ಜಯಶ್ರೀ ದೇಶಪಾಂಡೆ ಬರೆದ ಕವಿತೆ

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ….

ಜಯಶ್ರೀ ದೇಶಪಾಂಡೆ


ದೇವನಲ್ಲೇ ಇದ್ದ, ಕೈ ಚಾಚಲಿಲ್ಲವನು..
ಕೈಚಾಚಲಿಲ್ಲ, ಹಸುಗೂಸ ಬಾಚಿ ಹಿಡಿಯಲಿಲ್ಲ …
ಕತ್ತಲಿರಲಿಲ್ಲ ನಡುಹಗಲಿನ ಬಿಳಿಬೆಳಕು,
ಮ೦ಗಳಾರತಿ-ನೈವೇದ್ಯ ಘಮಘಮಿಸಿ ಮರಳಿತ್ತು.
 
ಬೊಂಬೆಯಾಟಕ್ಕೆ ಬರಿಮರಳು ಹಿಡಿಮಣ್ಣು.,
ಕೈಯಲ್ಲಿ ನೀರಕೆಸರು… ಆದರೂ ನಕ್ಕಿದೆ ಕೂಸು.
ವರುಷವೈದಾಗಿ ತಲೆಬಾಚಲಾರದಲ್ಲ..ಅವಳೆಲ್ಲಿ ಅವ್ವ?
ಕಲ್ಲು ಇಟ್ಟಿಗೆ ತಲೆಯೇರಿ ಕಾಲದುರಿ ಥರಥರಿಸಿ
ಹೊತ್ತು ಹತ್ತು ಮಾಳಿಗೆ ಹತ್ತಿ ಉಡುಗಿದಳು ಕಡೆಗೆ.
 
ಬೆವರಸೆಲೆ ಸಂಜೆಕೂಳಿನ ಸಂಚಿ,
ಮನೆಬಾಗಿಲಲ್ಲಿನ ಐದರ ಹೆಣ್ಣಿನ ಕನಸು ಕಣ್ಣಲ್ಲಿ
ಉಂಡಿತೋ ಅದು ಇಲ್ಲವೋ?
ತಂಗಳಿನ್ನು ಹಳಸಿ ಕಡೆಗೆ ನಾಯಿ ಬಾಯಿಗೆ ಮೃಷ್ಟಾನ್ನ,
ಥೂ ಜನ್ಮ! ಹೆಣ್ಣು -ಹೊಟ್ಟೆ ಒಟ್ಟಿಗಿಟ್ಟನಲ್ಲ ಅವನಿಗಿದೆಯೇ ಕರುಣ .
 
ಐದರದು ಹಸುಗೂಸು ಮಣ್ಣಬೊಂಬೆಯ ಬಿಚ್ಚಿ
ಮತ್ತದರ ಕೈಕಾಲು ಕಡೆಯಲು ಬಗ್ಗಿ, ಆ ದಿಕ್ಕು ಕರೆತ೦ದ
ನರಪಿಶಾಚಿ ಸುರಿಸಿ ಜೊಲ್ಲು…
ಮೈಮನದ ಕೊಬ್ಬು ಮತ್ತೆ ಅಮಲು
ಐದರ ಹಸುಳೆಯ ಲಂಗ ಹರಿದು ಕೆಂಪುನೆತ್ತರ ಕೋಡಿ..
 
ಹೂವು ಮಣ್ಣು ಒಟ್ಟು.. ತಿಕ್ಕಾಡಿ ಎಳೆಪ್ರಾಣ ಹೊಯ್ದಾಡಿ,
ಚೀತ್ಕರಿಸಿ ಬಿಕ್ಕಿ ಸಂಕಟದಲಿ ನರಳಿ..
ಯಾತನೆಗೆ ಹರಿದ ಕಣ್ಣೀರು.
ಚೂರಿಯಲಗಿನ ಚೂಪು ಯೋನಿಬಗೆದಾಡಿ ಹೊಟ್ಟೆ ಪುಡಿಪುಡಿ!
 
ಅಲ್ಲೊಬ್ಬನಿದ್ದ ದೇವ..ಅವ ಕೈಚಾಚಲಿಲ್ಲ..
ಕಳ್ಳನಡೆದಿರಲು ರಾಕ್ಷಸ, ಬೀಸಿ ಬಡಿಯಲಿಲ್ಲ!
ಕಣ್ಣು ತೆರೆದು ಕಣ್ಣು ಮುಚ್ಚಿದ ಐದರ ಹಸುಗೂಸು
ನಾ ಬಂದೆ ನಿನ್ನ ಬಳಿ…
ಸುಮ್ಮನುಳಿದನಲ್ಲ ದೇವ, ಕಣ್ ರೆಪ್ಪೆ ಅಲುಗಿಸದೆ ಸುಮ್ಮನಿದ್ದನಲ್ಲ!
‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ’
ಆಗಿಲ್ಲವೇ ಇನ್ನೂ ಅವನ ಲೆಕ್ಕದಲ್ಲಿ?
 

‍ಲೇಖಕರು G

June 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. noorullathyamagondlu

    ಈ ಕವನ ಓದಿದ ಮೇಲೆ ಹೊರಟ ನಿಟ್ಟುಸಿರಲಿ ಯು ಆರ್ ಅನಂತಮೂರ್ತಿ ಅವರ ಮಾತು ನೆನಪಾಯಿತು :’ಜೀವಜಲ ಬತ್ತಿಹೋಗುತ್ತಿದೆ……’

    ಪ್ರತಿಕ್ರಿಯೆ
  2. Narasinha Shurpali

    An accurate depiction of the present day India. This is the height of cruelty a man can achieve. Yet he walks away free only to be responsible for many other such monstrous acts.

    ಪ್ರತಿಕ್ರಿಯೆ
  3. ತಿರುಪತಿ ಭಂಗಿ

    ಕಾವ್ಯ ತುಂಬಾ ಅರ್ಥಪೂರ್ಣವಾಗಿದೆ.

    ಪ್ರತಿಕ್ರಿಯೆ
  4. NARAYANA

    ಸುಮ್ಮನುಳಿದನಲ್ಲ ದೇವ, ಕಣ್ ರೆಪ್ಪೆ ಅಲುಗಿಸದೆ ಸುಮ್ಮನಿದ್ದನಲ್ಲ!
    ‘ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ’
    ಆಗಿಲ್ಲವೇ ಇನ್ನೂ ಅವನ ಲೆಕ್ಕದಲ್ಲಿ?

    ಪ್ರತಿಕ್ರಿಯೆ
  5. ಮೂರ್ತಿ ದೇರಾಜೆ

    ಕವನ ಚೆನ್ನಾಗಿದೆ ….. ಆದರೆ …ಅಲ್ಲಮನ ಈ ವಚನ ಕೇಳಿದ್ದು ಯಾಕೋ ನೆನಪಾಯ್ತು ….. “…..ಉತ್ತರಾಪಥದ ಮೇಲೆ ಮೇಘವರ್ಷಗರೆಯಲು ….. ಆ ದೇಶದಲ್ಲಿ ಬರ ಬಂದಿತ್ತು …ಆ ದೇಶದ ಪ್ರಾಣಿಗಳೆಲ್ಲರೂ ಮೃತರಾದರು …ಅವರ ಸುಟ್ಟ ರುದ್ರಭೂಮಿಯಲ್ಲಿ ….ನಾ ನಿಮ್ಮನು ಹುಡುಕುವೆ ಗುಹೇಶ್ವರಾ ……. “

    ಪ್ರತಿಕ್ರಿಯೆ
  6. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

    ಪ್ರತಿಕ್ರಿಯೆ
  7. Jayashree

    ನಿಮ್ಮೆಲ್ಲರ ಪ್ರಾಂಜಲ ಅಭಿಪ್ರಾಯಗಳಿಗಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು..

    ಪ್ರತಿಕ್ರಿಯೆ
  8. ಆರತಿ ಘಟಿಕಾರ್

    ಈ ಕವನ ಓದಿದ ಬಳಿಕ ಒಂದು ವಿಷಣ್ಣ ಭಾವವೊಂದೇ ಉಳಿಯಿತು ಮನಸೋಳು !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: