ಯಾಕೆ ಕಾಡುತಿದೆ ಸುಮ್ಮನೆ ನನ್ನನು…

’ಅವಧಿ’ಯಲ್ಲಿ ಅಂಕಣ ಬರೆಯಲು ಪ್ರಾರಂಭಿಸಿದಾಗ ಒಂದು ಅಳುಕಿತ್ತು. ಬರೆಯುವುದೆಂದರೆ ಅದು ಜಗದ ಹಾಡೂ ಹೌದು, ಎದೆಯ ಹಾಡೂ ಹೌದು.
ಬಹಳಷ್ಟು ಸಲ ನನಗೆ ಕೇಳಿಸಿಕೊಳ್ಳುವ ಭಾಷೆ ಮಾತಾದರೆ, ಆಡುವ ಭಾಷೆ ಮೌನ. ಹೀಗಿರುವಾಗ ನಾನು ಬರೆಯಬಲ್ಲೆನೆ ಎನ್ನುವುದು ನನ್ನ ಆತಂಕ ಆಗಿತ್ತು. ಆ ಹಿಂಜರಿಕೆಯಲ್ಲೇ ಬರೆಯಲು ಶುರು ಮಾಡಿದೆ. ಆ ನಂತರ ಬರೆಯುತ್ತಲೇ ಹೋದೆ ಎಂದರೆ ಅದಕ್ಕೆ ಕಾರಣ ನಿಮ್ಮ ಪ್ರೀತಿ ಮಾತ್ರ.
ಆ ಬರಹಗಳು ತಂದುಕೊಟ್ಟ ಸಾಂಗತ್ಯ ದೊಡ್ಡದು, ಸ್ನೇಹ ಬಳಗ ದೊಡ್ಡದು, ಸಾಂತ್ವನ  ದೊಡ್ಡದು.  ’ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಎನ್ನುವ ಕವಿವಾಣಿ ನಿಜ ಇರಬಹುದು, ಆದರೆ ನಾನು ಮತ್ತೆ ಮತ್ತೆ ಹಾಡಿದ್ದು ’ಕೇಳುವವರಿಹರೆಂದು ನಾ ಬಲ್ಲೆ ಅದರಿಂದ..’. ನನ್ನ ಬರಹ ಓದಿ ನೀವು ಸ್ಪಂದಿಸಿದ ರೀತಿ ನನ್ನಿಂದ ಮತ್ತೆ ಮತ್ತೆ ಬರೆಸಿತ್ತು.
ನನ್ನ ಆಯ್ದ ಬರಹಗಳು ಈಗ ಪುಸ್ತಕ ರೂಪದಲ್ಲಿ ಬರುತ್ತಿವೆ. ಪಲ್ಲವ ಪ್ರಕಾಶನ ನನ್ನ ಕನಸಿಗೊಂದು ರೂಪ ಕೊಡುತ್ತಿದೆ. ಅರುಣ್ ಕುಮಾರ್ ಅದಕ್ಕೆ ಚಂದದ ಮುಖಪುಟ ಮಾಡಿಕೊಟ್ಟಿದ್ದಾರೆ.

ನನ್ನ ದನಿಯಾದ ’ಅವಧಿ’ಗೆ, ’ಬರೆಯಬಲ್ಲೆ, ಬರಿ’ ಎಂದ ಜಿ ಎನ್ ಮೋಹನ್ ಅವರಿಗೆ, ವಾರ ವಾರ ನನ್ನ ಜೊತೆ ಹೆಜ್ಜೆ ಹಾಕಿದ ನಿಮಗೆ ’ಥ್ಯಾಂಕ್ಸ್’ ಎಂದು ಹೇಳಬೇಕು ಎಂದುಕೊಂಡರೆ, ’ಥ್ಯಾಂಕ್ಸ್’ ಎಷ್ಟು ಸಣ್ಣ ಪದ.
ಈಗಲೂ ಸಹ ನೀವು ನನ್ನೊಂದಿಗಿರಬೇಕು ಎನ್ನುವ ಮನವಿಯೊಂದಿಗೆ…

‍ಲೇಖಕರು G

July 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

27 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಅಭಿನಂದನೆಗಳು ಸಂಧ್ಯಾಜಿ, ತಮ್ಮ ಪುಸ್ತಕ ಪಯಣದಲ್ಲಿ ಜೊತೆ ನಾವಿದ್ದೇ ಇದ್ದೇವೆ. ಕೊಂಡು ಮತ್ತೊಮ್ಮೆ ಓದುವೆ, ಆ ಸುಂದರ ಬರಹಗಳ ವಿಚಾರಗಳನ್ನು. ವಂದನೆಗಳು.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಸ್ ಸರ್, ಆ ಸಮಯದಲ್ಲಿ ನೀವು ಇದ್ದರೆ ನನ್ನ ಸಂಭ್ರಮ ಇನ್ನೂ ಹೆಚ್ಚಾಗುತ್ತದೆ

      ಪ್ರತಿಕ್ರಿಯೆ
  2. Hema Sadanand Amin /mumbai

    gm, sandyaravare, indu mumbaiyalli bahaladinanda balika male. adondu aananda. iga avadhi bagilu terede. nimma ” yake kadutide summane nannu ” nodi mattastu aanand. e kruti adastu bege nanna kai serabekagide. yen procedure?. pls. heLi. cl me. Thanks & Regards.

    ಪ್ರತಿಕ್ರಿಯೆ
  3. Sarala

    khandita nimma jote irtini Sandhya 🙂 Nice milestone of your writing career. More should follow. All the best.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನನಗ್ಗೊತ್ತು ಸರಳಾ, ನೀವು ಯಾವಾಗಲೂ ನನ್ನ ಜೊತೆ ಇರ್ತೀರಿ ಅಂತ, ನಿಮ್ಮ ಪ್ರಿತಿಗೆ ನಾನು ಋಣಿ…

      ಪ್ರತಿಕ್ರಿಯೆ
  4. Jayashree

    ಮುಂದುವರಿಯಲಿ ಈ ಪಯಣ. ಕನ್ನಡ ಓದುಗರಿಗೆ ನೀವು ಕೊಡುವ ಅಥ೯ಪೂಣ೯ ಲೇಖನಮಾಲೆ ಪುಸ್ತಕವಾಗಿ ಬರುತ್ತಿರುವುದು ಸಂತೋಷದ ವಿಷಯ.ಅಭಿನಂದನೆಗಳು ಸಂಧ್ಯಾ ಅವರೆ.

    ಪ್ರತಿಕ್ರಿಯೆ
  5. Uday Itagi

    ಸಂಧ್ಯಾ ಮೇಡಂ,
    ನಾನು ಈ ದಿನಗಳಿಗಾಗಿ ಕಾಯುತ್ತಿದ್ದೆ. ಇನ್ನು ಹದಿನೈದು ದಿನ ಬಿಟ್ಟು ಬೆಂಗಳೂರಿಗೆ ಬರುವವನಿದ್ದೇನೆ. ಬಹುಶಃ, ನಾನಲ್ಲಿರುವಾಗಲೇ ಈ ಪುಸ್ತಕ ಬಿಡುಗಡೆಗೊಳ್ಳುತ್ತದೆ ಎಂದುಕೊಂಡಿದ್ದೇನೆ. ಬಂದಾಗ ಕೊಂಡುಕೊಂಡು ಓದುವೆ. ಖಂಡಿತ ನನ್ನ ಸಂಗ್ರಹದಲ್ಲಿ ಇನ್ನೊಂದು ಓಳ್ಳೆ ಪುಸ್ತಕ ಸೇರಿಕೊಳ್ಳಲಿದೆ. All the best.
    ಪ್ರೀತಿಯಿಂದ
    ಉದಯ್ ಇಟಗಿ
    ಲಿಬಿಯಾ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಯೂ ಉದಯ್, ಹೌದು ನೀವು ಆಗ ನನ್ನ ಜೊತೆ ಇರುತ್ತೀರಿ ಎನ್ನುವುದೇ ಸಂಭ್ರಮ..

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಿಮ್ಮ ಪ್ರೀತಿ ಹೀಗೇ ಇರಲಿ 🙂

      ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಥ್ಯಾಂಕ್ಯೂ ಸ್ವರ್ಣ, ಮೊದಲಿನಿಂದ ಜೊತೆಯಲ್ಲಿದ್ದೆ, ಈಗಲೂ ಇರುವೆ ಎನ್ನುವ ನಂಬಿಕೆಯೊಡನೆ..

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: