ ಪಿ ಎಮ್ ಗೌಡ ಎದೆಯ ಬೀದಿಗಳು ಪಾಳು ಬಿದ್ದಂತಿದ್ದರುನೋಡುವವರು ಯಾರೂ ಇಲ್ಲನದಿಯಂತೆ ಹರಿದ ಕಣ್ಣೀರ ಧಾರೆಯನುಒರೆಸುವವರು ಯಾರೂ ಇಲ್ಲ ಮೊಗದೊಳಗಿನ ನಗು ಮಾರಾಟಕಿದೆಯೆಆಂತರ್ಯದ ನೋವ ಛಾಯೆಯಲಿಜಗದ ಕಷ್ಟಗಳ ಹೊತ್ತು ತಿರುಗಿದ ಮನವಸಂತೈಸುವವರು ಯಾರೂ ಇಲ್ಲ ಬಳಲಿ ಬೆಂಡಾದ ಜೀವದಲಿ ಉತ್ಸಾಹದಚಿಲುಮೆ ಚಿಗುರುತಿದೆಅಳಲು ತೋರದೆ...
ನಾಗಿಣಿ ಎ ಓದಿದ ʼಅಧಿಕಾರ ಮತ್ತು ಅಧೀನತೆʼ
ಕೇಟ್ ಮಿಲೆಟ್ ವಿಚಾರಗಳು: ವರ್ತಮಾನದ ತಲ್ಲಣಗಳು ನಾಗಿಣಿ ಎ ಘಟನೆ ಒಂದು. ಆಸ್ತಿ ವೈಷಮ್ಯದಿಂದ ಉತ್ತರ ಪ್ರದೇಶದ ಗಾಜಿಯಾಬಾದಿನ ಮಹಿಳೆಯ ಮೇಲೆ ಅತ್ಯಾಚಾರ. ಗುಪ್ತಾಂಗವನ್ನು ಕಬ್ಬಿಣದ ಸಲಾಕೆಯಿಂದ ಘಾಸಿಗೊಳಿಸಿ ಅವಳ ಕೈ ಕಾಲು ಕಟ್ಟಿ, ಕೆಲಸಕ್ಕೆ ಬಾರದ ಕಸದ ಹಾಗೆ ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಮೇಲೆ ಎಸೆದು ಹೋದದ್ದು. ಘಟನೆ...
ಇಂಟರ್ನ್‌ಶಿಪ್ ಎನ್ನುವ ಕಲಿಕೆಯ ದಿನಗಳು…
ಡಾ ಮೇಘನಾ ಎನ್ ಇಂಟರ್ನ್‌ಶಿಪ್ ಮಾಡೋ ಸಮಯದಲ್ಲಿನ ಹಲವು ಸಂಗತಿಗಳು ಹೊಸ ಬದುಕನ್ನು ತೋರಿಸಿದವು. ದಾವಣಗೆರೆ, ಹರಿಹರ, ಚಿತ್ರದುರ್ಗದ ಸುತ್ತಮುತ್ತಲ ಊರಿಗೆಲ್ಲ ದಾವಣಗೆರೆಯ ಚಿತ್ತಗಿರಿ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆ. ಒಪಿಡಿ ಸದಾ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಕಲಿಕೆಗೆ ಸೂಕ್ತವಾದ ಜಾಗವಾಗಿತ್ತು. ಅಲ್ಲಿ ನನಗೆ ಎದುರಾದ...
ಸಮಕಾಲೀನ ಪಯಣದ ನಡುವೆ ಒಂದು ‘ಯಾತ್ರೆ’
ಚಾರಿತ್ರಿಕ ದುರಂತಗಳನ್ನು ವರ್ತಮಾನದಲ್ಲಿಟ್ಟು ನೋಡುವ ಒಂದು ವಿಶಿಷ್ಟ ಪ್ರಯೋಗ ನಾ ದಿವಾಕರ ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ಸನ್ನಿವೇಶದಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಬಹುಮುಖ್ಯವಾದುದು ಮನುಜ ಸಂವೇದನೆ ಮತ್ತು ಸೂಕ್ಷ್ಮತೆಯ ಕೊರತೆ. ದಿನದಿಂದ ದಿನಕ್ಕೆ ಸಮಾಜದ ಎಲ್ಲ ವಲಯಗಳಲ್ಲೂ...
ಎಸ್ ಬಿ ರವಿಕುಮಾರ್ ಕಥೆ- ಸಹಾಯ…
ಡಾ ಎಸ್ ಬಿ ರವಿಕುಮಾರ್ ಮ್ಯಾನೇಜರು ಮಗ್ಗಿನಲ್ಲಿ ತುಂಬಿ ತುಂಬಿ ಬಕೆಟಿಗೆ ಹಾಕಿಕೊಂಡು ಮತ್ತೊಮ್ಮೆ ಕಾಂಪೌಂಡಿನಿಂದ ನೀರನ್ನು ಹೊರಗೆ ಹಾಕಿದರು. ಯಾರಿಗೆ ಗೊತ್ತಿತ್ತು ಅಪಾರ್ಟಮೆಂಟಿನವರು ರಾಜಕಾಲುವೆ ಒತ್ತುವರಿ ಮಾಡಿದಾರೆ ಅಂತ? ಖರೀದಿ ಮಾಡುವ ಮೊದಲೇ ಲೀಗಲ್ ಒಪಿನಿಯನ್ ಪಡೆಯಲಾಗಿತ್ತು. ೧೦ ಸಾವಿರ ಫೀಸು ತೆಗೆದುಕೊಂಡ ಲಾಯರು...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಸತ್ತ ಸೈನಿಕನ ಮನೆಯಲ್ಲಿ
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Saint Malaka



















