‘The Last Heroes’ ಪಿ ಸಾಯಿನಾಥ್ ಎರಡನೇ ಪುಸ್ತಕ…

ಪಿ ಸಾಯಿನಾಥ್ ಅವರ ಮೊದಲ ಪುಸ್ತಕ ಪ್ರಕಟವಾದ 25 ವರ್ಷಗಳ ನಂತರ ಎರಡನೇ ಪುಸ್ತಕ: ‘The Last Heroes: Foot Soldiers of Indian Freedom’ ನವೆಂಬರ್ 21, 2022ರಂದು ಬಿಡುಗಡೆಯಾಗಲಿದೆ.

ಗ್ರಾಮೀಣ ಭಾರತದಲ್ಲಿನ ಬಡತನ ಕುರಿತಾದ ಪುಸ್ತಕ ‘ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ – ಬರ ಅಂದ್ರೆ ಎಲ್ಲರಿಗೂ ಇಷ್ಟ’ ಪುಸ್ತಕ ಪ್ರಕಟವಾದ ಇಡೀ 25 ವರ್ಷಗಳ ನಂತರ ಸಾಯಿನಾಥ್ ಅವರ ಎರಡನೇ ಪುಸ್ತಕ ಬರುತ್ತಿದೆ.

The Last Heroes: Foot Soldiers of Indian Freedom – ಪುಸ್ತಕದಲ್ಲಿ, ಸಾಯಿನಾಥ್ ಅವರು: ಪ್ರಸಿದ್ಧಿಗೇ ಬಾರದ, ಎಲೆಮರೆಯ ಕಾಯಂತೆ ಉಳಿದುಕೊಂಡ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ವರ್ತಮಾನದ ಕೊನೆಯ ಕೊಂಡಿಯಾಗಿರುವ ಹೋರಾಟಗಾರರನ್ನು ನೆನೆಪಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಪಡೆಯುವಲ್ಲಿ ಸಾಮಾನ್ಯ ಜನರ, ಶ್ರೀಸಾಮಾನ್ಯನ ಪಾತ್ರವೇನು ಎನ್ನವುದನ್ನು ಪುಸ್ತಕ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ರೈತರು, ಕಾರ್ಮಿಕರು, ಗೃಹಿಣಿಯರು, ಅರಣ್ಯ ಉತ್ಪನ್ನ ಸಂಗ್ರಾಹಕರು, ಕುಶಲಕರ್ಮಿಗಳು ಸೇರಿದಂತೆ ಅನೇಕರು ಬ್ರಿಟಿಷರನ್ನು ಎದುರಿಸಿದರು. The Last Heroes ಅವರ ಕತೆಗಳನ್ನು ಹೇಳುತ್ತದೆ. ಅವರು ಇಂತಹ ಪುಸ್ತಕದ ಕತೆಯ ಪಾತ್ರವಾಗಿ ಗುರುತಿಸಲು ನಿಜಕ್ಕೂ ಅರ್ಹರು ಎನ್ನುವುದು ಸಾಯಿನಾಥ್ ಅವರ ಮಾತು.

ಈ ಪುಸ್ತಕ ಬೇರೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ, ಈ ಹೋರಾಟಗಾರರು ಮಾತನಾಡಿದ Freedom ಮತ್ತು Independence ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಆದಿವಾಸಿಗಳು, ದಲಿತರು, ಮುಸ್ಲಿಮರು, ಸಿಖ್ಖರು ಮತ್ತು ಹಿಂದೂಗಳು; OBCಗಳು, ಬ್ರಾಹ್ಮಣರು; ಪುರುಷರು, ಮಹಿಳೆಯರು ಮತ್ತು ಮಕ್ಕಳು, ಭಕ್ತರು ಮತ್ತು ನಾಸ್ತಿಕರು – ಸ್ವಾತಂತ್ರ್ಯದ ಮಹಾನ್ ಯುದ್ಧಗಳಲ್ಲಿ ಹೋರಾಡಿದ ಈ ಕಾಲಾಳುಗಳ ಅದ್ಭುತ ವೈವಿಧ್ಯತೆಯನ್ನು ಬಹಿರಂಗಪಡಿಸುವ ಮೂಲಕ – ಸ್ವಾತಂತ್ರ್ಯವು ಬೆರಳೆಣಿಕೆಯಷ್ಟು ಆಕ್ಸ್‌ಬ್ರಿಡ್ಜ್ ಗಣ್ಯರ ಕೊಡುಗೆಯಾಗಿರಲಿಲ್ಲ ಎಂದುThe Last Heroes ವಾದಿಸುತ್ತಾರೆ.

ತಮ್ಮ ಎರಡನೇ ಪುಸ್ತಕದ ಕುರಿತು ಮಾತನಾಡಿದ ಪಿ ಸಾಯಿನಾಥ್ ಅವರು, ‘ಇನ್ನು ಐದಾರು ವರ್ಷಗಳಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬನೇ ಒಬ್ಬ ವ್ಯಕ್ತಿಯೂ ಇರುವುದಿಲ್ಲ. ಹೊಸ ತಲೆಮಾರಿನ ಭಾರತೀಯ ಯುವಜನತೆಗೆ; ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾಗಲು, ನೋಡಲು, ಮಾತನಾಡಲು ಅಥವಾ ಅವರ ಮಾತು ಕೇಳಲು ಎಂದಿಗೂ ಸಾಧ್ಯವಿಲ್ಲ. ಅದಕ್ಕಾಗಿಯೇ ಮತ್ತು ಇವರಿಗಾಗಿಯೇ ನಾನು ಈ ಪುಸ್ತಕವನ್ನು ಬರೆದಿದ್ದೇನೆ. ಇನ್ನು ಸ್ವಲ್ಪ ಸಮಯದಲ್ಲೇ ಯುವಜನರಿಂದ ಇತಿಹಾಸವನ್ನು ಕಸಿದುಕೊಳ್ಳುವುದನ್ನು ನಾವು ನೋಡುತ್ತೇವೆ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದ ಬಗೆಗಿನ ತಿಳಿವಿನ ಬೆಳಕು ಎಲ್ಲಿಯೂ ಮಿನುಗದಂತೆ ತಡೆ ಹಿಡಿಯಲಾಗಿದೆ, ನಿರಾಕರಿಸಲಾಗಿದೆ – ಮತ್ತು ಈ ಹೋರಾಟವನ್ನು ಮುನ್ನಡೆಸುವವರು ಯಾರು,’ ಎಂದು ಅವರು ಪ್ರಶ್ನಿಸಿದರು.

‍ಲೇಖಕರು Admin

October 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: