ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇಹ'ದ ಇರುಳಿನಲಿ ’ಪರ’ದ ಪ್ರಣತಿ

ರಮೇಶ್ ಮೇಗರವಳ್ಳಿ


ನನ್ನ ಕನಸಲ್ಲಿ ಕಾವಿಧಾರಿ ದಾರ್ಶನಿಕ ನೊಬ್ಬ ಬ೦ದು
ನೀಳ ಗಡ್ಡ ನೀವುತ್ತಾ ಅ೦ದ –
 
“ಇಹ”ವನ್ನು ಮರೆತು
“ಪರ”ವಶನಾಗಿ ನೀನು
ಪರಮಹ೦ಸನಾಗೆ೦ದು
ನಾನು ಹೇಳುವುದಿಲ್ಲ!
 
ಮು೦ಜಾವಿನಿ೦ದ ಮುಸ್ಸ೦ಜೆ ವರೆಗೆ
“ಇಹ”ದ ಹಗಲಿನಲಿ ತು೦ಬು
ಬದುಕಿಗೆ ವಿವಿಧ ಬಣ್ಣಗಳ.
ತು೦ಬುತ್ತಾ ಬಣ್ಣಗಳ ಬಿಡಿಸು
ವಿವಿಧ ಮುಖದ ಚಿತ್ತಾರಗಳ.
ಬಿಡಿಸುತ್ತಾ ಬಿಡಿಸುತ್ತಾ ಹೊ೦ದು –
ಸಾಧನೆಯ ಸ೦ತ್ರುಪ್ತಿ!
೨
ಇರುಳಿಳಿದು “ಇಹದ”
ಹಗಲನ್ನು ಮುಸುಕುವ ವೇಳೆ
ಬೆಳಗು –
“ಪರ”ದ ಪ್ರಣತಿಯನೊ೦ದ!
 
ಪಾರಮಾರ್ಥದ ಬೆಳಕಲ್ಲಿ
ತಿದ್ದಿ ತೀಡು ಬದುಕಿನ
ಬಣ್ಣ ಬಣ್ಣದ ಚಿತ್ತಾರಗಳ!
 
ಅನುಭಾವದಲ್ಲರಳುವ
ಬದುಕಿನ ಚಿತ್ತಾರಗಳು
ನೀಡಲಿ ನಿನಗೆ ಆತ್ಮ ಸ೦ತ್ರುಪ್ತಿ!
೩
ಮರೆಯದಿರು ಹಚ್ಚಿಡಲು
“ಇಹ”ದ ಇರುಳಿನಲಿ
“ಪರ”ದ ಪ್ರಣತಿ!
 
ಮರೆತೆಯೋ
ಇರುಳ ಮುಸುಕಿನಲಿ ಮರೆಯಾಗುವುದು
ಬಣ್ಣ ಬಣ್ಣದ ಚಿತ್ತಾರ!
ಕತ್ತಲ ಶೂನ್ಯದಲಿ ಕರಗುವುದು ಬದುಕು
ಬಣ್ಣವಳಿದು ನಿಸ್ಸಾರ!
 
ಅ೦ತ ಹೇಳಿ
ಆ ದಾರ್ಶನಿಕ ಮಾಯವಾದ!
 
೪
“ಇಹ”ದ ಎಚ್ಚರದಲ್ಲಿ ಕಣ್ತೆರೆದ ನನ್ನ
ಮನದ ಕತ್ತಲಿನಲ್ಲಿ
ಅವನು ಹಚ್ಚಿಟ್ಟ ಆ
“ಪರ”ದ ಪ್ರಣತಿಯ ಬೆಳಕು!

‍ಲೇಖಕರು G

21 July, 2015

4 Comments

  1. Bidaloti Ranganath

    ಕವಿತೆ ಚನ್ನಾಗಿದೆ

  2. noorullathyamagondlu

    ಚೆನ್ನಾಗಿದೆ.

  3. mmshaik

    kaviteya oLa dwani kut..kut..aagide..

  4. gururaj katriguppe

    Meaningful poem…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading