ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಂದ್ರಶೇಖರ ನಾವಡರ ಕ್ಯಾಮೆರಾದಲ್ಲಿ ಕಾರಂತರು

ಚಂದ್ರಶೇಖರ ನಾವಡ ನಾವಡರ ಚಿತ್ರ ಭಂಡಾರದಲ್ಲಿನ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ ೧೯೯೧ ರಲ್ಲಿ ಈ ಚಿತ್ರಗಳನ್ನು ಸೆರೆ ಹಿಡಿದಾಗ ಕಾರಂತರಿಗೆ ೯೦ ರ ಹರೆಯ.. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

read more
’ಎಷ್ಟೋ ಕಂಬಳಿ ಹುಳುಗಳು ಚಿಟ್ಟೆಗಳಾಗುವುದೇ ಇಲ್ಲ..’ – ದಿವ್ಯಾ ಆಂಜನಪ್ಪ

"ಹುಳು" ದಿವ್ಯಾ ಆಂಜನಪ್ಪ ಎಷ್ಟೊ ಬಾರಿ ನಾನೊಂದು ಹುಳುವಾಗಿಯೇ ಕಾಣುತ್ತೇನೆ ಕಣ್ಮರೆಯಲಿ ಕೊರೆಯುತ್ತಾ.. ಮುಳ್ಳುಗಳಲ್ಲೇ ಚುಚ್ಚುತ್ತಾ.. ತನಗೆ ತಾ ಕಂಬಳಿ ಹುಳುವಾಗಿ! ರಾತ್ರಿ ಕಣ್ಮುಚ್ಚಿದಾಗ ಬರೀ ಚಿಟ್ಟೆಯದೇ ಕನಸು ಹಾರಲಾರೆನೆನಿಸಿ ಕನಸಲೂ ಅಳುವೆ ಎಷ್ಟೋ ಕಂಬಳಿ ಹುಳುಗಳು ಚಿಟ್ಟೆಗಳಾಗುವುದೇ ಇಲ್ಲ ನಡುವಲೇ ಅಳಿದು   ಕಂಬಳಿ...

read more
ಸಂಧ್ಯಾರಾಣಿ ಕಾಲಂ : ಸರ್ಕಲ್ ಮತ್ತು ಕಂಪಾರ್ಟ್‌ಮೆಂಟ್‌ಗಳ ನಡುವಿನಲ್ಲಿ ಬದುಕು

ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಟಿ ಎನ್ ಸೀತಾರಾಂ ಅವರ ಬಾಲ್ಯದ ಬಗ್ಗೆ ಮಾತನಾಡುತ್ತಾ, ’ಬಾಲ್ಯದಲ್ಲಿ ಯಾವುದಾದರೂ ಕಾರಣಕ್ಕೆ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಇದ್ದರೆ ಅದು ನಂತರದಲ್ಲಿ ಎಲ್ಲರನ್ನೂ ಮೆಚ್ಚಿಸ ಬಯಸುವ, ಎಲ್ಲರಿಂದಲೂ ಒಂದು ಒಪ್ಪಿಗೆಯನ್ನು ಬಯಸುವ ಗುಣವಾಗಿ ಬದಲಾಗಿಬಿಡುತ್ತದೆ’ ಅಂತ ಹೇಳಿದ್ದರು. ಬಾಲ್ಯದ ಈ ಹಿನ್ನಲೆ...

read more
ಪ್ರವರ ಕೊಟ್ಟೂರು ಬರೆದ ಸಣ್ಣ ಕಥೆ

ಸಂಬಂಧ ಪ್ರವರ ಕೊಟ್ಟೂರು ತೆರೆದ ಕಿಡಕಿಯಿಂದ ಬೆಳಕು ಮುಖಕ್ಕೆ ರಾಚುತಿತ್ತು, ಬೇಸಿಗೆಯಾದ್ದರಿಂದಲೋ ಏನೋ ಸೆಖೆಗೆ ಮೈಯೆಲ್ಲಾ ಬೆವೆತು ಹಾಸಿಗೆಯಲ್ಲಿ ಹೊರಳಾಡುತ್ತಲೇ ಹೆಂಚಿನಲ್ಲಿ ದೋಸೆ ತಿರುವಿ ಹಾಕಿದಂತೆ ಮಗ್ಗುಲು ಬದಲಾಯಿಸಿ ಇನ್ನೊಂದಷ್ಟು ಮತ್ತಷ್ಟು ಹೊತ್ತು ನಿದ್ದೆ ಮಾಡಲಿಕ್ಕೆ ಪ್ರಯತ್ನಿಸಿದರೂ ಆಗಲಿಲ್ಲ, ಕೊನೆಗೆ ಸಣ್ಣಗಿನ...

read more
ಡೈಲಿ ಬುಕ್ : ಶಿವರಾಮು ಕಾಡನಕುಪ್ಪೆ ಅವರ ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’

ಡಾ ಬಿ ಆರ್ ಸತ್ಯನಾರಾಯಣ ಮೊನ್ನೆ ಊರಿನಲ್ಲಾದ ಹತ್ತಿರದ ಬಂಧುವೊಬ್ಬರ ಸಾವು, ಅಂತ್ಯಸಂಸ್ಕಾರ ಮುಗಿಸಿಕೊಂಡು ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಬಂದಾಗ ಟೇಬಲ್ಲಿನ ಮೇಲೆ ಪುಸ್ತಕವೊಂದು ಕುಳಿತಿತ್ತು. ಮೈಸೂರಿನಿಂದ ಹಿರಿಯರಾದ ಶ್ರೀರಾಮ್ ಅವರು ವಿಶ್ವಾಸಪೂರ್ವಕವಾಗಿ ಕಳುಹಿಸದ್ದ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ’ತೇಜಸ್ವಿಯನ್ನು...

read more
'ದೀಪಿಕಾ ಮತ್ತು ಅವಳ ಆಯ್ಕೆ’ – ವೈಶಾಲಿ ಹೆಗಡೆ

“ಪಡು”ಕೋಣೆಯೂ ಪೂರ್ವಾಗ್ರಹವೂ -ವೈಶಾಲಿ ಹೆಗಡೆ ದೀಪಿಕಾ ಪಡುಕೋಣೆಯ ವೀಡಿಯೋ ಜಾಹೀರಾತಿನ ಬಗ್ಗೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಅನಿಸಿದ್ದು, ಅಯ್ಯೋ ದೇವರೇ ನನ್ನ ಜನಕ್ಕೆ ಮಾಡಲು ಬೇರೆ ಕೆಲಸವಿಲ್ಲವೇ? ಇದೂ ಒಂದು ದೇಶಾದ್ಯಂತ ನಡೆಯಬೇಕಾದ ಚರ್ಚೆಯೇ? ನಮ್ಮ ಮಾಧ್ಯಮಗಳಿಗೆ ಸುದ್ದಿಗೆ ಇಷ್ಟೊಂದು ಬರವೇ? ಕಾಮಸೂತ್ರ ಬರೆದು ಹಂಚಿದ...

read more
ನೀರು ಕೂಡಿರದ ಹಾಲಿರಲು ಸಾಧ್ಯವೇ…

ದಿನಾ ದಣಿಯುವವಳು ~ ಅನೀಲ ತಾಳಿಕೋಟಿ ಅಚ್ಚರಿ ಪಡುತ್ತೇನೆ ಅದೆಂತೂ ಒಂದಕ್ಕೊಂದು ತಾಳೆಯಾಗುತ್ತ ಬಳುಕೆಯಾಗುತ್ತಲೂ ಬಾಳಾಗುತ್ತದೆಂದು ಎಲ್ಲೋ ಏನೋ ಓದುತ್ತ ಬೆಳೆದ ನಾನು ಅದೇ ಮಯೂರ, ತರಂಗಾದಿ ಸುಳಿಯಲ್ಲಿ ಸಿಲುಕಿ ಬೆಳಗಿದ ನೀನು ಬುದ್ದಿ ಬೆಳೆಯುವ ಮುಂಚೆ ನೋಡೆ ಇರದಿದ್ದರೂ ನೋಡಿರದ ಸಾಧ್ಯತೆ ಇಲ್ಲವೇನಲ್ಲಾ ಎಂಬ ಪುಳಕ ನೀರು ಕೂಡಿರದ...

read more
'ರೆಕ್ಕೆಗಳಿರುವುದೇಕೆ ಮತ್ತೆ ?' – ಜಯಶ್ರೀ ಬರೆದ ಸಣ್ಣಕಥೆ

  ಜಯಶ್ರೀ ದೇಶಪಾಂಡೆ ''ಹಾರಲು ಬಿಡ್ತೀಯಾ ನನ್ನ?'' ಕಣ್ಣಲ್ಲಿ ಕಣ್ಣಿಟ್ಟು ಕೇಳಿತು. ಇದೀಗ ಕೊಂಚ ಕಠಿಣ ಪ್ರಶ್ನೆ ಅನಿಸಿತು. ಇಷ್ಟು ಹೊತ್ತೂ ಸಲೀಸಾಗಿ ಜರುಗಿದ ಮಾತುಕತೆಗೆ ಬೇರೆ ತಿರುವು ಕೊಡಲು ನೋಡುತ್ತಿದೆಯಾ? ಇದಕ್ಕೆ ಮಾತಾಡಲು ಕಲಿಸಿದ್ದೇ ತಾನು .ಈಗ ನನ್ನನ್ನೇ ಆಟವಾಡಿಸುವೆಯಾ ? ಅ0ತ ಬಯ್ದುಬಿಡಬೇಕೆನಿಸಿತು, ಆದರೆ ತು೦ಬ...

read more
ಎಲ್ಲಿ ಹೋದವೋ ಗೆಳೆಯ ಆ ಕಾಲ?

ಮಂಜುನಾಯಕ ಟಿ ಎಷ್ಟು ಜನ ಒಪ್ತಾರೋ ಗೊತ್ತಿಲ್ಲ. ನಂಗಂತು ಚೂರೂ ಅನುಮಾನಾನೇ ಇಲ್ಲ; ನಮ್ಮೊಳಗಿನ ಕೋತಿಗೆ ಬಾಲ ಬಂದದ್ದು ಆ ದಿನಗಳಲ್ಲೇ ಅನ್ನುವ ವಿಷ್ಯದಲ್ಲಿ. ಆ ದಿನಗಳೆಂದರೆ ಹೈಸ್ಕೂಲು ದಿನಗಳು. ಚಡ್ಡಿಗೆ ನಮಸ್ಕಾರ ಹೇಳಿ ಪ್ಯಾಂಟು ಏರಿಸಿಕೊಂಡು ಸರಕಾರ ಕೊಡಿಸಿದ್ದ ಸೈಕಲ್ಲಿನಲ್ಲಿ ಸ್ಟೈಲಾಗಿ ಅಲೆಯುತ್ತಿದ್ದ ದಿನಗಳವು....

read more
’೭೧೨, ವಸ್ತಾರೆ ಮತ್ತು ಹೋಳಿಹುಣ್ಣಿಮೆ’ – ಸುಮಂಗಲಾ

ಸುಮಂಗಲಾ ಸೂಚನೆ: ಕಥಾ ಶೀರ್ಷಿಕೆಯನ್ನು ಕಥೆಯ ಕೊನೆಯಲ್ಲಿ ನೀಡಲಾಗಿದೆ ಮತ್ತು ಇದು ಹೋಳಿಹುಣ್ಣಿಮೆಯಂದು ನಡೆದ ಸತ್ಯಸ್ಯ ಸತ್ಯ ಘಟನೆ! ಶ್ರೀಮಾನ್ ಶ್ರೀ ವಸ್ತಾರೆಯವರಿಗೆ ಅಲಾರಂ ಬಾರಿಸಿದ್ದು ಕನಸಿನಲ್ಲಿ ಎಂಬಂತೆ ಅನ್ನಿಸುತ್ತ, ಅದು ಏಳ್ತೀಯೋ ಇಲ್ವೋ ಎಂದು ಬೆದರಿಸುವಂತೆ ಪದೇ ಪದೇ ಬಡಿದುಕೊಳ್ಳತೊಡಗಿದಾಗ ಇದು ಕನಸಲ್ಲ, ತನ್ನದೇ...

read more
'ಆ ಪದದ ಅರ್ಥ ಗೊತ್ತಾ?' ಕೇಳಿದ್ರು ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ ಇದನ್ನು ಓದುತ್ತಿರುವ ಬೆಂಗಳೂರೇತರರಿಗೆ ಬಹುಶಃ ಈ ಪದದ ಪರಿಚಯವೂ ಇಲ್ಲದಿರಬಹುದು. ಹಿಂದಿನ ತಲೆಮಾರಿನವರಿಗೆ ಇದರ ಬಗ್ಗೆ ಸಣ್ಣ ಗಲಿಬಿಲಿಯೂ ಇಲ್ಲದಿರಬಹುದು. ನನ್ನಂಥವರಿಗೆ ಹೀಗೆಲ್ಲಾ ಓದುವಾಗ ನನ್ನನ್ನು ಹೆಣ್ಣು ಎನ್ನಲು ಹಿಂಸೆಯಾಗಬಹುದು. ಹೀಗೆ ಇಷ್ಟೆಲ್ಲ disclaimersನೊಂದಿಗೆ ಮುಂದುವರೆಯುವ ಭಂಡತನ...

read more
ಕಾಮ ಪ್ರೇಮವಾಗಿ ಆಗಸದುದ್ದಕ್ಕೂ ಸದ್ದಿಲ್ಲದೆ ಮಿನುಗಲಿ…

- ಜಾನ್ ಸುಂಟಿಕೊಪ್ಪ ಗಡಿ ಗಡಿಗಳ ದಾಟಿ ಬಂದಿದೆ ಪ್ರೇಮ; ಅಕ್ಷರವಾಗಿ, ದನಿಯಾಗಿ, ಕಡೆಗೆ - ಕಾಮವೂ ಆಗಿ;   2ಜಿ 3ಜಿ ಗಳ ನೆಟ್ವರ್ಕಿಗಿಲ್ಲ ಹಾಳಾದ ಗಡಿಗಳ ಹ಼ಂಗು .., ಆಳವರಿಯದ ಭಾವನೆಗಳು ಸದ್ದಿಲ್ಲದೆ ಮೊಳಕೆಯೊಡೆದಿವೆ; ಬಿಟ್ಟ ಬೇರು ಆಳಕ್ಕಿಳಿದ಼಼ತೆ ಹೃದಯವೂ ಬಿರುಕು ಬಿಡುತಿದೆ., ಹೊರಗಿಣುಕುವ ಹಸುರು ಚಿಗುರಲು  ...

read more
ಕುಸುಮಬಾಲೆ ಕಾಲಂ : ಹೋಗಿ ಬರುತ್ತೇನೆ..ನಮಸ್ಕಾರ

ಇಷ್ಟೊಂದು ಯಾಕೆ ಭಾವುಕಳಾಗಿದ್ದೇನೆ? ತಿಳಿಯುತ್ತಿಲ್ಲ, ಆದರೆ ಹೊರಟು ನಿಂತಿದ್ದೇನೆ. ಹೊಸಿಲಲ್ಲಿ ಕೂತು ನಾಕು ಮಾತು ಹೇಳಬೇಕಿದೆ.ಕೇಳಿಬಿಡಿ. ಏನೂ ಇಲ್ಲದೆ ಈ ಊರಿಗೆ ಬಂದೆ.ಅಲ್ಲೀಇಲ್ಲೀಇದ್ದೆ.ಕಾಸಿಲ್ಲದೇ ಕಷ್ಟ ಪಟ್ಟೆ.ಸಿಕ್ಕ ಸಿಕ್ಕಲ್ಲಿ ಅಲೆದೆ.ಈಗ ಹೀಗಿದ್ದೇನೆ.ಎಲ್ಲೆಲ್ಲಿಂದಲೋ ಬದುಕು ಅರಸಿ ಮಹಾನಗರಗಳಿಗೆ ಬರುವ ಎಷ್ಟೋ...

read more
’ನಾನು ಹೀಗಿರೋದು ನನ್ ತಪ್ಪಾ’ ಸಣ್ಣ ಕಥೆ

ಷಡಕ್ಷರಿ ತರಬೇನಹಳ್ಳಿ “ಏ ನೀನಾ ಇಲ್ಲಿ ಯಾಕೇ ಬಂದೇ ಮತ್ತೆ? ಇನ್ನೊಮ್ಮೆ ನೀನೇನಾದ್ರೂ ಸ್ಟೇಷನ್ ಪಕ್ಕ ಕಂಡ್ರೆ ಸೊಂಟಾ ಮುರಿದುಹಾಕ್ತೀನಿ. ನಡೀಯೇ ಓಡು ಓಡು, ಬಿಟ್ರೆ ನೋಡು, ಲಾಟಿ ಕೋಲು ಚೂರಾಗಬೇಕು. ರಾಸ್ಕಲ್,ಕಿತ್ತೋದ್ ಲೌಡಿ ತಂದು. ಮರ್ಯಾದೇಯಾಗಿ ಮನೇಲಿರೋದ್ ಬಿಟ್ಟು ಬಸ್ಸ್ ಹತ್ತಿ ಬಂದುಬಿಡ್ತಾಳೆ ಲೋಫರ್”. “ಯಾಕ್ರೀ...

read more
’ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?’ – ಪ್ರಜ್ಞಾ ಶಾಸ್ತ್ರಿ

ಪ್ರಜ್ಞಾ ಶಾಸ್ತ್ರಿ ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ? ಅದು ಒಂದು ಘನೀಭವಿಸಿದ ಹನಿಯಾದಾಗ. ಆಕಾಶವನ್ನ ಕಲ್ಪಿಸಿಕೊ. ಅದರ ಒಡಲೊಳಗಿದ್ದ ರಹಸ್ಯವನ್ನೆಲ್ಲ ಬಸಿದು ಮೋಡ ಕಟ್ಟಿ ಆ ಮೋಡದ ಒಂದು ಅಂಶ ಆ ಕವಿತೆಯೊಳಗಿನ ಹನಿಯಾದಾಗ. ಆ ಹನಿಯ ಜಾಡು ಹಿಡಿದು ಆಕಾಶದ ಒಡಲನ್ನು ತಲುಪುವ ರೋಚಕ ಯಾನವೊಂದನ್ನು ಊಹಿಸಿಕೋ. ಆ ಯಾನ ನನ್ನದು....

read more

Pin It on Pinterest

Share This