ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮನ ಕಲಕಿದ ಎರಡು ಸಾವಿನ ಸುದ್ದಿಗಳು

ಹನುಮಂತ ಅನಂತ ಪಾಟೀಲ ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಸುದ್ದಿ ಸ್ಥಾನ ಪಡೆದುದು ಒಂದು ರೀತಿಯ ಅಚ್ಚರಿಯ ಸುದ್ದಿ ಎನಿಸಿತು. ಒಂದು...

read more
ಬದುಕೇ ಬದುಕಲು ಕಾರಣವಾಗಿರಬೇಕು – ನಳಿನ

– ನಳಿನ ಡಿ ಶತ ಶತಮಾನಗಳು ಕಳೆದರೂ, ನಾಗರೀಕತೆಯ ಡೌಲಿನೊಳಗೆ ನಾವು ಏನೇನೋ ಹಣೆಪಟ್ಟಿ ಎಳೆದುಕೊಂಡರೂ, ಮೂಲಭೂತ ಅವಶ್ಯಕತೆಗಳಾದ ನೀರು, ಗಾಳಿ, ಆಹಾರದಂತೆ ಎಲ್ಲರಿಗೂ ಬೇಕಾದರೆ, ಈ ಬದುಕುವುದು ಮಾತ್ರ ಅವರವರ ಪಾಲಿಗೆ ಬಿಟ್ಟದ್ದೇ ಆಗಿದೆ. ಬದುಕಿದರೆ ತಾನೇ ಎಲ್ಲಾ ಅವಶ್ಯಕತೆಗಳನ್ನು ಓರ್ವ ವ್ಯಕ್ತಿ ಪೂರೈಸಿಕೊಳ್ಳಬಲ್ಲ. ಆದರೂ ಬದುಕಿನ...

read more
ರಾಜಸ್ಥಾನವೆಂಬ ಸ್ವರ್ಗದ ತುಣುಕು : ’ಪಿಂಕ್ ಸಿಟಿ’ ಎನ್ನುವ ಗುಲಾಬಿ ನಗರ

(ಇಲ್ಲಿಯವರೆಗೆ...) ಬೆಂಗಳೂರು ಏರ್ ಪೋರ್ಟನಲ್ಲಿರುವಾಗಲೇ ನನ್ನ ಮೋಬೈಲ್ಗೆ ಜೈಪುರ ಏರ್ಪೋರ್ಟಗೆ ಬರುವ ವಾಹನದ ನಂಬರು ಹಾಗೂ ಡ್ರೈವರ್ ಹೆಸರು, ಮೋಬೈಲ್ ನಂಬರುಗಳು ಬಂದಿದ್ದವು. ನಾವು ಜೈಪುರ ತಲುಪಿ ಹೊರಗೆ ಬರುತ್ತಲೇ ಅವನನ್ನು ಗುರುತಿಸುವುದು ತಡವಾಗಲಿಲ್ಲ. ಡ್ರೈವರ್ ಸರವನ್ ಸಿಂಗ್, ಚಟಪಟ ಮಾತಿನ, ಉತ್ತಮವೆನ್ನಿಸುವಷ್ಟು...

read more
’ದಯೆಯಿಲ್ಲದ ಲೋಕಕ್ಕೆ ಅರುಣಾ ವಿದಾಯ’ – ನಾ ದಿವಾಕರ

ನಾ ದಿವಾಕರ ಮಾನವನ ಬದುಕೇ ಜೀವನ್ಮರಣದ ನಡುವಿನ ಒಂದು ಸಂಘರ್ಷದ ನೆಲೆಯಲ್ಲಿ ರೂಪುಗೊಳ್ಳುತ್ತದೆ. ಬದುಕುವ ಇಚ್ಚೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮಾನವ ಸಮಾಜ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುತ್ತಿತ್ತು. ಕೊನೆಯ ಉಸಿರಿರುವವರೆಗೂ ಜವರಾಯನೊಡನೆ ಹೋರಾಡಲು ಬಯಸುವ ಮಾನವ ಜೀವಿಗೆ ಬದುಕೆಂದರೆ ಪ್ರಿಯ. ಏಕೆಂದರೆ ಇದು ಆಕಸ್ಮಿಕವಾಗಿ...

read more
ಹೀಗೊಂದು ಕೆಂಪು ಬಸ್ಸಿನ ಕಹಾನಿ…

- ಸಂಗಮೇಶ ಡಿಗ್ಗಿ ಅದೇ ಹಳೆಯ ಕಚ್ಚಾ ಡಾಂಬರಿನ ಮೇಲೆ ತಗ್ಗು ದಿನ್ನೆಗಳನ್ನು ದಾಟುತ್ತಾ ದಿನ ತುಂಬಿದ ಬಸುರಿಯಂತೆ ಬಂದು ನಿಂತಿತು ಕೆಂಪು ಬಸ್ಸು. ಅದು ಹಾಕಿದ ಬ್ರೇಕ್ನ ಗಕ್ಕನೆ ಶಬ್ದಕ್ಕೆ ಮಲಗಿದ್ದ ನಾಯಿ ಕ್ಷಣಮಾತ್ರದಲ್ಲಿ ಎದ್ದು ನಿಂತು ಸೋಮಾರಿತನದ ಮೈ ಮುರಿಯಿತು. ಬಸ್ ಡ್ರೈವರ್ ಹೆಗಲ ಮೇಲೆ ಇದ್ದ ಟವೆಲ್ ಜಾಡಿಸಿ ಸರಿಮಾಡಿಕೊಂಡು...

read more
'ಕಣ್ಣಿನ ಪಟ್ಟಿ ಬಿಚ್ಚಿದ ಹುಡುಗಿ' – ಆರ್ ವಿಜಯರಾಘವನ್

ಆರ್  ವಿಜಯರಾಘವನ್ ಬಲು ಹಿಂದೆ, ಹಗಲಿರುಳುಗಳಿಲ್ಲದಿದ್ದಾಗ, ಬೀಸುವ ಗಾಳಿಗೆ ಸದ್ದಿಲ್ಲದಿದ್ದಾಗ, ಸ್ಪರ್ಶಮಾತ್ರಕ್ಕೆ ಅನುಭವಕ್ಕೆ ಅದು ದಕ್ಕುತ್ತಿದ್ದಾಗ ನಡೆದಾಡಬಲ್ಲ ಜನರಿದ್ದರು, ಅವರು ಹಾರಬಲ್ಲವರೂ ಆಗಿದ್ದರು. ಅವರು ಕಣ್ಣಿದ್ದವರು. ಆದರೆ ಅವರು ಮಗುವಾಗಿ ಮಾತು ಬರುವ ಮೊದಲೇ ಮುಗ್ಧತೆ ಕಳೆದ ಕಾರಣವಾಗಿ ಕಣ್ಣುಗಳಿಗೆ ಮೃದುವಾದ...

read more
ಅರೆಪಾವು ಗುಂಡಿಗೆಯಲಿ ನಾಕಾಣೆ ಕನಸುಗಳ ಧ್ಯಾನದಲಿ…

ದೇವರು ಋಜು ಹಾಕಿದ ಆನಂದ ಕುಂಚನೂರ ಕ್ಷಮಿಸು, ನಿನ್ನ ಹಚ್ಚಿಕೊಳ್ಳುವ ಉಮೇದು ನನಗೂ ಇರಲಿಲ್ಲ ಮನಸಿಗೆ ಅಂಥ ದರ್ದು ಬೇಕಿರಲಿಲ್ಲ ಅರೆಪಾವು ಗುಂಡಿಗೆಯಲಿ ನಾಕಾಣೆ ಕನಸುಗಳ ಧ್ಯಾನದಲಿ ಬೇಷರತ್ ನನ್ನದೇ ಖಯಾಲಿನಲಿ ಬದುಕುತ್ತಿದ್ದೆ ತೆರೆದ ನಸೀಬಿಗೆ ರಂಗಿನ ಇಮಾರತಿಗಳ ಬರೆದೆ ಬರೆದೆ, ಮತ್ತೂ ಬರೆದೆ ಅನಾಮತ್ ಯಾವುದೋ ಕರೆಗೆ ಹೋದೆಯಲ್ಲ...

read more
ಅಮ್ಮ ಮತ್ತು ಬೆಳೆಯುತ್ತಿರುವ ಮಕ್ಕಳು – ವಿದ್ಯಾ

ನಿಮ್ಮ ಮಕ್ಕಳು ನಿಮ್ಮ ಸ್ವತ್ತಲ್ಲ... - ವಿದ್ಯಾ ಎಂಟನೆಯ ತರಗತಿಯ ಮಕ್ಕಳಿಗೆ ಕಮಲಾ ಸುರೈಯಾ (ಕಮಲಾದಾಸ್)ರ "ಮಿಡ್ಲ್ ಏಜ್" ಪದ್ಯವೊಂದನ್ನು ವಿವರಿಸುತ್ತಿದ್ದೆ. ಟೀನೇಜಿನ ಮಕ್ಕಳಿಗೆ ಉದ್ದೇಶಪೂರ್ವಕವಾಗಿಯೇ ಪದ್ಯ ಓದಲು ಇಟ್ಟಿದ್ದಾರೇನೋ ಅನ್ನಿಸಿತ್ತು. ಮಹಿಳೆಯ ಜೀವನದ ಮಧ್ಯ ವಯಸ್ಸಿನಲ್ಲಿ ಆಕೆಯ ಮನಸ್ಸಿನ ಸ್ಥಿತಿಯ ತೊಳಲಾಟವನ್ನು ಈ...

read more
ಹೀಗೊಂದು ಕಥೆಯಲ್ಲದ ಕಥೆ

ಅಕ್ಷರವೇ ಅನ್ನ ನಾಗರಾಜನಾಯಕ ಡಿ ಡೊಳ್ಳಿನ ನನ್ನ ಊರು ನವಿಲೂರು. ಈ ಊರು ಯಾವ ಜಿಲ್ಲೆ ಯಾವ ತಾಲ್ಲೂಕಿಗೆ ಸೇರಿದೆಎಂದು ನನಗೆ ಗೊತ್ತಿಲ್ಲ.ನವಿಲೂರಿನ ಬಗ್ಗೆ ಹೇಳಬೇಕೆಂದರೆ, ನಾನು ಅಲ್ಲಿ ಕಳೆದದ್ದು ಅಂದರೆ ವಾಸವಿದ್ದ ದಿನಗಳು ಕಡಿಮೆ. ಒಂದು ಮಾತ್ರ ಸ್ಪಷ್ಟವಾಗಿ ನೆನಪಿದೆ. ನವಿಲೂರಿನಲ್ಲಿ ಎತ್ತ ನೋಡಿದರು ನವಿಲುಗಳ ಸುಳಿವೇ ಇಲ್ಲ....

read more
ಎಸ್ ಜಿ ಶಿವಶಂಕರ್ ಬರೆದ ಸಣ್ಣಕತೆ ’ಚಿರತೆ’

ಎಸ್ ಜಿ ಶಿವಶಂಕರ್ "ಯಾರು ಚಂದ್ರಗಿರಿ..? ಇಳೀರಿ.." ಜಯಣ್ಣ ತೊಡೆಯ ಮೇಲೆ ಇಟ್ಟುಕೊಂಡಿದ್ದ ಬುತ್ತಿಯ ಚೀಲವನ್ನು ಎತ್ತಿಕೊಂಡು ಇಳಿಯಲು ಅನುವಾದ. ಅಲ್ಲಿ ಇಳಿದವನು ಅವನೊಬ್ಬನೇ. ಬಸ್ಸಿನಿಂದ ಇಳಿದು ಎದುರಿಗಿದ್ದ ಬೃಹದಾಕಾರವಾಗಿದ್ದ ಬೆಟ್ಟದತ್ತ ನೋಡಿದ. ಬೆಟ್ಟದ ಬುಡದಲ್ಲೇ ರಸ್ತೆ ಹಾದು ಹೋಗಿತ್ತು. ಹಾಗಾಗಿ ಬೆಟ್ಟದ ಪಾದದ ಹತ್ತಿರವೇ...

read more
'ತಾಯಿನಾಡು' ಹುಟ್ಟಿ ಬೆಳೆದದ್ದು ಹೀಗೆ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ (' ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ' ವಿಜೃಂಭಿಸಿದ " ತಾಯಿನಾಡು " ಪತ್ರಿಕೆ ಈಗ ಇದ್ದಿದ್ದರೆ ಅದಕ್ಕೆ ೮೭ ವರ್ಷಗಳಾಗುತ್ತಿದ್ದವು....

read more
ತೊಡೆಯ ಮೇಲೆಯೇ ಕಣ್ಣು ಮುಚ್ಚುವ ಕನವರಿಕೆಯಲ್ಲೆ..

ಅವ್ವ- ನನ್ನವ್ವ -ಕೆ ಮಹಾಂತೇಶ ತನ್ನೊಡಲ ಸದಾ ಹಸಿವಾಗಿರಿಸಿಕೊಂಡು ಹಡೆದ ಕುಡಿಗಳ ಕರಳು ತುಂಬಿಸಿದಾಕೆ-ನನ್ನವ್ವ   ಬಿಸಿಲ ಮಳೆಗೆ ಬದುಕು ಸವೆಸಿ ಬಯಲೊಳಿದ್ದ ನಮಗೆ ಅಪ್ಪನೊಡಗೂಡಿ ನೆರಳ ಮಾಡಿ ನೆಮ್ಮದಿಯ ನೀಡಿದಾಕೆ-ನನ್ನವ್ವ   ನಸುಕಲೆದ್ದು ಪ್ಯಾಟಿ ತಿರುಗಿ ಸಿಕ್ಕಲಾಭಕೆ ಹಣ್ಣು ಮಾರಿ ರಾತ್ರಿಯೆಂಬ ರಾತ್ರಿಯಲ್ಲೇ...

read more
ಬೇಲೂರು ರಘುನಂದನ್ ಕಾಲಂ : ಪುಟ್ಟಮಲ್ಲಿ ಮೊಮ್ಮಗಳಿಗೆ ಡ್ಯಾನ್ಸ್ ಕಲಿಸಿದರು

ಅಮ್ಮ ಹೇಳುವ ಬಿಡುವಿನ ವ್ಯಾಖ್ಯಾನ ಎದೆಗೆ ಸೋಕಿದಾಗ ಒಳಗು ಬೆಳಗಿತು ಕಳೆದ ವಾರ ಅಮ್ಮನ ಹುಟ್ಟಿದ ಹಬ್ಬ ಆಚರಿಸಿದ್ದು ಒಂದು ಸುಂದರ ಅನುಭವ. ಅಮ್ಮನ ಅಕ್ಕ ತಂಗಿಯರು, ವಾರಗಿತ್ತಿಯರು ಅಕ್ಕ ಪಕ್ಕದ ಮನೆಯ ಮಕ್ಕಳು, ಬಂಧುಗಳು ಮತ್ತು ಮನೆಯವರೆಲ್ಲಾ ಸೇರಿದ್ದವು. ಅಮ್ಮ ಶಿರಾದಲ್ಲಿ ನಡೆದ ಯಾವುದೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ...

read more
ಗಿರಿಜಾಶಾಸ್ತ್ರಿ ಅನುವಾದಿಸಿದ ಕವನ

ಸಂಗಾತಿಗೆ.... ಗಿರಿಜಾ ಶಾಸ್ತ್ರಿ ಹೊರಳಾಡುತ್ತಿರುವೆಯಲ್ಲೇ ಹೀಗೆ ಬರಲಿಲ್ಲವೇನೇ ನಿದ್ದೆ ಇನ್ನೂ ನಿನಗೆ ಬಾ ಸೊಗಸಾದ ಕಥೆ ಹೇಳುತ್ತೇನೆ ಇಲ್ಲ, ಚಂದದ ಕವಿತೆ ಓದುತ್ತೇನೆ ನಿಧಾನ ಜಾರುವೆಯಂತೆ ಕನಸಿಗೆ...   ನನ್ನ ನಿಡುಗಾಲದ ಸಂಗಾತಿಯೇ ನಾವು ಹಂಚಿಕೊಂಡಿದ್ದೇನು ಕಮ್ಮಿಯೇ ನೋವು ನಲಿವು ನಂಬಿಕೆ ಹಾಸು ಹೊದಿಕೆ ಮೈಮರೆವು ಮೈಥುನ...

read more

Pin It on Pinterest

Share This