ಸಿಗದ ಪ್ರೀತಿಗೆ ಪರತಪಿಸುವವರ ವೇದನೆ..

ಗಜಲ್

ವೀರಣ್ಣ ಮಂಠಾಳಕರ್


ಪ್ರೀತಿಯ ಬಳ್ಳಿ ಮುಳ್ಳಾಗಿ ಚುಚ್ಚದಿರಲಿ ಹಸಿರು ಹೊನಲಾಗಿ ಹರಡುತಿರಲಿ ಎಂದು ಬಯಸಿದೆ
ನೀನದನ್ನು ಚಿಗುರುವ ಮುನ್ನವೇ ಚಿವುಟಿ ಹಾಕುವ ಪ್ರಯತ್ನದಲ್ಲಿ ನನ್ನ ದೂರ ಮಾಡಲು ಬಯಸಿದೆ
 
ನಿನ್ನಿಂದ ಪಡೆದುಕೊಂಡಷ್ಟು ಸುಖಕ್ಕಿಂತ ಮನದಾಳದಲ್ಲಿ ಉಳಿಸಿಕೊಂಡ ನೆನಪುಗಳೇ ಅಮರವಾಗಿರಲಿ
ಸಿಗದ ಪ್ರೀತಿಗೆ ಪರತಪಿಸುವವರ ವೇದನೆ ಹೇಗೆಂದು ಅರಿಯಲು ಪ್ರೀತಿಸಬೇಕು ನೀ ಎಂದು ಬಯಸಿದೆ
 
ಪ್ರೀತಿಯ ಅರ್ಥವೇ ಗೊತ್ತಿರದ ನಿನಗೆ ನನ್ನ ಅರ್ತನಾದವನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಇರದಿರು
ನಿನ್ನ ಪ್ರೀತಿಯ ಹೊರತಾಗಿ ಯಾವ ದ್ವೇಷವೂ ನನ್ನೊಳಗಿಲ್ಲ ಆರಾಧಿಸುತ್ತಲೇ ಇರಬೇಕು ಎಂದು ಬಯಸಿದೆ
 
ನೀನಿರದ ಗೈರು ಹಾಜರಿಯಲ್ಲಿ ಮಧುಶಾಲೆ, ಮದು ಬಟ್ಟಲು ಜೊತೆಗಿದ್ದರೆಷ್ಟು ಚೆಂದ ಎನುತಿದೆ ಮನವು
ಮನತೃಪ್ತಿಯಾಗುವಷ್ಟು ಕುಡಿದು ಬಿಡಬೇಕು ದಾರಿಯುದ್ದಕ್ಕೂ ನೀನೊಬ್ಬಳೇ ಕಾಣಬೇಕು ಎಂದು ಬಯಸಿದೆ
 
ದಾರಿಹೋಕರಿಗೆ ನನ್ನ ಮನದ ನೋವು ಕಾಣದಿರಲೆಂದು ಕಣ್ಣೊಳಗಿನ ಕಣ್ಣೀರು ಬತ್ತಿ ಹೋಗಬೇಕು
ಸುತ್ತಿ ಬಳಸಿ ಮತ್ತೆ ಸಾಕಿಯ ಮಧು ಬಟ್ಟಲಿಗಾಗಿ ಕಾದು ಕುಳಿತು ಹಗುರಾಗಬೇಕು ಎಂದು ಬಯಸಿದೆ
 
ಎಲ್ಲೆಲ್ಲೂ ಬಿಡದ ನಿನ್ನಾ ನೆನಪುಗಳ ಮೆರವಣಿಗೆಯಲ್ಲಿ ಮದಿರೆ ಕುಡಿಯದ ಹೊರತು ನಶೆಯೆಲ್ಲಿದೆ ಬದುಕಿಗೆ
ನಶೆ ತುಂಬಿದಾ ನಿನ್ನಾ ಸೌಂದರ್ಯ ಮರೆಸುವ ಕ್ಷಣ ಕ್ಷಣಕ್ಕೂ ತುಟಿ ಸೋಕುವ ಮದಿರೆಯನ್ನೇ ಬಯಸಿದೆ
 
ಇಷ್ಟು ದಿನ ಕುಡಿದಿದ್ದು ಬಿಟ್ಟುಬಿಡು ‘ವೀರ’ ಎಂದರೂ ಬಿಡದ ಮಾಯೆ ನಶೆಯಲ್ಲದೇ ಇನ್ನೇನಿದೆ ಹೇಳು
ನಶೆಯೊಳಗೆ ತೇಲಾಡಿ ನಿನ್ನಾ ನೆನಪುಗಳಲ್ಲೇ ಬಂಧಿಯಾಗಿ ಬಿಡಬೇಕೆಂಬ ಸಂಭ್ರಮಕ್ಕೆ ಕುಡಿಯಲು ಬಯಸಿದೆ
 

‍ಲೇಖಕರು G

June 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Hanumanth Ananth Patil

    ವೀರಣ್ಣರವರಿಗೆ ವಂದನೆಗಳು
    ಸುಂದರವಾದ ಮನದಾಳಕಿಳಿದು ಕಾಡುವ ಯೋಚನೆಗೆ ಹಚ್ಚುವ ಗಜಲ್, ದಕ್ಕದ ಪ್ರೀತಿಗೆ ಹಪಹಪಿಸುವವರ ವೇದನೆಯನ್ನು ಸಮರ್ಥವಾಗಿ ಅಕ್ಷರ ರೂಪದಲ್ಲಿ ಅಬಿವ್ಯಕ್ತಿಸಿದ್ದೀರಿ.ಮದಿರಾ ವ್ಯಸನಕ್ಕೂ ಒಂದು ರೀತಿಯ ಗಹನತೆ ಮತ್ತು ಕ್ಲಾಸಿಕ್ ಟಚ್‌ ನೀಡಿದ್ದೀರಿ.

    ಪ್ರತಿಕ್ರಿಯೆ
  2. noorullathyamagondlu

    ಇನೊಂದಿಷ್ಟು ಹುಚ್ಚುಬಯಕೆ ಇದ್ದಿದ್ದರೆ ಚೆನ್ನಾಗಿತ್ತು.ಆದರೆ ಗಜಲಿಗೆ ಹತ್ತಿರವಾಗುವ ಭಾವ ಮತ್ತು ತಂತ್ರಗರಿಗೆ ಚೆನ್ನಾಗಿದೆ.

    ಪ್ರತಿಕ್ರಿಯೆ
  3. ವೀರಣ್ಣ ಮಂಠಾಳಕರ್

    ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆ, ಸಲಹೆಗೆ ತುಂಬಾ ಖುಷಿಯಾಯ್ತು. ಗಜಲ್‍ಗೆ ಸ್ಪಂಧಿಸಿ ಅಭಿಪ್ರಾಯ ಹಂಚಿಕೊಂಡಿರುವ ಎಲ್ಲರಿಗೂ ಕೃತಜ್ಞತೆಗಳು.

    ಪ್ರತಿಕ್ರಿಯೆ
  4. kavyashree mahagaonkar

    Preetigagi paritapisuva manastitiya anavarana adbhutavagide…. preeti mattu madhuvina nisheya holike arthapoornavagide .manamuttuva Gazal. …

    ಪ್ರತಿಕ್ರಿಯೆ
  5. ಸಂಗಪ್ಪ ಸಾಳಗುಂದಿ

    ಓದಿದರೆ ಮತ್ತೇ ಮತ್ತೇ ಓದಬೇಕೆನ್ನುವ ಹಾಗೆ ಸುಂದರವಾಗಿ ಗಜಲ್ ಬರೆದಿದ್ದೀರಾ, “ವೀರಣ್ಣ”ಸರ್.ಇಂತಹ ಲಕ್ಷಾಂತರ ಬರಹ ನಿಮ್ಮಿಂದ ಹೊರ ಹೊಮ್ಮಲಿ ಅಭಿನಂದನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: